ಭೂವಿಜ್ಞಾನ ಸಚಿವಾಲಯ
azadi ka amrit mahotsav

ಅಂಟಾರ್ಟಿಕ ಪರಿಸರ ರಕ್ಷಿಸಲು ಮತ್ತು ಪೂರ್ವ ಅಂಟಾರ್ಟಿಕ ಹಾಗೂ ವೆಡೆಲ್ ಸಮುದ್ರ ವಲಯದಲ್ಲಿ ಸಾಗರ ಸಂರಕ್ಷಿತ ಪ್ರದೇಶಗಳೆಂದು [ಎಂ.ಪಿ.ಎಗಳು] ಹೆಸರಿಸಲು ಭಾರತ ಬೆಂಬಲ ನೀಡುತ್ತದೆ


ಐರೋಪ್ಯ ಒಕ್ಕೂಟ ಸಭೆ ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್: ಕಾನೂನು ಬಾಹಿರ ಮತ್ತು ವರದಿಯಾಗದ ಮೀನುಗಾರಿಕೆ ಕ್ಷೇತ್ರದ ನಿಯಂತ್ರಣಕ್ಕೆ ಸಾಗರ ಸಂರಕ್ಷಿತ ಪ್ರದೇಶಗಳು ಅಗತ್ಯ.

ಆಸ್ಟ್ರೇಲಿಯಾ, ನಾರ್ವೆ, ಉರುಗ್ವೆ ಮತ್ತು ಯುನೈಟೆಡ್ ಕಿಂಗ್ ಡಂ ನೊಂದಿಗೆ ಅಕ್ಟೋಬರ್ 2021 ರ ಅಂತ್ಯದ ವೇಳೆಗೆ ಸಾಗರ ಸಂರಕ್ಷಿತ ಪ್ರದೇಶಗಳ ಪ್ರಸ್ತಾವಗಳ ಸಹ ಪ್ರಾಯೋಜಕತ್ವಕ್ಕೆ ಕೈಜೋಡಿಸಲು ಭಾರತ ಸಜ್ಜು : ಡಾ. ಜಿತೇಂದ್ರ ಸಿಂಗ್

Posted On: 30 SEP 2021 5:55PM by PIB Bengaluru

ಅಂಟಾರ್ಟಿಕ ಪರಿಸರ ರಕ್ಷಿಸಲು ಮತ್ತು ಪೂರ್ವ ಅಂಟಾರ್ಟಿಕ ಹಾಗೂ ವೆಡಲ್ ಸಮುದ್ರವನ್ನು ಸಾಗರ ಸಂರಕ್ಷಿತ ಪ್ರದೇಶಗಳೆಂದು [ಎಂ.ಪಿ.ಎಗಳು] ಗೊತ್ತುಪಡಿಸುವ ಐರೋಪ್ಯ ಒಕ್ಕೂಟದ ಪ್ರಸ್ತಾವನೆಗೆ ಭಾರತ ಬೆಂಬಲ ನೀಡಿದೆ.

ವಿಜ್ಞಾನ, ತಂತ್ರಜ್ಞಾನ ಖಾತೆ ರಾಜ್ಯ ಸಚಿವರು [ಸ್ವತಂತ್ರ ಖಾತೆ]. ಭೂ ವಿಜ್ಞಾನ, ಪಿ.ಎಂ.ಒ ಸಹಾಯಕ ಸಚಿವರು, ಸಿಬ್ಬಂದಿ, ಪಿಂಚಣಿ, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಡಾ. ಜಿತೇಂದ್ರ ಸಿಂಗ್ ಸಭೆಯಲ್ಲಿ ಐರೋಪ್ಯ ಒಕ್ಕೂಟದ ವಿವಿಧ ದೇಶಗಳ ಸಂಬಂಧಪಟ್ಟ ಸಚಿವರುಗಳನ್ನು ಉದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. 

ಡಾ, ಜಿತೇಂದ್ರ ಸಿಂಗ್ ಮಾತನಾಡಿ, “ಅಂಟಾರ್ಟಿಕ ಪರಿಸರ ರಕ್ಷಿಸುವಲ್ಲಿ ಭಾರತ ಸುಸ್ಥಿರತೆಯನ್ನು ಬೆಂಬಲಿಸುತ್ತದೆ” ಎಂದು ಹೇಳಿದರು. ಕಾನೂನು ಬಾಹಿರ ವಿಷಯಗಳ ಬಗ್ಗೆ ವರದಿ ಮಾಡದ ಮತ್ತು ಅನಿಯಂತ್ರಿತ ಮೀನುಗಾರಿಕೆಯನ್ನು ನಿಯಂತ್ರಿಸಲು ಭವಿಷ್ಯದಲ್ಲಿ ಭಾರತ ಎಂ.ಪಿ.ಎ ಗಳ ಸೂತ್ರೀಕರಣ, ರೂಪಾಂತರ ಮತ್ತು ಅನುಷ್ಠಾನದ ಕಾರ್ಯ ವಿಧಾನಗಳೊಂದಿಗೆ ಸಂಬಂಧ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಂಟಾರ್ಟಿಕ ಸಾಗರ ಜೀವನೋಪಾಯ [ಸಿ.ಸಿ.ಎ.ಎಂ.ಎಲ್.ಆರ್] ಸದಸ್ಯ ರಾಷ್ಟ್ರಗಳ ಸಂರಕ್ಷಣಾ ಆಯೋಗ ರಚನೆಗೆ ಅವರು ಒತ್ತಾಯಿಸಿದರು.

ಪೂರ್ವ ಅಂಟಾರ್ಟಿಕಾ ಮತ್ತು ವೆಡೆಲ್ ಸಮುದ್ರವನ್ನು ಎಂ.ಪಿ.ಎಗಳಾಗಿ ಗೊತ್ತುಪಡಿಸುವ ಪ್ರಸ್ತಾವನೆಯನ್ನು ಮೊದಲು ಸಿ.ಸಿ.ಎ.ಎಂ.ಆರ್.ಎಲ್ ಮುಂದೆ ಮಂಡಿಸಲಾಯಿತು. 

2020 ರಲ್ಲಿ ಅಂದರೆ ಆ ಸಮಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಆಸ್ಟ್ರೇಲಿಯಾ, ನಾರ್ವೆ, ಉರುಗ್ವೆ ಮತ್ತು ಯನೈಟೆಡ್ ಕಿಂಗ್ ಡಂ ಸಹ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದರೊಂದಿಗೆ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.  ಭಾರತ 2021 ರ ಅಕ್ಟೋಬರ್ ಅಂತ್ಯದ ವೇಳೆಗೆ ಈ ದೇಶಗಳೊಂದಿಗೆ ಎಂ.ಪಿ.ಎ ಪ್ರಸ್ತಾವನೆಗಳನ್ನು ಸಹ ಪ್ರಾಯೋಜಿಸಲು ಮುಂದಾಗಿದೆ ಎಂದು ಸಚಿವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಐರೋಪ್ಯ ಒಕ್ಕೂಟದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಭಾರತ 1981 ರಲ್ಲಿ ದಕ್ಷಿಣ ಹಿಂದೂ ಮಹಾಸಾಗರ ವಲಯದ ಮೂಲಕ ಅಂಟಾರ್ಟಿಕ ದಂಡಯಾತ್ರೆಯನ್ನು ಕೈಗೊಂಡಿತು ಮತ್ತು ಅಲ್ಲಿಂದ ಹಿಂದೆ ಸರಿಯಲಿಲ್ಲ. ಇಲ್ಲಿಯವರೆಗೆ  ಬಾರತ ಸಹ 2021 – 22 ರಲ್ಲಿ 41 ನೇ ದಂಡ ಯಾತ್ರೆಯ ಯೋಜನೆಗಳೊಂದಿಗೆ 40 ದಂಡ ಯಾತ್ರೆಗಳನ್ನು ಪೂರ್ಣಗೊಳಿಸಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸೂಚನೆಯಡಿ ಭಾರತ ಅಂಟಾರ್ಟಿಕಾ ದೃಷ್ಟಿಕೋನವನ್ನು ಹಿಡಿದು ತನ್ನ ಹಿತಾಸಕ್ತಿಯನ್ನು ಗಟ್ಟಿಗೊಳಿಸಿದೆ ಎಂದು ಅವರು ಹೇಳಿದರು.

ಸಿ.ಸಿ.ಎ.ಎಂ.ಎಲ್.ಆರ್ ನಡಿ ಭಾರತ ಇದೇ ಮೊದಲ ಬಾರಿಗೆ ಎಂ.ಪಿ.ಎ ಪ್ರಸ್ತಾವನೆಗಳ ಕುರಿತು ಸಹ ಪ್ರಾಯೋಜಕತ್ವ ಪಡೆಯಲು ಪರಿಶೀಲಿಸುತ್ತಿದೆ ಮತ್ತು ಅರ್ಜೇಂಟೈನಾ, ಬ್ರಿಜಿಲ್, ಚಿಲಿ, ಕೊರಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಂತಹ ದೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇದು ಎಂ.ಪಿ.ಎ ಪ್ರಸ್ತಾವನೆಗಳನ್ನು ಬೆಂಬಲಿಸಲು ಮುಂಚಿತವಾಗಿಯೇ ಪರಿಗಣಿಸುತ್ತದೆ. ಎಂ.ಪಿ.ಎ ಪ್ರಸ್ತಾವನೆಗಳಿಗೆ ಬೆಂಬಲ ವಿಸ್ತರಿಸಲು ಮತ್ತು ಪ್ರಾಯೋಜಕತ್ವ ಪರಿಗಣಿಸುವ ಭಾರತದ ನಿರ್ಧಾರ ಸಂರಕ್ಷಣೆ ಮತ್ತು ಸಮರ್ಥನೀಯ ಬಳಕೆಯ ತತ್ವಗಳಿಂದ ಮತ್ತು ಜಾಗತಿಕ ಸಹಕಾರ ಚೌಕಟ್ಟುಗಳಿಗೆ [ಸುಸ್ಥಿರ ಅಭಿವೃದ್ಧಿ ಗುರಿಗಳು, ವಿಶ್ವ ಸಂಸ್ಥೆಯ ದಶಕದ ಸಾಗರಗಳು,  ಜೀವ ವೈವಿದ್ಯದ ಸಮಾವೇಶ ಇತ್ಯಾದಿ] ಭಾರತ ಸಹಿ ಹಾಕಿದೆ.

ಉನ್ನತಮಟ್ಟದ ಸಚಿವರ ಮಟ್ಟದ ಸಭೆಯಲ್ಲಿ ಪ್ರಸ್ತಾವಿಕವಾಗಿ ಐರೋಪ್ಯ ಒಕ್ಕೂಟದ ಪರಿಸರ, ಸಾಗರ ಪ್ರದೇಶಗಳು ಮತ್ತು ಮೀನುಗಾರಿಕೆ ಆಯುಕ್ತರಾದ ಅರ್ಜೀನಿಜಸ್ ಸಿಂಕೆವಿಷರ್ ಅವರು ಆಯೋಜಿಸಿದ್ದರು. ಇದರಲ್ಲಿ 18 ದೇಶಗಳ ಮಂತ್ರಿಗಳು, ರಾಯಭಾರಿಗಳು ಮತ್ತು ಅಯುಕ್ತರು ಪಾಲ್ಗೊಂಡಿದ್ದರು. ಎಂ.ಪಿ.ಎ ಪ್ರಸ್ತಾವನೆಗಳಲ್ಲಿ ಸಹ ಪ್ರಾಯೋಜಕತ್ವದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಜಂಟಿ ಕಾರ್ಯತಂತ್ರವನ್ನು ಪ್ರತಿಫಲಿಸುವ ಹಾಗೂ ಸಿ.ಸಿ.ಎ.ಎಂ.ಎಲ್.ಆರ್ ನಲ್ಲಿ ಭವಿಷ್ಯದ ಕಾರ್ಯಚಟುವಟಿಕೆಯನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚಿಸಲಾಗಿದೆ.

ಸಿ.ಸಿ.ಎ.ಎಂ.ಎಲ್.ಆರ್ ಎಂಬುದು ಅಂತರರಾಷ್ಟ್ರೀಯ ಒಪ್ಪಂದವಾಗಿದ್ದು, ಅಂಟಾರ್ಟಿಕ ವಲಯದಲ್ಲಿ ಮೀನುಗಾರಿಕೆ ಮತ್ತು ಜೀವ ವೈವಿಧ್ಯ ರಕ್ಷಿಸುವ ಹಾಗೂ ಅಂಟಾರ್ಟಿಕ ಸಾಗರ ಪರಿಸರ ವ್ಯವಸ್ಥೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಸಿ.ಸಿ.ಎ.ಎಂ.ಎಲ್.ಆರ್ 1982 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, 1986 ರಿಂದ ಬಾರತ ಸಿ.ಸಿ.ಎ.ಎಂ.ಎಲ್.ಆರ್ ನ ಶಾಶ್ವತ ಸದಸ್ಯ ರಾಷ್ಟ್ರವಾಗಿದೆ, ಸಿ.ಸಿ.ಎ.ಎಂ.ಎಲ್.ಆರ್ ಗೆ ಸಂಬಂಧಿಸಿದ ಕೆಲಸವನ್ನು ಭಾರತದಲ್ಲಿ ಭೂ ವಿಜ್ಞಾನ ಸಚಿವಾಲಯವು ಅದಕ್ಕೆ ಲಗತ್ತಿಸಲಾದ ಕಚೇರಿ, ಕೇರಳದ ಕೊಚ್ಚಿಯಲ್ಲಿರುವ ಸಮುದ್ರದ ಜೀವಂತ ಸಂಪನ್ಮೂಲಗಳು ಮತ್ತು ಪರಿಸರ ಕೇಂದ್ರ [ಸಿ.ಎಂ.ಎಲ್.ಆರ್.ಇ]ದ ಮೂಲಕ ಸಂಯೋಜಕತ್ವದಡಿ ಕಾರ್ಯನರ್ವಹಣೆ ಮಾಡಲಾಗುತ್ತಿದೆ. 

 

ಎಂ.ಪಿ.ಎ ಎಂಬುದು ಸಮುದ್ರ ಸಂರಕ್ಷಿತ ಪ್ರದೇಶವಾಗಿದ್ದು, ಅದು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳಿಗೆ ರಕ್ಷಣೆ ನೀಡುತ್ತದೆ. ಎಂ.ಪಿ.ಎ ಒಳಗಿನ ಕೆಲವು ಚಟುವಟಿಕೆಗಳು ನಿರ್ದಿಷ್ಟ ಸಂರಕ್ಷಣೆ, ಆವಾಸಸ್ಥಾನದ ರಕ್ಷಣೆಯನ್ನು ಪೂರೈಸಲು ಸೀಮಿತವಾಗಿದೆ ಅಥವಾ ನಿಷೇಧಿಸಲಾಗಿದೆ. ಪರಿಸರ ವ್ಯವಸ್ಥೆಯ ಮೇಲ್ವಿಚಾರಣೆಯ ಉದ್ದೇಶಗಳು, 2009 ರಿಂದ ಸಿ.ಸಿ.ಎ.ಎಂ.ಎಲ್.ಆರ್ ಸದಸ್ಯರು, ದಕ್ಷಿಣ ಸಾಗರದ ವಿವಿಧ ಪ್ರದೇಶಗಳಿಗೆ ಎಂ.ಪಿ.ಎಗಳಿಗಾಗಿ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಿ.ಸಿ.ಎ.ಎಂ.ಆರ್.ಎಲ್ ನ ವೈಜ್ಞಾನಿಕ ಸಮಿತಿ ಈ ಪ್ರಸ್ತಾವನೆಗಳನ್ನು ಪರಿಗಣಿಸುತ್ತದೆ. ಸಿ.ಸಿ.ಎ.ಎಂ.ಆರ್.ಎಲ್ ನ ಸದಸ್ಯರು ಅವರನ್ನು ಒಪ್ಪಿಕೊಂಡ ನಂತರ  ಸಿ.ಸಿ.ಎ.ಎಂ.ಆರ್.ಎಲ್ ನಿಂದ ವಿಸ್ತೃತ ಸಂರಕ್ಷಣಾ ಕ್ರಮಗಳನ್ನು ರೂಪಿಸಲಾಗಿದೆ.

***


(Release ID: 1760001) Visitor Counter : 287


Read this release in: English , Hindi , Punjabi , Telugu