ಉಕ್ಕು ಸಚಿವಾಲಯ

ಭಾರತೀಯ ರೈಲ್ವೆಯಿಂದ ಹೊಸ ಹಳಿಗಳಿಗೆ ಬೇಡಿಕೆ

Posted On: 04 AUG 2021 2:29PM by PIB Bengaluru

ಕಳೆದ ಮೂರು ವರ್ಷಗಳಲ್ಲಿ ಮತ್ತು 21-22 ರ [ಮೊದಲ ತ್ರೈಮಾಸಿಕದಲ್ಲಿ] ಈ ಕೆಳಕಂಡ ಮಾದರಿಯ ಹೊಸ ಹಳಿಗಳಿಗೆ ಬೇಡಿಕೆ ಕಂಡು ಬಂದಿದ್ದು, ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್ - ಎಸ್.ಎ.ಐ.ಎಲ್ ಗೆ ಭಾರತೀಯ ರೈಲ್ವೆ ಬೇಡಿಕೆ ಸಲ್ಲಿಸಿದೆ.   

1. ಗ್ರೇಡ್ 880 ಬದಲಿಗೆ ಆರ್-260 ಯುಐಸಿ 60 ಪ್ರೊಫೈಲ್ ರೈಲು

2. ಯು.ಐ.ಸಿ 60 ಪ್ರೊಫೈಲ್ ಬದಲಿಗೆ 60ಇಐ ಪ್ರೊಫೈಲ್

3. 1175 ಎಚ್.ಟಿ. ರೈಲುಗಳು [ಹೀಟ್ ಟ್ರೀಟೆಡ್ ರೈಲ್ಸ್]

4. 260 ಮೀಟರ್ ಉದ್ದದ ರೈಲ್ವೆ ಫಲಕ

ಭಾರತೀಯ ರೈಲ್ವೆ ತನಗೆ ಅಗತ್ಯವಾಗಿರುವ [ಐಆರ್] ಗ್ರೇಡ್ 880 ಬದಲಿಗೆ ಆರ್-260 ಯುಐಸಿ 60 ಪ್ರೊಫೈಲ್ ರೈಲು, ಯು.ಐ.ಸಿ 60 ಪ್ರೊಫೈಲ್ ಬದಲಿಗೆ 60ಇಐ ಪ್ರೊಫೈಲ್, 1175 ಎಚ್.ಟಿ. ರೈಲುಗಳು [ಹೀಟ್ ಟ್ರೀಟೆಡ್ ರೈಲ್ಸ್] ಹಾಗೂ 260 ಮೀಟರ್ ಉದ್ದದ ರೈಲ್ವೆ ಫಲಕಕ್ಕೆ ಸಲ್ಲಿಸಿದ್ದ ಬೇಡಿಕೆಯನ್ನು ಭಾರತೀಯ ಉಕ್ಕು ಪ್ರಾಧಿಕಾರ [ಎಸ್.ಎ.ಐ.ಎಲ್] ಪೂರೈಸಿದೆ. ಕಳೆದ ಮೂರು ವರ್ಷಗಳಲ್ಲಿ ಮತ್ತು 21-22 ರ [ಮೊದಲ ತ್ರೈಮಾಸಿಕದಲ್ಲಿ] ಈ ಕೆಳಕಂಡ ಮಾದರಿ ಹೊಸ ಹಳಿಗಳಿಗೆ ಬೇಡಿಕೆ ಬಂದಿದ್ದು, ಇವುಗಳನ್ನು ಈ ಕೆಳಕಂಡಂತೆ ಪೂರೈಸಲಾಗಿದೆ.

(ಟನ್ ಗಳಲ್ಲಿ)

· 20-8-2019 ರಂದು ಒಟ್ಟು ಬೇಡಿಕೆಯನ್ನು ಮಾರ್ಪಡಿಸಿ 19-20 ರ ಹಣಕಾಸು ವರ್ಷದಲ್ಲಿ ಒಟ್ಟು 11175 ಎಚ್.ಟಿ ಗ್ರೇಡ್ ನ 200000 ಟನ್ ಗೆ ಬೇಡಿಕೆ ಸಲ್ಲಿಸಲಾಗಿದೆ.  

· 2021 – 22 ರಲ್ಲಿ ಆರ್-260 60ಇಐ ಪ್ರೊಫೈಲ್ ನಲ್ಲಿ ತೋರಿಸಿರುವ ಪ್ರಮಾಣದಲ್ಲಿ ಬೇಡಿಕೆಯನ್ನು ತೋರಿಸಲಾಗಿದೆ.

· 260 60ಇಐ ಪ್ರೊಫೈಲ್ ವ್ಯಾಪ್ತಿಗೆ 112709 ಟನ್ ಪೂರೈಕೆ ಒಳಗೊಂಡಿದೆ.

ಭಾರತೀಯ ರೈಲ್ವೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತೀಯ ಉಕ್ಕು ಪ್ರಾಧಿಕಾರ ಎಸ್.ಎ.ಐ.ಎಲ್ ತನ್ನ ಭಿಲಾಯಿ ಉಕ್ಕು ಘಟಕವನ್ನು ಆಧುನೀಕರಣ ಮತ್ತು ವಿಸ್ತರಣೆ [ಮಾಡೆಕ್ಸ್] ಮಾಡುತ್ತಿದ್ದು, ಇದರಲ್ಲಿ 1.2 ಎಂ.ಟಿ.ಪಿ.ಎ ಸಾಮರ್ಥ್ಯದ ಯನಿವರ್ಸಲ್ ರೈಲ್ ಮೇಲ್ [ಯು.ಆರ್.ಎಂ] ಸ್ಥಾಪನೆ ಸಹ ಒಳಗೊಂಡಿದೆ. ಭಿಲಾಯಿ ಉಕ್ಕು ಘಟಕದಲ್ಲಿ ರೈಲ್ವೆಯ ವೃದ್ಧಿಸುತ್ತಿರುವ ಬೇಡಿಕೆಗಳನ್ನು ಪೂರೈಸಲು ಹಳಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. 1175 ಎಚ್.ಟಿ. ಬೇಡಿಕೆಯನ್ನು ಈಡೇರಿಸಲು 21 ರ ಮಾರ್ಚ್ ನಲ್ಲಿ ಒರಿಜಿನಲ್ ಮ್ಯಾನುಪೆಕ್ಚರರ್ಸ್ [ಒ.ಇ.ಎಂ] ಶಾಖಾ ಸಂಸ್ಕರಣೆ ಸೌಲಭ್ಯವುಳ್ಳ ಹಾಟ್ ಕಮಿಷನಿಂಗ್ ಟ್ರಯಲ್ ಅನ್ನು ಆರಂಭಿಸಲಾಗಿದೆ.

ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಉಕ್ಕು ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಈ ಮಾಹಿತಿ ನೀಡಿದ್ದಾರೆ.

***



(Release ID: 1742377) Visitor Counter : 99


Read this release in: English , Bengali , Punjabi