ಜಲ ಶಕ್ತಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಜಲಜೀವನ ಮಿಶನ್‌ ತಂಡದಿಂದ ಕರ್ನಾಟಕಕ್ಕೆ ಭೇಟಿ

Posted On: 29 OCT 2021 2:55PM by PIB Bengaluru

ಆರು ಜನರ ತಂಡವೊಂದು ರಾಜ್ಯದಲ್ಲಿ 27–30ನೇ ಅಕ್ಟೋಬರ್‌ ಅವಧಿಯಲ್ಲಿ ರಾಷ್ಟ್ರೀಯ ಜಲ ಜೀವನ ಮಿಶನ್‌ ಯೋಜನೆಯ ಅನುಷ್ಠಾನವನ್ನು ಗಮನಿಸಲು ರಾಜ್ಯಕ್ಕೆ ಭೇಟಿ ನೀಡಿದ್ದರು. ಬೆಂಗಳೂರು, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ  ಈ ತಂಡವು ಪ್ರವಾಸ ಕೈಗೊಂಡಿತ್ತು. ಈ ತಂಡವು ಪ್ರತಿದಿನವೂ ಈ ಜಿಲ್ಲೆಗಳಲ್ಲಿ 3–5 ಗ್ರಾಮಗಳನ್ನು ಭೇಟಿ ನೀಡಿ,  ಜಲಜೀವನ್‌ ಮಿಶನ್‌ ಅಡಿಯಲ್ಲಿ ಕೈಗೊಂಡಿರುವ, ಪ್ರತಿಮನೆಗೂ ನೀರು ಯೋಜನೆಯ ಅನುಷ್ಠಾನ ತೀವ್ರಗತಿಯಲ್ಲಿ ಕಾರ್ಯಕ್ಕಿಳಿಯುವಂತೆ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ಪ್ರೋತ್ಸಾಹಿಸಲಿದ್ದಾರೆ. 2024ರ ಹೊತ್ತಿಗೆ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಇರಬೇಕು ಎಂಬ ಗುರಿ ಸಾಧಿಸಲಾಗುವುದು. 

ಈ ಭೇಟಿಯ ಸಂದರ್ಭದಲ್ಲಿ ಈ ತಂಡವು ಜಿಲ್ಲಾ ಅಧಿಕಾರಿಗಳ ತಂಡದೊಂದಿಗೆ ಚರ್ಚಿಸುವುದು. ಸ್ಥಳೀಯ ಗ್ರಾಮ ಸಮುದಾಯದ ಸದಸ್ಯರೊಂದಿಗೆ, ಗ್ರಾಮ ಪಂಚಾಯಿತಿ ಹಾಗೂ ಜಲಸಮಿತಿ ಸದಸ್ಯರೊಂದಿಗೆ ಸಂವಾದ ಮಾಡುವರು. ಇದಾದ ನಂತರ ತಂಡವು ರಾಜ್ಯದ ಹಿರಿಯ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳಿಗೆ ತಾವು ಗಮನಿಸಿರುವುದನ್ನು ವರದಿ ಮಾಢುವರು. ಜೊತೆಗೆ ಸರ್ಕಾರವು 2024ರಲ್ಲಿ ಪ್ರತಿಮನೆಗೂ ಜಲ ಸಂಪರ್ಕದ ಈ ಯೋಜನೆಯನ್ನು ಅನುಷ್ಠಾನದಲ್ಲಿ ತರಲು ಕೈಗೊಂಡಿರುವ ಕ್ರಮಗಳನ್ನು ಹಾಗೂ ತೋರುತ್ತಿರುವ ಉತ್ಸಾಹದ ಬಗ್ಗೆ ವರದಿ ಮಾಡಲಾಗುವುದು. ಜೊತೆಗೆ ಶೇ ನೂರರಷ್ಟು ಅನುಷ್ಠಾನಕ್ಕೆ ತರಲು ಏನು ಮಾಡಬಹುದು ಎಂಬ ಅಂಶಗಳನ್ನೂ ಚರ್ಚಿಸಿವುದು. ಕಾಲಮಿತಿಯಲ್ಲಿ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವಲ್ಲಿ ಯಾವುದೇ ವಿಳಂಬವಾಗದಂತೆ ನೋಡಲು ಈ ತಂಡ ಹೆಚ್ಚು ಮುತುವರ್ಜಿ ವಹಿಸುವದು. 

ಕರ್ನಾಟಕದಲ್ಲಿ ಒಟ್ಟು 97.92ಲಕ್ಷ ಗ್ರಾಮೀಣ ಮನೆಗಳಿವೆ, 39.04 ಲಕ್ಷ  (39.87%) ಮನೆಗಳಿಗೆ ನಲ್ಲಿನೀರಿನ ಸಂಪರ್ಕ ಕಲ್ಪಿಸಲಾಗಿದೆ.  ಆ.15 2019ರಲ್ಲಿ ಜಲಜೀವನ್‌ ಮಿಷನ್‌ ಆರಂಭಿಸಲಾಯಿತು.  26 ತಿಂಗಳುಗಳಲ್ಲಿ 24.51 (25.03%) ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಯಿತು.  4.53 lakh (14.84%) ಮನೆಗಳಿಗೆ ರಾಜ್ಯವು ನಲ್ಲಿ ಸಂಪರ್ಕ ಒದಗಿಸಿದೆ. 2021–2022ರ ಸಾಲಿನಲ್ಲಿ  ರಾಜ್ಯವು 25.17 ಲಕ್ಷ ಮನೆಗಳಿಗೆ ಸಂಪರ್ಕ ನೀಡಲು ಯೋಜಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ದೂರಾಲೋಚನೆಯಿಂದಾಗಿ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿ ಮನೆಗೂ ನಲ್ಲಿ ಸಂಪರ್ಕ ಇರಬೇಕು ಎಂದು ಯೋಜಿಸಿದ್ದರು. ಕೇಂದ್ರ ಸರ್ಕಾರವು ಜಲಜೀವನ್‌ ಮಿಶನ್‌ ಅಡಿಯಲ್ಲಿ 2021–2022ರ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಲಿರುವ ಅನುದಾನವನ್ನು ಹೆಚ್ಚಳ ಮಾಡಿದೆ. 1,189.40 ಕೋಟಿ ರೂಪಾಯಿಗಳನ್ನು 2020–2021ರ ಸಾಲಿನಲ್ಲಿ ಅನುದಾನ ನೀಡಲಾಗಿತ್ತು. ಅದನ್ನೀಗ 5,008.80 ಕೋಟಿಗಳಿಗೆ ಹೆಚ್ಚಿಸಲಾಗಿದೆ. ಕೇಂದ್ರ ಸಚಿವರಾದ ಜಲಶಕ್ತಿ ಶ್ರೀ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ನಾಲ್ಕು ಪಟ್ಟು ಅನುದಾನವನ್ನು ಹೆಚ್ಚಳ ಮಾಡಿ, ರಾಜ್ಯವು ಗ್ರಾಮೀಣ ಭಾಗದ ಎಲ್ಲ ಮನೆಗಳಿಗೂ ಸಂಪರ್ಕ ಒದಗಿಸಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವುದಾಗಿ, ಬೆಂಬಲ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 2021–22ರಲ್ಲಿ 1,426 ಕೋಟಿ ರೂಪಾಯಿಗಳನ್ನು ಕರ್ನಾಟಕಕ್ಕೆ ಹಣಕಾಸು ಆಯೋಗವು ಅನುದಾನ ನೀಡಿತ್ತು. ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ನೀರು ಮತ್ತು ನೈರ್ಮಲ್ಯ ಯೋಜನೆಗೆ  ಪಿಆರ್‌ಐಗಳಲ್ಲಿ 7,524 ಕೋಟಿ ರೂಪಾಯಿಗಳನ್ನು ಮುಂದಿನ ಐದು ವರ್ಷಗಳಿಗೆ  2025–2026ರವರೆಗೆ ಈ ಅನುದಾನವನ್ನು ನೀಡಲಾಗುವುದು.  ಈ ಬೃಹತ್‌ ಪ್ರಮಾಣದ ಬಂಡವಾಳವು ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಗ್ರಾಮೀಣ ಅರ್ಥವ್ಯವಸ್ಥೆಗೂ ಉತ್ತೇಜನ ದೊರೆತಂತಾಗುತ್ತದೆ. ಗ್ರಾಮೀಣ ವಿಭಾಗದಲ್ಲಿ ಸಾಕಷ್ಟು ಅವಕಾಶಗಳನ್ನೂ ಸೃಷ್ಟಿಸುವುದು. 

ನಲ್ಲಿ ನೀರು ಕುಡಿಯಲು, ಮಧ್ಯಾಹ್ನದ ಬಿಸಿಯೂಟಕ್ಕೆ, ಕೈ ತೊಳೆಯಲು, ಕೈ ತೊಳೆಯಲು, ಶಾಲಾ ಶೌಚಾಲಯಗಳಿಗೆ ಬಳಸಲು ಹೀಗೆ ಸರ್ವಕ್ಕೂ ಸಾಕಾಗುಷ್ಟು ನೀರು ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಸದ್ಯದ ವರೆಗೆ 42015 ಶಾಲೆಗಳಲ್ಲಿ ಶೇ (100% ) 53,699  ಶೇ 100ರಷ್ಟು ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಕರ್ನಾಟಕ ರಾಜ್ಯದಲ್ಲಿ ನೀಡಲಾಗಿದೆ. 

ಜಲಜೀವನ ಮಿಶನ್‌ ಅನ್ನು ವಿಕೇಂದ್ರೀಕೃತ ಮಾದರಿಯಲ್ಲಿ, ತಳಮಟ್ಟದಿಂದ ಮೇಲ್ಬಾಗಕ್ಕೆ ಎಂಬಂತೆ ಕಾರ್ಯಾನುಷ್ಠಾನಕ್ಕೆ ತರಲಾದ ಯೋಜನೆಯಾಗಿದೆ.  ಇದರಲ್ಲಿ ಸ್ಥಳೀಯ ಸಮುದಾಯಗಳು, ಯೋಜಿಸುವುದರಿಂದ ಕಾರ್ಯಾನುಷ್ಠಾನದವರೆಗೂ ಮಹತ್ವದ ಪಾತ್ರ ನಿರ್ವಹಿಸುತ್ತುವೆ. ನಂತರ ಅದರ ಕಾರ್ಯವೈಖರಿ, ಕಾರ್ಯನಿರ್ವಹಣೆ ಮುಂತಾದವುಗಳಲ್ಲಿಯೂ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳೂವಿಕೆಗೆ ಮಹತ್ವದ ಸ್ಥಾನನೀಡಲಾಗಿದೆ.   ಇದನ್ನು ಸಾಧಿಸಲು ರಾಜ್ಯ ಸರ್ಕಾರವು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಬಲಗೊಳಿಸಬೇಕು. ಜೊತೆಗೆ ಜಲಸಮಿತಿಯನ್ನು ಬಲಗೊಳಿಸಬೇಕು. ಗ್ರಾಮಗಳ ಅಭಿವೃದ್ಧಿ ಕಾರ್ಯಯೋಜನೆಗಳನ್ನು ಪ್ರತಿ ಗ್ರಾಮದಲ್ಲಿಯೂ ರೂಪಿಸಬೇಕು. ಮುಂದಿನ ಐದು ವರ್ಷಗಳನ್ನು ಗಮನದಲ್ಲಿರಿಸಿಕೊಂಡು, ಈ ಯೋಜನೆಯನ್ನು ಆಯೋಜಿಸಬೇಕು. ಇದಕ್ಕಾಗಿ ರಾಜ್ಯದ ಏಜೆನ್ಸಿಗಳನ್ನು, ಸ್ಥಳೀಯ ಸಂಸ್ಥೆಗಳ ಬೆಂಬಲ ಪಡೆಯಬೇಕು. ಜನಜಾಗೃತಿ ಮೂಡಿಸಬೇಕು. ರಾಜ್ಯವು 25,527 ಪಾಲುದಾರರು ಭಾಗಿಯಾಗುವಂಥ ಗುರಿಯನ್ನು ಹೊಂದಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಐಎಎಸ್‌ ಅಧಿಕಾರಿಗಳು, ಐಎಸ್‌ಎ ಎಂಜಿನಿಯರ್‌ಗಳು, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಪಂಚಾಯತಿ ಸದಸ್ಯರು ಹೀಗೆ ಎಲ್ಲರನ್ನೂ ಒಳಗೊಳ್ಳಲಾಗುವುದು. ಎಲ್ಲರಿಗೂ ಸೂಕ್ತ ತರಬೇತಿ ನೀಡಲಾಗುವುದು. ಈ ವರೆಗೂ 2,745 ಜನ ಕೌಶಲ ಹಾಗೂ ಉಪಕೌಶಲ ಹೊಂದಿರುವವರಿಗೆ ತರಬೇತಿ ನೀಡಲಾಗಿದೆ.    ಪ್ಲಂಬರ್ಸ್‌, ಪಂಪ್‌ ಆಪರೇಟರ್ಸ್‌, ಫಿಟ್ಟರ್ಸ್‌ ಹೀಗೆ ಎಲ್ಲರನ್ನೂ ಒಂಗೊಂಡ ತಂಡ ಇದಾಗಿದೆ.

ಸಾರ್ವಜನಿಕ ಆರೋಗ್ಯದ ಕುರಿತು, 2000ಕ್ಕೂ ಹೆಚ್ಚಿಗೆ ನೀರಿನ ಗುಣಮಟ್ಟ ಪರೀಕ್ಷಿಸುವ ಪ್ರಯೋಗಾಲಯಗಳನ್ನು ದೇಶದಾದ್ಯಂತ ಆರಂಭಿಸಲಾಗಿದೆ. ಇವುಗಳನ್ನು ಸಾರ್ವಜನಿಕರು ತಾವು ಸೇವಿಸುವ ನೀರಿನ ಗುಣಮಟ್ಟವನ್ನು ಅಳೆಯಲೂ ಮುಕ್ತವಾಗಿದೆ. ನೀರನ ಮಾದರಿಗಳನ್ನು ಕೈಗೆಟಕುವ ಬೆಲೆಯಲ್ಲಿ ಮಾಡಬಹುದಾಗಿದೆ. ಕರ್ನಾಟಕದಲ್ಲಿ 80 ಇಂಥ ನೀರಿನ ಗುಣಮಟ್ಟವನ್ನು ಪರಿಶೀಲಿಸುವ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಇಉವಗಳಲ್ಲಿ ಹನ್ನೊಂದು ಕೇಂದ್ರಗಳಿಗೆ ಎನ್‌ಎಬಿಎಲ್‌ ಮಾನ್ಯತೆಯೂ ದೊರೆತಿದೆ. 

ಜಲಜೀವನ್‌ ಮಿಶನ್‌ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2019ರ ಆಗಸ್ಟ್‌ 15ರಂದು ಘೋಷಿಸಿದ್ದರು. ಇದರ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮಾಡುವಂತೆ ಯೋಜಿಸಿದ್ದರು. ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರ ಒಳಗೆ ನಲ್ಲಿ ಸಂಪರ್ಕ ಸಿಗಬೇಕು ಎಂಬುದು ಈ ಯೋಜನೆಯ ಗುರಿ. 2021–2022ರಲ್ಲಿ ಜಲಜೀವನ್‌ ಮಿಶನ್‌ಗಾಗಿ 50,011 ಕೋಟಿ ರೂಪಾಯಿ ಬಜೆಟ್‌ ಮೀಸಲಾಗಿರಿಸಲಾಗಿದೆ. ರಾಜ್ಯದ ಪಾಲು ರೂ26,940 ಕೋಟಿಯೆಂದು 15ನೇ ಹಣಕಾಸು ಆಯೋಗದಲ್ಲಿ ಈ ಅನುದಾನವನ್ನು ನೀರು ಹಾಗೂ ನೈರ್ಮಲ್ಯಕ್ಕಾಗಿ ಮೀಸಲಾಗಿರಿಸಲಾಗಿದೆ. ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಕ್ಷೆ ಕ್ಷೇತ್ರಕ್ಕಾಗಿ ಮೀಸಲಾಗಿರಿಸಲಾಗಿದೆ. ಇಂಥ ದೊಡ್ಡ ಪ್ರಮಾಣದ ಬಂಡವಾಳದಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದಂತಾಗುತ್ತದೆ.

ಈ ಯೋಜನೆಯನ್ನು 2019ರಲ್ಲಿ ಆರಂಭಿಸಿದಾಗ, ದೇಶದಲ್ಲಿದ್ದ 19.20 ಕೋಟಿ ಗ್ರಾಮೀಣ ಮನೆಗಳಿದ್ದವು. ಅವುಗಳಲ್ಲಿ ಕೇವಲ 3.23 ಕೋಟಿ,  ಶೇ17ರಷ್ಟು ಮನೆಗಳಿಗೆ ಮಾತ್ರ ನಲ್ಲಿ ನೀರಿನ ಪೂರೈಕೆ ಇತ್ತು. ಕಳೆದ 26 ತಿಂಗಳುಗಳಲ್ಲಿ ಕೋವಿಡ್‌ನ ಪಿಡುಗಿನ ಕಾಲದಲ್ಲಿ, ಲಾಕ್‌ಡೌನ್‌ನಂತಹ ಅಡೆತಡೆಗಳಿದ್ದಾಗಲೂ ಜಲಜೀವನ್‌ ಮಿಶನ್‌ ಅನ್ನು ಅತ್ಯಂತ ತ್ವರಿತಗತಿಯಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾಯಿತು. 5.17 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ನೀಡಲಾಯಿತು. ಸದ್ಯಕ್ಕೆ 8.40 ಕೋಟಿ, ಶೇ 43.72ರಷ್ಟು ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆತಿದೆ. ಗೋವಾ, ತೆಲಂಗಾಣಾ, ಹರಿಯಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಪುದುಚೆರಿ, ಡಮನ್‌ ಮತ್ತು ದಿಯು ದ್ವೀಪಗಳಲ್ಲಿಯ ಮನೆಗಳಿಗೆ ಶೇ 100ರಷ್ಟು ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಎಂಬ ಘೋಷವಾಕ್ಯದಂತೆ ಈ ಮಿಷನ್‌ ಅಡಿಯಲ್ಲಿ, ಅಭಿವೃದ್ಧಿಯಿಂದ ಯಾರೂ ಹೊರಗುಳಿಯಬಾರದು ಎಂಬುದಕ್ಕೆ ಹೆಚ್ಚಿನ ಗಮನನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆಯೂ, ನಲ್ಲಿನೀರಿನ ಸಂಪರ್ಕ ಹೊಂದುವಂತೆ ಮಾಡಲಾಗುವುದು. ಸದ್ಯ, 81 ಜಿಲ್ಲೆಗಳಲ್ಲಿ, 1.20 ಲಕ್ಷ ಗ್ರಾಮಗಳಲ್ಲಿ ಪ್ರತಿ ಮನೆಯೂ ನಲ್ಲಿನೀರಿನ ಸಂಪರ್ಕ ಹೊಂದಿದೆ.

***(Release ID: 1767696) Visitor Counter : 167


Read this release in: English , Hindi , Tamil