ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ನೀಡಿಕೆಯ ಪರಿಷ್ಕೃತ ವರದಿ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 38.86 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಪೂರೈಕೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 1.54 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಲಭ್ಯ
प्रविष्टि तिथि:
12 JUL 2021 9:49AM by PIB Bengaluru
ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆಯ ಬೃಹತ್ ಆಂದೋಲನದ ವ್ಯಾಪ್ತಿ ಹೆಚ್ಚಿಸಲು ಮತ್ತು ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಲಸಿಕೆ ಅಭಿಯಾನದ ಸಾರ್ವತ್ರೀಕರಣ ಹೊಸ ಹಂತ 2021 ಜೂನ್ 21ರಿಂದ ದೇಶಾದ್ಯಂತ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಮತ್ತು ಮುಂಗಡ ಲಭ್ಯತೆಯ ಗೋಚರತೆ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ದೇಶಾದ್ಯಂತ ಲಸಿಕೆ ಆಂದೋಲನವನ್ನು ವ್ಯಾಪಕಗೊಳಿಸಿದೆ.
ದೇಶವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಪೂರೈಸುತ್ತಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತದಲ್ಲಿ ಕೇಂದ್ರ ಸರ್ಕಾರವು ದೇಶೀಯ ಔಷಧ ತಯಾರಿಕಾ ಕಂಪನಿಗಳಿಂದ 75% ಲಸಿಕೆಯನ್ನು ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಎಲ್ಲಾ ಖರೀದಿ ಮೂಲಗಳಿಂದ 38.86 ಕೋಟಿಗಿಂತ ಹೆಚ್ಚಿನ ಅಂದರೆ 38,86,09,790 ಡೋಸ್ ಲಸಿಕೆ ವಿತರಿಸಲಾಗಿದೆ. ಜತೆಗೆ, 63,84,230 ಡೋಸ್ ಲಸಿಕೆ ಅತಿ ಶೀಘ್ರವೇ ಲಭ್ಯವಾಗಲಿದೆ.
38.86 ಕೋಟಿ ಡೋಸ್ ಲಸಿಕೆ ಪೈಕಿ ಸವಕಳಿ ಸೇರಿದಂತೆ ಒಟ್ಟು ಬಳಕೆಯಾಗಿರುವ ಲಸಿಕೆಯ ಪ್ರಮಾಣ 37,31,88,834 ಡೋಸ್. ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ದತ್ತಾಂಶದಿಂದ ಇದು ತಿಳಿದುಬಂದಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 1.54 ಕೋಟಿಗಿಂತ ಹೆಚ್ಚಿನ ಅಂದರೆ 1,54,20,956 ಡೋಸ್ ಲಸಿಕೆ ಬಳಕೆಯಾಗದೆ ಉಳಿದಿದ್ದು, ಬಳಕೆಗೆ ಅದು ಲಭ್ಯವಿದೆ.
***
(रिलीज़ आईडी: 1734723)
आगंतुक पटल : 311