ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯದ ಭಾರತೀಯ ಕಲ್ಲಿದ್ದಲು ನಿಯಮಿತ (ಸಿ.ಐ.ಎಲ್.)ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ
ಸಿಐಎಲ್ @75 ಸಂಕಲ್ಪದ ಅಡಿಯಲ್ಲಿ “ಗೋ ಗ್ರೀನ್, ಡ್ರಿಂಕ್ ಕ್ಲೀನ್”ಧ್ಯೇಯವನ್ನು ಅಳವಡಿಸಿಕೊಂಡಿದೆ
Posted On:
13 AUG 2021 3:29PM by PIB Bengaluru
ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿನ ಸಿ.ಪಿ.ಎಸ್.ಇ. ಭಾರತೀಯ ಕಲ್ಲಿದ್ದಲು ನಿಯಮಿತ (ಸಿ.ಐ.ಎಲ್.) ಸ್ವಾತಂತ್ರ್ಯದ ಅಮೃತ ಮಹೋತ್ಸವ (ಎ.ಕೆ.ಎ.ಎಂ) ಆಚರಣೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದೆ. 2021ರ ಮಾರ್ಚ್ ನಿಂದ ಪ್ರಾರಂಭವಾದ 75 ವಾರಗಳ ಸುದೀರ್ಘ ಆಚರಣೆಗಳಲ್ಲಿ ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಎಲ್ಲಾ ವಯೋಮಾನದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಹಲವಾರು ಚಟುವಟಿಕೆಗಳು ಸೇರಿವೆ. ಎ.ಕೆ.ಎ.ಎಂ.ನ ಐದು ಸ್ತಂಭಗಳ ಅಡಿಯಲ್ಲಿ ಶ್ರೀಮಂತ ಮತ್ತು ವೈವಿಧ್ಯಮಯ ಚಟುವಟಿಕೆಗಳನ್ನು ವಿವಿಧ ರಾಜ್ಯಗಳಲ್ಲಿರುವ ಅದರ ಎಲ್ಲಾ ಅಂಗಸಂಸ್ಥೆಗಳು ಮತ್ತು ಕೋಲ್ಕತ್ತಾದ ಅದರ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಿಐಎಲ್ ಸಂಕಲ್ಪ@75 ಸ್ತಂಭದ ಅಡಿಯಲ್ಲಿ "ಗೋ ಗ್ರೀನ್, ಡ್ರಿಂಕ್ ಕ್ಲೀನ್" (ಹಸಿರಿನತ್ತ ಸಾಗಿ, ಶುದ್ಧವಾದ್ದನ್ನು ಸೇವಿಸಿ) ಎಂಬ ಮೂಲ ವಿಷಯವನ್ನು ಅಳವಡಿಸಿಕೊಂಡಿದೆ, ಇದರಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆಗೆ ಜಾಗೃತಿ ಮೂಡಿಸುವ ಚಟುವಟಿಕೆಗಳ ಮೇಲೆ ಒತ್ತು ನೀಡಲಾಗಿದೆ.
ಕೋವಿಡ್-19 ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಎ.ಕೆ.ಎ.ಎಂ. ಧ್ಯೇಯವನ್ನು ಹೊರತರುವ ಮೂಲಕ ಈ ವರ್ಷದ ಮಾರ್ಚ್ ನಿಂದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಆಗಸ್ಟ್ ಮೊದಲ ಎರಡು ವಾರಗಳಲ್ಲಿ, ಸಿಐಎಲ್ ಮತ್ತು ಅದರ ಅಂಗಸಂಸ್ಥೆಗಳು ಸ್ವಾತಂತ್ರ್ಯದ ಉತ್ಸಾಹಕ್ಕೆ ಮತ್ತಷ್ಟು ಉತ್ತೇಜನ ನೀಡಲು ಅನೇಕ ಚಟುವಟಿಕೆಗಳನ್ನು ಆಯೋಜಿಸಿದವು.
ಆಗಸ್ಟ್ ಮೊದಲ ವಾರದಲ್ಲಿ ಈಸ್ಟರ್ನ್ ಕೋಲ್ ಫೈಲ್ಡ್ಸ್ ಲಿಮಿಟೆಡ್ (ಇಸಿಎಲ್) ನಲ್ಲಿ ವೈಯಕ್ತಿಕ ನೈರ್ಮಲ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಅಧಿವೇಶನವನ್ನು ಆಯೋಜಿಸಲಾಗಿತ್ತು. ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್)ವತಿಯಿಂದ ಸಂಬಲ್ಪುರ ಜಿಲ್ಲೆಯ ಬಾಸಿಯಾಪಾಲಿ ಗ್ರಾಮದಲ್ಲಿ ಶಾಲಾ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿತರಿಸಲಾಯಿತು. ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ (ಸಿಎಂಪಿಡಿಐಎಲ್) "ಸ್ವಾತಂತ್ರ್ಯದಲ್ಲಿ ಮಹಿಳೆಯರ ಪಾತ್ರ" ಕುರಿತು ಆಯೋಜಿಸುವುದರ ಜೊತೆಗೆ, ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಡಬ್ಲ್ಯೂಸಿಎಲ್) ನ ಉದ್ಯೋಗಿಗಳಲ್ಲಿ ಸ್ವಾತಂತ್ರ್ಯದ ವಿಷಯಾಧಾರಿತವಾಗಿ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಇದಲ್ಲದೆ, ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎನ್.ಸಿಎಲ್) ನಿಂದ ಬೀದಿ ನಾಟಕಗಳು, ರಾಲಿಗಳು ಮತ್ತು ಜಾಗೃತಿ ಸಂವಾದಗಳು, ಆಗ್ನೇಯ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಸ್.ಇ.ಸಿ.ಎಲ್) ನಿಂದ ಹೆಚ್ಚಿನ ಸಂಖ್ಯೆಯ ಸಸಿಗಳ ವಿತರಣೆ ಆಗಸ್ಟ್, 2021 ರ ಮೊದಲ ವಾರದಲ್ಲಿ ನಡೆದ ಚಟುವಟಿಕೆಗಳ ಕೆಲವು ಮುಖ್ಯಾಂಶಗಳಾಗಿವೆ.
2021ರ ಆಗಸ್ಟ್ ಎರಡನೇ ವಾರದಲ್ಲಿ, ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶವನ್ನು ಸೃಷ್ಟಿಸಲು ಎನ್.ಸಿಎಲ್.ನ ಗ್ರಾಮವೊಂದರಲ್ಲಿ ಖಾದಿ ಮತ್ತು ಕೈಮಗ್ಗ ಕೇಂದ್ರ ಉದ್ಘಾಟನೆ ಮಾಡುವುದರ ಜೊತೆಗೆ ಭಾರತ್ ಕಾಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್)ನಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಯಿತು. ಎಸ್.ಇ.ಸಿ.ಎಲ್ ಅಡಿಯಲ್ಲಿ ಎಲ್ಲಾ ಉಪ ವಲಯಗಳಲ್ಲಿನ ಕಾರ್ಮಿಕರು, ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ನೂರಾರು ಸಸಿಗಳನ್ನು ವಿತರಿಸಲಾಯಿತು. "ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಸುಸ್ಥಿರ ಪರಿಸರಕ್ಕಾಗಿ ಸವಾಲುಗಳು" ಕುರಿತ ಆನ್ ಲೈನ್ ವಿಚಾರ ಸಂಕಿರಣವನ್ನು ಸಿಐಎಲ್ ನಲ್ಲಿ ಆಯೋಜಿಸಲಾಗಿತ್ತು. ಇಸಿಎಲ್ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾದ ಕ್ವಿಟ್ ಇಂಡಿಯಾ ಚಳವಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ, 5೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 1೦೦ ಕಾರ್ಯನಿರ್ವಾಹಕರು ಭಾಗವಹಿಸಿದ್ದರು. 3.7 ಹೆಕ್ಟರ್ ಗಳ ಜಮೀನಿನಲ್ಲಿ ಸಿಎಂಪಿಡಿಐಎಲ್ ಮತ್ತು ಇಸಿಎಲ್ ನಿಂದ ಬೃಹತ್ ಸಸಿನೆಡುವ ಅಭಿಯಾನವನ್ನು ಸಹ ನಡೆಸಲಾಯಿತು. ನಾಗ್ಪುರದ ಡಬ್ಲ್ಯೂಸಿಎಲ್ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾದ ಶಾಶ್ವತ ಛಾಯಾಚಿತ್ರ ಗ್ಯಾಲರಿ ಆಗಸ್ಟ್ ಕ್ರಾಂತಿ (ಕ್ವಿಟ್ ಇಂಡಿಯಾ ಚಳವಳಿ)ಯ ಪ್ರಮುಖ ಘಟನೆಗಳನ್ನು ಎತ್ತಿ ತೋರಿಸಿತು. ಸ್ವಾತಂತ್ರ್ಯದ ವಿಷಯಾಧಾರಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯು ಆಗಸ್ಟ್ ಎರಡನೇ ವಾರದಲ್ಲಿ ನಡೆಸಲಾದ ಮತ್ತೊಂದು ಚಟುವಟಿಕೆಯಾಗಿತ್ತು.
ಛಾಯಾಚಿತ್ರಗಾರಿಕೆ ಮತ್ತು ಚಿತ್ರಕಲೆಯಲ್ಲಿ ಆನ್ ಲೈನ್ ಸ್ಪರ್ಧೆಗಳು ಸೇರಿದಂತೆ ಎ.ಕೆ.ಎ.ಎಂ. ದಿನದರ್ಶಿಯ ಅಡಿಯಲ್ಲಿ ಸಿಐಎಲ್ ಮತ್ತು ಅದರ ಅಂಗಸಂಸ್ಥೆಗಳು ಮುಂಬರುವ ದಿನಗಳಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಿವೆ. ಕೋಯ್ಲಾ ದರ್ಪಣ್ (ಭಾರತೀಯ ಕಲ್ಲಿದ್ದಲು ನಿಯಮಿತದ ಹಿಂದಿ ನಿಯತಕಾಲಿಕೆ- ಸ್ವಾತಂತ್ರ್ಯದ ಅಮೃತ ಮಹೋತ್ಸವ) ಆವೃತ್ತಿ, "ಗೋ ಗ್ರೀನ್ ಡ್ರಿಂಕ್ ಕ್ಲೀನ್" ವಿಷಯದ ಅಡಿಯಲ್ಲಿ ಸಸಿಗಳ ವಿತರಣೆ, "ಭಾರತೀಯ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಚಳವಳಿಗಳು" ಕುರಿತ ಉಪನ್ಯಾಸ ಸರಣಿ, ಏಕ ಬಳಕೆಯ ಪ್ಲಾಸ್ಟಿಕ್ ಮತ್ತು ಪರಿಸರದ ಮೇಲೆ ಅದರ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ಚೀಲಗಳ ವಿತರಣೆ, ಸಿಐಎಲ್ ಮತ್ತು ಅಂಗಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನದ ವಾರ್ಷಿಕ ಆಚರಣೆಯನ್ನು ಸಹ ನಡೆಸಲಾಗುತ್ತಿದೆ. 2021ರ ಆಗಸ್ಟ್ ನಲ್ಲಿ ಇತರ ಉದ್ದೇಶಿತ ಚಟುವಟಿಕೆಗಳಲ್ಲಿ ದೇಶಭಕ್ತಿಯ ವಿಷಯದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದು, ಡಬ್ಲ್ಯೂಸಿಎಲ್ ನಿಂದ ನಾಗ್ಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮತ್ತು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನೀಡಿದ ಕೊಡುಗೆಗಾಗಿ ದಾದಿಯರು ಮತ್ತು ವೈದ್ಯರನ್ನು ಸನ್ಮಾನಿಸುವುದು, ಭಾರತ್ ಕೋಕಿಂಗ್ ಕಲ್ಲಿದ್ದಲು ಲಿಮಿಟೆಡ್ ಪ್ರಧಾನ ಕಚೇರಿಯಲ್ಲಿ "ಸ್ವಚ್ಛ ಧನ್ ಬಾದ್ ಗಾಗಿ ನಡಿಗೆ", ಸ್ವಚ್ಛತಾ ಅಭಿಯಾನ / ಸೆಣಬಿನ ಚೀಲ ವಿತರಣೆ / ಸಸಿಗಳ ವಿತರಣೆ, ಭಿತ್ತಿಚಿತ್ರಗಳು ಮತ್ತು ಸ್ವಾತಂತ್ರ್ಯ ಹೋರಾಟ- ಸ್ವಾತಂತ್ರ್ಯ ಭಾರತದ ಸಂದೇಶದೊಂದಿಗೆ ಪೋಸ್ಟರ್ ಗಳನ್ನು ಪ್ರದರ್ಶಿಸುವುದೂ ಸೇರಿವೆ.
***
(Release ID: 1745558)
Visitor Counter : 280