ಗಣಿ ಸಚಿವಾಲಯ

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ [ಎನ್.ಎಂ.ಇ.ಟಿ] ಅನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪುನರ್ ರಚಿಸಲು ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಷಿ ಕರೆ


ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ವಿಸ್ತರಿಸುವತ್ತ ಗಮನ ಕೇಂದ್ರೀಕರಣಕ್ಕೆ ಒತ್ತು

ಪರಿಶೋಧನೆಯ ಉಪಕ್ರಮಗಳಿಗೆ ಮತ್ತಷ್ಟು ಪರಿಪೂರ್ಣತೆ ನೀಡುವತ್ತ ಪ್ರಯತ್ನ

Posted On: 31 JUL 2021 5:47PM by PIB Bengaluru

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ [ಎನ್.ಎಂ.ಇ.ಟಿ] ಅನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪುನರ್ ರಚಿಸುವ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡುವಂತೆ ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳಿಗೆ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಷಿ ಸೂಚಿಸಿದ್ದಾರೆ.

ಸಚಿವರು ಇಂದು ಮೂರನೇ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಖನಿಜ ಸಂಪದ್ಭರಿತ ಭಾರತದಲ್ಲಿ ಖನಿಜ ಪರಿಶೋಧನೆ ಉಪಕ್ರಮಗಳಿಗೆ ಮತ್ತಷ್ಟು ಪರಿಪೂರ್ಣತೆ ನೀಡುವ ಪ್ರಯತ್ನ ನಡೆಸಬೇಕಿದ್ದು, ಇದರಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಕಡಿವಾಣ ಹಾಕಬಹುದು, ಈ ವಲಯಕ್ಕೆ ಹೆಚ್ಚಿನ ಸಂಸ್ಥೆಗಳನ್ನು ಆಕರ್ಷಿಸಲು ಹಾಗೂ ಖನಿಜ ಪರಿಶೋಧನೆ ಕ್ಷೇತ್ರದಲ್ಲಿ ಕಠಿಣ ಪರಿಸ್ಥಿತಿ ಇದ್ದರೆ ಇದನ್ನು ನಿವಾರಣೆ ಮಾಡಬೇಕು ಎಂದರು.

ಭಾರತದ ಖನಿಜ ಪರಿಶೋಧನೆ ಪ್ರಯತ್ನಗಳ ಜತೆಗೆ ಚಿನ್ನ ಮತ್ತು ಇತರೆ ಅಪರೂಪದ ಖನಿಜಗಳಿಗಾಗಿ ಭೂಮಿಯ ಪರಿಶೋಧನೆಯ ಮೇಲೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಆಡಳಿತ ಮಂಡಳಿ ಸಭೆಯ ಆಧ್ಯಕ್ಷತೆ ವಹಿಸಿದ್ದ  ಸಚಿವರು ಒತ್ತಿ ಹೇಳಿದರು.  

ರಾಜ್ಯಗಳಿಗೆ ಆರ್ಥಿಕ ನೆರವು ವಿಸ್ತರಿಸುವ ವ್ಯವಸ್ಥೆಯನ್ನು ಸುಗಮಗೊಳಿಸುವ ಅಗತ್ಯವಿದ್ದು, ವಿಶೇಷವಾಗಿ ಖನಿಜ ಶ್ರೀಮಂತ ರಾಜ್ಯಗಳು ಪರಿಶೋಧನೆಯನ್ನು ಹೆಚ್ಚಿಸಬೇಕು. ಜತೆಗೆ ರಾಜ್ಯಗಳ ನಡುವೆ ಪರಿಶೋಧನೆಯಲ್ಲಿ ಸ್ಪರ್ಧಾತ್ಮಕತೆಯ ವಾತಾವರಣವನ್ನು ಸಹ ನಿರ್ಮಿಸಬೇಕಾಗಿದೆ. ಗಣಿಗಾರಿಕೆಯ ಪರಿಶೋಧನೆಯನ್ನು ಉತ್ತೇಜಿಸಲು ರಾಜ್ಯಗಳೊಂದಿಗಿನ ಸಂವಹನ ಆಗಾಗ್ಗೆ ನಡೆಯುತ್ತಿರಬೇಕು ಮತ್ತು ಇದು ಫಲಿತಾಂಶ ಆಧಾರಿತವಾಗಿರಬೇಕು ಎಂದು ಸಚಿವರು ಹೇಳಿದರು.

ನಿಯಮಿತವಾಗಿ ಜರುಗುವ ಎನ್.ಎಂ.ಇ.ಟಿಯ ಸಾಮಾನ್ಯ ಸಭೆಯಲ್ಲಿ ನೀತಿ ನಿರೂಪಣೆ ಮತ್ತು ಪ್ರಗತಿ ಪರಿಶೀಲನೆ ನಡೆಯಲಿದ್ದು, ಈ ವಲಯದಲ್ಲಿ ಖನಿಜ ಪರಿಶೋಧನೆ ಅವಿಭಾಜ್ಯ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ಎನ್.ಎಂ.ಇ.ಟಿಗೆ ದೇಶದಲ್ಲಿ ಪರಿಶೋಧನಾ ಚಟುವಟಿಕೆ ಕೈಗೊಳ್ಳಲು ಹೆಚ್ಚಿನ ಆರ್ಥಿಕ ಸಂಪನ್ಮೂಲದ ಅಗತ್ಯವಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರದ ಸಂಸ್ಥೆಗಳು ಖನಿಜ ಪರಿಶೋಧನೆಗಾಗಿ ಪ್ರಾದೇಶಿಕವಾರು ವಿಸ್ತಾರವಾದ ಮತ್ತು ವಾಸ್ತವಿಕ ನೆಲೆಗಟ್ಟಿನ ಯೋಜನೆಗಳೊಂದಿಗೆ ಆಗಮಿಸುವಂತೆ ಸಚಿವರು ಸಲಹೆ ಮಾಡಿದರು.

ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದನ್ವೆ, ವಿಜ್ಞಾನ, ತಂತ್ರಜ್ಞಾನ, ತಂತ್ರಜ್ಞಾನ [ಸ್ವತಂತ್ರ ನಿರ್ವಹಣೆ], ಭೂ ವಿಜ್ಞಾನ [ಸ್ವತಂತ್ರ ನಿರ್ವಹಣೆ]: ಎಂ.ಒ.ಎಸ್, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಪಿಂಚಣಿಗಳು, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಮಧ್ಯಪ್ರದೇಶದ ಖನಿಜ ಸಂಪನ್ಮೂಲ ಸಚಿವ ಶ‍್ರೀ ಬ್ರಜೇಂದ್ರ ಪ್ರತಾಪ್ ಸಿಂಗ್ ಮತ್ತು ಅಸ್ಸಾಂನ ಗಣಿ ಮತ್ತು ಖನಿಜ ಖಾತೆ ಸಚಿವ ಶ‍್ರೀ ಜೋಗೆನ್ ಮೋಹನ್ ಅವರು ಭಾಗವಹಿಸಿದ್ದರು.  

ಪ್ರಗತಿ ಪರಿಶೀಲನೆ ಮತ್ತು ನೀತಿ ನಿರೂಪಣೆ ಕುರಿತ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಎನ್.ಎಂ.ಇ.ಟಿ ಕಾರ್ಯದರ್ಶಿ ಅಲೋಕ್ ತಂಡನ್  ಮತ್ತು ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಉಪೇಂದ್ರ ಸಿ ಜೋಷಿ ಸದಸ್ಯರಿಗೆ ಮಾಹಿತಿ ನೀಡಿ,  ದೇಶದಲ್ಲಿ ಖನಿಜ ಪರಿಶೋಧನೆಗಾಗಿ ಇತ್ತೀಚೆಗೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅಗತ್ಯ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.        

1957 ರ ಗಣಿ ಮತ್ತು ಖನಿಜ [ ಅಭಿವೃದ್ಧಿ ಮತ್ತು ನಿಯಂತ್ರಣ] ಕಾಯ್ದೆಗೆ 2015 ರಲ್ಲಿ ತಿದ್ದುಪಡಿ ತರಲಾಗಿದ್ದು, ಖನಿಜ ರಿಯಾಯಿತಿಗಳನ್ನು ನೀಡಲು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯನ್ನು ಪರಿಚಯಿಸಿದೆ. ಇದರ ಮೂಲಕ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ [ಎನ್.ಎಂ.ಇ.ಟಿ] ಖನಿಜ ಪರಿಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಗಣಿ ಗುತ್ತಿಗೆ ಮತ್ತು ಪರವಾನಗಿ – ಗಣಿ ಗುತ್ತಿಗೆ ಹೊಂದಿರುವವರು ಕಾಯ್ದೆಯ ಎರಡನೇ ಪರಿಚ್ಛೇದಲ್ಲಿ ಶೇ 2 ರಷ್ಟು ರಾಯಧನ ಪಾವತಿ ಮಾಡಬೇಕಾಗಿದೆ ಮತ್ತು ಇದು ಎನ್.ಇ.ಎಂ.ಟಿಗೆ ಕೊಡುಗೆಯಾಗಿದೆ.     

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ [ಎನ್.ಎಂ.ಇ.ಟಿ] ಗಣಿಗಾರಿಕೆ ಚಟುವಟಿಕೆಯಲ್ಲಿ ದೇಶದ ಖನಿಜ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರೀಯ ಆರ್ಥಿಕತೆಯ ಬೆಳವಣಿಗೆಗೆ ಅನುಗುಣವಾಗಿ ಕೊಡುಗೆ ನೀಡುವ ಸಂಸ್ಥೆಯಾಗಿದೆ. ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಆರ್ಥಿಕತೆಗೆ ತನ್ನ ಬೌಗೋಳಿಕ ಸಂಪತ್ತಿನಿಂದ ಸರಿಯಾದ ಕೊಡುಗೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಆರಂಭಿಸಿದೆ. ದೇಶದ ಗಣಿ ಕೈಗಾರಿಕೆ ಹೂಡಿಕೆದಾರರ ಸ್ನೇಹಿಯಾಗಿ ಮತ್ತು ಸರ್ಕಾರದ ಮಧ್ಯಸ್ಥಿತಿಕೆಯಲ್ಲಿ ಪರಿವರ್ತನೆಯ ಸುಧಾರಣೆಗಳನ್ನು ಕಾಣುತ್ತಿದೆ.  

ಎನ್.ಎಂ.ಇ.ಟಿಯ ನಿಧಿಯನ್ನು ಖನಿಜ ಅಭಿವೃದ್ಧಿಯ ಅಧ್ಯಯನಕ್ಕಾಗಿ ಬಳಸಲಾಗುತ್ತಿದೆ. ಆಯಕಟ್ಟಿನ ಮತ್ತು ನಿರ್ಣಾಯಕ ಖನಿಜಗಳಿಗೆ ಒತ್ತು ನೀಡಿ ಪ್ರಾದೇಶಿಕ ಮತ್ತು ವಿವರವಾದ ಪರಿಶೋಧನೆ ಕೈಗೊಳ್ಳಲಾಗುತ್ತಿದೆ. ಸ್ಪಷ್ಟ ಭೂ ವೈಜ್ಞಾನಿಕ ಸಾಮರ್ಥ್ಯದ [ಒಜಿಪಿ] ಮತ್ತು ಭಾರತದ ಆಸುಪಾಸಿನ ಪ್ರದೇಶಗಳ  ವೈಮಾನಿಕ ಬೌಗೋಳಿಕ ಸಮೀಕ್ಷೆಗೆ ಆದ್ಯತೆ ನೀಡಲಾಗುತ್ತಿದೆ. ವೈಜ್ಞಾನಿಕ ತಾಂತ್ರಿಕ ಅಳವಡಿಕೆಯೊಂದಿಗೆ ಲೋಹಶಾಸ್ತ್ರದ  ಸುಸ್ಥಿರ ಗಣಿಗಾರಿಕೆಗೆ ಆದ್ಯತೆ ನೀಡಲಾಗುತ್ತಿದೆ. ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಖನಿಜ ರಿಯಾಯಿತಿಗಳನ್ನು ನೀಡಲು, ಪರಿಶೋಧಿಸಿದ ಪ್ರದೇಶಗಳನ್ನು ಪಡೆದುಕೊಳ್ಳಲು ಮತ್ತು ಪರಿಶೋಧನಾ ಚಟುವಟಿಕೆಗಳನ್ನು ಇದು ಸುಗಮಗೊಳಿಸುತ್ತದೆ.

***



(Release ID: 1741288) Visitor Counter : 201