ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕ್ಷಯವನ್ನು ನಿರ್ಮೂಲನೆ ಮಾಡುವ ಭಾರತದ ಪ್ರಯತ್ನ ಕುರಿತಂತೆ ಸಂಸದೀಯಪಟುಗಳನ್ನು ಸಂವೇದನಶೀಲಗೊಳಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಮತ್ತು ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ 


ಕ್ಷಯ ಮುಕ್ತ ಭಾರತ ನಿಟ್ಟಿನಲ್ಲಿ ಆಗಿರುವ ಪ್ರಯೋಜನಗಳ ಕುರಿತಂತೆ ಸಂಸದೀಯ ಪಟುಗಳಿಗೆ ವಿವರಿಸಿದ ಕೇಂದ್ರ ಆರೋಗ್ಯ ಸಚಿವರು

ಸದಸ್ಯರಿಗೆ ತಮ್ಮ ಕ್ಷೇತ್ರಗಳನ್ನು ಕ್ಷಯ ಮುಕ್ತವಾಗಿಸಲು ಶ್ರಮಿಸುವಂತೆ ಸಲಹೆ

ಕೇಂದ್ರ, ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿನ ಸಹಯೋಗವು ಇದನ್ನು ಜನಾಂದೋಲನವಾಗಿಸಲು ನೆರವಾಗುತ್ತದೆ ಮತ್ತು 2025ರೊಳಗೆ ಕ್ಷಯವನ್ನು ನಿರ್ಮೂಲನೆ ಮಾಡುವ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸುತ್ತದೆ: ಶ್ರೀ ವೆಂಕಯ್ಯನಾಯ್ಡು

ತಮ್ಮ ಕ್ಷೇತ್ರಗಳಲ್ಲಿ  ಕ್ಷಯ ರೋಗಿಗಳನ್ನು ನಿರಂತರ ಗುರುತಿಸಲಾಗುತ್ತಿದೆ ಮತ್ತು ನಿಗಾವಹಿಸಲಾಗಿದೆ, ಹಾಗೂ ಚಿಕಿತ್ಸೆಯ ವೇಳೆ ಮತ್ತು ನಂತರ ರೋಗಿಗಳ ಅಗತ್ಯವನ್ನು ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿ : ಶ್ರೀ ಓಂ ಬಿರ್ಲಾ

ಶ್ರೀ ನರೇಂದ್ರ ಮೋದಿ  ಅವರು ಆರೋಗ್ಯವನ್ನು ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ ಆರೋಗ್ಯವನ್ನು ಒಂದು 'ಸಮಗ್ರ' ವಿಷಯವನ್ನಾಗಿಸುವ ನಿಟ್ಟಿನಲ್ಲಿ ದೇಶದ ದೃಷ್ಟಿಕೋನವನ್ನು ರೂಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ: ಶ್ರೀ ಮನ್ಸುಖ್ ಮಾಂಡವೀಯ

Posted On: 09 AUG 2021 3:45PM by PIB Bengaluru

ಕ್ಷಯರೋಗ ಮುಕ್ತಗೊಳಿಸುವ ದೇಶದ ಪ್ರಯತ್ನದ ಕುರಿತಂತೆ ಸಂಸದೀಯ ಪಟುಗಳನ್ನು ಸಂವೇದನಾತ್ಮಕಗೊಳಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಭಾರತದ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ ವೆಂಕಯ್ಯನಾಯ್ಡು ಅವರು, ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರೊಂದಿಗೆ ವಹಿಸಿದ್ದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಅವರು ದೇಶದಲ್ಲಿನ ಕ್ಷಯರೋಗದ ಸ್ಥಿತಿಯ ಬಗ್ಗೆ ವಿವರಿಸಿ, 2018ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವಂತೆ 2025 ವೇಳೆಗೆ ರೋಗವನ್ನು ನಿರ್ಮೂಲನೆ ಮಾಡಬೇಕಾಗದ ಅಗತ್ಯವನ್ನು ಒತ್ತಿ ಹೇಳಿದರು.

ಸಂವೇದನಾತ್ಮಕಗೊಳಿಸುವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಕ್ಕಾಗಿ ಸಂಸದೀಯಪಟುಗಳಿಗೆ ಧನ್ಯವಾದ ಅರ್ಪಿಸಿದ ಉಪ ರಾಷ್ಟ್ರಪತಿಯವರು, ಕೇಂದ್ರ, ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿನ ಸಹಯೋಗವು ಇದನ್ನು ಜನಾಂದೋಲನವಾಗಿ ರೂಪಿಸಲು ಮತ್ತು 2025 ಹೊತ್ತಿಗೆ ಕ್ಷಯವನ್ನು ನಿರ್ಮೂಲನೆ ಮಾಡುವ ನಮ್ಮ ಪ್ರಯತ್ನಕ್ಕೆ ನೆರವಾಗಲಿದೆ ಎಂದರು.ದೇಶಾದ್ಯಂತ ಆರೋಗ್ಯ ವ್ಯವಸ್ಥೆಯಲ್ಲಿನ ಹೆಚ್ಚಳ ಮತ್ತು ಹಲವು ಇತರ ಕಾರಣಗಳಿಂದಾಗಿ  ನಿಟ್ಟಿನಲ್ಲಿ ಸ್ವಾತಂತ್ರ್ಯಾನಂತರ ಗಣನೀಯ ಪ್ರಗತಿಯನ್ನು ಸಾಧಿಸಲಾಗಿದೆ. ಉದಾಹರಣೆಗೆ 2000 ದಿಂದೀಚೆಗೆ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯ ಮೂಲಕ 63 ದಶಲಕ್ಷ ಜೀವಗಳನ್ನು ಉಳಿಸಲಾಗಿದೆ ಎಂದೂ ಅವರು ತಿಳಿಸಿದರು. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೂಕ್ತ ಯೋಜನೆ  ರೂಪಿಸಿ, ಗುರಿಯನ್ನು ನಿಗದಿ ಪಡಿಸಿಕೊಳ್ಳುವಂತೆ ಮತ್ತು ಕ್ಷಯರೋಗ ನಿರ್ಮೂಲನೆಗೆ ಸಹಾಯ ಮಾಡುವಂತೆ ಅವರು ಸದಸ್ಯರಿಗೆ ಆಗ್ರಹಿಸಿದರು. ಕ್ಷಯ ಮುಕ್ತ ಭಾರತ ಕುರಿತ ಪ್ರಮಾಣ ವಚನವನ್ನು ಸಂಸದೀಯ ಪಟುಗಳು ಸ್ವೀಕರಿಸಿದರು.  

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಕ್ಷಯರೋಗದ ವಿರುದ್ಧ ಸಂಘಟಿತ ಕ್ರಮಕ್ಕೆ ಕರೆ ನೀಡಿ, ವೈವಿಧ್ಯಮಯ ವಾಗಿರುವ  ದೇಶದಲ್ಲಿ ಸಂದೇಶವನ್ನು ಪ್ರಸಾರ ಮಾಡುವಲ್ಲಿ ಸಂಸತ್ತು ವಹಿಸಿದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಜನಪ್ರತಿನಿಧಿಗಳ ಜವಾಬ್ದಾರಿ ಅವರ ಕ್ಷೇತ್ರಗಳು ಟಿಬಿ ರೋಗಿಗಳನ್ನು ನಿರಂತರವಾಗಿ ಗುರುತಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು, ರೋಗಿಗಳ ಅಗತ್ಯಗಳನ್ನು ನೋಡಿಕೊಳ್ಳುವುದು ಮತ್ತು ಚಿಕಿತ್ಸೆಯ ನಂತರ ಸುಗಮ ಆಡಳಿತ ಮತ್ತು ಆರೋಗ್ಯ ರಕ್ಷಣೆಗಾಗಿ, ಸಂಸದರಿಗೆ ಟಿಬಿಗೆ ಸಂಬಂಧಿಸಿದ ಎಲ್ಲ ಅಗತ್ಯ ಡೇಟಾ ಮತ್ತು ಸರ್ಕಾರದಿಂದ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ತಮ್ಮ ಕ್ಷೇತ್ರಗಳಲ್ಲಿ  ಕ್ಷಯ ರೋಗಿಗಳನ್ನು ನಿರಂತರ ಗುರುತಿಸಲಾಗುತ್ತಿದೆ ಮತ್ತು ನಿಗಾವಹಿಸಲಾಗಿದೆ, ಹಾಗೂ ಚಿಕಿತ್ಸೆಯ ವೇಳೆ ಮತ್ತು ನಂತರ ರೋಗಿಗಳ ಅಗತ್ಯವನ್ನು ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿರುತ್ತದೆ ಎಂದೂ ಅವರು ಹೇಳಿದರು. ಸುಗಮ ಆಡಳಿತ ಮತ್ತು ಆರೋಗ್ಯದ ನಿರ್ವಹಣೆಗಾಗಿ, ಸಂಸದೀಯ ಪಟುಗಳಿಗೆ ಕ್ಷಯ ರೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಮತ್ತು ದತ್ತಾಂಶ ಹಾಗೂ ಸರ್ಕಾರದ ವತಿಯಿಂದ ಅಗತ್ಯ ನೆರವನ್ನು ಒದಗಿಸಲಾಗುವುದು ಎಂದೂ ಅವರು ತಿಳಿಸಿದರು.

ಮನ್ಸುಖ್ ಮಾಂಡವೀಯ ತಮ್ಮ ಭಾಷಣದಲ್ಲಿ "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಆರೋಗ್ಯವನ್ನು ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ ಆರೋಗ್ಯವನ್ನು ಒಂದು 'ಸಮಗ್ರ' ವಿಷಯವನ್ನಾಗಿಸುವ ನಿಟ್ಟಿನಲ್ಲಿ ದೇಶದ ಚಿಂತನೆಯನ್ನು ರೂಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ" ಎಂದರು. ಅಪೌಷ್ಟಿಕತೆಯನ್ನು ಗುರಿಯಾಗಿಟ್ಟುಕೊಂಡು ರೂಪಿಸಿದ ಕಾರ್ಯಕ್ರಮಗಳ ಉದಾಹರಣೆಗಳನ್ನು ನೀಡಿದ ಅವರು, ನಿಟ್ಟಿನಲ್ಲಿ ಸಚಿವಾಲಯಗಳು ನಡೆಸುವ ಶುಚಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಎಲ್ಲಾ ಕಾರ್ಯಕ್ರಮಗಳು ಅಂತಿಮವಾಗಿ ಆರೋಗ್ಯದ ಸಾಮಾಜಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ ಮತ್ತು ಇದರಿಂದಾಗಿ ಭಾರತದ ಜನರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು. ಕ್ಷಯವನ್ನು ನಿರ್ಮೂಲನೆ ಮಾಡಲು ದೇಶದ ಪ್ರಯತ್ನಗಳಲ್ಲಿ ಪೌಷ್ಟಿಕಾಂಶದ ಬೆಂಬಲ ಮತ್ತು ವ್ಯಾಪಕವಾದ ಸಾಮಾಜಿಕ ಜಾಗೃತಿಯ ಅಗತ್ಯವಿರುವ ಮಾದರಿಯ ಉದಾಹರಣೆಯನ್ನು ಅವರು ನೀಡಿದರು. ಭಾರತದ ನಾಗರಿಕರಿಗೆ ಸಮಗ್ರ ಆರೋಗ್ಯವನ್ನು ಒದಗಿಸುವ ಗುರಿಯನ್ನು ಹೊಂದಿರುವ ಹೆಚ್ಚಿದ ಬಜೆಟ್ ನಿಬಂಧನೆಗಳನ್ನು ಅವರು ಪ್ರತಿಪಾದಿಸಿದರು.

ಶೇ. 65ರಷ್ಟು ಕ್ಷಯರೋಗ ಪ್ರಕರಣಗಳು 15-45 ವಯೋಮಾನದವರಲ್ಲಿ ಕಾಣಿಸುತ್ತಿದ್ದು, ಇದು ಆರ್ಥಿಕವಾಗಿ ಹೆಚ್ಚು ಉತ್ಪಾದಕ ಜನಸಂಖ್ಯೆಯ ವಿಭಾಗವಾಗಿದೆ. ಇದರೊಂದಿಗೆ ಶೇ.58ರಷ್ಟು ಕ್ಷಯರೋಗ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂಬ ಅಂಶವು ಕ್ಷಯರೋಗದಿಂದಾಗಿ ಇಡೀ ಕುಟುಂಬಗಳು ಪ್ರಗತಿಯಿಂದ ಹೊರಗುಳಿಯುತ್ತವೆ ಎಂಬುದನ್ನು ತೋರಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು. ತಾವು ಆಯೋಜಿಸುವ ಮತ್ತು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ನಾಗರಿಕರಿಗೆ ಕ್ಷಯರೋಗ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಎಲ್ಲ ಸದಸ್ಯರನ್ನು ಅವರು ಕೋರಿದರು.

ಡಾ. ಭಾರತಿ ಪವಾರ್ ಮಾತನಾಡಿ, ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕ್ಷಯರೋಗ ನಿರ್ಮೂಲನೆಯ ಪಯಣ ಕಷ್ಟದಾಯಕವಾಗಿರುವ ಕುರಿತು ಮಾತನಾಡಿ "ಜಾಗತಿಕವಾಗಿ, 2020ರಲ್ಲಿ ವಿಶ್ವದಾದ್ಯಂತ ವ್ಯಾಪಕವಾಗಿ ಕಾಣಿಸಿಕೊಂಡ ಕೋವಿಡ್ -19 ಸಾಂಕ್ರಾಮಿಕ ದಾಖಲೆಯ ವೇಗದಲ್ಲಿ ಜೀವನ, ಆರ್ಥಿಕತೆ, ಆರೋಗ್ಯ ವ್ಯವಸ್ಥೆಗಳನ್ನು ಹಾಳುಗೆಡವಿತು. ಕೆಲವೇ ತಿಂಗಳುಗಳಲ್ಲಿ ಸಾಂಕ್ರಾಮಿಕವು ಕ್ಷಯರೋಗ ನಿರ್ಮೂಲನೆಗೆ ಹಲವು ವರ್ಷಗಳಲ್ಲಿ ಮಾಡಿದ್ದ ಪ್ರಗತಿಯನ್ನು ತಿರುಗಿಸಿಬಿಟ್ಟಿತು. ಮಾರ್ಚ್ 2020ರಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕದಿಂದ ಲಾಕ್ ಡೌನ್, ಸಂಚಾರದ ನಿರ್ಬಂಧ, ಲಭ್ಯವಿದ್ದ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲಗಳ ಮರುಬಳಕೆ, ಮೂಲಸೌಕರ್ಯ, ರೋಗನಿರ್ಣಯ, ಚಿಕಿತ್ಸಾ ಕೇಂದ್ರಗಳು ಮತ್ತು ಕೋವಿಡ್ -19 ವಿರುದ್ಧ ಹೋರಾಡಲು ಮಾನವಶಕ್ತಿಯನ್ನು ಪ್ರಚೋದಿಸಿತು, ದೇಶಾದ್ಯಂತ ನಡೆಯುತ್ತಿರುವ ಕ್ಷಯರೋಗ ನಿರ್ಮೂಲನಾ ಪ್ರಯತ್ನಗಳು ಮತ್ತು ಸೇವೆಗಳಿಗೆ ಅಡ್ಡಿಪಡಿಸಿತು. ಕ್ಷಯರೋಗ ನಿರ್ಮೂಲನೆಯಲ್ಲಿನ ಅಡಚಣೆಯನ್ನು ತ್ವರಿತವಾಗಿ ಸರಿದೂಗಿಸಲು ಸಚಿವಾಲಯವು ಕೈಗೊಳ್ಳುತ್ತಿರುವ ಕ್ರಮಗಳ ಕುರಿತಂತೆ ಸಂಸತ್ತಿನ ತಮ್ಮ ಸಹೋದ್ಯೋಗಿಗಳಿಗೆ ಅವರು ಮಾಹಿತಿ ನೀಡಿದರು. ಉತ್ತಮ ಮತ್ತು ತ್ವರಿತ ಆರೋಗ್ಯ ಫಲಿತಾಂಶಗಳಿಗಾಗಿ ಕ್ಷಯರೋಗದ ಸಾಮಾಜಿಕ ನಿರ್ಣಾಯಕಗಳನ್ನು ನಿಭಾಯಿಸುವಲ್ಲಿ ರಾಜ್ಯಗಳೊಂದಿಗೆ ಸಾಮೂಹಿಕ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಅವರು ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀಮತಿ ಆರತಿ ಅಹುಜಾ ಕೂಡ ಉಪಸ್ಥಿತರಿದ್ದರು.

***(Release ID: 1744254) Visitor Counter : 206