ಸಂಪುಟ

ಸಿಬ್ಬಂದಿ ಆಡಳಿತ  ಮತ್ತು ಆಡಳಿತ ಸುಧಾರಣೆಗಳ ನವೀಕರಣ ಕುರಿತಂತೆ ಭಾರತ ಮತ್ತು ಗಾಂಬಿಯಾ ಗಣರಾಜ್ಯದ ನಡುವೆ ಸಹಿ ಹಾಕಲಿರುವ ಒಪ್ಪಂದಕ್ಕೆ ಸಂಪುಟ ಅನುಮೋದನೆ 

Posted On: 30 JUN 2021 4:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಮತ್ತು ಗಾಂಬಿಯಾ ಗಣರಾಜ್ಯದ ಅಧ್ಯಕ್ಷೀಯ ಕಚೇರಿಯ ಸಾರ್ವಜನಿಕ ಸೇವಾ ಆಯೋಗ ಸಿಬ್ಬಂದಿ ಆಡಳಿತ ಮತ್ತು ಆಡಳಿತ ಸುಧಾರಣೆಗಳ ನವೀಕರಣ ಕುರಿತು ಸಹಿ ಹಾಕಲಿರುವ ಒಪ್ಪಂದಕ್ಕೆ ಅನುಮೋದನೆ ನೀಡಿದೆ

ಪರಿಣಾಮ:

ಒಪ್ಪಂದ ಎರಡೂ ದೇಶಗಳ ಸಿಬ್ಬಂದಿ ಆಡಳಿತವನ್ನು ಅರ್ಥ ಮಾಡಿಕೊಳ್ಳಲು ಮತ್ತು ಕೆಲವು ಉತ್ತಮ ಪದ್ದತಿಗಳನ್ನು ಮತ್ತು ಪ್ರಕ್ರಿಯೆಗಳನ್ನು ಪುನರಾವರ್ತಿಸುವ, ಅಳವಡಿಸಿಕೊಳ್ಳುವ ಮತ್ತು ಹೊಸತನ ಮೂಲಕ ಆಡಳಿತ ವ್ಯವಸ್ಥೆ ಸುಧಾರಣೆಗೆ ಸಹಕಾರಿಯಾಗಲಿದೆ

ಆರ್ಥಿಕ ಪರಿಣಾಮಗಳು:

ಒಪ್ಪಂದದ ಅನುಷ್ಠಾನಕ್ಕೆ ಆಗುವ ವೆಚ್ಚಕ್ಕೆ ಎರಡೂ ರಾಷ್ಟ್ರಗಳು ಹೊಣೆಗಾರಿಕೆ ವಹಿಸಿಕೊಳ್ಳಬೇಕಾಗುತ್ತದೆ. ವಾಸ್ತವ ವೆಚ್ಚದ ಮೊತ್ತ ಒಪ್ಪಂದದನ್ವಯ ಕೈಗೊಳ್ಳಲಿರುವ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ.  

ವಿವರಗಳು:

ಒಪ್ಪಂದದಡಿ ಸಹಕಾರ ವಲಯಗಳು ಕೆಳಗಿನಂತಿವೆ, ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ:

) ಸರ್ಕಾರದಲ್ಲಿ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆ ಸುಧಾರಣೆ

ಬಿ) ವಂತಿಗೆ ಪಿಂಚಣಿ ಯೋಜನೆ ಅನುಷ್ಠಾನ

ಸಿ) ಸರ್ಕಾರದಲ್ಲಿ -ನೇಮಕಾತಿ

ಒಪ್ಪಂದದ ಮುಖ್ಯ ಉದ್ದೇಶವೆಂದರೆ ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಹಕಾರ ಉತ್ತೇಜನ ಮತ್ತು ಬಲವರ್ಧನೆಗೊಳಿಸುವುದಾಗಿದ್ದು, ಇದರಿಂದ ಭಾರತದ ಸರ್ಕಾರಿ ಸಂಸ್ಥೆಗಳು ಮತ್ತು ಗಾಂಬಿಯಾ ಗಣರಾಜ್ಯದ ಸಂಸ್ಥೆಗಳ ನಡುವೆ ಪೂರಕ ಮಾತುಕತೆಗೆ ಸಹಾಯಕವಾಗಲಿದೆ. ಅಲ್ಲದೆ, ಸರ್ಕಾರದಲ್ಲಿ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆ ಸುಧಾರಿಸುವುದು, ವಂತಿಗೆ ಪಿಂಚಣಿ ಯೋಜನೆ ಅನುಷ್ಠಾನ ಮತ್ತು ಸರ್ಕಾರದಲ್ಲಿ -ನೇಮಕಾತಿ ವಲಯಗಳಲ್ಲಿ ಭಾರತದೊಂದಿಗೆ ಹೆಚ್ಚಿನ ಸಹಕಾರ ಹೊಂದಲು ಗಾಂಬಿಯಾ ಉತ್ಸುಕವಾಗಿದೆ.

ಗಾಂಬಿಯಾ ಗಣರಾಜ್ಯ ಉಭಯ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಕಾನೂನು ಚೌಕಟ್ಟನ್ನು ಒದಗಿಸಲಿದ್ದು, ಸಾರ್ವಜನಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿದಂತೆ ಹಾಲಿ ಇರುವ ವ್ಯವಸ್ಥೆ ಸುಧಾರಿಸಲಿದೆ. ಸಿಬ್ಬಂದಿ ಆಡಳಿತ ಮತ್ತು ಆಡಳಿತ ಸುಧಾರಣೆಗಳ ಕ್ಷೇತ್ರದಲ್ಲಿ ಆಡಳಿತಾತ್ಮಕ ಅನುಭವಗಳನ್ನು ಕಲಿಯುವುದು, ಹಂಚಿಕೊಳ್ಳುವುದು ಮತ್ತು  ವಿನಿಮಯ  ಮಾಡಿಕೊಳ್ಳುವ ಮೂಲಕ ಅಸ್ಥಿತ್ವದಲ್ಲಿರುವ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು, ಆಡಳಿತ ಸುಧಾರಣೆಗಳು ಮತ್ತು  ಹೆಚ್ಚಿನ ಜವಾಬ್ದಾರಿ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಉಂಟು ಮಾಡಲಿವೆ.

ಹಿನ್ನೆಲೆ:

ಭಾರತ ಸರ್ಕಾರ ದೇಶಾದ್ಯಂತ ಸರ್ಕಾರಿ ಸೇವೆಗಳ ವಿತರಣೆಯನ್ನು ಗರಿಷ್ಠ ಬದಲಾವಣೆಗಳ ಗುರಿಯನ್ನು ಹೊಂದಿದೆ ಮತ್ತು ಸಿಬ್ಬಂದಿ ಆಡಳಿತ ಮತ್ತು ಆಡಳಿತ ಸುಧಾರಣೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡುವ ಪ್ರಯತ್ನವನ್ನು ನಡೆಸಿದೆ. ಇದುಕನಿಷ್ಠ ಸರ್ಕಾರದೊಂದಿಗೆ ಗರಿಷ್ಠ ಆಡಳಿತಗುರಿ ಸಾಧನೆಗೆ ಅತ್ಯಂತ ಪ್ರಸ್ತುತವಾಗಿದೆ.

***(Release ID: 1731567) Visitor Counter : 533