ಹಣಕಾಸು ಸಚಿವಾಲಯ
ಶ್ರೀ ಪಂಕಜ್ ಚೌಧರಿ ಅವರು ಹಣಕಾಸು ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು
Posted On:
09 JUL 2021 2:24PM by PIB Bengaluru
ಶ್ರೀ ಪಂಕಜ್ ಚೌಧರಿ ಅವರು ಇಂದು ಹಣಕಾಸು ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
ಶ್ರೀ ಚೌಧರಿ ಯವರು 17 ನೇ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಿಂದ ಸಂಸತ್ ಸದಸ್ಯರಾಗಿದ್ದಾರೆ . ಪ್ರಸ್ತುತ ಅವರು ಸಂಸದರಾಗಿ ಆರನೇ ಬಾರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿರುವ ಶ್ರೀ ಚೌಧರಿ ಅವರು ಈ ಹಿಂದೆ ಗೋರಖ್ಪುರದ ಉಪಮೇಯರ್ ಹುದ್ದೆಯನ್ನೂ ಅಲಂಕರಿಸಿದ್ದರು.
56 ವರ್ಷದ ಶ್ರೀ ಚೌಧರಿಯವರು ಗೋರಖ್ಪುರ ವಿಶ್ವವಿದ್ಯಾಲಯದ ಪದವೀಧರರು.
ನಿನ್ನೆ, ಡಾ. ಭಗವತ್ ಕಿಶನ್ ರಾವ್ ಕರಾದ್ ಅವರು ಹಣಕಾಸು ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇರಿದರು.
***
(Release ID: 1734231)
Visitor Counter : 267