ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಇಂಡಿಯಾ ಪೋಸ್ಟ್ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬ್ಯಾಂಕಿಂಗ್ ದಿನವನ್ನು ಆಚರಿಸಿತು.


ರಾಜ್ಯ ಸಚಿವ ಶ್ರೀ ದೇವುಸಿನ್ ಚೌಹಾಣ್ ಅವರು ಮುಗಾ ರೇಷ್ಮೆ ಬಗ್ಗೆ ಇರುವ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದರು

ಆರ್ಥಿಕ ಜಾಗೃತಿ ಮೂಡಿಸಲು ಮತ್ತು ಹಣಕಾಸು ಸೇರ್ಪಡೆಗೆ ಉತ್ತೇಜನ ನೀಡಲು ಇಲಾಖೆಯು ಹಣಕಾಸು ಸೇರ್ಪಡೆ (ಎಫ್‌ಐ) ಮೇಳಗಳನ್ನು ಆಯೋಜಿಸುತ್ತದೆ

Posted On: 11 OCT 2021 6:17PM by PIB Bengaluru

ಅಂಚೆ ಇಲಾಖೆ, ಸಂವಹನ ಸಚಿವಾಲಯ, ರಾಷ್ಟ್ರೀಯ ಅಂಚೆ ಸಪ್ತಾಹ ಮತ್ತು ಅಜಾದಿ ಕಾ ಅಮೃತ್ ಮಹೋತ್ಸವ (ಎಕೆಎಎಮ್) ಆಚರಣೆಯ ಅಂಗವಾಗಿ ಇಂದು ಬ್ಯಾಂಕಿಂಗ್ ದಿನವನ್ನು ಆಚರಿಸಿತು.

ಅಸ್ಸಾಂ ಪೋಸ್ಟಲ್ ಸರ್ಕಲ್  ಸಂವಹನ ರಾಜ್ಯ ಸಚಿವರಾದ ಶ್ರೀ ದೇವುಸಿನ್ ಚೌಹಾಣ್ ಅವರ ಸಮ್ಮುಖದಲ್ಲಿ ಇಂದು ಮುಗಾ ರೇಷ್ಮೆ  ಜಿಐ ಟ್ಯಾಗ್  ಬಗ್ಗೆ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ದಿನದಂದು 5 ಸಂಖ್ಯೆಗಳ ಎಸ್‌ಎಸ್‌ಎ ಪಾಸ್ ಪುಸ್ತಕವನ್ನು ಹೆತ್ತವರೊಡನೆ ಇದ್ದ ಹೆಣ್ಣು ಮಗುವಿಗೆ ಹಸ್ತಾಂತರಿಸಲಾಯಿತು. ಅಂಚೆ ಇಲಾಖೆಯ ಸಾಧನೆ, ಕಾರ್ಯಕ್ಷಮತೆ ಮತ್ತು ಬದ್ಧತೆ ಇತ್ಯಾದಿಗಳ ಕುರಿತು ಪ್ರೋತ್ಸಾಹಕರ ಭಾಷಣವನ್ನು ಮಾನ್ಯ ಸಚಿವರು ಮಾಡಿದರು. ವೇದಿಕೆಯಲ್ಲಿ  ಐಐಟಿಜಿ ಮತ್ತು ವಿಜ್ಞಾನಿಗಳ ಪೇಟೆಂಟ್ ಇಲಾಖೆ ನಿರ್ದೇಶಕರು ಕೂಡ ಉಪಸ್ಥಿತರಿದ್ದರು.

 

ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನದಿಂದ ಇಲಾಖೆಯು ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಅಂಚೆ ವಾರವನ್ನು ಆಚರಿಸುತ್ತದೆ.  ಜೊತೆಗೆ, ಸಂಸ್ಕೃತಿ ಸಚಿವಾಲಯವು ಅಂಚೆ ಇಲಾಖೆಗೆ  ಅಕ್ಟೋಬರ್ 11 ರಿಂದ 17 ರವರೆಗಿನ ದಿನಗಳನ್ನು ಸ್ವಾತಂತ್ರದ ಅಮೃತ ಮಹೋತ್ಸವದ (ಎಕೆಎಎಮ್) ಆಚರಣೆಗಾಗಿ ನಿಗದಿಪಡಿಸಿದೆ. ಬ್ಯಾಂಕಿಂಗ್ ದಿನವನ್ನು 11 ನೇ ಅಕ್ಟೋಬರ್, 2021 ರಂದು ಆಚರಿಸಲಾಗುತ್ತದೆ.

ದೇಶಾದ್ಯಂತ ಹರಡಿಕೊಂಡಿರುವ 1.57 ಲಕ್ಷ ಅಂಚೆ ಕಚೇರಿಗಳ ಮೂಲಕ ಇಲಾಖೆಯು 9 ಸಣ್ಣ ಉಳಿತಾಯ ಯೋಜನೆಗಳನ್ನು ನಿರ್ವಹಿಸುತ್ತದೆ. ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ ಅಡಿಯಲ್ಲಿನ ಯೋಜನೆಗಳು ಅಂಚೆ ಕಚೇರಿಗಳಲ್ಲಿಯೂ ಲಭ್ಯವಿದೆ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಬೇಟಿ ಬಚಾವೋ ಬೇಟಿ ಪಾಡಾವೋ  ಅಭಿಯಾನದ ಅಡಿಯಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಖಾತೆಗಳ (ಎಸ್ ಎಸ್ ಎ) ಪ್ರಚಾರದಲ್ಲಿ ಇಲಾಖೆಯು ಮಹತ್ವದ ಪಾತ್ರ ವಹಿಸಿದೆ. ಈ ಯೋಜನೆಯನ್ನು ಜನವರಿ, 2015 ರಲ್ಲಿ ಆರಂಭಿಸಿದಾಗಿನಿಂದ ಅಂಚೆ ಕಚೇರಿಗಳಲ್ಲಿ 2.2 ಕ್ಕಿಂತ ಹೆಚ್ಚು ಎಸ್‌ಎಸ್‌ಎ ಖಾತೆಗಳನ್ನು ತೆರೆಯಲಾಗಿದೆ.

ಡಿಜಿಟಲ್ ಹಣಕಾಸು ಸೇರ್ಪಡೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಗೆ (ಐಪಿಪಿಬಿ) ಪ್ರಧಾನ ಮಂತ್ರಿಯವರು 1 ನೇ ಸೆಪ್ಟೆಂಬರ್ 2018 ರಂದು ಚಾಲನೆ ನೀಡಿದರು . ಇದು ಯಾವುದೇ ಮನೆಯಿಂದ 5 ಕಿಮೀ ಒಳಗೆ ಬ್ಯಾಂಕಿಂಗ್ ಸೌಲಭ್ಯ ನೀಡುವ ಸರ್ಕಾರದ ಉದ್ದೇಶವನ್ನು ಪೂರೈಸುತ್ತದೆ. ಐಪಿಪಿಬಿ ವಿವಿಧ ಹಣಕಾಸು ಮತ್ತು ಹಣಕಾಸೇತರ ಸೇವೆಗಳಾದ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್) ಸೇವೆಗಳನ್ನು, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ, ಡಿಜಿಟಲ್ ಉಳಿತಾಯ ಖಾತೆ, ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ್ ಪ್ರಮಾಣ) ಮನೆಬಾಗಿಲಿಗೆ  ನೀಡುತ್ತದೆ.

ಈ ವರ್ಷ, ಇಲಾಖೆಯು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಎಲ್ಲಾ ಜಿಲ್ಲೆಗಳಲ್ಲಿ ಹಣಕಾಸಿನ ಅರಿವು ಮೂಡಿಸಲು ಮತ್ತು ಹಣಕಾಸಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮೇಳಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಿದೆ. ಬ್ಯಾಂಕಿಂಗ್ ದಿನದ ಮುಖ್ಯ ವಿಷಯವೆಂದರೆ ಸುಕನ್ಯಸಮೃದ್ಧಿ ಯೋಜನೆಯ ಪ್ರಚಾರವಾಗಿದೆ. ಅಲ್ಲದೆ, ಈ ಮೇಳಗಳ ಮೂಲಕ ವಿವಿಧ ಐಪಿಪಿಬಿ ಸೇವೆಗಳನ್ನು ಪ್ರಚಾರ ಮಾಡಲಾಗುತ್ತದೆ.

ಆಜಾದಿ ಕಾ ಅಮೃತ್ ಮಹೋತ್ಸವ: ಭಾರತದ 75 ನೇ ವರ್ಷದ ಸ್ವಾತಂತ್ರ್ಯದ ಸಾಕ್ಷ್ಯಚಿತ್ರವನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು. ಮೇಳದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಡಿಯೋಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಐಪಿಪಿಬಿಯ ಸೇವೆಗಳು ಸೇರಿದಂತೆ ಅಂಚೆ ಕಚೇರಿಗಳ ಮೂಲಕ ಲಭ್ಯವಿರುವ ಸಣ್ಣ ಉಳಿತಾಯ ಯೋಜನೆಗಳು ಮತ್ತು ಸೇವೆಗಳನ್ನು ಮೇಳದಲ್ಲಿ ಆಡಿಯೋ ದೃಶ್ಯಗಳ ಮೂಲಕ ಜನರಿಗೆ ವಿವರಿಸಲಾಗುತ್ತದೆ. ಬ್ಯಾಂಕಿಂಗ್ ದಿನದಂದು ಸಣ್ಣ ಉಳಿತಾಯ ಮತ್ತು ಐಪಿಪಿಬಿಯಲ್ಲಿ ಉತ್ತಮ ಪ್ರದರ್ಶನ ನೀಡುವವರನ್ನು ಗುರುತಿಸಲಾಗುತ್ತದೆ.

ಮುರ್ಷಿದಾಬಾದ್ ಸೆಂಟ್ರಲ್ ಸಬ್ ಡಿವಿಷನ್, ಪಶ್ಚಿಮ ಬಂಗಾಳದ ಅಡಿಯಲ್ಲಿರುವ ಸತುಯಿ ಎಸ್ ಒ ನಲ್ಲಿ ಬ್ಯಾಂಕಿಂಗ್ ಡೇ ಆಚರಣೆ.

ಗ್ಯಾಂಗ್ಟಕ್  ಎಚ್ ಒ, ಸಿಕ್ಕಿಂ ರಾಜ್ಯ



(Release ID: 1763156) Visitor Counter : 271


Read this release in: English , Urdu , Hindi , Bengali