ಕೃಷಿ ಸಚಿವಾಲಯ

ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ಕ್ರೀಡಾಪಟುಗಳನ್ನು ಅಭಿನಂದಿಸಿದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ

Posted On: 09 AUG 2021 5:26PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ಕ್ರೀಡಾಪಟುಗಳನ್ನು ಅಭಿನಂದಿಸಿ ಬಹಿರಂಗ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಅವರು, "ಮೊದಲಿಗೆ, ಒಲಿಂಪಿಕ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲರನ್ನೂ ನಾನು ಅಭಿನಂದಿಸಲು ಇಚ್ಛಿಸುತ್ತೇನೆ, ಇದು ನಮಗೆ ಹೆಮ್ಮೆ ತಂದಿದೆ. ಪ್ರತಿಭಾಪೂರ್ಣ ಮತ್ತು ಸ್ಫೂರ್ತಿದಾಯಕ ಕ್ರೀಡಾಪಟುಗಳು ದಾಖಲೆಗಳನ್ನೂ ನಿರ್ಮಿಸುತ್ತಿದ್ದಾರೆ ಮತ್ತು ನಾವು ನಿರೀಕ್ಷಿಸದ ಗುರಿಗಳನ್ನೂ ತಲುಪುತ್ತಿದ್ದಾರೆ. ನಾನು ವಿಶೇಷವಾಗಿ ಭಾರತೀಯ ಒಲಿಂಪಿಕ್ ವೇದಿಕೆಯಲ್ಲಿ ಪ್ರಾಬಲ್ಯ ಮೆರೆದ ಎಲ್ಲ ಬಲಿಷ್ಠ ಆದರ್ಶಪ್ರಾಯ ಮಹಿಳಾ ಅಥ್ಲೀಟ್ ಗಳನ್ನು ಅಭಿನಂದಿಸಲು ಬಯಸುತ್ತೇನೆ. ಮಹಿಳೆಯರು ಭಾರತದಲ್ಲಿ ಕ್ರೀಡಾ ಅಡೆತಡೆಗಳನ್ನು ಮೀರಿದ್ದಲ್ಲದೆ, ಗಣನೀಯ ಸಾಮಾಜಿಕ ಪ್ರಭಾವವನ್ನು ರೂಪಿಸುತ್ತಿದ್ದಾರೆ ಮತ್ತು ಅವರು ಪ್ರಬಲ ಆದರ್ಶವಾಗುತ್ತಿದ್ದಾರೆ. ನಮ್ಮ ರಾಷ್ಟ್ರದ ಲಕ್ಷಾಂತರ ಮಹಿಳೆಯರ ಪರವಾಗಿ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಕೃತಜ್ಞಳಾಗಿದ್ದೇನೆ." ಎಂದು ತಿಳಿಸಿದ್ದಾರೆ.

ತಮ್ಮ ಪತ್ರದಲ್ಲಿ "ಭಾರತದಲ್ಲಿ ಎಂದಿಗೂ ಮಹಿಳಾ ಆದರ್ಶ ವ್ಯಕ್ತಿಗಳಿಗೆ ಕೊರತೆಯಿಲ್ಲ. ಋಷಿ ಮಾತೆಯರಾದ ಗಾರ್ಗಿ ಮತ್ತು ಮೈತ್ರೇಯಿ, ವೀರ ಯೋಧರಾದ ಝಾನ್ಸಿಯ ರಾಣಿ ಲಕ್ಷ್ಮಿ ಬಾಯಿ, ಒನಕೆ ಓಬವ್ವಕಿತ್ತೂರು ಚೆನ್ನಮ್ಮ, ಕ್ರೀಡಾ ತಾರೆಯರಾದ ಸೈನಾ ನೆಹ್ವಾಲ್, ಪಿ ವಿ ಸಿಂಧು, ಸಾನಿಯಾ ಮಿರ್ಜಾ, ಮೇರಿ ಕೋಮ್ ಮತ್ತು ಗಗನಯಾನಿಗಳಾದ ಕಲ್ಪನಾ ಚಾವ್ಲಾ ಅವರಂತಹ ಹಲವರನ್ನು ಸಚಿವರು ಉಲ್ಲೇಖಿಸಿದ್ದಾರೆ. ಮಹಿಳೆಯರು ನಮ್ಮ ಭಾರತೀಯ ಸಮಾಜವನ್ನು ಪ್ರತಿನಿಧಿಸುತ್ತಾರೆ. ನಾವು, ಮಹಿಳೆಯರನ್ನು ಮತ್ತು ಸ್ತ್ರೀಕುಲವನ್ನು ಪೂಜಿಸುವ ಕೆಲವೇ ಸಂಸ್ಕೃತಿಯ ಪಾಲಕರು ಎಂಬ ಹೆಮ್ಮೆ ನಮಗಿದೆಇಂದು ಭಾರತೀಯ ಮಹಿಳೆಯರು ವೈವಿಧ್ಯಮಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಹಿಂದೆಂದಿಗಿತಲೂ ತುಂಬಾ ಶಕ್ತಿಶಾಲಿಯಾಗಿದ್ದಾರೆ. ಕುಟುಂಬಗಳನ್ನೂ ಒಟ್ಟಾಗಿ ಹಿಡಿದಿಟ್ಟುಕೊಂಡಿದ್ದಾರೆ. ಗೃಹಿಣಿಯರು ಅತ್ಯಂತ ಶ್ರೇಷ್ಠ ಚಾಂಪಿಯನ್ನರಾಗಿದ್ದಾರೆ ಮತ್ತು ಭಾರತೀಯ ಸಮಾಜದಲ್ಲಿ ಎಲೆಮರೆಯ ಕಾಯಿಯಂತಹ ನಾಯಕರಿಯರಾಗಿದ್ದಾರೆ."

" ದಿನಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರಲ್ಲಿ ತಾವು ಸಮಾಜದ ಬಲಿಪಶುಗಳು, ಅಧೀನಕ್ಕೊಳಗಾದವರು, ಚಿತ್ರಹಿಂಸೆಗೊಳಗಾದವರು ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾದವರು ಎಂಬ ಭಾವನೆ ಮೂಡಿದ್ದುನಾನು ನಿವಾರಿಸಲು ಬಯಸುತ್ತೇನೆ. ಕೆಲವು ವೈಪರೀತ್ಯದ ಸಂದರ್ಭಗಳಲ್ಲಿ ಇದು ನಿಜವಾಗಿದ್ದರೂ, ಭಾರತೀಯ ಸಮಾಜವು ಆರಾಧಿಸುವ ಶಕ್ತಿದೇವತೆ ದುರ್ಗೆ ಅವರಿಗೆ ಎಲ್ಲವನ್ನೂ ಮೀರಿ ಮೇಲೇರಲು ಶಕ್ತಿ ಮತ್ತು ಸಂಕಲ್ಪವನ್ನು ನೀಡುತ್ತಾಳೆ. ಸನಾತನ ಭಾರತೀಯ ಸಮಾಜಗಳಲ್ಲಿ ಮಹಿಳಾ ಅಧೀನತೆಯು ಅಸ್ತಿತ್ವದಲ್ಲಿರಲಿಲ್ಲ. ಹಿಂದಿನ ದಿನಗಳನ್ನು ನೆನಪಿಸುವಂತೆ ನಾವು ಇಂದಿಗೂ ಹಲವಾರು ಮಾತೃಪ್ರಧಾನ ಸಮಾಜಗಳನ್ನು ಹೊಂದಿದ್ದೇವೆ. ಎಂದೂ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

"ವೈಯಕ್ತಿಕ ಮಟ್ಟದಲ್ಲಿ, ಒಬ್ಬ ಮಹಿಳೆಯಾಗಿ, ಮಹಿಳೆಯರು ಎದುರಿಸಬಹುದಾದ ಕಷ್ಟಗಳು ಮತ್ತು ಸವಾಲುಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಸಮೀಕರಿಸುತ್ತೇನೆ. ಹೆಣ್ಣು ಮಕ್ಕಳನ್ನು ಹೆತ್ತವರು ತಮ್ಮ ಮಗಳು ಸಹ ಗಂಡು ಮಕ್ಕಳಂತೆಯೇ ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಂಡರೂ, ಬೆಂಬಲಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಆದರೆ ಇದು ನಮ್ಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಅಥವಾ ಪಶ್ಚಿಮದ ಅಂಧ ಅನುಕರಣೆಯಿಂದ ಕುಟುಂಬಗಳನ್ನು ಒಡೆಯಲು ಜಗಳವಾಡಬೇಕಾಗಿಲ್ಲ. ನಮ್ಮ ಮಹಿಳೆಯರು ಅನೇಕ ಅದ್ಭುತವಾದ ವಿಷಯಗಳಲ್ಲಿ ಸಮರ್ಥರಾಗಿದ್ದಾರೆ ಏಕೆಂದರೆ ಅವರ ಸ್ವಾತಂತ್ರ್ಯ ಮತ್ತು ಆಕಾಂಕ್ಷೆಗಳನ್ನು ಅವರ ತಾಯಂದಿರು, ತಂದೆ ಮತ್ತು ಪತಿ ಬೆಂಬಲಿಸುತ್ತಾರೆ. ನಾವು ಅಚಲವಾದ ಅಡಿಪಾಯದ ಬಲವಾದ ಸಮಾಜದಲ್ಲಿ ವಾಸಿಸುತ್ತಿದ್ದೇವೆ, ಅದು ನಮಗೆ ಅನೇಕ ಮಹಿಳಾ ಆದರ್ಶಪ್ರಾಯರನ್ನು ನೀಡುತ್ತದೆ. ಮುಂದಾಳುಗಲು ರಾಷ್ಟ್ರದಾದ್ಯಂತ ಮಹಿಳೆಯರಿಗೆ ಪ್ರತಿದಿನವೂ ತಮ್ಮ ಮಾನಸಿಕ ಸಂಕೋಲೆಗಳನ್ನು ಮುರಿಯಲು ಸ್ಫೂರ್ತಿ ನೀಡುತ್ತಾರೆ." ಎಂದು ಸಚಿವರು ತಿಳಿಸಿದ್ದಾರೆ.

"ತಾಯಿ ಅಥವಾ ಸಹೋದರಿಯಂತೆ, ನಾನು ಸದಾ ನಿಮ್ಮ ಹಿಂದಿರುತ್ತೇನೆ, ಸಾಧ್ಯವಿರುವ ಎಲ್ಲ ರೀತಿಯಲ್ಲೂ ನಿಮಗೆ ಬೆಂಬಲ ನೀಡುತ್ತೇನೆ" ಎಂದು ಸಚಿವರು ಭರವಸೆ ನೀಡಿದ್ದಾರೆ.

***



(Release ID: 1744255) Visitor Counter : 295


Read this release in: English , Urdu , Hindi , Punjabi