ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇತ್ತೀಚಿನ ವರದಿ

Posted On: 11 JUL 2021 9:21AM by PIB Bengaluru

37.60 ಕೋಟಿ ಲಸಿಕಾ ಡೋಸ್ ಗಳನ್ನು ಈವರೆಗೆ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,506 ಹೊಸ ಪ್ರಕರಣ ದಾಖಲಾಗಿದೆ.

ಭಾರತದ ಪ್ರಸಕ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 4,54,118 ಆಗಿದೆ.

ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಶೇ.1.47.

ಈವರೆಗೆ ದೇಶದಾದ್ಯಂತ  ಒಟ್ಟು ಚೇತರಿಸಿಕೊಂಡವರು 2,99,75,064.

41,526 ಸೋಂಕಿತರು ಕಳೆದ 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಚೇತರಿಕೆ ದರ ಶೇ. 97.20 ಹೆಚ್ಚಳವಾಗಿದೆ.

ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ, ಪ್ರಸ್ತುತ ಅದು ಶೇ. 2.32 ಆಗಿದೆ.

ದೈನಿಕ ಪಾಸಿಟಿವಿಟಿ ದರ ಶೇ. 2.25ಆಗಿದ್ದು, ನತತ 20ನೇ ದಿನವೂ ಶೇ.3ಕ್ಕಿಂತ ಕಡಿಮೆ ಇದೆ. ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದ್ದು43.08 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ.

***



(Release ID: 1734679) Visitor Counter : 147