ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಭಗವಂತ ಖುಬಾ ಅವರು ಎಫ್ಐಸಿಸಿಐ ಸಂವಾದ ಉದ್ದೇಶಿಸಿ ಮಾತನಾಡಿದರು


"ಭಾರತದಲ್ಲಿ ಜಾಗತಿಕ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಉತ್ಪಾದನಾ ಕೇಂದ್ರಗಳು (ಜಿಸಿಪಿಎಂಎಚ್) 2021" ಕುರಿತ ಶೃಂಗಸಭೆಯ 2ನೇ ಆವೃತ್ತಿಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು

Posted On: 15 SEP 2021 8:12PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಹೊಸ ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಭಗವಂತ ಖುಬಾ ಅವರು ಬುಧವಾರ ನವದೆಹಲಿಯ ಶಾಸ್ತ್ರಿ ಭವನದಲ್ಲಿ ನಡೆದ ʻಎಫ್‌ಐಸಿಸಿಐ ಸಂವಾದ ಮತ್ತು ʻಜಿಸಿಪಿಎಂಎಚ್- 2021ʼ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಕಚ್ಚಾ ಸಾಮಗ್ರಿ ಲಭ್ಯತೆ, ಕೀಟನಾಶಕಗಳ ವಿವೇಚನಾಯುಕ್ತ ಬಳಕೆ ಮತ್ತು ಪೆಟ್ರೋಕೆಮಿಕಲ್ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಅವರು ಚರ್ಚಿಸಿದರು.

"ಭಾರತದಲ್ಲಿ ಜಾಗತಿಕ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಉತ್ಪಾದನಾ ಕೇಂದ್ರಗಳು" (ಜಿಸಿಎಂಎಚ್ 2021) ಕುರಿತ ಶೃಂಗಸಭೆಯ 2ನೇ ಆವೃತ್ತಿಯ ಕಿರು ಹೊತ್ತಿಗೆಯನ್ನೂ ಸಚಿವರು ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ ನವೆಂಬರ್ 25ರಿಂದ ನವೆಂಬರ್ 26, 2021 ರವರೆಗೆ ʻಎಫ್‌ಐಸಿಸಿಐʼ ಸಹಯೋಗದೊಂದಿಗೆ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಕಾರ್ಯಕ್ರಮವನ್ನು ಆಯೋಜಿಸಲಿದೆ.

ರಾಸಾಯನಿಕ, ಪೆಟ್ರೋಕೆಮಿಕಲ್ ಮತ್ತು ಬೆಳೆ ಸಂರಕ್ಷಣಾ ಉದ್ಯಮದ ಪ್ರಮುಖ ಉದ್ಯಮಿಗಳು ಕಾರ್ಯಕ್ರಮದಲ್ಲಿ ವ್ಯಾಪಾರ ಸುಂಕ, ಪರಿಸರ ಸಮಸ್ಯೆಗಳು, ಸುಂಕ ನ್ಯೂನತೆ, ಬೆಳೆ ಸಂರಕ್ಷಣಾ ನೋಂದಣಿ, ಸಂಶೋಧನೆ ಮತ್ತು ತಂತ್ರಜ್ಞಾನದಂತಹ ವಲಯದ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಉದ್ಯಮ ವರ್ಗವು ಮುಂದಿಟ್ಟ ಎಲ್ಲಾ ಕಳವಳಗಳು ಮತ್ತು ಶಿಫಾರಸುಗಳನ್ನು ಸಚಿವರು ಆಲಿಸಿದರು.

ರಾಸಾಯನಿಕ ಗಳು ಮತ್ತು ರಸಗೊಬ್ಬರ ಸಚಿವಾಲಯ ಹಾಗೂ ʻಎಫ್‌ಐಸಿಸಿಐʼ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

***



(Release ID: 1755360) Visitor Counter : 205


Read this release in: English , Urdu , Hindi