ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಲಸಿಕೆ ತಾಜಾ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 31.83 ಕೋಟಿ ಗೂ ಹೆಚ್ಚು ಕೋವಿಡ್ ಲಸಿಕೆ ಹಾಕಲಾಗಿದೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 78 ಲಕ್ಷ ಡೋಸ್ ಗಳಿಗೂ ಹೆಚ್ಚು ಲಸಿಕೆ ಲಭ್ಯ

Posted On: 29 JUN 2021 10:50AM by PIB Bengaluru

ದೇಶಾದ್ಯಂತ ಕೋವಿಡ್ -19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಅಭಿಯಾನವನ್ನು ವೇಗವರ್ಧನೆಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್ – 19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ರ ಜೂನ್ 21 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಾಗಿಯೇ ಲಸಿಕೆ ಲಭ್ಯತೆಯು ಗೋಚರವಾಗುತ್ತಿದ್ದು, ಹೆಚ್ಚು ಲಸಿಕೆ ದೊರೆಯುತ್ತಿರುವುದರಿಂದ ಲಸಿಕೆ ಅಭಿಯಾನ ವೇಗ ಪಡೆದುಕೊಂಡಿದೆ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಉತ್ಪಾದಕರು ಉತ್ಪಾದಿಸುವ ಲಸಿಕೆಯ ಪೈಕಿ ಶೇ 75 ರಷ್ಟು ಡೋಸ್ ಗಳನ್ನು ಕೇಂದ್ರ ಸರ್ಕಾರ ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ [ಉಚಿತವಾಗಿ] ಪೂರೈಸುತ್ತಿದೆ.

31.83 ಕೋಟಿ ಗೂ ಹೆಚ್ಚು (31,83,36,450) ಲಸಿಕೆಯನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈ ವರೆಗೆ [ಉಚಿತ ಮಾರ್ಗದ ಮೂಲಕ] ಮತ್ತು ನೇರ ಖರೀದಿ ವಲಯದ ಮೂಲಕ ವಿತರಿಸಿದೆ.

ಈ ಪೈಕಿ ವ್ಯರ್ಥವಾದ್ದದ್ದೂ ಸೇರಿ ಒಟ್ಟು 31,04,91,565 ಡೋಸ್ ಲಸಿಕೆ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆವರೆಗೆ ಲಭ್ಯವಾದ ದತ್ತಾಂಶದ ಪ್ರಕಾರ]

78 ಲಕ್ಷಕ್ಕೂ ಹೆಚ್ಚು (78,44,885) ಡೋಸ್ ಕೋವಿಡ್ – 19 ಲಸಿಕೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದೇ ಬಾಕಿ ಉಳಿದಿದೆ.

ಹೆಚ್ಚುವರಿಯಾಗಿ 15,18,560 ಡೋಸ್ ಲಸಿಕೆ ಪೂರೈಕೆ ಹಂತದಲ್ಲಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಇವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ. 

***



(Release ID: 1731382) Visitor Counter : 166