ಆಯುಷ್
'ವೈ-ಬ್ರೇಕ್' ಯೋಗ ಪ್ರೋಟೋಕಾಲ್ ಆ್ಯಪ್ ಅನ್ನು ಆಯುಷ್ ಮಂತ್ರಿ ಸರ್ಬಾನಂದ್ ಸೋನೊವಾಲ್ 4 ಕೇಂದ್ರ ಸಚಿವರೊಂದಿಗೆ ಬಿಡುಗಡೆ ಮಾಡಿದರು
ಮಂತ್ರಿಗಳು ಸೇರಿದಂತೆ ಅಲ್ಲಿ ಸೇರಿದ್ದ ಎಲ್ಲರೂ ಆ್ಯಪ್ ಸೂಚಿಸಿದ ಯೋಗಾಸನವನ್ನು ಪ್ರದರ್ಶಿಸಿದರು
"ಇದು ಕಾಳ್ಗಿಚ್ಚಿನಂತೆ ಹರಡುತ್ತದೆ" - ಕಿರಣ್ ರಿಜಿಜು
Posted On:
01 SEP 2021 8:46PM by PIB Bengaluru
ಪ್ರಧಾನ ಮಂತ್ರಿ ಮೋದಿಯವರ ಇಡೀ ಸರ್ಕಾರದ ವಿಧಾನವನ್ನು ಪ್ರತಿಬಿಂಬಿಸುವ ಮತ್ತು ಅವರ ಆರು ಸಚಿವ ಸಂಪುಟದ ಸಹೋದ್ಯೋಗಿಗಳು ಭಾಗವಹಿಸಿದ ಒಂದು ಭವ್ಯವಾದ ಸಮಾರಂಭದಲ್ಲಿ, ಕೇಂದ್ರ ಸಚಿವ ಆಯುಷ್ ಸರ್ಬಾನಂದ್ ಸೋನೊವಾಲ್ ಅವರು ಬುಧವಾರ 'ವೈ-ಬ್ರೇಕ್' ಮೊಬೈಲ್ ಆ್ಯಪ್ ಅನ್ನು ವಿಜ್ಞಾನ ಭವನದಲ್ಲಿ ಬಿಡುಗಡೆ ಮಾಡಿದರು.
ಈ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಆಯುಷ್ ಸಚಿವಾಲಯದ ಕಾರ್ಯಗಳನ್ನು ಸಚಿವರೊಬ್ಬರು ಶ್ಲಾಘಿಸಿ ಇದು "ಕಾಳ್ಗಿಚ್ಚಿನಂತೆ ಹರಡುತ್ತದೆ" ಎಂದು ಹೇಳಿದರು.
ಐದು ನಿಮಿಷಗಳ ಯೋಗ ಪ್ರೋಟೋಕಾಲ್ ಮಾರ್ಗಸೂಚಿ, ವಿಶೇಷವಾಗಿ ವೃತ್ತಿಪರರಿಗೆ ಒತ್ತಡವನ್ನು ನಿವಾರಿಸಲು, ನವಚೇತನ ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ತಮ್ಮ ಕೆಲಸದ ಸ್ಥಳದಲ್ಲಿ ಗಮನಹರಿಸಲು ವಿನ್ಯಾಸಗೊಳಿಸಲಾಗಿದೆ, ಇದು ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿದೆ.
ಯೋಗದ ಪ್ರಯೋಜನಗಳನ್ನು ವಿವರಿಸುತ್ತಾ, ಶ್ರೀ ಸರ್ಬಾನಂದ್ ಸೋನೊವಾಲ್ ಹೇಳಿದರು, "ಕಾರ್ಪೊರೇಟ್ ವೃತ್ತಿಪರರು ತಮ್ಮ ಉದ್ಯೋಗದಿಂದಾಗಿ ಒತ್ತಡ ಮತ್ತು ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂದು ನಮಗೆ ತಿಳಿದಿದೆ. ಸಹಜವಾಗಿ, ಇತರ ವೃತ್ತಿಗಳು ಕೂಡ ಇಂತಹ ಸಮಸ್ಯೆಗಳಿಂದ ಹೊರತಾಗಿಲ್ಲ. ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ವೈ-ಬ್ರೇಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇದು ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಸ್ವಲ್ಪ ಸಮಾಧಾನವನ್ನು ನೀಡುತ್ತದೆ. ಈ ವೈ-ಬ್ರೇಕ್ ಅನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದರೆ, ಜನರ ಆರೋಗ್ಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಶ್ರೀ ಕಿರಣ್ ರಿಜಿಜು, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ , ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಆಯುಷಂದ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವ ಡಾ.ಮುಂಜಪರಾ ಮಹೇಂದ್ರಭಾಯಿ ಕಾಲೂಭಾಯಿ ಪಾಲುಗೊಂಡಿದ್ದರು.
ವಿಶ್ವಾದ್ಯಂತ ಯೋಗವನ್ನು ಗುರುತಿಸಿರುವ ಬಗ್ಗೆ ಮಾತನಾಡಿದ ಶ್ರೀ ಸೋನೊವಾಲ್, "ಯೋಗವು ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಇದು ಜಗತ್ತಿನ ಬಹುತೇಕ ಭಾಗಗಳನ್ನು ತಲುಪಿದೆ. ಜನರು ಯೋಗವನ್ನು ಅಭ್ಯಾಸ ಮಾಡುತ್ತಾರೆ, ಯಾವುದಾದರೊಂದು ರೀತಿಯಲ್ಲಿ, ಆಧ್ಯಾತ್ಮಿಕ ಅಥವಾ ಆರೋಗ್ಯ ಉದ್ದೇಶಗಳಿಗಾಗಿ ಪ್ರಯೋಜನಕಾರಿಯಾಗಿದೆ. ಯೋಗದ ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ತತ್ವಶಾಸ್ತ್ರವು ಭಾರತದಲ್ಲಿ ಸಮಾಜದ ಕಾರ್ಯನಿರ್ವಹಣೆ, ಆರೋಗ್ಯ ಮತ್ತು ಔಷಧ ಅಥವಾ ಶಿಕ್ಷಣ ಮತ್ತು ಕಲೆಗಳಂತಹ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ ಮುಂಜಪರಾ ಮಹೇಂದ್ರಭಾಯಿ, "ಯೋಗ ಬ್ರೇಕ್ ಆ್ಯಪ್ ಎಷ್ಟು ಪರಿಣಾಮಕಾರಿ ಮತ್ತು ಅದರ ತಯಾರಿಕೆಯಲ್ಲಿ ಎಷ್ಟು ಸಂಶೋಧನೆ ಮತ್ತು ಅನುಭವಿ ಚಿಂತನೆ ಮಾಡಲಾಗಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಇದನ್ನು ಈಗಾಗಲೇ ಕಠಿಣವಾದ ಪ್ರಯೋಗಗಳಿಗೆ ಒಡ್ಡಲಾಗಿದೆ ಮತ್ತು ಅದರ ಪ್ರಯೋಜನಗಳನ್ನು ಪರೀಕ್ಷಿಸಲಾಗಿದೆ. ನಮ್ಮ ವಿವಿಧ ಕೋಶಗಳ ಮೇಲೆ ಅದರ ಪ್ರಭಾವದ ಬಗ್ಗೆಯೂ ಚರ್ಚಿಸಲಾಗಿದೆ.” ಎಂದು ಹೇಳಿದರು.
"ಈ ವೈ-ಬ್ರೇಕ್ ಆ್ಯಪ್ ಚಾಲನೆಯು ವಿವಿಧ ಯೋಗಾಭ್ಯಾಸಗಳ ಬಗ್ಗೆ ಅರಿವು ಮೂಡಿಸುತ್ತದೆ ಮತ್ತು ಜನಸಾಮಾನ್ಯರಿಗೆ ಯಾವುದೇ ಸಮಯದಲ್ಲಿ ಸುಲಭವಾಗಿ ಯೋಗಾಭ್ಯಾಸ ಮಾಡಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.
ಶ್ರೀಮತಿ. ಮೀನಾಕ್ಷಿ ಲೇಖಿ ಹೇಳಿದರು, "ವೈ-ಬ್ರೇಕ್ ಆ್ಯಪ್ ಮಾನವಕುಲದ ಸುಸ್ಥಿರತೆಯನ್ನು ಸಾಧಿಸುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತದೆ." 'ವೈ-ಬ್ರೇಕ್' ಆ್ಯಪ್ ನಮ್ಮ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಅಪಾರ ಕೊಡುಗೆ ನೀಡುತ್ತದೆ” ಎಂದು ಅವರು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ಭೂ ವಿಜ್ಞಾನ ಖಾತೆ ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ) ಡಾ.ಜಿತೇಂದ್ರ ಸಿಂಗ್ “ನಾವು ಯೋಗವನ್ನು ಉತ್ತೇಜಿಸುವಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ನಾನು ಕೆಲಸದ ಸ್ಥಳಗಳಲ್ಲಿ 5 ನಿಮಿಷಗಳ ಕಾಲ ಯೋಗದ ಬಗ್ಗೆ ಕಾನೂನು ರೂಪಿಸಲು ಕೇಂದ್ರ ಕಾನೂನು ಮಂತ್ರಿಯನ್ನು ಒತ್ತಾಯಿಸುತ್ತೇನೆ ಇದರಿಂದ ಜನರು ಇದರ ಲಾಭವನ್ನು ಪಡೆಯಬಹುದು.” ಎಂದು ಹೇಳಿದರು.
ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು, "ಆಯುಷ್ ಸಚಿವಾಲಯವು ಯೋಗವನ್ನು ಅತ್ಯಂತ ಸರಳ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ, ಇದು ಶ್ಲಾಘನೀಯ ಮತ್ತು ವೈ-ಬ್ರೇಕ್ ಆ್ಯಪ್ ಕಾಳ್ಗಿಚ್ಚಿನಂತೆ ಹರಡುತ್ತದೆ ಎಂದು ನನಗೆ ಖಾತ್ರಿಯಿದೆ."ಎಂದು ಹೇಳಿದರು.
ಈ ಬಿಡುಗಡೆಯ ಕಾರ್ಯಕ್ರಮವು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಒಂದು ಭಾಗವಾಗಿದ್ದು, ಭಾರತ ಸರ್ಕಾರವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಆಯೋಜಿಸಿದ ಕಾರ್ಯಕ್ರಮಗಳ ಸರಣಿಯಾಗಿದೆ. ವೈ-ಬ್ರೇಕ್ ಆರಂಭ, ಆಯುಷ್ ವ್ಯವಸ್ಥೆಗಳಿಗಾಗಿ ಶಿಬಿರಗಳನ್ನು ಆಯೋಜಿಸುವುದು, ರೋಗನಿರೋಧಕ ಔಷಧಿಯಾಗಿ ಅಶ್ವಗಂಧವನ್ನು ಪ್ರಾರಂಭಿಸುವುದು ಮತ್ತು ರೈತರು ಮತ್ತು ಸಾರ್ವಜನಿಕರಿಗಾಗಿ ಔಷಧೀಯ ಸಸ್ಯಗಳ ವಿತರಣೆ ಸೇರಿದಂತೆ ಆಯುಷ್ ನ ಹಲವಾರು ಚಟುವಟಿಕೆಗಳ ಪ್ರಚಾರಕ್ಕಾಗಿ ಆಯುಷ್ ಸಚಿವಾಲಯಕ್ಕೆ ಆಗಸ್ಟ್ 30 ರಿಂದ 2021 ರ ಸೆಪ್ಟೆಂಬರ್ 5 ರವರೆಗೆ ಒಂದು ವಾರ ನಿಗದಿಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂತ್ರಿಗಳು ಸೇರಿದಂತೆ ಎಲ್ಲಾ ಗಣ್ಯರಿಂದ ಸಮಕಾಲೀನ ಮತ್ತು ಪ್ರಭಾವಶಾಲಿ ಯೋಗಾಸನ ಪ್ರದರ್ಶನಕ್ಕೂ ಕಾರ್ಯಕ್ರಮವು ಸಾಕ್ಷಿಯಾಯಿತು. ಅವರು ಮೊಬೈಲ್ ಆ್ಯಪ್ ನಲ್ಲಿ ನೀಡಿದಂತೆ ಐದು ನಿಮಿಷಗಳ ಯೋಗ ಮಾರ್ಗಸೂಚಿಯನ್ನು ಪ್ರದರ್ಶಿಸಿದರು. ಹಲವಾರು ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು, ಸ್ವಾಯತ್ತ ಸಂಸ್ಥೆಗಳು, ಉದ್ಯಮ ಸಂಸ್ಥೆಗಳ ಸದಸ್ಯರುಗಳಾದ ಅಸ್ಸೋಚಮ್, ಸಿಐಐ ಮತ್ತು ಎಫ್ಐಸಿಸಿಐ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವಿದೇಶದಲ್ಲಿರುವ ಯೋಗ ಕೇಂದ್ರಗಳ ಅಧಿಕಾರಿಗಳು, ಯೋಗ ಸಾಧಕರು, ವಿದ್ವಾಂಸರು, ನೀತಿ ನಿರೂಪಕರು, ಅಧಿಕಾರಿಗಳು, ಯೋಗ ಉತ್ಸಾಹಿಗಳು ಮತ್ತು ಆರೋಗ್ಯ ವಿಜ್ಞಾನದ ತಜ್ಞರು ಸೇರಿದಂತೆ ಹಲವು ಗಣ್ಯರು ವರ್ಚುವಲ್ ಮೂಲಕ ದೂರದಿಂದಲೇ ಭಾಗವಹಿಸಿದರು.
ಸಮಾರಂಭವು ವಿಧ್ಯುಕ್ತವಾಗಿ ದೀಪವನ್ನು ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು ಮತ್ತು ಆಯುಷ್ ಸಚಿವಾಲಯದ ಒಎಸ್ ಡಿ (ಆಯುಷ್ ಗ್ರಿಡ್) ಡಾ. ಲೀನಾ ಚತ್ರೆಯವರಿಂದ ವೈ-ಬ್ರೇಕ್ ಆ್ಯಪ್ ನ ತಾಂತ್ರಿಕ ಪ್ರಸ್ತುತಿಯೊಂದಿಗೆ ಮತ್ತು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಡಾ.ಈಶ್ವರ್ ವಿ ಬಸವರಡ್ಡಿ ಅವರಿಂದ ನೇರ ಯೋಗ ಪ್ರದರ್ಶನವಿತ್ತು.
ವೈ-ಬ್ರೇಕ್ ಅಪ್ಲಿಕೇಶನ್ನಲ್ಲಿ ಯೋಗ ಪ್ರೋಟೋಕಾಲ್ (ಮಾರ್ಗಸೂಚಿ) ಕೆಲವು ಸರಳ ಯೋಗ ಅಭ್ಯಾಸಗಳನ್ನು ಒಳಗೊಂಡಿದೆ:
ಮಾರ್ಗಸೂಚಿಯು ಕೆಲವು ಸರಳ ಯೋಗ ಅಭ್ಯಾಸಗಳನ್ನು ಒಳಗೊಂಡಿದೆ:
ತಾಡಾಸನ- ಊರ್ಧ್ವ-ಹಸ್ತೋತ್ತನಾಸನ- ತಾಡಾಸನ
ಸ್ಕಂಧ ಚಕ್ರ- ಉತ್ತಾನ ಮಂಡೂಕಾಸನ– ಕಟಿ ಚಕ್ರಾಸನ
ಅರ್ಧಚಕ್ರಾಸನ, ಪ್ರಸಾರಿತ ಪದೋತ್ತಾನಾಸನ- ಆಳವಾದ ಉಸಿರಾಟ
ನಾಡಿಶೋಧನ ಪ್ರಾಣಾಯಾಮ
ಭ್ರಾಮರಿ ಪ್ರಾಣಾಯಾಮ- ಧ್ಯಾನ
ಈ ಮಾಡ್ಯೂಲ್ ಅನ್ನು ಜನವರಿ, 2020 ರಲ್ಲಿ ಆರು ಪ್ರಮುಖ ಮೆಟ್ರೋ ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆಧಾರವಾಗಿ ವಿವಿಧ ಪಾಲುದಾರರ ಸಮನ್ವಯದೊಂದಿಗೆ ಪ್ರಾರಂಭಿಸಲಾಯಿತು. ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗವು ದೇಶದ ಆರು ಪ್ರಮುಖ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಒಟ್ಟು 15 ದಿನಗಳ ಪ್ರಯೋಗವನ್ನು ನಡೆಸಿತು, ಇದರಲ್ಲಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಂದ ಒಟ್ಟು 717 ಭಾಗವಹಿಸಿದರು ಮತ್ತು ಪ್ರಯೋಗವು ಯಶಸ್ವಿಯಾಯಿತು. ಪ್ರೋಟೋಕಾಲ್ನ ಪ್ರತಿಕ್ರಿಯೆ ತುಂಬಾ ಉತ್ತೇಜನಕಾರಿಯಾಗಿದೆ.
ವೈ-ಬ್ರೇಕ್ ಚಾಲನೆಯ ಸಮಾರಂಭವನ್ನು ವೈದ್ಯ ರಾಜೇಶ್ ಕೋಟೆಚಾ, ಕಾರ್ಯದರ್ಶಿ ಆಯುಷ್, ಶ್ರೀ. ಪ್ರಮೋದ್ ಕುಮಾರ್ ಪಾಠಕ್, ವಿಶೇಷ ಕಾರ್ಯದರ್ಶಿ, ಆಯುಷ್ ಸಚಿವಾಲಯ ಶ್ರೀ. ಡಿ. ಸೆಂತಿಲ್ ಪಾಂಡಿಯನ್, ಜಂಟಿ ಕಾರ್ಯದರ್ಶಿ, ಎಂಒಎ; ಡಾ.ಈಶ್ವರ ವಿ.ಬಸವರಡ್ಡಿ, ನಿರ್ದೇಶಕರು, ಆಯುಷ್ ಸಚಿವಾಲಯ; ಶ್ರೀ ವಿಕ್ರಮ್ ಸಿಂಗ್ ಆಯುಷ್ ನ ಹಿರಿಯ ಅಧಿಕಾರಿಗಳು, ಇತರ ಹಲವು ಸಚಿವಾಲಯಗಳು, ಸಂಶೋಧನಾ ಮಂಡಳಿಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಮತ್ತು ತಜ್ಞರು ಉಪಸ್ಥಿತರಿದ್ದರು.
***
(Release ID: 1751609)
Visitor Counter : 299