ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೀಕರಣ ತಾಜಾಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 41.69 ಕೋಟಿಗೂ ಅಧಿಕ ಲಸಿಕೆ ಪೂರೈಕೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ ಬಳಕೆಯಾಗದ 2.74 ಕೋಟಿಗೂ ಅಧಿಕ ಡೋಸ್ ಲಸಿಕೆ
Posted On:
17 JUL 2021 11:01AM by PIB Bengaluru
ದೇಶಾದ್ಯಂತ ಕೋವಿಡ್-19 ಲಸಿಕೀಕರಣದ ವ್ಯಾಪ್ತಿ ಮತ್ತು ವೇಗವನ್ನು ವರ್ಧಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್ -19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಮತ್ತು ಅವುಗಳಿಗೆ ಎಷ್ಟು ಲಸಿಕೆ ಲಭ್ಯವಾಗಲಿವೆ ಎಂಬ ಕುರಿತು ಮೊದಲೇ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡುವುದರಿಂದ ಅವು ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲು ಮತ್ತು ಲಸಿಕೆ ಪೂರೈಕೆ ಸರಣಿಯನ್ನು ಬಲವರ್ಧನೆಗೊಳಿಸುವ ಮೂಲಕ ದೇಶಾದ್ಯಂತ ಲಸಿಕೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕೀಕರಣ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಮೂಲಕ ಬೆಂಬಲ ನೀಡುತ್ತಿದೆ. ಸಾರ್ವತ್ರಿಕ ಕೋವಿಡ್-19 ಲಸಿಕೀಕರಣ ಅಭಿಯಾನದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರ ದೇಶದಲ್ಲಿನ ಲಸಿಕೆ ಉತ್ಪಾದಕರು ಉತ್ಪತ್ತಿ ಮಾಡಿದ ಶೇ. 75ರಷ್ಟುನ್ನು ಖರೀದಿಸಲಿದೆ ಮತ್ತು ಆವುಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.
ಲಸಿಕೆ ಡೋಸ್
|
(2021ರ ಜು. 17ರವರೆಗೆ)
|
ಪೂರೈಕೆ ಮಾಡಿರುವುದು
|
41,69,24,550
|
ಪೂರೈಕೆಗೆ ಸಿದ್ಧತೆ ನಡೆದಿರುವುದು
|
18,16,140
|
ಬಳಕೆ
|
38,94,87,442
|
ಲಭ್ಯವಿರುವ ಬಾಕಿ ಲಸಿಕೆ
|
2,74,37,108
|
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 41.69 ಕೋಟಿಗೂ (41,69,24,550) ಅಧಿಕ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ, ಎಲ್ಲ ಮೂಲಗಳಿಂದ ಸದ್ಯ 18,16,140 ಡೋಸ್ ಲಸಿಕೆ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ.
ಆ ಪೈಕಿ ಪೋಲಾಗಿರುವುದು ಸೇರಿ ಒಟ್ಟಾರೆ 38,94,87,442 ಡೋಸ್ (ಇಂದು ಬೆಳಿಗ್ಗೆ 8ಗಂಟೆವರೆಗೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ) ಬಳಕೆಯಾಗಿದೆ.
ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2.74 ಕೋಟಿಗೂ ಅಧಿಕ (2,74,37,108) ಡೋಸ್ ಬಾಕಿ ಇದೆ ಮತ್ತು ಆ ಲಸಿಕೆ ಬಳಕೆಗೆ ಲಭ್ಯವಿದೆ.
***
(Release ID: 1736433)
Visitor Counter : 219