ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಡೈರಿ ಉದ್ಯಮದ ಕೊಬ್ಬು ಭರಿತ ಜಿಡ್ಡು ಬಳಸಿ ಜೈವಿಕ ಅನಿಲ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ

Posted On: 30 SEP 2021 7:45PM by PIB Bengaluru

ಡೈರಿ ಉದ್ಯಮದ ಕೊಬ್ಬು ಭರಿತ ರಾಡಿಯನ್ನು ಆಮ್ಲಜನಕರಹಿತ ವಿಘಟನೆ ಮಾಡಲು ಸಹ್ಯ ಮತ್ತು ಸುಸ್ಥಿರ ಶುದ್ದೀಕರಣ ಪ್ರಕ್ರಿಯೆಯನ್ನು ಒಳಗೊಂಡ ನವೀನ ಉತ್ತಮ  ಫಲಿತಾಂಶ ನೀಡುವ ಜೈವಿಕ ರಿಯಾಕ್ಟರ್ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಮಾಡಿದ್ದಾರೆ. ಡೈರಿ ಉದ್ಯಮದಲ್ಲಿ ದ್ರವ ಹೊರಚೆಲ್ಲುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸಲು  ಸಾಧ್ಯವಾಗುವಂತೆ ಮಾಡಲು ಪೊರೆಗಳನ್ನು ಅಳವಡಿಸಲಾದ  ಜೈವಿಕ ರಿಯಾಕ್ಟರ್ ಆಧಾರಿತ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಯನ್ನು  ಇದರೊಂದಿಗೆ ಅಭಿವೃದ್ಧಿ ಮಾಡಲಾಗಿದೆ.

 

ಈ ತಂತ್ರಜ್ಞಾನವನ್ನು ಮೈಸೂರಿನ ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ. ನ ಡಾ. ಸಂದೀಪ ಎನ್. ಮುದಲಿಯಾರ್ ಅವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತ್ಯಾಜ್ಯ ನಿರ್ವಹಣಾ ತಂತ್ರಜ್ಞಾನ ಕಾರ್ಯಕ್ರಮದಡಿಯಲ್ಲಿ ಮತ್ತು ಮೆ. ಸನ್ ಎನ್ವಿರೋ ತಂತ್ರಜ್ಞಾನ ಪ್ರೈ. ಲಿಮಿಟೆಡ್  ಸಂಸ್ಥೆಯ ಬೆಂಬಲದೊಂದಿಗೆ ಮಾದರಿ ಡೈರಿ ಸ್ಥಾವರದಲ್ಲಿ ಪೈಲೆಟ್ ಪ್ರಮಾಣದ ಪ್ರಯೋಗಗಳ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಅವರದನ್ನು ಗುಣಮಟ್ಟ ಮಾನದಂಡಗಳ ಅಡಿಯಲ್ಲಿ ಅಭಿವೃದ್ಧಿಪಡಿಸಿದ್ದು, ಪೈಲೆಟ್ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ ಹಾಗು ಅದಕ್ಕೆ ಪೇಟೆಂಟ್ ಪಡೆಯಲು ಶೀಘ್ರವೇ ಅರ್ಜಿ ಸಲ್ಲಿಸಲಾಗುವುದು.

 

ಇದನ್ನು ಕೊಬ್ಬು ಮತ್ತು ತೈಲಾಂಶಗಳುಳ್ಳ ಸಂಕೀರ್ಣ ಪ್ರಮಾಣದ ಜಿಡ್ಡನ್ನು ಒಳಗೊಂಡ ತ್ಯಾಜ್ಯವನ್ನು ಆಮ್ಲಜನಕರಹಿತ ಜೀರ್ಣಕ್ರಿಯೆಗೆ ಒಳಪಡಿಸಲು ಬಳಸಬಹುದು ಹಾಗು ತ್ಯಾಜ್ಯ ನೀರು ಸಂಸ್ಕರಣೆಯಲ್ಲೂ ಇದನ್ನು ಅಳವಡಿಸಿಕೊಂಡರೆ ಶೂನ್ಯ ತ್ಯಾಜ್ಯ ನೀರಿನ ಗುರಿಯನ್ನು ಸಾಧಿಸಬಹುದಾಗಿರುತ್ತದೆ. ಜೊತೆಗೆ ಈ ತಂತ್ರಜ್ಞಾನವನ್ನು ಆಹಾರ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳಲ್ಲಿಯೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಬಳಸಬಹುದಾಗಿದೆ. ಈ ಸುಸ್ಥಿರ ಶುದ್ದೀಕರಣ ಪೂರ್ವ ತಂತ್ರಜ್ಞಾನವನ್ನು ಎಲ್ಲಾ ರೀತಿಯ ಸಂಕೀರ್ಣ ಘನ ತ್ಯಾಜ್ಯಗಳಿಗೆ ಬಳಸಿ ಜೈವಿಕ ಅನಿಲ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ ಮತ್ತು ಆಮ್ಲಜನಕರಹಿತ ಜೀರ್ಣಕ್ರಿಯೆಯ ದೃಢತೆಯನ್ನು ಹೆಚ್ಚಿಸಬಹುದಾಗಿದೆ.

 

ಡೈರಿ ಮತ್ತು ಆಹಾರ ಉದ್ಯಮಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಈ ತಂತ್ರಜ್ಞಾನವು ಯಾವುದೇ ಜೈವಿಕವಾಗಿ ಕರಗಬಹುದಾದ ಘನ ತ್ಯಾಜ್ಯ ರಾಡಿ ಮತ್ತು ಆಹಾರ ಉದ್ಯಮದ ತ್ಯಾಜ್ಯ ಮತ್ತು ದ್ರವ ತ್ಯಾಜ್ಯಗಳ ಸಂಸ್ಕರಣೆಗೆ ಬಳಸಬಹುದಾಗಿದೆ.

 

ಇನ್ನಷ್ಟು ವಿವರಗಳಿಗೆ, ಡಾ. ಸಂದೀಪ್ ಎನ್. ಮುದಲಿಯಾರ್ ಅವರನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದು: (sn.mudliar[at]gmail[dot]com).

***



(Release ID: 1760174) Visitor Counter : 215


Read this release in: English , Urdu , Hindi