ಹಣಕಾಸು ಸಚಿವಾಲಯ

ಚೆನ್ನೈನಲ್ಲಿ ಸಮಗ್ರ ನಗರ ಪ್ರವಾಹ ವಿಪತ್ತು ನಿರ್ವಹಣೆಗಾಗಿ ಭಾರತ ಮತ್ತು ಎಡಿಬಿ   251 ದಶಲಕ್ಷ ಡಾಲರ್‌ ಸಾಲಕ್ಕಾಗಿ ಸಹಿ ಹಾಕಿದವು

Posted On: 28 OCT 2021 4:22PM by PIB Bengaluru

ಭಾರತ ಸರ್ಕಾರ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್  (ಎಡಿಬಿ) ಇಂದು ಚೆನ್ನೈ ನಗರದ ಪ್ರವಾಹ ವಿಪತ್ತು  ನಿರ್ವಹಣೆಯನ್ನು ಬಲಪಡಿಸಲು ಚೆನ್ನೈ ಕೊಸಸ್ತಲೈಯಾರ್ ಜಲಾನಯನ ಪ್ರದೇಶದಲ್ಲಿ ಹವಾಮಾನ-ನಿರೋಧಕ, ಸಮಗ್ರ ನಗರ ಪ್ರವಾಹ ರಕ್ಷಣೆ ಮತ್ತು ನಿರ್ವಹಣೆಗಾಗಿ 251 ದಶಲಕ್ಷ ಡಾಲರ್‌ ಸಾಲಕ್ಕೆ ಸಹಿ ಹಾಕಿವೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ ಅವರು ಚೆನ್ನೈ-ಕೊಸಸ್ತಲೈಯಾರ್ ನದಿ ಜಲಾನಯನ ಯೋಜನೆಗಾಗಿ ಸಮಗ್ರ ನಗರ ಪ್ರವಾಹ ನಿರ್ವಹಣೆಯ ಒಪ್ಪಂದಕ್ಕೆ ಭಾರತ ಸರ್ಕಾರದ ಪರವಾಗಿ ಸಹಿ ಹಾಕಿದರು  ಹಾಗೆಯೇ  ಎಡಿಬಿ ಯ ಭಾರತದ ರೆಸಿಡೆಂಟ್ ಮಿಷನ್ ನಿರ್ದೇಶಕರಾದ ಶ್ರೀ ಟೇಕೊ ಕೊನಿಶಿ  ಅವರು ಎಡಿಬಿ ಪರವಾಗಿ ಸಹಿ ಮಾಡಿದರು.

ಸಾಲದ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಶ್ರೀ ಮಿಶ್ರಾ ಅವರು, ಇತ್ತೀಚಿನ ವರ್ಷಗಳಲ್ಲಿ ಚೆನ್ನೈ-ಕೊಸಸ್ತಲೈಯಾರ್ ಜಲಾನಯನ ನಿವಾಸಿಗಳು ಆಗಾಗ್ಗೆ ಆಸ್ತಿ ಮತ್ತು ಜೀವನಾಧಾರವನ್ನು ನಾಶಪಡಿಸುವ ಪ್ರವಾಹಕ್ಕೆ ಒಳಗಾಗುವ  ಪರಿಸ್ಥಿತಿಯನ್ನು ಕಡಿಮೆ ಮಾಡಲು ಈ ಯೋಜನೆಯು ಸಹಾಯ ಮಾಡುತ್ತವೆ ಎಂದು ಹೇಳಿದರು. ವಿಪತ್ತು-ನಿರೋಧಕ ಮೂಲಸೌಕರ್ಯವನ್ನು ನಿರ್ಮಾಣವು  ತೀವ್ರಗೊಳ್ಳುತ್ತಿರುವ ಮಳೆ, ಹೆಚ್ಚಿನ ಸಮುದ್ರ ಮಟ್ಟ ಏರಿಕೆ ಮತ್ತು ಚಂಡಮಾರುತದಿಂದ ಉಂಟಾಗುವ ಉಲ್ಬಣವನ್ನು ನಿಭಾಯಿಸಲು ಮತ್ತು ಜನರ ಜೀವನ, ಆರ್ಥಿಕತೆ ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

"ಯೋಜನೆಯು ಪ್ರವಾಹ ವಿಪತ್ತು ರಕ್ಷಣೆ ಮೂಲಸೌಕರ್ಯವನ್ನು ನಿರ್ಮಿಸುತ್ತದೆ ಮತ್ತು ಚೆನ್ನೈ ಅನ್ನು ಹೆಚ್ಚು ವಾಸಯೋಗ್ಯ ನಗರವಾಗಿ ಪರಿವರ್ತಿಸಲು ಉತ್ತಮ ಸಿದ್ಧತೆ ಯೋಜನೆಗಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮತ್ತು ಸಮುದಾಯಗಳ ಸಾಮರ್ಥ್ಯವನ್ನು ಬಲಪಡಿಸುತ್ತದೆ" ಎಂದು ಶ್ರೀ ಕೊನಿಶಿ ಹೇಳಿದರು. "ಹವಾಮಾನ ಪ್ರವಾಹ ವಿಪತ್ತು ನಿರ್ವಹಣೆಗಾಗಿ ನವೀನ ವಿನ್ಯಾಸಗಳು ಮತ್ತು ಮಧ್ಯಸ್ಥಿಕೆಗಳು ಸಮಗ್ರ ನಗರ ಯೋಜನೆ ಮತ್ತು ಹೆಚ್ಚಿನ ಪುರಸಭೆಯ ಸಂಪನ್ಮೂಲ ಕ್ರೋಡೀಕರಣದ ಜೊತೆಗೆ ಹವಾಮಾನ ಮತ್ತು ವಿಪತ್ತುಗಳಿಗೆ ಗುರಿಯಾಗುವ ಇತರ ಭಾರತೀಯ ನಗರಗಳಿಗೆ ವ್ಯಾಪಕವಾಗಿ ಇದೇ ಯೋಜನೆಯನ್ನು ಅಳವಡಿಸಬಹುದು." ಎಂದು ಹೇಳಿದರು.

ಚೆನ್ನೈನ ಕ್ಷಿಪ್ರ ನಗರೀಕರಣವು ನಗರದ ನೈಸರ್ಗಿಕ ಭೂಮಿಯನ್ನು ಅತಿಕ್ರಮಿಸಿದೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡಿ ಇದು ನಗರವನ್ನು ವ್ಯಾಪಕವಾದ ಪ್ರವಾಹಕ್ಕೆ ಗುರಿಯಾಗಿಸುತ್ತದೆ. ಈ ಯೋಜನೆಯು ಹವಾಮಾನ ವಿಪತ್ತು ನಿರೋಧಕ ನಗರ ಪ್ರವಾಹ ರಕ್ಷಣೆ ಮೂಲಸೌಕರ್ಯವನ್ನು ಸ್ಥಾಪಿಸುತ್ತದೆ. ಇದು 588 ಕಿಲೋಮೀಟರ್ (ಕಿಮೀ) ಹೊಸ ಮಳೆನೀರಿನ ಚರಂಡಿಗಳನ್ನು ನಿರ್ಮಿಸುತ್ತದೆ, 175 ಕಿಮೀ ಮಳೆನೀರಿನ ಚರಂಡಿಗಳನ್ನು ಪುನರ್ವಸತಿ ಮಾಡುವುದು ಅಥವಾ ಬದಲಾಯಿಸುವುದು, ಅಂಬತ್ತೂರು, ಅರಿಯಲ್ಲೂರು, ಕಡಪ್ಪಕ್ಕಂ ಮತ್ತು ಕೊರಟ್ಟೂರ್ ಚಾನಲ್‌ಗಳಲ್ಲಿ 11 ಕಿಮೀ ವ್ಯಾಪ್ತಿಯನ್ನು ಸುಧಾರಿಸುತ್ತದೆ ಮತ್ತು ನೀರು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮಳೆನೀರು ಪಂಪ್ ಮಾಡುವ ಕೇಂದ್ರವನ್ನು ನವೀಕರಿಸುತ್ತದೆ. ಮತ್ತು ಹೊಸದನ್ನು ನಿರ್ಮಿಸುವುದು. ಇದು ಅಂತರ್ಜಲವನ್ನು ಮರುಪೂರಣಗೊಳಿಸಲು ಮತ್ತು ನಾಲ್ಕು ವಿಪತ್ತು ಪರಿಹಾರ ಶಿಬಿರಗಳನ್ನು ಪುನರ್ವಸತಿ ಮಾಡಲು ರಸ್ತೆ ಬದಿಯ ಚರಂಡಿಗಳಲ್ಲಿ 23,000 ಕ್ಯಾಚ್‌ಪಿಟ್‌ಗಳನ್ನು ನಿರ್ಮಿಸುತ್ತದೆ.

ಪ್ರವಾಹ ಅಪಾಯದ ವಲಯವನ್ನು ಪ್ರಾದೇಶಿಕ ಮತ್ತು ಭೂ ಬಳಕೆಯ ಯೋಜನೆಗೆ ಸಂಯೋಜಿಸಲು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು, ಪ್ರವಾಹ ಪ್ರದೇಶಗಳಲ್ಲಿ ನೈಜ-ಸಮಯದ ಮಾಹಿತಿಗಾಗಿ ಪ್ರವಾಹ ನಾಗರಿಕ ವೀಕ್ಷಣಾಲಯವನ್ನು ಅಳವಡಿಸುವುದು ಮತ್ತು ಮಳೆನೀರು ಕೊಯ್ಲು ಸೇರಿದಂತೆ ಹಸಿರು ಮೂಲಸೌಕರ್ಯ ವಿನ್ಯಾಸಕ್ಕಾಗಿ ಕೈಪಿಡಿಯನ್ನು ರಚಿಸುವ ಮೂಲಕ ಪ್ರವಾಹದಿಂದ ರಕ್ಷಣಾ  ಸಿದ್ಧತೆಯನ್ನು ಬಲಪಡಿಸಲಾಗುತ್ತದೆ. ಜನಸಮುದಾಯಕ್ಕೆ ಅರಿವು ಮತ್ತು ಪ್ರವಾಹದ ಅಪಾಯಗಳು ಮತ್ತು ಪರಿಣಾಮಗಳು ಮತ್ತು ಘನ ತ್ಯಾಜ್ಯ ನಿರ್ವಹಣೆ, ಒಳಚರಂಡಿ ಮತ್ತು ಜಲಮೂಲಗಳ ರಕ್ಷಣೆಯೊಂದಿಗೆ ಅದರ ಸಂಬಂಧವನ್ನು ಹೆಚ್ಚಿಸುವ ಮೂಲಕ ಪ್ರವಾಹ ಸನ್ನದ್ಧತೆಯಲ್ಲಿ ಮಹಿಳೆಯರ ಪೂರ್ವಭಾವಿ ಭಾಗವಹಿಸುವಿಕೆ ಸೇರಿದಂತೆ ಮಧ್ಯಸ್ಥಗಾರರ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನ ತಾಂತ್ರಿಕ ಸಿಬ್ಬಂದಿಗೆ ಮಳೆನೀರಿನ ಒಳಚರಂಡಿ ವ್ಯವಸ್ಥೆಗಳ ಯೋಜನೆ ಮತ್ತು ವಿನ್ಯಾಸ ಮತ್ತು ಘನ ತ್ಯಾಜ್ಯ ಮತ್ತು ಪ್ರವಾಹ ವಿಪತ್ತುಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಮಳೆನೀರಿನ ಒಳಚರಂಡಿ ವ್ಯವಸ್ಥೆಗಳ ಸಮರ್ಥನೀಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಅಭಿವೃದ್ಧಿಪಡಿಸುತ್ತದೆ.  ನಾಗರಿಕರಿಗೆ ಸುಸ್ಥಿರ ಮತ್ತು ಗುಣಮಟ್ಟದ ಪುರಸಭೆಯ ಸೇವೆಗಳನ್ನು ತಲುಪಿಸಲು ಪುರಸಭೆಯ ಸಂಪನ್ಮೂಲ ಕ್ರೋಡೀಕರಣವನ್ನು ಬಲಪಡಿಸಲು ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು  ಯೋಜನೆಯು ಜಿಸಿಸಿ ಯನ್ನು ಬೆಂಬಲಿಸುತ್ತದೆ.

***



(Release ID: 1767362) Visitor Counter : 244


Read this release in: English , Hindi , Bengali , Punjabi