ಕೃಷಿ ಸಚಿವಾಲಯ

ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ವಾಣಿಜ್ಯ ಸಚಿವ ಶ್ರೀ.ಪಿಯೂಷ್ ಗೋಯಲ್ ರೈತರ ಕಲ್ಯಾಣಕ್ಕಾಗಿ ಇರುವ ಉಪಕ್ರಮಗಳು ಮತ್ತು ಯೋಜನೆಗಳ ಕುರಿತು ಮುಖ್ಯಮಂತ್ರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು


ಸಮಾವೇಶದಲ್ಲಿ ಕೃಷಿ ಮೂಲಸೌಕರ್ಯ ನಿಧಿ, ಪಿಎಂ-ಕಿಸಾನ್, ಕೆಸಿಸಿ, ಡಿಜಿಟಲ್ ಕೃಷಿ, ತೈಲ ಬೀಜಗಳು ಮತ್ತು ಪಾಮ್ ಎಣ್ಣೆ ಮತ್ತು ಕೃಷಿ ಉತ್ಪನ್ನಗಳ ರಫ್ತುಗಳ ರಾಷ್ಟ್ರೀಯ ಮಿಷನ್ ಬಗ್ಗೆ ಚರ್ಚಿಸಲಾಗುವುದು

5.5 ಕೋಟಿ ರೈತರ ದತ್ತಾಂಶವು ಸಿದ್ಧವಾಗಿದೆ, ಇದನ್ನು ಡಿಸೆಂಬರ್ 2021 ರ ವೇಳೆಗೆ 8 ಕೋಟಿ ರೈತರಷ್ಟು ಸಿದ್ಧಪಡಿಸಲಾಗುವುದು:  ಶ್ರೀ ನರೇಂದ್ರ ಸಿಂಗ್ ತೋಮರ್

ರೈತರ ಅನುಕೂಲಕ್ಕಾಗಿ ಕೃಷಿಯನ್ನು ಆಧುನೀಕರಣಗೊಳಿಸಬೇಕು: ಶ್ರೀ ತೋಮರ್

ಭಾರತದ ಕೃಷಿ ರಫ್ತು ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ ಮತ್ತು ದೇಶವು ಈಗ ರಫ್ತಿಗೆ ವಿಶ್ವಾಸಾರ್ಹ ಪಾಲುದಾರವಾಗಿದೆ: ಶ್ರೀ ಪಿಯೂಷ್ ಗೋಯಲ್

Posted On: 06 SEP 2021 5:57PM by PIB Bengaluru

ಕೃಷಿಯನ್ನು ಡಿಜಿಟಲ್ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಮತ್ತು ಜ್ಞಾನದೊಂದಿಗೆ ಜೋಡಿಸಬೇಕು, ಇದನ್ನು ಇಂದು ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಕೃಷಿ ಸಚಿವಾಲಯದ ಉಪಕ್ರಮಗಳು ಮತ್ತು ಯೋಜನೆಗಳು ಮತ್ತು ರೈತ ಕಲ್ಯಾಣ ಸಚಿವಾಲಯದ ವಾಸ್ತವೋಪಮ ಸಮಾವೇಶದ  ಮೂಲಕ ನಡೆಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಒತ್ತಿ ಹೇಳಿದರು. ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೃಷಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು  ಎಂದು ಅವರ ಹೇಳಿದರು.

ಡಿಜಿಟಲ್ ಕೃಷಿಯ ಬಗ್ಗೆ ಮಾತನಾಡುವಾಗ, ಸಚಿವರು ಎಲ್ಲಾ ರಾಜ್ಯಗಳನ್ನು ಸಮಾವೇಶದಲ್ಲಿ   ಮಂಡಿಸಿದ ಕರ್ನಾಟಕ ಮಾದರಿಯನ್ನು ಅಧ್ಯಯನ ಮಾಡುವಂತೆ ತಿಳಿಸಿದರು. ಭಾರತ ಸರ್ಕಾರವು ಸಿದ್ಧಪಡಿಸಿದ ಒಟ್ಟುಗೂಡಿಸಿದ ರೈತರ ದತ್ತಾಂಶವನ್ನು  ಬಳಸಿಕೊಂಡು ರಾಜ್ಯಕ್ಕೆ ಒಂದು ದತ್ತಾಂಶ ರಚಿಸುವಂತೆ ರಾಜ್ಯಗಳಿಗೆ ಅವರು ಹೇಳಿದರು ಮತ್ತು ರಾಜ್ಯ ಭೂ ದಾಖಲೆ ದತ್ತಾಂಶಕ್ಕೆ ಜೋಡಿಸಲು   ಅವಕಾಶ ಮಾಡಿಕೊಡಬೇಕೆಂದು ಹೇಳಿದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 5.5 ಕೋಟಿ ರೈತರ ದತ್ತಾಂಶವನ್ನು ರಚಿಸಿದೆ ಮತ್ತು ಇದನ್ನು ರಾಜ್ಯ ಸರ್ಕಾರಗಳ ನೆರವಿನಿಂದ ಡಿಸೆಂಬರ್ 2021 ವೇಳೆಗೆ 8 ಕೋಟಿ ರೈತರ ದತ್ತಾಂಶವನ್ನು ರಚಿಸಲಾಗುವುದು ಎಂದು ಅವರು ಹೇಳಿದರುಕೃಷಿ ಮೂಲಸೌಕರ್ಯ ನಿಧಿಯ ಸ್ಥಾಪನೆಯೊಂದಿಗೆ ಎಫ್‌ಪಿಒಗಳು, ಪಿಎಸಿಎಸ್, ಮಂಡಿಗಳು ಮತ್ತು ನವೋದ್ಯಮಗಳು ಸುಲಭವಾಗಿ ಸಾಲ ಪಡೆಯುವಂತಾಗುತ್ತವೆ ಎಂದು ಸಚಿವರು ಹೇಳಿದರು. ಆಯಿಲ್ ಪಾಮ್ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ಐಸಿಎಆರ್ ಆಯಿಲ್ ಪಾಮ್ ಕೃಷಿಯನ್ನು ವಿಸ್ತರಿಸಬಹುದಾದ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದೆ ಎಂದು ಹೇಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳು ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ಭಾಷಣದಲ್ಲಿ ಕೃಷಿ ರಫ್ತು ಹೆಚ್ಚಳದೊಂದಿಗೆ ಭಾರತವು ವಿಶ್ವಾಸಾರ್ಹ ರಫ್ತು ಪಾಲುದಾರನಾಗಿ ಹೊರಹೊಮ್ಮುತ್ತಿದೆ ಮತ್ತು ಕೃಷಿ ರಫ್ತುಗಳ ಸುಧಾರಣೆಗೆ ಮತ್ತಷ್ಟು ಅವಕಾಶವಿದೆ ಎಂದು ಹೇಳಿದರು. ಸಂಗ್ರಹಣೆ ಮತ್ತು ಗೋದಾಮುಗಳಿಗಾಗಿ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಆತ್ಮನಿರ್ಭರ ಕೃಷಿಯ ಪ್ರಮುಖ ಲಕ್ಷಣಗಳನ್ನು ಎತ್ತಿ ತೋರಿಸುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯಗಳನ್ನು ಶಕ್ತಗೊಳಿಸುವುದು ಸಮಾವೇಶದ ಉದ್ದೇಶಗಳಾಗಿವೆಇದು ರಾಜ್ಯಗಳು ಕೈಗೊಂಡ ನವೀನ ಉಪಕ್ರಮಗಳನ್ನು ಹಂಚಿಕೊಳ್ಳಲು ಒಂದು ಸಂದರ್ಭವಾಗಿತ್ತು.

ಮೂಲಸೌಕರ್ಯ ಹೂಡಿಕೆಗೆ ಚಾಲನೆ ನೀಡಲು ಸ್ಥಾಪಿಸಲಾದ ಕೃಷಿ ಮೂಲಸೌಕರ್ಯ ನಿಧಿಯ ಬಗ್ಗೆ  ರಾಜ್ಯಗಳೊಂದಿಗೆ ಚರ್ಚೆ ನಡೆಯಿತು. ಯೋಜನೆಯಲ್ಲಿ ಇತ್ತೀಚಿನ ಮಾರ್ಪಾಡುಗಳನ್ನು ವಿವರಿಸಲಾಗಿದೆ - ಅರ್ಹತೆಯನ್ನು ಎಪಿಎಂಎಸ್/ ರಾಜ್ಯ ಏಜೆನ್ಸಿಗಳು/ ರಾಷ್ಟ್ರೀಯ ಮತ್ತು ರಾಜ್ಯ ಫೆಡರೇಶನ್ ಆಫ್ ಕೋ -ಆಪರೇಟಿವ್ಸ್/ ಎಫ್ಪಿಒಗಳು ಮತ್ತು ಎಸ್‌ಎಚ್‌ಜಿಗಳಿಗೆ ವಿಸ್ತರಿಸಲಾಗಿದೆ. ಸಮುದಾಯದ ಕೃಷಿ, ಸ್ವತ್ತುಗಳು, ಸುಗ್ಗಿಯ ನಂತರದ ನಿರ್ವಹಣಾ ಯೋಜನೆಗಳು ಮತ್ತು ಪ್ರಾಥಮಿಕ ಸಂಸ್ಕರಣೆಯಂತಹ ಅರ್ಹ ಚಟುವಟಿಕೆಗಳನ್ನು ವಿವರಿಸಲಾಗಿದೆ. ಖಾದ್ಯ ತೈಲಗಳು ಮತ್ತು ಪಾಮ್ (ತಾಳೆ)ನಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಅಗತ್ಯವನ್ನು ಒತ್ತಿಹೇಳಲಾಯಿತು ಮತ್ತು ಇದರಲ್ಲಿ ರಾಜ್ಯಗಳ ಪಾತ್ರವನ್ನು ಚರ್ಚಿಸಲಾಯಿತು. ಡಿಜಿಟಲ್ ಕೃಷಿ ಮತ್ತು ಸ್ಮಾರ್ಟ್ ಕೃಷಿಗೆ ಉದಯೋನ್ಮುಖ ತಂತ್ರಜ್ಞಾನದ ಬಳಕೆಯ ಬಗ್ಗೆಯೂ ಚರ್ಚಿಸಲಾಯಿತು.

ಸಮಾವೇಶದಲ್ಲಿ ರೈತರ ದತ್ತಾಂಶದ ಪರಿಕಲ್ಪನೆಯನ್ನು ವಿವರಿಸಲಾಯಿತು. ಪಿಎಂ-ಕಿಸಾನ್, ಮಣ್ಣು ಆರೋಗ್ಯ ಕಾರ್ಡ್ ಮತ್ತು ಪಿಎಂ ಫಸಲ್ ಬಿಮಾ ಯೋಜನೆಗಳಂತಹ ಅಸ್ತಿತ್ವದಲ್ಲಿರುವ ಯೋಜನೆಗಳಿಂದ ದತ್ತಾಂಶವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರೀಯ ರೈತ ದತ್ತಾಂಶವನ್ನು ರಚಿಸಲಾಗುತ್ತಿದೆ. ದತ್ತಾಂಶದ ರಾಜ್ಯ ಭೂ ದಾಖಲೆಗಳ ದತ್ತಾಂಶಕ್ಕೆ ಸಂಪರ್ಕವನ್ನು ಹೊಂದಿರುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಗ್ಗೆಯೂ ಚರ್ಚಿಸಲಾಯಿತು. ಫಲಾನುಭವಿ ದತ್ತಾಂಶವನ್ನು ಉನ್ನತೀಕರಿಸಲು ಒತ್ತು ನೀಡಲಾಗಿದೆ. ಕೃಷಿ ಉತ್ಪನ್ನಗಳ ರಫ್ತು ಮತ್ತು ಕೃಷಿ ರಫ್ತು ಹೆಚ್ಚಿಸುವಲ್ಲಿ ಎಪಿಇಡಿಎ (ಅಗ್ರಿಕ್ಚರಲ್ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ) ಪಾತ್ರದ ಬಗ್ಗೆ ಚರ್ಚೆ ನಡೆಯಿತು. ಎಪಿಇಡಿಎ ರಾಜ್ಯದ ಅಧಿಕಾರಿಗಳು, ಎಫ್ ಪಿ ಗಳು, ರೈತರು, ನವೋದ್ಯಮ  ಇತ್ಯಾದಿಗಳಿಗೆ ಕ್ಲಸ್ಟರ್ ಕೇಂದ್ರಿತ ಸಾಮರ್ಥ್ಯ ವೃದ್ಧಿ  ಕಾರ್ಯಕ್ಕೆ ಅನುಕೂಲ ಮಾಡಿಕೊಡುತ್ತದೆ.

ಎರಡು ದಿನಗಳ ಸಮ್ಮೇಳನದ ಮೊದಲ ದಿನ ಸುಮಾರು ಹನ್ನೆರೆಡು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಮಂತ್ರಿಗಳು ಭಾಗವಹಿಸಿದ್ದರು.

ಕೇಂದ್ರ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ವಂದಿಸಿದರು. ಸಚಿವಾಲಯದ ಕಾರ್ಯದರ್ಶಿ,   ಶ್ರೀ ಸಂಜಯ್ ಅಗರ್ ವಾಲ್ ಸ್ವಾಗತ ಭಾಷಣ ಮಾಡಿದರು ಮತ್ತು ಸಮಾವೇಶವನ್ನು   ನಿರ್ವಹಿಸಿದರು. ಸಚಿವಾಲಯದ ರಾಜ್ಯ ಮಂತ್ರಿಗಳಾದ ಶೋಭಾ ಕರಂದ್ಲಾಜೆ, ಕಾರ್ಯದರ್ಶಿ, ಶ್ರೀ ಸುಧಾಂಶು ಪಾಂಡೆ ಕೂಡ ಉಪಸ್ಥಿತರಿದ್ದರು. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಶ್ರೀ ವಿವೇಕ್ ಅಗರ್ ವಾಲ್ ಸಮ್ಮೇಳನದ ಕಾರ್ಯಸೂಚಿಗಳ ಕುರಿತು ಪ್ರಸ್ತುತಿಯನ್ನು ನೀಡಿದರು. ಎಪಿಇಡಿಎ ಅಧ್ಯಕ್ಷರು ಕೃಷಿ ರಫ್ತುಗಳ ಕುರಿತು ಪ್ರಸ್ತುತಿಯನ್ನು ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಹಿರಿಯ ಅಧಿಕಾರಿಗಳು ಸಹ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

***



(Release ID: 1752721) Visitor Counter : 200