ಗಣಿ ಸಚಿವಾಲಯ

2021-22ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 61.34 ಕೋಟಿ ರೂಪಾಯಿ ತೆರಿಗೆ ಪೂರ್ವ ಲಾಭ ಗಳಿಸಿದ ಹಿಂದುಸ್ತಾನ್ ಕಾಪರ್ ಲಿಮಿಟೆಡ್

Posted On: 07 AUG 2021 6:16PM by PIB Bengaluru

ಹಿಂದುಸ್ತಾನ್ ಕಾಪರ್ ಲಿಮಿಟೆಡ್(ಎಚ್‌ಸಿಎಲ್) ಆಡಳಿತ ಮಂಡಳಿಯು ಕೋಲ್ಕತ್ತಾದಲ್ಲಿ ಇಂದು ನಡೆದ ಸಭೆಯಲ್ಲಿ, 2021-22ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯ ಆರ್ಥಿಕ ಫಲಿತಾಂಶಗಳನ್ನು ಅನುಮೋದಿಸಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆಗೆ ಪೂರ್ವ 61.34 ಕೋಟಿ ರೂ.ಗಳ ಲಾಭವನ್ನು ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ 24.79 ಕೋಟಿಗೆ ಹೋಲಿಸಿದರೆ, ಶೇ. 147 ಹೆಚ್ಚಳವನ್ನು ದಾಖಲಿಸಿದೆ.

ಹಿಂದುಸ್ತಾನ್ ಕಾಪರ್ ಲಿಮಿಟೆಡ್ (ಎಚ್‌ಸಿಎಲ್) ಗಣಿ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ನವೆಂಬರ್ 1967ರಲ್ಲಿ ಆರಂಭವಾದ ಎಚ್‌ಸಿಎಲ್ ಐದು ಉತ್ಪಾದನಾ ಘಟಕಗಳನ್ನು ಹೊಂದಿರುವ 'ಮಿನಿರತ್ನ- ವರ್ಗ I' ಕಂಪನಿಯಾಗಿದೆ. ಇದು ರಾಷ್ಟ್ರದ ಏಕೈಕ ಶೃಂಗೀಯ ಸಂಯೋಜನೆ ಹೊಂದಿರುವ ಸಂಸ್ಥೆಯಾಗಿದ್ದು ಗಣಿಗಾರಿಕೆ, ಸಂಸ್ಕರಣೆ, ಕರಗಿಸುವಿಕೆ,  ಶುದ್ಧೀಕರಣ ಮತ್ತು ಸಂಸ್ಕರಿಸಿದ ತಾಮ್ರದ ಲೋಹದ ಎರಕ ಹೊಯ್ಯುವ ಘಟಕಗಳನ್ನು ಒಳಗೊಂಡಿದೆ.

***



(Release ID: 1743679) Visitor Counter : 189


Read this release in: English , Urdu , Hindi , Punjabi