ಪ್ರಧಾನ ಮಂತ್ರಿಯವರ ಕಛೇರಿ

ದೇಶದ ಶಿಕ್ಷಣ ಸಮುದಾಯ ಉದ್ದೇಶಿಸಿ ಜುಲೈ 29 ರಂದು ಪ್ರಧಾನಮಂತ್ರಿ ಭಾಷಣ


ರಾಷ್ಟ್ರೀಯ ಶಿಕ್ಷಣ ನೀತಿ - 2020 ರ ಮೊದಲ ವಾರ್ಷಿಕೋತ್ಸವದ ಗುರುತಾಗಿ ಹಲವು ಉಪಕ್ರಮಗಳನ್ನು ಪ್ರಾರಂಭಿಸಲಿರುವ ಪ್ರಧಾನಮಂತ್ರಿ

ಎನ್.ಇ.ಪಿ – 2020 ಗುರಿಗಳ ಸಾಕಾರಕ್ಕೆ ಈ ಉಪಕ್ರಮಗಳು ಮಹತ್ವದ ಹೆಜ್ಜೆ

Posted On: 28 JUL 2021 12:40PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ-2020 ಸುಧಾರಣೆಗಳ ಜಾರಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜುಲೈ 29 ರಂದು ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಂದರ್ಭದಲ್ಲಿ ಅನೇಕ ಉಪಕ್ರಮಗಳನ್ನು ಪ್ರಾರಂಭಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರಿಡಿಟ್ ಅನ್ನು ಪ್ರಾರಂಭಿಸಲಿದ್ದು, ಇದು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಬಹು ಹಂತದ ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳನ್ನು ಒದಗಿಸುತ್ತದೆ. ಮೊದಲ ವರ್ಷದ ಪ್ರಾದೇಶಿಕ ಭಾಷೆಯ ಎಂಜಿನಿಯರಿಂಗ್ ಕಾರ್ಯಕ್ರಮಗಳು ಮತ್ತು ಉನ್ನತ ಶಿಕ್ಷಣದಲ್ಲಿ  ಅಂತಾರಾಷ್ಟ್ರೀಯ ಕ್ಷೇತ್ರದ ಮಾರ್ಗಸೂಚಿಗಳನ್ನು ಸಹ ಪ್ರಕಟಿಸಲಿದ್ದಾರೆ.

ಗ್ರೇಡ್ – 1 ವಿದ್ಯಾರ್ಥಿಗಳಿಗಾಗಿ ಮೂರು ತಿಂಗಳ ನಾಟಕ ಆಧಾರಿತ ಶಾಲಾ ತಯಾರಿ ಮಾದರಿ ವಿದ್ಯಾಪ್ರವೇಶ್ ಉಪಕ್ರಮಗಳಿಗೂ ಚಾಲನೆ ನೀಡಲಿದ್ದಾರೆ. ಮಾಧ್ಯಮಿಕ ಹಂತದಲ್ಲಿ ಭಾರತೀಯ ಸಂಕೇತ ಭಾಷೆ, ಎನ್.ಸಿ..ಆರ್.ಟಿ. ವಿನ್ಯಾಸಗೊಳಿಸಿರುವ ಸಮಗ್ರ ತರಬೇತಿ ಕಾರ್ಯಕ್ರಮ, ನಿಶಾಂತ 2.0, ಸಫಲ್ [ ಸ್ಟ್ರಕ್ಚರ್ ಅಸೆಸ್ ಮೆಂಟ್ ಫಾರ್ ಅನಲೈಜಿಂಗ್ ಲರ್ನಿಂಗ್ ಲೆವೆಲ್ಸ್], ಸಿ.ಬಿ.ಎಸ್.ಸಿ ಶಾಲೆಗಳಲ್ಲಿ 3, 5 ಮತ್ತು 8 ನೇ ತರಗತಿಗಳಲ್ಲಿ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಚೌಕಟ್ಟು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗಾಗಿ  ಮೀಸಲಾದ ವೆಬ್ ಸೈಟ್ ಬಿಡುಗಡೆ ಸಹ ಉಪಕ್ರಮಗಳ ಪಟ್ಟಿಯಲ್ಲಿ  ಸೇರಿದೆ

ಕಾರ್ಯಕ್ರಮದಲ್ಲಿ ನ್ಯಾಷನಲ್ ಡಿಟಿಟಲ್ ಎಜುಕೇಷನ್ ಆರ್ಕಿಟೆಕ್ಚರ್ [ಎನ್.ಡಿ...ಆರ್] ಮತ್ತು ನ್ಯಾಷನಲ್ ಎಜುಕೇಷನ್ ಟೆಕ್ನಾಲಜಿ ಪೋರಂ [ಎನ್..ಟಿ.ಎಫ್] ಅನ್ನು ಸಹ ಉದ್ಘಾಟಿಸಲಾಗುತ್ತಿದೆ.

ಉಪಕ್ರಮಗಳು ಎನ್..ಪಿ -2020 ಗುರಿಗಳ ಸಾಕಾರಕ್ಕೆ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಮತ್ತು ಶಿಕ್ಷಣ ಕ್ಷೇತ್ರವನ್ನು ಹೆಚ್ಚು ಸ್ಪಂದನೀಯವಾಗಿಸುವ ಜತೆಗೆ ಕೈಗೆಟುವಂತೆ ಮಾಡುತ್ತದೆ

2020 ಎನ್..ಪಿ ಕಲಿಕೆಯ ಚೌಕಟ್ಟನ್ನು ಬದಲಿಸುವ ತತ್ವಶಾಸ್ತ್ರದ ಮಾರ್ಗದರ್ಶಿಯಾಗಿದ್ದು, ಆತ್ಮನಿರ್ಭರ್ ಭಾರತ್ ಗೆ ಬಲವಾದ ಅಡಿಪಾಯ ನಿರ್ಮಿಸಲಿದೆ.

ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು 1986 [ಎನ್..ಪಿ] 34 ವರ್ಷದ ಹಳೆಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಿಸಲಿದೆ. ಪ್ರವೇಶಿಸುವ, ಕೈಗೆಟುಕುವ, ನೀತಿ, ಗುಣಮಟ್ಟ ಮತ್ತು ಉತ್ತರದಾಯಿತ್ವ ಎಂಬ ಐದು ಆಧಾರ ಸ್ಥಂಭಗಳಿಂದ ಇದನ್ನು ಕಟ್ಟಲಾಗಿದ್ದು, 2030 ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಇದು ಒಳಗೊಂಡಿದೆ. ಉಜ್ವಲ ಜ್ಞಾನ ಸಮಾಜವನ್ನಾಗಿ ಭಾರತವನ್ನು ಬದಲಿಸುವ ಗುರಿ ಹೊಂದಲಾಗಿದೆಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವಂತೆ, ಬಹುಶಿಸ್ತಿನ ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದ್ದು, 21 ನೇ ಶತಮಾನದ ಅಗತ್ಯಗಳಿಗೆ ಇದು ಸೂಕ್ತವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯಗಳನ್ನು ಹೊರತರುವ ಉದ್ದೇಶವನ್ನು ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ  ಶಿಕ್ಷಣ ಸಚಿವರು ಸಹ ಉಪಸ್ಥಿತರಿರಲಿದ್ದಾರೆ

***


(Release ID: 1739899)