ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೋವಿಡ್-19 ಲಸಿಕೆ ಲಭ್ಯತೆ ಕುರಿತು ತಾಜಾ ಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 57.05 ಕೋಟಿಗೂ ಅಧಿಕ ಲಸಿಕೆ ಪೂರೈಕೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ 3.44 ಕೋಟಿಗೂ ಅಧಿಕ ಲಸಿಕೆ ಬಾಕಿ ಮತ್ತು ಬಳಕೆ ಮಾಡದೆ ಉಳಿದಿವೆ
Posted On:
23 AUG 2021 11:47AM by PIB Bengaluru
ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವರ್ಧಿಸಲು ಬದ್ಧವಾಗಿದೆ. 2021ರ ಜೂನ್ 21ರಿಂದ ಕೋವಿಡ್-19 ಸಾರ್ವತ್ರಿಕ ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಲಸಿಕೆಗಳ ಲಭ್ಯತೆ ಹೆಚ್ಚಳ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುವುದರಿಂದ ಅವು ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಮತ್ತು ಲಸಿಕೆ ಪೂರೈಕೆ ಸರಣಿ ಉನ್ನತೀಕರಣ ಮತ್ತಿತರ ಕ್ರಮಗಳ ಮೂಲಕ ಲಸಿಕೀಕರಣವನ್ನು ತೀವ್ರಗೊಳಿಸಲಾಗಿದೆ.
ದೇಶಾದ್ಯಂತ ನಡೆಯುತ್ತಿರುವ ಲಸಿಕೀಕರಣದ ಭಾಗವಾಗಿ, ಭಾರತ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಕೋವಿಡ್-19 ಲಸಿಕೆ ಪೂರೈಕೆ ಮಾಡುತ್ತಿದೆ. ಕೋವಿಡ್ 19 ಲಸಿಕೀಕರಣದ ಅಭಿಯಾನದ ಹೊಸ ಸಾರ್ವತ್ರೀಕರಣ ಹಂತದಲ್ಲಿ, ಕೇಂದ್ರ ಸರ್ಕಾರ ದೇಶಾದ್ಯಂತ ಉತ್ಪಾದನೆಯಾಗುವ ಒಟ್ಟು ಲಸಿಕೆಗಳಲ್ಲಿ ಶೇ.75ರಷ್ಟನ್ನು ಖರೀದಿಸಿ, ಉಚಿತವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿದೆ.
ಲಸಿಕೆ ಡೋಸ್
|
(23 ಆಗಸ್ಟ್ 2021ರವರೆಗೆ)
|
ಈಗಾಗಲೇ ಪೂರೈಕೆಯಾಗಿರುವುದು
|
57,05,07,750
|
ಪೂರೈಕೆ ಪ್ರಗತಿಯಲ್ಲಿರುವುದು
|
13,34,620
|
ಬಾಕಿ ಲಭ್ಯ
|
3,44,06,720
|
ಭಾರತ ಸರ್ಕಾರ (ಉಚಿತ ಪೂರೈಕೆ ಮಾರ್ಗ)ದ ಮೂಲಕ ಮತ್ತು ರಾಜ್ಯಗಳ ನೇರ ಖರೀದಿ ವಿಭಾಗದಡಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 57.05 ಕೋಟಿ (57,05,07,750)ಗೂ ಅಧಿಕ ಲಸಿಕೆಗಳನ್ನು ಪೂರೈಕೆ ಮಾಡಿದೆ ಮತ್ತು 13,34,620 ಡೋಸ್ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಬಳಕೆ ಮಾಡದ 3.44 ಕೋಟಿಗೂ (3,44,06,720) ಅಧಿಕ ಡೋಸ್ ಲಸಿಕೆ ಲಭ್ಯವಿದೆ ಮತ್ತು ಆ ಬಾಕಿ ಲಸಿಕೆಯನ್ನು ಬಳಕೆ ಮಾಡಿಲ್ಲ.
***
(Release ID: 1748234)
Visitor Counter : 285
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam