ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕಾಕರಣ ಅಪ್ಡೇಟ್
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 51.16 ಕೋಟಿ ಲಸಿಕಾ ಡೋಸ್ ಗಳನ್ನು ಒದಗಿಸಲಾಗಿದೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.30 ಕೋಟಿಗೂ ಅಧಿಕ ಉಳಿಕೆ ಮತ್ತು ಬಳಕೆಯಾಗದ ಡೋಸ್ ಗಳು ಲಸಿಕೆ ನೀಡುವುದಕ್ಕೆ ಲಭ್ಯ ಇವೆ
Posted On:
06 AUG 2021 10:19AM by PIB Bengaluru
ದೇಶಾದ್ಯಂತ ಕೋವಿಡ್ -19 ಲಸಿಕಾಕರಣದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರವು ಬದ್ಧವಾಗಿದೆ. ಸಾರ್ವತ್ರಿಕ ಕೋವಿಡ್ -19 ಲಸಿಕಾಕರಣದ ಹೊಸ ಹಂತ 2021 ರ ಜೂನ್ 21 ರಿಂದ ಆರಂಭಗೊಂಡಿದೆ. ಹೆಚ್ಚು ಪ್ರಮಾಣದಲ್ಲಿ ಲಸಿಕೆಗಳು ಲಭ್ಯವಾಗುತ್ತಿರುವುದರಿಂದ ಲಸಿಕಾಕರಣ ಆಂದೋಲನಕ್ಕೆ ಇನ್ನಷ್ಟು ವೇಗ ನೀಡಲಾಗಿದೆ. ಲಸಿಕೆಗಳ ಲಭ್ಯತೆಯ ಬಗ್ಗೆ ಮೊದಲೇ ಮಾಹಿತಿ ಲಭಿಸುತ್ತಿರುವುದರಿಂದ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾಕರಣವನ್ನು ವ್ಯವಸ್ಥಿತವಾಗಿ ಮಾಡಲು ಮತ್ತು ಲಸಿಕಾ ಪೂರೈಕೆ ಸರಪಳಿಯನ್ನು ಸುಲಲಿತಗೊಳಿಸಲು ಅನುಕೂಲವಾಗುತ್ತಿದೆ.
ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರ ಮಾಡ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನುಪಫಕ ನ ಓಓಒ ಉಚಿತವಾಗಿ ಒದಗಿಸುವ ಮೂಲಕ ಬೆಂಬಲವನ್ನು ನೀಡುತ್ತಿದೆ. ಸಾರ್ವತ್ರಿಕ ಲಸಿಕಾ ಆಂದೋಲನದ ಹೊಸ ಹಂತದಲ್ಲಿ, ಕೇಂದ್ರ ಸರಕಾರವು ದೇಶದಲ್ಲಿ ಲಸಿಕಾ ತಯಾರಕರಿಂದ ಉತ್ಪಾದಿಸಲ್ಪಡುವ ಒಟ್ಟು ಲಸಿಕೆಯಲ್ಲಿ 75% ನಷ್ಟು ಲಸಿಕೆಯನ್ನು ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತವಾಗಿ) ನೀಡುತ್ತದೆ.
ಲಸಿಕಾ ಡೋಸ್ ಗಳು
|
(2021ರ ಆಗಸ್ಟ್ ದಿನಾಂಕ 6 ರವರೆಗೆ)
|
ಪೂರೈಕೆ
|
51,16,46,830
|
ಪೂರೈಕೆ ಹಂತದಲ್ಲಿರುವುದು
|
20,49,220
|
ಬಳಕೆ
|
49,19,73,961
|
ಲಭ್ಯ ಇರುವ ಉಳಿಕೆ ಪ್ರಮಾಣ
|
2,30,03,211
|
ಎಲ್ಲಾ ಮೂಲಗಳಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 51.16 ಕೋಟಿಗೂ ಅಧಿಕ (51,16,46,830) ಲಸಿಕಾ ಡೋಸ್ ಗಳನ್ನು ಒದಗಿಸಲಾಗಿದೆ ಮತ್ತು ಇನ್ನೂ 20,49,220 ಡೋಸ್ ಗಳು ಪೂರೈಕೆ ಹಂತದಲ್ಲಿವೆ.
ಇವುಗಳಲ್ಲಿ, ಒಟ್ಟು ಬಳಕೆಯಾದ ಪ್ರಮಾಣವು ವ್ಯರ್ಥವಾದ ಪ್ರಮಾಣ ಸಹಿತ 49,19,73,961 ಡೋಸ್ ಗಳು (ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾದ ದತ್ತಾಂಶಗಳ ಪ್ರಕಾರ)
2.30 ಕೋಟಿಗೂ ಅಧಿಕ (2,30,03,211) ಉಳಿಕೆ ಮತ್ತು ಬಳಕೆಯಾಗದ ಕೋವಿಡ್ ಲಸಿಕಾ ಡೋಸ್ ಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇವೆ.
***
(Release ID: 1743159)
Visitor Counter : 201