ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ಮಾಹಿತಿಯ ಇ-ಶ್ರಮ ಪೋರ್ಟಲ್ ನಲ್ಲಿ ಒಂದು ತಿಂಗಳಲ್ಲಿ 1.7 ಕೋಟಿಗೂ ಅಧಿಕ ನೋಂದಣಿಗಳಾಗಿವೆ
ನೋಂದಾಯಿತ ಕೆಲಸಗಾರರಲ್ಲಿ ಸುಮಾರು 50% ಮಹಿಳೆಯರಿದ್ದಾರೆ
78% ಕ್ಕಿಂತ ಹೆಚ್ಚು ನೋಂದಣಿಗಳು ಸಾಮಾನ್ಯ ಸೇವಾ ಕೇಂದ್ರಗಳ (ಸಿ ಎಸ್ ಸಿ) ಮೂಲಕ ಪೂರ್ಣಗೊಂಡಿವೆ
ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಇದರಿಂದ ಪ್ರತಿಯೊಬ್ಬ ಕೆಲಸಗಾರರು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ: ಶ್ರೀ ಭೂಪೇಂದರ್ ಯಾದವ್
Posted On:
26 SEP 2021 11:46AM by PIB Bengaluru
ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದ ಒಂದು ತಿಂಗಳಲ್ಲಿ ಅಸಂಘಟಿತ ವಲಯದಿಂದ ಮತ್ತು ಅಸಂಘಟಿತ ಉದ್ಯೋಗದಲ್ಲಿರುವ 1.71 ಕೋಟಿಗೂ ಹೆಚ್ಚು ಕಾರ್ಮಿಕರ ನೋಂದಣಿಯಾಗಿದೆ. ಸೆಪ್ಟೆಂಬರ್ 25 ರ ಹೊತ್ತಿಗೆ, 1,71,59,743 ಕಾರ್ಮಿಕರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಇ-ಶ್ರಮ ಪೋರ್ಟಲ್ ( https://eshram.gov.in ) ಅನ್ನು 26 ನೇ ಆಗಸ್ಟ್ 2021 ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಿ ಶ್ರೀ ಭೂಪೇಂದರ್ ಯಾದವ್ ಅವರು ರಾಜ್ಯ ಸಚಿವ (ಕಾರ್ಮಿಕ ಮತ್ತು ಉದ್ಯೋಗ) ಶ್ರೀ ರಾಮೇಶ್ವರ ತೇಲಿ ಸಮ್ಮುಖದಲ್ಲಿ ಉದ್ಘಾಟಿಸಿದರು. ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಅರೆಕಾಲಿಕ ಕೆಲಸಗಾರರು ಸೇರಿದಂತೆ ಅಸಂಘಟಿತ ಕಾರ್ಮಿಕರ ಮೊದಲ ರಾಷ್ಟ್ರೀಯ ದತ್ತಾಂಶ ಸಂಚಯ ಈ ಪೋರ್ಟಲ್ ಆಗಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ವಲಯದ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.
ಮೇಲಿನ ಅಂಕಿ ಅಂಶಗಳು ನೋಂದಣಿ ಕಾರ್ಯದ ವಾರದ ಪ್ರಗತಿಯನ್ನು ತೋರಿಸುತ್ತದೆ. ಮುಖ್ಯವಾಗಿ, ಪ್ರತಿ ವಾರ ಕಾರ್ಮಿಕರ ಮಾಹಿತಿಗಳನ್ನು ಕಲೆಹಾಕುವ ಹೆಚ್ಚಿನ ಮೈಲಿಗಲ್ಲನ್ನು ಸಾಧಿಸುವ ಅಭಿಯಾನದಿಂದ ಬಲಗೊಂಡಿದೆ. 19.52ಲಕ್ಷಕ್ಕೂ ಹೆಚ್ಚು ನೋಂದಣಿಯ 2ನೇ ವಾರಕ್ಕೆ ಹೋಲಿಸಿದರೆ, ಮೂರನೇ ಮತ್ತು ನಾಲ್ಕನೇ ವಾರದಲ್ಲಿ ನೋಂದಣಿಗಳು ಗಣನೀಯವಾಗಿ ಹೆಚ್ಚಾಗಿವೆ. 4 ನೇ ವಾರದಲ್ಲಿ, 69.53 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ಅಭಿಯಾನವನ್ನು ಬಲಪಡಿಸಲು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್, ನಿನ್ನೆ, ಮುಂಬೈಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್‌ಗಳನ್ನು ವಿತರಿಸಿದರು. ಕೋವಿಡ್ -19ಕ್ಕೆ ಜೀವ ಕಳೆದುಕೊಂಡ ಕಾರ್ಮಿಕರ ಅವಲಂಬಿತರಿಗೆ ಇಎಸ್‌ಐ ಕೋವಿಡ್ -19 ಪರಿಹಾರ ಯೋಜನೆಗೆ ಅನುಮೋದನೆ ಪತ್ರಗಳನ್ನು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಪರಿಹಾರ ಯೋಜನೆಗೆ ಅನುಮೋದನೆ ಪತ್ರಗಳನ್ನು ಶ್ರೀ ಯಾದವ್ ನೀಡಿದರು.
ಇ-ಶ್ರಮ ಪೋರ್ಟಲ್ ನ ಬಗ್ಗೆ ಮಾತನಾಡಿದ ಸಚಿವರು, ಅಸಂಘಟಿತ ವಲಯದಲ್ಲಿರುವ ಪ್ರತಿಯೊಬ್ಬ ಕೆಲಸಗಾರರೂ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದರು. "ನೋಂದಣಿ ಅಗತ್ಯ, ಆದ್ದರಿಂದ ಪ್ರತಿ ವೃತ್ತಿಯಲ್ಲಿ ಎಷ್ಟು ಕೆಲಸಗಾರರು ಇದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. 400 ಕ್ಕೂ ಹೆಚ್ಚು ವೃತ್ತಿಗಳನ್ನು ಈಗಾಗಲೇ ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ. ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಆದ್ದರಿಂದ ಪ್ರತಿಯೊಬ್ಬ ಕೆಲಸಗಾರರೂ ಸೇರಿದಂತೆ ಸಣ್ಣ ಕೆಲಸ ಮಾಡುವವರು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ, ಈಗ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವವರು ರೂ.2 ಲಕ್ಷಗಳವರೆಗೆ ವಿಮೆ ಪಡೆಯಲು ಅರ್ಹರಾಗಿರುತ್ತಾರೆ. " ಎಂದು ಹೇಳಿದರು.
ಶ್ರೀ ಯಾದವ್ ರವರು ಕಾರ್ಮಿಕ ಸಂಘಗಳ ನಾಯಕರು, ಅಸಂಘಟಿತ ವಲಯದ ಕೆಲಸಗಾರರು ಮತ್ತು ಉದ್ಯೋಗದಾತರೊಂದಿಗೆ ಸಂವಾದ ನಡೆಸಿದರು ಮತ್ತು ಚರ್ಚಿಸಿದರು. ಮುಖ್ಯ ಕಾರ್ಮಿಕ ಆಯುಕ್ತರಾದ (ಕೇಂದ್ರ) ಶ್ರೀಡಿ.ಪಿ.ಎಸ್. ನೇಗಿ ಮತ್ತು ಉಪ ಮುಖ್ಯ ಕಾರ್ಮಿಕ ಆಯುಕ್ತರು (ಕೇಂದ್ರ), ಮುಂಬೈ, ಶ್ರೀ ತೇಜ್ ಬಹದ್ದೂರ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತ, ಸಾರ್ವಜನಿಕ ಉದ್ದಿಮೆಗಳು, ಆ್ಯಪ್ ಆಧಾರಿತ ಸೇವೆಗಳ ಅರೆಕಾಲಿಕ ಕೆಲಸಗಾರರ ಅಸಂಘಟಿತ ವಲಯದ ಸಂಸ್ಥೆಗಳು ಪೋರ್ಟಲ್ ಅನ್ನು ಯಶಸ್ವಿಯಾಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಶ್ರೀನೇಗಿ ಹೇಳಿದರು. ಪ್ರಧಾನ ಮಂತ್ರಿಯವರ ಆಡಳಿತ ತತ್ವವಾದ ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್, ಕಾರ್ಮಿಕರ ನಂಬಿಕೆ ಮತ್ತು ಮಿಷನ್ ಅನ್ನು ಮುಂದುವರಿಸಲು ಎಲ್ಲಾ ಪಾಲುದಾರರ ಪ್ರಯತ್ನದ ಅಗತ್ಯವಿದೆ ಎಂದು ಆಯುಕ್ತರು ಉಲ್ಲೇಖಿಸಿದರು.
ಗೌರವಾನ್ವಿತ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಪರಿಹಾರ ಯೋಜನೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್‌ಗಳಿಗೆ ಅನುಮೋದನೆ ಪತ್ರಗಳನ್ನು ವಿತರಿಸಿದರು ಮತ್ತು ಕಾರ್ಮಿಕ ಸಂಘಗಳ ನಾಯಕರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಉದ್ಯೋಗದಾತರೊಂದಿಗೆ ಸೆಪ್ಟೆಂಬರ್ 25, 2021ರಂದು ಮುಂಬೈನಲ್ಲಿ ಸಂವಾದ ನಡೆಸಿದರು
ಕುತೂಹಲದ ವಿಷಯವೆಂದರೆ, ಇಲ್ಲಿಯವರೆಗೆ ನೋಂದಾಯಿಸಲಾದ ಕೆಲಸಗಾರರಲ್ಲಿ ಸುಮಾರು 50% ಮಹಿಳೆಯರಿದ್ದಾರೆ. ಇ-ಶ್ರಮ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ವಾರದಿಂದ ವಾರಕ್ಕೆ ಶೇಕಡಾವಾರು ಸುಧಾರಣೆಯಾಗಿದೆ. ಮಹಿಳಾ ಕಾರ್ಮಿಕರ ಪಾಲು 1ನೇ ವಾರದಲ್ಲಿ ಸುಮಾರು 37% ರಿಂದ ಇತ್ತೀಚಿನ ವಾರದಲ್ಲಿ ಅಂದರೆ 4ನೇ ವಾರದಲ್ಲಿ ಸುಮಾರು 50% ಕ್ಕೆ ತೀವ್ರವಾಗಿ ಸುಧಾರಿಸಿದೆ,
ಕಳೆದ ವಾರ ಆಧರಿಸಿದ ದತ್ತಾಂಶ ವಿಶ್ಲೇಷಣೆಯು ಮನೆಕೆಲಸದಲ್ಲಿರುವ ಮಹಿಳಾ ಕಾರ್ಮಿಕರು ನಿರಂತರ ಪ್ರಮಾಣದಲ್ಲಿ ತಮ್ಮನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವುದನ್ನು ತೋರಿಸಿದೆ. ಇದು, ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿರುವ ಉದ್ಯೋಗದ ಒಂದು ವರ್ಗವಾಗಿದೆ. ಇದಲ್ಲದೆ, ಕೃಷಿ ಕಾರ್ಮಿಕರು, ಆಹಾರ ಉದ್ಯಮಗಳ ಸಹಾಯಕರು ಮತ್ತು ಯಂತ್ರದ ಆಪರೇಟರ್‌ಗಳು, ಉಡುಪು ಉದ್ಯಮದ ಸಹಾಯಕರು ಮತ್ತು ಟೈಲರ್‌ಗಳು ಮತ್ತು ಸಣ್ಣ ಪ್ರಮಾಣದ ತಂಬಾಕು/ ಬೀಡಿ ಕಟ್ಟುವಿಕೆ ಮತ್ತು ಆಶಾ/ ಎಎನ್‌ಎಮ್‌ಗಳಂತಹ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಗಣನೀಯವಾಗಿದೆ. ಆದ್ದರಿಂದ, ಪೋರ್ಟಲ್‌ನಲ್ಲಿ ನೋಂದಣಿಯಿಂದ ಸಂಗ್ರಹವಾಗುವ ವಿವಿಧ ಸಂರಕ್ಷಣಾ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ದುರ್ಬಲ ಮಹಿಳೆಯರ ಗುಂಪನ್ನು ವಿಮೆ ಮಾಡಲಾಗಿದೆ ಎಂದು ಹೇಳಬಹುದು.
ಇ-ಶ್ರಮ ಪೋರ್ಟಲ್‌ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಸಂಖ್ಯೆಯ ನಿಯಮಗಳಲ್ಲಿ ರಾಜ್ಯಗಳ ಸಾಪ್ತಾಹಿಕ ಶ್ರೇಯಾಂಕ
ರಾಜ್ಯಗಳ ಶ್ರೇಯಾಂಕ
|
ವಾರ 1
|
ವಾರ 2
|
ವಾರ 3
|
ವಾರ 4
|
1
|
ಒಡಿಶಾ
|
ಒಡಿಶಾ
|
ಬಿಹಾರ
|
ಒಡಿಶಾ
|
2
|
ಬಿಹಾರ
|
ಬಿಹಾರ
|
ಒಡಿಶಾ
|
ಪಶ್ಚಿಮ ಬಂಗಾಳ
|
3
|
ಉತ್ತರ ಪ್ರದೇಶ
|
ಪಂಜಾಬ್
|
ಉತ್ತರ ಪ್ರದೇಶ
|
ಬಿಹಾರ
|
4
|
ಮಧ್ಯಪ್ರದೇಶ
|
ಪಶ್ಚಿಮ ಬಂಗಾಳ
|
ಪಶ್ಚಿಮ ಬಂಗಾಳ
|
ಉತ್ತರ ಪ್ರದೇಶ
|
5
|
ಆಂಧ್ರಪ್ರದೇಶ
|
ಮಧ್ಯಪ್ರದೇಶ
|
ಮಧ್ಯಪ್ರದೇಶ
|
ಮಧ್ಯಪ್ರದೇಶ
|
|
|
|
|
|
ವಿವರಣೆ
|
|
ಕಳೆದ ವಾರಕ್ಕೆ ಹೋಲಿಸಿದರೆ ಶ್ರೇಣಿಯ ಸುಧಾರಣೆಯನ್ನು ಸೂಚಿಸುತ್ತದೆ
|
|
|
ಕಳೆದ ವಾರಕ್ಕೆ ಹೋಲಿಸಿದರೆ ಸ್ಥಳಗಳು/ ಶ್ರೇಯಾಂಕಗಳ ಕುಸಿತವನ್ನು ಸೂಚಿಸುತ್ತದೆ
|
ಒಂದನೇ ವಾರದಿಂದ, ಒಡಿಶಾ ಮತ್ತು ಬಿಹಾರ ಮೊದಲ ಸ್ಥಾನ ಕಾಯ್ದುಕೊಳ್ಳಲು ಪರಸ್ಪರ ಪೈಪೋಟಿ ನಡೆಸುತ್ತಿವೆ. ಬಿಹಾರ 1 ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಕುಸಿದಿದ್ದರೆ, ವಾರ 3 ಮತ್ತು 4 ನೇ ವಾರಗಳ ನಡುವೆ, ಪೋರ್ಟಲ್ ಆರಂಭವಾದಾಗಿನಿಂದ ಒಡಿಶಾ ಒಟ್ಟು ನಾಲ್ಕು ವಾರಗಳಲ್ಲಿ ಮೂರರಲ್ಲಿ ಇ-ಶ್ರಮ ಪೋರ್ಟಲ್‌ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಯಲ್ಲಿ ಮೊದಲ ಶ್ರೇಣಿಯನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ.
ನೋಂದಣಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ಸಿಎಸ್‌ಸಿಗಳ ವ್ಯಾಪ್ತಿ ನಿರ್ಣಾಯಕವಾಗುತ್ತದೆ. ಮೇಲಿನ ಚಿತ್ರದಲ್ಲಿ ಸೂಚಿಸಿದಂತೆ, ಸಿಎಸ್‌ಸಿ ಗಳ ವ್ಯಾಪ್ತಿಯಲ್ಲಿ ಸ್ಥಿರವಾದ ಸುಧಾರಣೆ ಕಂಡುಬಂದಿದೆ ಮತ್ತು ನೋಂದಣಿಯ ಸೌಲಭ್ಯವಾಗಿ ಅವುಗಳ ಜನಪ್ರಿಯತೆಯು ಹೆಚ್ಚಾಗಿದೆ. ವಾರ 1 ರಲ್ಲಿ 56.36% ನೋಂದಣಿಗಳನ್ನು ಸಿಎಸ್‌ಸಿಗಳ ಮೂಲಕ ಮಾಡಲಾಗಿದ್ದರೆ, 4 ನೇ ವಾರದಲ್ಲಿ 78% ಕ್ಕಿಂತ ಹೆಚ್ಚು ನೋಂದಣಿಗಳನ್ನು ಸಿಎಸ್‌ಸಿಗಳ ಮೂಲಕ ಪೂರ್ಣಗೊಳಿಸಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಸಂಘಟಿತ ವಲಯದ ಕಾರ್ಮಿಕರನ್ನು ಸಿಎಸ್‌ಸಿಗಳ ಮೂಲಕ ಇ-ಶ್ರಮ್ ಪೋರ್ಟಲ್‌ನಲ್ಲಿ ಸಜ್ಜುಗೊಳಿಸಲು ಮತ್ತು ನೋಂದಾಯಿಸಲು ಪ್ರಮುಖ ಪಾತ್ರವಹಿಸುತ್ತವೆ.
ಇ-ಶ್ರಮ ಪೋರ್ಟಲ್ ಅನ್ನು ಆಧಾರ್ ನೊಂದಿಗೆ ಜೋಡಿಸಲಾಗಿದ್ದು, ನೋಂದಾಯಿತ ಕಾರ್ಮಿಕರ ಹೆಸರು, ಉದ್ಯೋಗ, ವಿಳಾಸ, ಶೈಕ್ಷಣಿಕ ಅರ್ಹತೆ, ಕೌಶಲ್ಯ ಪ್ರಕಾರಗಳು ಮತ್ತು ಕುಟುಂಬದ ವಿವರಗಳು ಇತ್ಯಾದಿ ವಿವರಗಳನ್ನು ಹೊಂದಿರುತ್ತದೆ. ಇದು ಅವರ ಉದ್ಯೋಗದ ಪ್ರಯೋಜನವನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮತ್ತು 16-59 ರ ನಡುವೆ ವಯಸ್ಸಿನ ಯಾವುದೇ ಕೆಲಸಗಾರರು ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾರೆ. ವಲಸೆ ಕಾರ್ಮಿಕರು, ಅರೆಕಾಲಿಕ ಕೆಲಸದವರು, ಪ್ಲಾಟ್‌ಫಾರ್ಮ್ ಕೆಲಸಗಾರರು, ಕೃಷಿ ಕಾರ್ಮಿಕರು, ಎಂಜಿಎನ್‌ಆರ್‌ಇಜಿಎ (ನರೆಗಾ) ಕಾರ್ಮಿಕರು, ಮೀನುಗಾರರು, ಹಾಲು ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬೀದಿ ವ್ಯಾಪಾರಿಗಳು, ಮನೆಗೆಲಸದವರು, ರಿಕ್ಷಾ ಎಳೆಯುವವರು ಮತ್ತು ಅಸಂಘಟಿತ ವಲಯದಲ್ಲಿ ಇದೇ ರೀತಿಯ ಇತರ ಉದ್ಯೋಗಗಳಲ್ಲಿ ತೊಡಗಿರುವ ಇತರ ಕೆಲಸಗಾರರು ಎಲ್ಲರೂ ಅರ್ಹರಾಗಿದ್ದಾರೆ.
***
(Release ID: 1758364)
Visitor Counter : 1236