ಹಣಕಾಸು ಸಚಿವಾಲಯ

ಮುಖಾಮುಖಿಯಿಲ್ಲದ ನಿರ್ಧರಣೆ ಪ್ರಕ್ರಿಯೆಯಲ್ಲಿ ಸಲ್ಲಿಸಲಾದ ಎಲೆಕ್ಟ್ರಾನಿಕ್ ದಾಖಲೆಗಳ ದೃಢೀಕರಣವನ್ನು ಸುಗಮಗೊಳಿಸಲು ಆದಾಯ ತೆರಿಗೆ ನಿಯಮಗಳು, 1962ಕ್ಕೆ ತಿದ್ದುಪಡಿ ಮಾಡಿದ ಸಿಬಿಡಿಐ

Posted On: 07 SEP 2021 8:31PM by PIB Bengaluru

ಮುಖಾಮುಖಿಯಿಲ್ಲದ  ನಿರ್ಧರಣೆ ಪ್ರಕ್ರಿಯೆಗಳಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳ ದೃಢೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಲುವಾಗಿ, ಸರ್ಕಾರ ಆದಾಯ ತೆರಿಗೆ ನಿಯಮಗಳು, 1962 ('ನಿಯಮಗಳು')ಕ್ಕೆ ಅಧಿಸೂಚನೆ ಸಂಖ್ಯೆ ಜಿ.ಎಸ್.ಆರ್ 616 () ದಿನಾಂಕ 6ನೇ ಸೆಪ್ಟೆಂಬರ್, 2021 ರೀತ್ಯ ತಿದ್ದುಪಡಿ ಮಾಡಿದೆ. ತಿದ್ದುಪಡಿಯಾದ ನಿಯಮಗಳು, ಆದಾಯ ತೆರಿಗೆ ಇಲಾಖೆಯ ಪೋರ್ಟ್ ಲ್ ನಲ್ಲಿ ತೆರಿಗೆದಾರರ ನೋಂದಾಯಿತ ಖಾತೆಯ ಮೂಲಕ ಸಲ್ಲಿಸಲಾದ ಎಲೆಕ್ಟ್ರಾನಿಕ್ ದಾಖಲೆಗಳನ್ನು  ತೆರಿಗೆದಾರರು ಎಲೆಕ್ಟ್ರಾನಿಕ್ ಪರಿಶೀಲನೆ ಕೋಡ್ (ಇವಿಸಿ) ಮೂಲಕ ದೃಢೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಎಲ್ಲಿ ವ್ಯಕ್ತಿ, ನೋಂದಾಯಿತ ಖಾತೆಗೆ ಲಾಗ್ ಇನ್ ಆಗುವ ಮೂಲಕ ಎಲೆಕ್ಟ್ರಾನಿಕ್ ದಾಖಲೆ ಸಲ್ಲಿಸುತ್ತಾರೋ ಎಲೆಕ್ಟ್ರಾನಿಕ್ ದಾಖಲೆಗಳು ಆದಾಯ ತೆರಿಗೆ ಕಾಯಿದೆ 1962 (ಕಾಯಿದೆ) ಸೆಕ್ಷನ್ 144ಬಿ (7) (i) (ಬಿ) ಉದ್ದೇಶಕ್ಕಾಗಿ, ಇವಿಸಿ ಮೂಲಕ ದೃಢೀಕೃತವಾಗಿದೆ ಎಂದು ಪರಿಗಣಿಸಲಾಗುತ್ತದೆ.

ಆದಾಗ್ಯೂ, ಹಾಲಿ ನಿಬಂಧನೆಗಳಂತೆ ಕಾಯಿದೆಯ ಸೆಕ್ಷನ್ 144 ಬಿ (7) (i) (ಬಿ) ಅಡಿಯಲ್ಲಿ, ಕೆಲವು ವ್ಯಕ್ತಿಗಳಿಗೆ (ಅಂದರೆ ಕಂಪನಿಗಳು, ತೆರಿಗೆ ಲೆಕ್ಕಪರಿಶೋಧನೆ ಪ್ರಕರಣಗಳು ಇತ್ಯಾದಿ) ಇವಿಸಿಯ ದೃಢೀಕರಣದ ಸರಳೀಕೃತ ಪ್ರಕ್ರಿಯೆ ಲಭ್ಯವಿರುವುದಿಲ್ಲ ಮತ್ತು ಅವರು ಕಡ್ಡಾಯವಾಗಿ ಡಿಜಿಟಲ್ ಸಹಿಯ ಮೂಲಕ ಎಲೆಕ್ಟ್ರಾನಿಕ್ ದಾಖಲೆಗಳನ್ನು ದೃಢೀಕರಿಸುವುದು ಅಗತ್ಯವಾಗಿರುತ್ತದೆ. ವ್ಯಕ್ತಿಗಳಿಗೂ ಸರಳೀಕೃತ ಇವಿಸಿ ದೃಢೀಕರಣ ಪ್ರಕ್ರಿಯೆಯನ್ನು ಒದಗಿಸುವ ಸಲುವಾಗಿ, ಅವರಿಗೂ ಕೂಡ ಇವಿಸಿ ಸರಳೀಕೃತ ದೃಢೀಕರಣ ಪ್ರಕ್ರಿಯೆಯ ಸೌಲಭ್ಯ ವಿಸ್ತರಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಎಲೆಕ್ಟ್ರಾನಿಕ್ ದಾಖಲೆಗಳನ್ನು ಡಿಜಿಟಲ್ ಸಹಿಯ ಮೂಲಕ ಕಡ್ಡಾಯವಾಗಿ ದೃಢೀಕರಿಸಬೇಕಾದ ವ್ಯಕ್ತಿಗಳು, ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ನಲ್ಲಿ ತಮ್ಮ ನೋಂದಾಯಿತ ಖಾತೆಯ ಮೂಲಕ  ಸಲ್ಲಿಸುವ ಎಲೆಕ್ಟ್ರಾನಿಕ್ ದಾಖಲೆಗಳನ್ನು ದೃಢೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಸಂಬಂಧ ಶಾಸನಾತ್ಮಕ ತಿದ್ದುಪಡಿಗಳನ್ನು ಸೂಕ್ತ ಸಮಯದಲ್ಲಿ ಪ್ರಸ್ತಾಪಿಸಲಾಗುವುದು.

***



(Release ID: 1753037) Visitor Counter : 245