ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಂಚಾಲನಾ ಸಮಿತಿಯನ್ನು ರಚಿಸಿದೆ

Posted On: 21 SEP 2021 7:33PM by PIB Bengaluru

ಶಿಕ್ಷಣ ಸಚಿವಾಲಯವು 21-9-2021ರಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಂಚಾಲನಾ ಸಮಿತಿಯನ್ನು ರಚಿಸಿದೆ.

ಸಮಿತಿಯ ಸದಸ್ಯರ ವಿವರಗಳು ಕೆಳಗಿನಂತಿವೆ:

1. ಕೆ ಕಸ್ತೂರಿರಂಗನ್ (ಅಧ್ಯಕ್ಷರು):

ಇವರು ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, 1994 ರಿಂದ 2003 ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಐಎಸ್ ಆರ್ಒ) ಮುಖ್ಯಸ್ಥರಾಗಿದ್ದರುಇವರು ಭಾರತ ಸರ್ಕಾರದಿಂದ ಮೂರು ಪ್ರಮುಖ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ: ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮವಿಭೂಷಣ (2000). ಅವರು ಎನ್ ಪಿ   2020 ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.

2. ಮಹೇಶ್ ಚಂದ್ರ ಪಂತ್:

ಇವರು ಎನ್ ಇಪಿಎ (ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ)   ಕುಲಪತಿಯಾಗಿದ್ದಾರೆ.

3. ಗೋವಿಂದ ಪ್ರಸಾದ್ ಶರ್ಮಾ:

ಇವರು ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನ ಅಧ್ಯಕ್ಷರು.

4. ನಜ್ಮಾ ಅಖ್ತರ್:

ಏಪ್ರಿಲ್ 2019 ರಿಂದ ಇವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ. ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ.

5. ಟಿ ವಿ ಕಟ್ಟಿಮನಿ:

ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ (ಸಿಟಿಯುಎಪಿ) ಮೊದಲ ಉಪಕುಲಪತಿಯಾಗಿದ್ದಾರೆ ಮತ್ತು ಉನ್ನತ ಶಿಕ್ಷಣಕ್ಕೆ ನೀಡಿದ ಅವರ ಗಮನಾರ್ಹ ಕೊಡುಗೆಗಾಗಿ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

6. ಮೈಕೆಲ್ ಡಾನಿನೊ:

ಇವರು ಫ್ರೆಂಚ್ ಮೂಲದ ಭಾರತೀಯ ಲೇಖಕರು. ಇವರು ಐಐಟಿ ಗಾಂಧಿನಗರದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ. 2017ರಲ್ಲಿ ಸಾಹಿತ್ಯ ಮತ್ತು ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ನೀಡಿ ಗೌರವಿಸಿತು.

7. ಮಿಲಿಂದ್ ಕಾಂಬ್ಳೆ:

ಮಿಲಿಂದ್ ಕಾಂಬ್ಳೆ ಭಾರತೀಯ ಉದ್ಯಮಿಯಾಗಿದ್ದು ಮತ್ತು 2013 ರಲ್ಲಿ ಪದ್ಮಶ್ರೀ ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ. ಇವರು ಜಮ್ಮುವಿನ ಐಐಎಂನ ಅಧ್ಯಕ್ಷರಾಗಿದ್ದಾರೆ.

8. ಜಗಬೀರ್ ಸಿಂಗ್:

ಪ್ರೊ. (ಡಾ.) ಜಗಬೀರ್ ಸಿಂಗ್, ಮಾಜಿ  ಪ್ರೊಫೆಸರ್   ಮತ್ತು ಡಿಎಚ್ ವಿಶ್ವವಿದ್ಯಾಲಯದ ಪಂಜಾಬಿ ವಿಭಾಗದ ಮುಖ್ಯಸ್ಥರಾಗಿದ್ದವರು, ಭಟಿಂಡಾದ ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಹೊಸ ಕುಲಪತಿಯಾಗಿ ನೇಮಕಗೊಂಡಿದ್ದಾರೆ.

9. ಮಂಜುಲ್ ಭಾರ್ಗವ:

ಇವರು  ಭಾರತೀಯ ಮೂಲದ ಅಮೇರಿಕನ್ ಗಣಿತಜ್ಞರು. ಇವರು 2014 ರಲ್ಲಿ ಫೀಲ್ಡ್ಸ್ ಮೆಡಲ್ ಪಡೆದಿದ್ದಾರೆ.

10. ಎಂ ಕೆ ಶ್ರೀಧರ್:

ಇವರು ಸಾಮಾಜಿಕ ಮತ್ತು ರಾಷ್ಟ್ರೀಯ ಉದ್ದೇಶಗಳ ತರಬೇತುದಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ ಮತ್ತು ಮೂವತ್ತು ಲೇಖನಗಳನ್ನು ಪ್ರಕಟಿಸಿರುವರು ಮತ್ತು ಹನ್ನೊಂದು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಶನ್‌ನಿಂದ ಜೆನರಲ್ ಪ್ರೆಸಿಡೆಂಟ್  ಚಿನ್ನದ ಪದಕ  ನೀಡಲಾಗಿದೆ.

ಅವರು ಕರ್ನಾಟಕ ಜ್ಞಾನ ಆಯೋಗ ಮತ್ತು ಕರ್ನಾಟಕ ರಾಜ್ಯ ಆವಿಷ್ಕಾರ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ  ಮತ್ತು ಕರ್ನಾಟಕದ ಮತ್ತು ಕೇಂದ್ರೀಯ ಸಲಹಾ ಮಂಡಳಿಯ(ಸಿ ಬಿ ಸದಸ್ಯ ರಾಗಿ ಸೇವೆ ಸಲ್ಲಿಸಿರುವರು.. ಇತ್ತೀಚೆಗೆ, ಅವರು ಡಾ.ಕೆ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯರಾಗಿ ಮತ್ತು ಕರ್ನಾಟಕ ಸರ್ಕಾರದ ಕಲಿಕೆ ತಂತ್ರಜ್ಞಾನದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು.

11. ಧೀರ್ ಜಿಂಗ್ರಾನ್:

ಡಾ ಧೀರ್ ಜಿಂಗ್ರಾನ್ ಭಾಷಾ ಮತ್ತು ಕಲಿಕಾ ಪ್ರತಿಷ್ಠಾನದ (ಎಲ್ ಎಲ್ ಎಫ್) ಸ್ಥಾಪಕ ನಿರ್ದೇಶಕರಾಗಿದ್ದಾರೆಇದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮೂಲಭೂತ ಕಲಿಕೆಯನ್ನು ಸುಧಾರಿಸುವಲ್ಲಿ ಲಾಭರಹಿತ ಪ್ರತಿಷ್ಠಾನವಾಗಿದೆ. ಹಿಂದೆ, ಐಎಎಸ್ ಅಧಿಕಾರಿಯಾಗಿ, ಧೀರ್ ರವರು ಅಸ್ಸಾಂ ಸರ್ಕಾರದ ಜೊತೆ ಶಿಕ್ಷಣದ ಪ್ರಧಾನ ಕಾರ್ಯದರ್ಶಿಯಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ನೀತಿ ರೂಪಿಸುವ ಪಾತ್ರಗಳಲ್ಲಿ ಮತ್ತು ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

12. ಶಂಕರ್ ಮರುವಾಡ:

ಅವರು ಏಕ್-ಸ್ಟೆಪ್ ಫೌಂಡೇಶನ್‌ನ ಸಹ ಸಂಸ್ಥಾಪಕ ಮತ್ತು ಸಿಇಒ  ಆಗಿದ್ದಾರೆ ಮತ್ತು ಅವರು ಉದ್ಯಮಿಯಾಗಿದ್ದಾರೆ ಮತ್ತು ಮಾರುಕಟ್ಟೆ ವೃತ್ತಿಪರರಾಗಿದ್ದಾರೆ, ಅವರು ಭಾರತದ ರಾಷ್ಟ್ರೀಯ ಗುರುತಿಸುವಿಕೆ ಕಾರ್ಯಕ್ರಮವಾದ ಆಧಾರ್ ನಂತಹ ಬೃಹತ್ ಪ್ರಮಾಣದ ಯೋಜನೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಅಲ್ಲಿ ಅವರು ಬೇಡಿಕೆ ಉತ್ಪಾದನೆ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿದ್ದರು .

ಸಮಿತಿಯ ಉದ್ದೇಶಗಳು

  1. ಎನ್ಇಪಿ 2020 ದೃಷ್ಟಿಕೋನಗಳ ಪ್ರಕಾರ, ಸಮಿತಿಯು ನಾಲ್ಕು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುತ್ತದೆ - ಅಂದರೆ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ, ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ವಯಸ್ಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು .
  2. ಸಮಿತಿಯು ಶಾಲಾ ಶಿಕ್ಷಣ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣದ ವಿವಿಧ ಅಂಶಗಳನ್ನು ಚರ್ಚಿಸಲಿದ್ದು, ಪಠ್ಯಕ್ರಮ ಸುಧಾರಣೆಗಳನ್ನು ಪ್ರಸ್ತಾಪಿಸಲು ನಾಲ್ಕು ಕ್ಷೇತ್ರಗಳಿಗೆ ಸಂಬಂಧಿಸಿದ ಎನ್ಇಪಿ 2020 ಎಲ್ಲಾ ಶಿಫಾರಸುಗಳನ್ನು ಗಮನದಲ್ಲಿರಿಸಿಕೊಂಡಿರುತ್ತದೆ.
  3. ಮೇಲಿನ ಎಲ್ಲಾ ನಾಲ್ಕು ಕ್ಷೇತ್ರಗಳ ವಿವಿಧ ಅಂಶಗಳ ಕುರಿತು ರಾಷ್ಟ್ರೀಯ ಫೋಕಸ್ ಗುಂಪು (ನ್ಯಾಷನಲ್ ಫೋಕಸ್ ಗ್ರೂಪ್ಸ್) ಗಳು ಅಂತಿಮಗೊಳಿಸಿದ ಉದ್ದೇಶ ಪ್ರಬಂಧಗಳನ್ನು ಸಮಿತಿಯು ಚರ್ಚಿಸುತ್ತದೆ.
  4. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟುಗಳಿಗಾಗಿ ಇರುವ ತಾಂತ್ರಿಕ ವೇದಿಕೆಯಲ್ಲಿ ಸ್ವೀಕರಿಸಲ್ಪಟ್ಟ ರಾಜ್ಯ ಪಠ್ಯಕ್ರಮದ ಚೌಕಟ್ಟುಗಳ  ಅಂಶಗಳನ್ನು ಸಮಿತಿಯು  ಪಡೆಯುತ್ತದೆ.
  5. ಎಲ್ಲಾ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳು ಭವಿಷ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕದಂತಹ ಸನ್ನಿವೇಶಗಳ ಪರಿಣಾಮಗಳನ್ನು ಬಿಂಬಿಸುತ್ತವೆ.
  6. ಸಮಿತಿಯು ಸಭೆಗಳನ್ನು ಕರೆಯುವಾಗ, ವಿಷಯ ಪರಿಣತರು, ವಿದ್ವಾಂಸರು, ಶಿಕ್ಷಣ ತಜ್ಞರು ಇತ್ಯಾದಿಗಳನ್ನು ಅಗತ್ಯವಿದ್ದಾಗ ಆಹ್ವಾನಿಸಬಹುದು ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟುಗಳ ಅಭಿವೃದ್ಧಿಯ ಕಾರ್ಯತಂತ್ರದ ವೇಳಾಪಟ್ಟಿಯನ್ನು ಪೂರೈಸುವ ಉದ್ದೇಶದಿಂದ ಕ್ರಮಗಳನ್ನು ನಿರ್ಧರಿಸಬಹುದು
  7. ವಿವಿಧ ಪಾಲುದಾರರಿಂದ, ಅಂದರೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು ಕಾರ್ಯಕಾರಿ ಸಮಿತಿ (ಇಸಿ) ಮತ್ತು ಸಾಮಾನ್ಯ ಸಭೆಗಳಲ್ಲಿ ಸ್ವೀಕರಿಸಿದ ಸಲಹೆಗಳನ್ನು ಒಳಗೊಂಡ ನಂತರ ಸಮಿತಿಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳನ್ನು ಅಂತಿಮಗೊಳಿಸುತ್ತದೆ.
  8. ರಾಷ್ಟ್ರೀಯ ಸಂಚಾಲನಾ ಸಮಿತಿಯ ಅಧಿಕಾರಾವಧಿಯು ಅದರ ಅಧಿಸೂಚನೆಯ ದಿನಾಂಕದಿಂದ ಮೂರು ವರ್ಷಗಳಾಗಿರುತ್ತದೆ.
  9. ಎಸ್ ಸಿ ತನ್ನ ಮಾಡ್ಯೂಲ್ (ಘಟಕ) ಅನ್ನು ಪೂರ್ಣಗೊಳಿಸಲು ಎನ್ ಸಿಆರ್ ಟಿ ನಿರ್ದೇಶಕರ ಸಹಾಯ ಮಾಡುತ್ತದೆ.
  10. ಅದರ ಉದ್ದೇಶಗಳನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಬಹುದು.

***


(Release ID: 1756946) Visitor Counter : 463


Read this release in: English , Urdu , Hindi , Tamil