ಚುನಾವಣಾ ಆಯೋಗ
ಉಪಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲಿಸುವಂತೆ ರಾಜಕೀಯ ಪಕ್ಷಗಳು, ಸ್ಪರ್ಧಾ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದಿಂದ ಸಲಹಾಸೂಚಿ
Posted On:
21 OCT 2021 6:13PM by PIB Bengaluru
ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಡೆಯಲಿರುವ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಮಾದರಿ ನೀತಿ ಸಂಹಿತೆಯು (ಎಂಸಿಸಿ) ಚುನಾವಣೆ ನಡೆಯುವ ಕ್ಷೇತ್ರಗಳ ಆಯಾ ಜಿಲ್ಲೆಗಳಿಗೆ ಅನ್ವಯವಾಗುತ್ತದೆ ಮತ್ತು ಚಾಲ್ತಿಯಲ್ಲಿರುತ್ತದೆ. ಆಯೋಗದ ಸೂಚನೆ ಅಥವಾ ನಿರ್ದೇಶನಕ್ಕೆ ವಿನಾಯಿತಿ ನೀಡಿ 2017 ಜೂನ್ 29 ಹಾಗೂ 2018 ಜನವರಿ 18ರಂದು ಆಯೋಗವು ಪತ್ರದ ಮೂಲಕ ಸ್ಪಷ್ಟನೆ ನೀಡಿದೆ. ಚುನಾವಣಾ ಕ್ಷೇತ್ರವು ರಾಜ್ಯ ರಾಜಧಾನಿ ಅಥವಾ ಮೆಟ್ರೋಪಾಲಿಟನ್ ನಗರ ಅಥವಾ ಮುನಿಸಿಪಲ್ ಕಾರ್ಪೊರೇಷನ್ ಭಾಗದಲ್ಲಿ ಒಳಗೊಂಡಿದ್ದರೆ, ಎಂಸಿಸಿ ಸೂಚನೆಗಳು ಸಂಬಂಧಿಸಿದ ಕ್ಷೇತ್ರಗಳಿಗೆ ಮಾತ್ರ ಅನ್ವಯವಾಗುತ್ತದೆ.
ಇನ್ನುಳಿದ ಪ್ರಕರಣಗಳಿಗೆ ಮೇಲೆ ಹೇಳಿದ ಸೂಚನೆಗಳು ಉಪಚುನಾವಣೆ ನಡೆಯುವ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಾದ್ಯಂತ ಅನ್ವಯವಾಗುತ್ತವೆ.
ಮಾದರಿ ನೀತಿ ಸಂಹಿತೆಯಿಂದ ಆಡಳಿತಾತ್ಮಕ ಮತ್ತು ಅಭಿವ್ರದ್ಧಿ ಕಾರ್ಯಗಳಿಗೆ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ವಿನಾಯಿತಿ ನೀಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆದರೆ ಕೆಲವು ರಾಜಕೀಯ ಪಕ್ಷಗಳು ಕ್ಷೇತ್ರದ ನೆರೆಹೊರೆಯಲ್ಲಿ ಚುನಾವಣಾ ಚಟುವಟಿಕೆಗಳನ್ನು ನಡೆಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯ ಚುನಾವಣಾ ರಾಜಕೀಯ ಚಟುವಟಿಕೆಗಳನ್ನು ನೆರೆಹೊರೆಯ ಪ್ರದೇಶಗಳಲ್ಲಿ ನಡೆಸುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ರಾಜ್ಯ ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುವುದನ್ನು ಖಾತ್ರಿಡಿಸುವಂತೆ ಆಯೋಗ ಸೂಚಿಸಿದೆ. ಕೋವಿಡ್ ಸೂಕ್ತ ನಡಳಿಕೆಗಳ ಅನುಸರಣೆ ಮತ್ತು ಮುಂಜಾಗ್ರತಾ ಕ್ರಮಗಳ ಪಾಲನೆ ಖಾತ್ರಿಪಡಿಸುವಂತೆಯೂ ಅದು ಸೂಚನೆ ನೀಡಿದೆ.
***
(Release ID: 1765619)
Visitor Counter : 279