ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಪರಿಷ್ಕೃತ ವರದಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 50.37 ಕೋಟಿಗೂ ಹೆಚ್ಚು ಕೋವಿಡ್ ಲಸಿಕಾ ಡೋಸ್ ಗಳ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.60 ಕೋಟಿ ಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಡೋಸ್ ಗಳು ಈಗಲೂ ಲಭ್ಯ

Posted On: 04 AUG 2021 9:38AM by PIB Bengaluru

ದೇಶಾದ್ಯಂತ ಕೋವಿಡ್-19 ಲಸಿಕೆಯ ವೇಗ ಹೆಚ್ಚಿಸಲು ಮತ್ತು ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆಯ ಹೊಸ ಸಾರ್ವತ್ರೀಕರಣದ ಹಂತ 2021 ಜೂನ್ 21 ರಿಂದ ಪ್ರಾರಂಭವಾಗಿದೆ. ಹೆಚ್ಚು ಲಸಿಕೆ ಲಭ್ಯತೆ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯನ್ನು ಗೋಚರಿಸುವಂತೆ ಮಾಡಿದ್ದು, ಇದರಿಂದ ಉತ್ತಮ ಯೋಜನೆ ರೂಪಿಸಲು, ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸಹಕಾರಿಯಾಗಿದೆ.

ರಾಷ್ಟ್ರೀಯ ಲಸಿಕಾ ಅಭಿಯಾನದ ಅಂಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡುವ ಮೂಲಕ ಬೆಂಬಲ ನೀಡುತ್ತಿದೆ. ಕೋವಿಡ್-19 ಲಸಿಕೆಯ ಹೊಸ ಸಾರ್ವತ್ರೀಕರಣದ ಹಂತದಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರಿಂದ ಲಸಿಕೆ ಖರೀದಿಸಿ ಮತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ [ಉಚಿತವಾಗಿ] ಪೂರೈಸುತ್ತಿದೆ

ಸಿಕೆ ಡೋಡ್ ಗಳು

[2021 ಆಗಸ್ಟ್ 4 ರವರೆಗೆ]

ಪೂರೈಕೆ

50,37,22,630

ಪೂರೈಕೆ ಹಂತದಲ್ಲಿ

49,19,780

ಬಳಕೆ

48,19,75,798

ಬಾಕಿ ಲಭ್ಯತೆ

 

2,60,17,573

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ವರೆಗೆ 50.37 ಕೋಟಿ ಗೂ (50,37,22,630) ಹೆಚ್ಚು ಲಸಿಕೆಯನ್ನು ಒದಗಿಸಿದ್ದು, ಎಲ್ಲಾ ಮೂಲಗಳ ಮೂಲಕ ಒಟ್ಟು 49,19,780 ಡೋಸ್ ಲಸಿಕೆ ಪೂರೈಕೆ ಹಂತದಲ್ಲಿದೆ.

ವ್ಯರ್ಥವಾದದ್ದು ಸೇರಿ ಒಟ್ಟು ಈವರೆಗೆ [ಇಂದು ಬೆಳಿಗ್ಗೆ 8 ಗಂಟೆವರೆಗಿನ ಮಾಹಿತಿಯಂತೆ] 48,19,75,798 ಡೋಸ್ ಲಸಿಕೆ ಬಳಕೆಯಾಗಿದೆ.

2.69 ಕೋಟಿ ಗೂ ಹೆಚ್ಚು (2,60,17,573) ಬಾಕಿ ಮತ್ತು ಬಳಕೆಯಾಗದ ಲಸಿಕೆಗಳು ಈಗಲೂ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳ ಬಳಿ ಲಭ್ಯವಿದೆ.

***


(Release ID: 1742192) Visitor Counter : 295