ಗಣಿ ಸಚಿವಾಲಯ
ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವಣ ಒಡಂಬಡಿಕೆಗೆ ಸಂಪುಟದ ಅಂಗೀಕಾರ
ಪೂರ್ವ ಹಿಮಾಲಯದ ರಚನೆ ಮತ್ತು ಲಡಾಖ್ ಭೂಗರ್ಭದ ಆಳದಲ್ಲಿರುವ ಬಂಡೆಗಳ ಅಧ್ಯಯನ ಮೂಲಕ ಭೂಗರ್ಭದ ಜ್ಞಾನ ವರ್ಧಿಸಲಿದೆ
Posted On:
18 AUG 2021 4:16PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತ ಸರಕಾರದ ಗಣಿ ಸಚಿವಾಲಯದ ಭಾರತೀಯ ಭೂಗರ್ಭ ಸರ್ವೇಕ್ಷಣೆ ಸಂಸ್ಥೆ (ಜಿ.ಎಸ್.ಐ.) ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ(ಎಫ್.ಐ.ಯು.)ದ ವಿಶ್ವಸ್ಥ ಮಂಡಳಿಯು ಅದರ ಕಾಲೇಜ್ ಆಫ್ ಆರ್ಟ್ಸ್ , ಸಾಯನ್ಸ್ ಆಂಡ್ ಎಜುಕೇಶನ್ನಿನ ಭೂಮಿ ಮತ್ತು ಪರಿಸರ ವಿಭಾಗದ ಪರವಾಗಿ ಅಂಕಿತ ಹಾಕಿದ ತಿಳಿವಳಿಕಾ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು.
ಇಬ್ಬರು ಸಹಭಾಗಿಗಳ ನಡುವೆ ಸಹಕಾರಕ್ಕಾಗಿ ಗುರುತಿಸಲಾದ ಕ್ಷೇತ್ರಗಳು ಈ ಕೆಳಗಿನಂತಿವೆ:
ಎ.) ಭೂಗರ್ಭದ ಅರಿವಿನ ಹೆಚ್ಚಳ, ಭಾರತ-ಏಶ್ಯಾ ತಿಕ್ಕಾಟ ರೇಖೆಯಲ್ಲಿ ತಿಕ್ಕಾಟ/ಭೂಕಂಪ ಬಳಿಕದ ಶಿಲಾಪಾಕ ಅಧ್ಯಯನ, ಭೂಗರ್ಭ ಮತ್ತು ಭೂರಚನೆಗಳ ಪರಿಸರ ಸಂಶೋಧನೆ, ಭೂಗರ್ಭದ ಇತಿಹಾಸ ಮತ್ತು ಪೂರ್ವ ಹಿಮಾಲಯ ರಚನೆಯಲ್ಲಿಯ ಭೂರಚನೆಗಳ ಸಂಶೋಧನೆ.
ಬಿ.) ಲಡಾಖ್ ವಲಯದಲ್ಲಿ ತಿಕ್ಕಾಟದ ಬಳಿಕ ಶಿಲಾಪಾಕ ಪಟ್ಟಿಗಳ ರಚನೆಗಳಿಗೆ ಸಂಬಂಧಿಸಿ ಪ್ರಾದೇಶಿಕ ಭೂಗರ್ಭ ಶಾಸ್ತ್ರ, ಭೂರಾಸಾಯನಿಕ , ಶಿಲಾ ವಿಜ್ಞಾನ ಮತ್ತು ಬಹು ಐಸೋಟೋಪ್ ಗಳ ಅಧ್ಯಯನಕ್ಕೆ ಪರಸ್ಪರ ಸಹಕಾರಿ ಯೋಜನೆಗಳ ಅಭಿವೃದ್ಧಿ.
ಸಿ.) ಭೂವೈಜ್ಞಾನಿಕ ದತ್ತಾಂಶ ಮತ್ತು ತಂತ್ರಜ್ಞಾನ ಕುರಿತ ಮಾಹಿತಿ ವಿನಿಮಯ.
ಡಿ.) ಪಕ್ಷಗಳು ನಿರ್ಧರಿಸಿದಂತೆ ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳು.
ಪ್ರಯೋಜನಗಳು:
ಈ ತಿಳಿವಳಿಕಾ ಒಡಂಬಡಿಕೆಯು ಭಾರತದ ಭೂಗರ್ಭ ಸರ್ವೇಕ್ಷಣೆ (ಜಿ.ಎಸ್.ಐ.) ಮತ್ತು ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ (ಎಫ್.ಐ.ಯು.) ನಡುವೆ ಭೂಗರ್ಭಶಾಸ್ತ್ರ ಕ್ಷೇತ್ರದಲ್ಲಿ ಸಹಕಾರಕ್ಕೆ ಸಾಂಸ್ಥಿಕ ವ್ಯವಸ್ಥೆಯನ್ನು ಒದಗಿಸಲಿದೆ.
ಉದ್ದೇಶಗಳು:
ಈ ತಿಳಿವಳಿಕಾ ಒಡಂಬಡಿಕೆಯ ಉದ್ದೇಶಗಳಲ್ಲಿ ಭೂಗರ್ಭದ ತಿಳಿವಳಿಕೆ ಮತ್ತು ಭಾರತ-ಏಶ್ಯಾ ತಿಕ್ಕಾಟ ಗಡಿಯಲ್ಲಿ ತಿಕ್ಕಾಟ ಬಳಿಕದ ಶಿಲಾಪಾಕ , ಭೂರಚನೆಗಳ ಪರಿಸರದ ತಿಳಿವಳಿಕೆ ಗಳಿಸುವುದು ಮತ್ತು ತಿಕ್ಕಾಟದ ಬಳಿಕ ಶಿಲಾಪಾಕ, ಲಾವಾರಸದ ಉತ್ಪಾದನೆಗೆ ಸಂಬಂಧಿಸಿ ಮಾದರಿಯ ರಚನೆ , ಭೂಖಂಡಗಳ ತಿಕ್ಕಾಟದ ಸಂದರ್ಭಗಳಲ್ಲಿ ಲಾವಾರಸದ ಹೊರಹೊಮ್ಮುವಿಕೆ, ಮತ್ತು ಪೂರ್ವ ಹಿಮಾಲಯದ ಭೂರಚನೆಯಲ್ಲಿ ಭೂಗರ್ಭದ ಇತಿಹಾಸ ಮತ್ತು ಶಿಲಾಪದರಗಳ ಅಧ್ಯಯನ ಸೇರಿದೆ.
ಇದರಲ್ಲಿ ಒಳಗೊಂಡಿರುವ ಕಾರ್ಯಚಟುವಟಿಕೆಗಳೆಂದರೆ, ತಂತ್ರಜ್ಞಾನ ಕುರಿತ ಮಾಹಿತಿ ವಿನಿಮಯ, ಭೂವೈಜ್ಞಾನಿಕ ದತ್ತಾಂಶ; ಭೂಗರ್ಭಶಾಸ್ತ್ರೀಯ ಜ್ಞಾನದ ಅಭಿವೃದ್ಧಿ, ಭಾರತ-ಏಶ್ಯಾ ತಿಕ್ಕಾಟ ಗಡಿಯಲ್ಲಿ ತಿಕ್ಕಾಟ ಬಳಿಕದ ಶಿಲಾಪಾಕ, ಶಿಲಾಪದರಗಳ ಪರಿಸರ ಮತ್ತು ಭೂಗರ್ಭದ ಅಧ್ಯಯನ, ಪೂರ್ವ ಹಿಮಾಲಯದ ಭೂರಚನೆಯ ಭೂಗರ್ಭಶಾಸ್ತ್ರೀಯ ಇತಿಹಾಸ ಮತ್ತು ಲಡಾಕ್ ಭೂಗರ್ಭದ ಆಳದಲ್ಲಿರುವ ತಿಕ್ಕಾಟ ಬಳಿಕದ ರೂಪುಗೊಂಡ ಶಿಲಾಪದರಗಳ ಪಟ್ಟಿಕೆಗೆ ಸಂಬಂಧಿಸಿದ ಶಿಲಾಪದರಗಳ ಅಧ್ಯಯನ, ಪ್ರಾದೇಶಿಕ ಭೂಗರ್ಭವಿಜ್ಞಾನ, ಭೂರಾಸಾಯನಿಕ , ಶಿಲಾ ವಿಜ್ಞಾನ ಮತ್ತು ಬಹು ಐಸೋಟೋಪ್ ಗಳ ಅಧ್ಯಯನಕ್ಕೆ ಪರಸ್ಪರ ಸಹಕಾರಿ ಯೋಜನೆಗಳ ಅಭಿವೃದ್ಧಿ.
***
(Release ID: 1747070)
Visitor Counter : 138