ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಂತರರಾಷ್ಟ್ರೀಯ ದಾದಿಯರ ದಿನ


ರಾಷ್ಟ್ರಪತಿಗಳು ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2020 ಅನ್ನು 51 ಪುರಸ್ಕೃತರಿಗೆ ನೀಡಿದರು

ನಿಸ್ವಾರ್ಥ ಸಮರ್ಪಣೆ ಮತ್ತು ಸಹಾನುಭೂತಿಗಾಗಿ ದಾದಿಯರನ್ನು ಪ್ರಶಂಸಿಸಿದರು

Posted On: 15 SEP 2021 7:57PM by PIB Bengaluru

ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೊವಿಂದ್ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2020 ಅನ್ನು  51 ಪುರಸ್ಕೃತರಿಗೆ  ವರ್ಚುವಲ್ ಮೂಲಕ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನೀಡಿ ಗೌರವಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಮನ್ಸುಕ್ ಮಾಂಡವಿಯಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಉಪಸ್ಥಿತರಿದ್ದರು.

ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರನ್ನು ಅಭಿನಂದಿಸುತ್ತಾ, ರಾಷ್ಟ್ರಪತಿಗಳು ಭಾರತೀಯ ಪುರಾತನ ಸಂಪ್ರದಾಯಗಳಂತೆ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ದಾದಿಯರ ಸೇವೆಯಲ್ಲಿ ಪ್ರತಿಬಿಂಬಿಸುತ್ತದೆ ಎಂದರು. ರಾಷ್ಟ್ರೀಯ ಕೋವಿಡ್ ಲಸಿಕೆ ನೀಡಿಕೆಯ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಪಡುತ್ತಿರುವ ಕಠಿಣ ಶ್ರಮ  ಹಾಗೂ ಕೋವಿಡ್ ವಿರುದ್ಧ ಹೋರಾಡಲು ನಿರ್ಭೀತ ಸೇವೆ ಮತ್ತು ನಿಸ್ವಾರ್ಥ ಕೊಡುಗೆಗಳನ್ನು ರಾಷ್ಟ್ರಪತಿಗಳು ಕೊಂಡಾಡಿದರುನಮ್ಮ ದಾದಿಯರು ಆದರ್ಶಪ್ರಾಯ ಕಾರ್ಯದಿಂದಾಗಿ ದಿನಕ್ಕೆ ಒಂದು ಕೋಟಿಗಿಂತಲೂ ಹೆಚ್ಚು ಡೋಸ್ ಗಳನ್ನು ನೀಡಲು ಸಾಧ್ಯವಾಯಿತು ಎಂದು ಅವರು ಹೇಳಿದರು. "ನಿಮ್ಮ ಕಠಿಣ ಪರಿಶ್ರಮವು ಭರವಸೆಯ ಕಿರಣವಾಗಿದ್ದು ಜನರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಮಾರ್ಗದರ್ಶನ ಮಾಡುತ್ತದೆ" ಎಂದು ಅವರು ಹೇಳಿದರು. ಸೇವೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡವರಿಗೆ ಗೌರವ ಸಲ್ಲಿಸಿ "ರಾಷ್ಟ್ರವು ಎಂದೆಂದಿಗೂ ನಿಮ್ಮ ಸೇವೆಗೆ ಋಣಿಯಾಗಿರುತ್ತದೆ." ಎಂದು ಹೇಳಿದರು.

ಆರೋಗ್ಯ ಕಾರ್ಯಕರ್ತರಿಗಾಗಿ  ಪ್ರಧಾನ ಮಂತ್ರಿ ಗರೀಬ್  ಕಲ್ಯಾಣ  ಯೋಜಾನಾ ಅಡಿಯಲ್ಲಿ  ಸೂಲಗಿತ್ತಿ ಸೇವೆ ಮತ್ತು ವಿಮಾ ಯೋಜನೆಗಳಂತಹ ಸರ್ಕಾರದ  ವಿವಿಧ ಉಪಕ್ರಮಗಳ ಬಗ್ಗೆ ರಾಷ್ಟ್ರಪತಿಗಳು ವಿಶೇಷವಾಗಿ ಹೇಳಿದರು. ಆರೋಗ್ಯ ರಕ್ಷಣೆ ಒದಗಿಸುವಲ್ಲಿ ಪ್ರಮುಖ ಅಂಶವಾಗಿ ದಾದಿಯರು ಸಾರ್ವಜನಿಕ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ನಡುವಿನ ಮೊದಲ ಕೊಂಡಿ ಎಂದು ರಾಷ್ಟ್ರಪತಿಗಳು ಹೇಳಿದರು.

ಅದೇ ಭಾವನೆಗಳನ್ನು ಪ್ರತಿಧ್ವನಿಸುತ್ತಾ , ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಕ್ ಮಾಂಡವಿಯಾರವರು  2020  ಕೊರೊನಾ  ಸಾಂಕ್ರಾಮಿಕವು  ಬೃಹತ್ ಸವಾಲನ್ನು ಇಡೀ ಜಗತ್ತಿಗೆ ತಂದಿತು ಎಂಬುದನ್ನು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಹಲವಾರು ಸಂದರ್ಭಗಳಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಶುಶ್ರೂಕರ ಕೊಡುಗೆಗಳನ್ನು ಪ್ರಶಂಸಿಸಿದ್ದಾರೆ ಎಂದು ಅವರು ಹೇಳಿದರು. ಜಿ-20 ಆರೋಗ್ಯ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು  ಇಟಲಿಗೆ ನೀಡಿದ ತಮ್ಮ ಇತ್ತೀಚಿನ ಭೇಟಿಯಲ್ಲಿ ಅವರು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ದಾದಿಯರ ದಿನದ ಇಪ್ಪತ್ತನಾಲ್ಕು ಗಂಟೆಯ ನಿಸ್ವಾರ್ಥ ಸೇವೆಯ ಬಗ್ಗೆ ವಿಶೇಷವಾಗಿ ಹೇಳಿರುವುದಾಗಿ ತಿಳಿಸಿದರು. "ಚೈತನ್ಯ, ನಿಷ್ಠೆ ಮತ್ತು ನಿಸ್ವಾರ್ಥತೆಯಿಂದ ನೀವು ಮಾಡುತ್ತಿರುವ ಜನರ ಸೇವೆ ಶ್ಲಾಘನೀಯ ಅವರು ಹೇಳಿದರು. ಶುಶ್ರೂಷಕರು  ಆರೋಗ್ಯ ರಕ್ಷಣೆ ಒದಗಿಸುವ ವ್ಯವಸ್ಥೆಯ ಪ್ರಮುಖ ಮತ್ತು ಆಧಾರ ಸ್ತಂಭಗಳಲ್ಲಿ  ಒಂದು ಎಂದು ಹೇಳಿದರು. ಕೊವಿಡ್ನಿಂದ ಬಳಲುತ್ತಿರುವವರಿಗೆ ಸೇವೆ ಸಲ್ಲಿಸುತ್ತಿರುವಾಗ ತಮ್ಮ ಜೀವನವನ್ನು ಕಳೆದುಕೊಂಡವರಿಗೆ ಅವರು ಸಂತಾಪವನ್ನು ಸೂಚಿಸಿದರು.

ಜೀವಗಳನ್ನು ಉಳಿಸಲು ಸಮಯದ ಪ್ರಯತ್ನದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದ ಎಲ್ಲಾ ಶುಶ್ರೂಷಕರು ಮತ್ತು ಕೊವಿಡ್ ಯೋಧರಿಗೆ ಡಾ. ಭಾರತಿ ಪ್ರವೀಣ್ ಪವಾರ್ ಅವರು ವಂದನಾರ್ಪಣೆಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು.

ಶ್ರೀ ರಾಜೇಶ್ ಭೂಷಣ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶುಶ್ರೂಷಕರು ಸಮಾಜಕ್ಕೆ  ನೀಡುವ ಶ್ರೇಷ್ಠ ಸೇವೆಗಳನ್ನು ಗುರುತಿಸಲು ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ಸರ್ಕಾರವು 1973ರಲ್ಲಿ ಸ್ಥಾಪಿಸಿತು.

ವೆಬ್ಕಾಸ್ಟ್https://webcast.gov.in/events/MTQzMQ--/session/MzM2Ng --  ನಲ್ಲಿ ಆಗಿತ್ತು

ಕೇಂದ್ರ ಆರೋಗ್ಯ ಸಚಿವರ ಭಾಷಣವನ್ನು ಇಲ್ಲಿ ನೋಡಬಹುದುhttps://youtu.be/f0u1kttf8kc

ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ಇಲ್ಲಿ ನೋಡಬಹುದು: https://www.youtube.com/watch?v=4ZBDZR170EQ

ಕೆಳಗಿನ ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಪ್ರಶಂಸಿಸಿ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ  2020 ಅನ್ನು ನೀಡಲಾಯಿತು

 

ಕ್ರಮ ಸಂಖ್ಯೆ       ಹೆಸರು   ರಾಜ್ಯ    ವಿಭಾಗ

1          ಶ್ರೀಮತಿ ಡಿ ರೂಪಾಕಲಾ   ಆಂಧ್ರಪ್ರದೇಶ      ಕ್ಲಿನಿಕಲ್ ನರ್ಸ್

2          ಡಾ. ಅಮುಲೂರು ಪದ್ಮಾಜ            ಆಂಧ್ರಪ್ರದೇಶ      ನರ್ಸ್ ಎಜುಕೇಟರ್ / ಸಂಶೋಧಕರು

3          ಶ್ರೀಮತಿ ರೂಬು ಯಪೆ      ಅರುಣಾಚಲ ಪ್ರದೇಶ        ಕ್ಲಿನಿಕಲ್ ನರ್ಸಸ್

4          ಶ್ರೀಮತಿ ರಜಿಲಾ ರಾಯ್   ಅಸ್ಸಾಂ  ಕ್ಲಿನಿಕಲ್ ನರ್ಸಸ್

5          ಶ್ರೀಮತಿ ರೆಂಜು ಕುಮಾರಿ              ಬಿಹಾರ  ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

6          ಶ್ರೀಮತಿ ಬಂದನಾ ಕುಮಾರಿ          ಬಿಹಾರ  ಕ್ಲಿನಿಕಲ್ ನರ್ಸಸ್

7          ಶ್ರೀ  ಅಜಯ್       ಚಂಡೀಗಢ          ಕ್ಲಿನಿಕಲ್ ನರ್ಸಸ್

8          ಡಾ. (ಶ್ರೀಮತಿ) ಇಂದಿರಾ ಜಾಧವ್ ಡೇನಿಯಲ್          ಹರಿಯಾಣ          ನರ್ಸ್ ಎಜುಕೇಟರ್ಸಂಶೋಧಕರು

9          ಶ್ರೀಮತಿ  ಸತ್ಯಾ ದೇವಿ      ಪಂಜಾಬ್           ಕ್ಲಿನಿಕಲ್ ನರ್ಸಸ್

10        ಡಾ. (ಶ್ರೀಮತಿ) ಡೈಸಿ ಅಬ್ರಹಾಂ     ಛತ್ತೀಸ್ ಗಢ್      ನರ್ಸ್ ಎಜುಕೇಟರ್ಸಂಶೋಧಕರು

11        ಶ್ರೀಮತಿ  ಸಾಮ್ದರ್ ಜಾನು ಕಮ್ದಿ      ದಾದ್ರಾ ಮತ್ತು ನಗರ್ ಹವೇಲಿ        ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

12        ಶ್ರೀಮತಿ  ವಿಕ್ಟೋರಿಯಾ ಎಲ್ವಿರಾ ನೋರಾನ್ಹ ದಮನ್ ಮತ್ತು ಡಿಯು       ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

13        ಶ್ರೀಮತಿ  ಸೋನಿಯಾ ಚೌಹಾನ್     ದೆಹಲಿ    ಕ್ಲಿನಿಕಲ್ ನರ್ಸಸ್

14        ಶ್ರೀಮತಿ ಶಶಿ ಬಾಲ ಕಾಲ್ರ              ದೆಹಲಿ    ಕ್ಲಿನಿಕಲ್ ನರ್ಸಸ್

15        ಶ್ರೀಮತಿ ಉಷಾ ರಾಣಿ ಅಹುಜಾ      ದೆಹಲಿ    ಕ್ಲಿನಿಕಲ್ ನರ್ಸಸ್

16        ಬ್ರಿಗೇಡಿಯರ್ ಎಸ್.ವಿ ಸರಸ್ವತಿ      ದೆಹಲಿ    ಕ್ಲಿನಿಕಲ್ ನರ್ಸಸ್

17        ಶ್ರೀಮತಿ ಗೀತಾ ಚಂದ್ರಕಾಂತ್ ಸಲ್ಗಾಂವ್ಕರ್  ಗೋವಾ ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

18        ಶ್ರೀ ಪ್ರಶಾಂತ್ ಗುನು ದೇವಿದಾಸ್  ಗೋವಾ ಕ್ಲಿನಿಕಲ್ ನರ್ಸಸ್

19        ಶ್ರೀಮತಿ.ಭಾನುಮತಿ ಸೋಮಭಾಯಿ ಘೀವಾಲಾ        ಗುಜರಾತ್          ಕ್ಲಿನಿಕಲ್ ನರ್ಸಸ್

20        ಡಾ. ಪ್ರಗ್ನಾ ಪಿ ಡಾಭಿ        ಗುಜರಾತ್         ನರ್ಸ್ ಅಡ್ಮಿನಿಸ್ಟ್ರೇಟರ್

21        ಶ್ರೀಮತಿ ವಿದ್ಯಾ ಭರಂತ    ಹಿಮಾಚಲ ಪ್ರದೇಶ          ಎಲ್.ಎಚ್.ವಿ(ಲೇಡಿ ಹೆಲ್ತ್ ವಿಸಿಟರ್)

22        ಶ್ರೀಮತಿ ಅರುಣಾಕುಮಾರಿ ಹಿಮಾಚಲ ಪ್ರದೇಶ         ಕ್ಲಿನಿಕಲ್ ನರ್ಸಸ್

23        ಡಾ. ಶೈಲಾ ಕಾನ್ನಿ           ಜಮ್ಮು ಮತ್ತು ಕಾಶ್ಮೀರ     ನರ್ಸ್ ಎಜುಕೇಟರ್ / ಸಂಶೋಧಕರು

24        ಶ್ರೀಮತಿ ಆಶಿಸನ್ ಕುಲ್ಲು    ಜಾರ್ಖಂಡ್        ಕ್ಲಿನಿಕಲ್ ನರ್ಸಸ್

25        ಶ್ರೀಮತಿ ಮರಿಯಮ್ಮ ಎಂ ಸಿ          ಕರ್ನಾಟಕ         ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

26        ಶ್ರೀಮತಿ ಕೆ ಗಾಯತ್ರಿ ದೇವಿ            ಕರ್ನಾಟಕ          ಎಲ್.ಎಚ್.ವಿ(ಲೇಡಿ ಹೆಲ್ತ್ ವಿಸಿಟರ್)

27        ಶ್ರೀಮತಿ ಗೀತಾ ಪಿ           ಕೇರಳ   ಕ್ಲಿನಿಕಲ್ ನರ್ಸಸ್

28        ಶ್ರೀ ಮೊಹಮ್ಮದ್ ಆಸಿಫ್   ಲಕ್ಷದ್ವೀಪ           ಕ್ಲಿನಿಕಲ್ ನರ್ಸಸ್

29        ಶ್ರೀಮತಿ  ರಶ್ಮಿ ಪಾಂಡೇಕರ್          ಮಧ್ಯ ಪ್ರದೇಶ     ಕ್ಲಿನಿಕಲ್ ನರ್ಸಸ್

30        ಶ್ರೀಮತಿ  ಪ್ರೇಮಲತಾ  ಸಂಜಯ್ ಪಾಟೀಲ್ ಮಹಾರಾಷ್ಟ್ರ       ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

31        ಶ್ರೀಮತಿ ಶಾಲಿನಿ ನಾಜುಕ್ ರಾವ್ ಕುಮರೆ     ಮಹಾರಾಷ್ಟ್ರ       ಕ್ಲಿನಿಕಲ್ ನರ್ಸಸ್

32        ಶ್ರೀಮತಿ ಕೆ. ಬಿಯಾಕ್ಲುನ್   ಮಣಿಪುರ           ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

33        ಶ್ರೀಮತಿ ಸಾಗೋಲ್ಸೆಮ್ ರಾಮ ಮೈತಿ ಚಾನು            ಮಣಿಪುರ           ಕ್ಲಿನಿಕಲ್ ನರ್ಸಸ್

34        ಶ್ರೀಮತಿ ಲೀಟ್ಮನ್ ಪಾಸ್ಲೀನ್          ಮೇಘಾಲಯ       ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

35        ಶ್ರೀಮತಿ ವನ್ಲ್ಯಾಲ್ಥುಮಿ       ಮಿಜೋರಾಮ್    ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

36        ಶ್ರೀಮತಿ  ಸಿ. ಡೆಂಗ್‌ಥಾಂಗ್‌ಪುಯಿ   ಮಿಜೋರಾಮ್    ಎಲ್.ಎಚ್.ವಿ (ಲೇಡಿ ಹೆಲ್ತ್ ವಿಸಿಟರ್)

37        ಶ್ರೀಮತಿ ಪ್ರೇಮಲತಾ ಬಾರಿಕ್        ಒಡಿಶಾ  ಎಲ್.ಎಚ್.ವಿ (ಲೇಡಿ ಹೆಲ್ತ್ ವಿಸಿಟರ್)

38        ಶ್ರೀಮತಿ ಪಿ ಲತಾ            ಪುದುಚೆರಿ           ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

39        ಶ್ರೀಮತಿ  ಕೆ. ಅನುರಾಧಾ   ಪುದುಚೆರಿ           ಕ್ಲಿನಿಕಲ್ ನರ್ಸಸ್

40        ಶ್ರೀಮತಿ ಅನಿತಾ ವ್ಯಾಸ್   ರಾಜಸ್ಥಾನ          ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

41        ಶ್ರೀಮತಿ ಸುನಿತಾ ದೇವಿ    ರಾಜಸ್ಥಾನ          ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

42        ಶ್ರೀಮತಿ ವಿ ಉಷಾ       ತಮಿಳುನಾಡು     ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

43        ಶ್ರೀಮತಿ ಎಸ್ ವೇಲ್ಲಾಂಕನ್ನಿ           ತಮಿಳುನಾಡು     ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

44        ಶ್ರೀಮತಿ ಜಿ ಮಣಿಮೆಗಲೈ  ತಮಿಳುನಾಡು     ಕ್ಲಿನಿಕಲ್ ನರ್ಸಸ್

45        ಶ್ರೀಮತಿ ಅನಪರ್ತಿ ಅರುಣ ಕುಮಾರಿ           ತೆಲಂಗಾಣ         ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

46        ಶ್ರೀಮತಿ  ಎಂ ಡಿ. ಶುಕುರಾ ತೆಲಂಗಾಣ         ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

47        ಶ್ರೀ ಅಶಿಮ್ ದಾಸ್          ತ್ರಿಪುರಾ ಕ್ಲಿನಿಕಲ್ ನರ್ಸಸ್

48        ಶ್ರೀಮತಿ  ಉರ್ವಶಿ ದೀಕ್ಷಿತ್ ಉತ್ತರ ಪ್ರದೇಶ   ಕ್ಲಿನಿಕಲ್ ನರ್ಸಸ್

49          ಕಮ್ಲಾ ಥಾಪ     ಉತ್ತರಾಖಂಡ್    ಕ್ಲಿನಿಕಲ್ ನರ್ಸಸ್

50        ಶ್ರೀಮತಿ  ಸುನಿತಾ ದತ್ತ     ಪಶ್ಚಿಮ ಬಂಗಾಳ ಆಕ್ಸಿಲಿಯರಿ ನರ್ಸ್ ಮಿಡ್ವೈವ್ಸ್ (ಎಂಎಂಎಸ್)

51        ಶ್ರೀಮತಿ  ನಿಲಿಮಾ ದಾಸ್              ಪಶ್ಚಿಮ ಬಂಗಾಳ             ಕ್ಲಿನಿಕಲ್ ನರ್ಸಸ್

 

***



(Release ID: 1755362) Visitor Counter : 232