ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ತಾಜಾ ಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 29.35 ಕೋಟಿ ಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಪೂರೈಕೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 2.98 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ಲಭ್ಯ
Posted On:
21 JUN 2021 10:56AM by PIB Bengaluru
ರಾಷ್ಟ್ರೀಯ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆ ಖರೀದಿಸುವ ಸೌಲಭ್ಯವನ್ನು ಸಹ ಕಲ್ಪಿಸಿದೆ.
ಕೋವಿಡ್ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗೆ ಪರೀಕ್ಷೆ, ಜಾಡುಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಜತೆಗೆ ಲಸಿಕೆ ಕೂಡ ಕೋವಿಡ್ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಆಧಾರ ಸ್ಥಂಭವಾಗಿದೆ.
3 ನೇ ಹಂತದ ಉದಾರೀಕೃತ ಮತ್ತು ತ್ವರಿತ ಕೋವಿಡ್-19 ಲಸಿಕಾ ಅಭಿಯಾನದ ಕಾರ್ಯತಂತ್ರ 2021 ರ ಮೇ 1 ರಿಂದ ಆರಂಭಗೊಂಡಿದೆ.
ಪ್ರತಿ ತಿಂಗಳು ಯಾವುದೇ ಉತ್ಪಾದಕರು ಉತ್ಪಾದಿಸುವ ಶೇ 50 ರಷ್ಟು ಡೋಸ್ ಗಳನ್ನು ಕೇಂದ್ರೀಯ ಔಷಧ ಪ್ರಯೋಗಾಲಯ [ಸಿಡಿಎಲ್] ಅನುಮೋದಿಸುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ಖರೀದಿಸುತ್ತಿದೆ. ಈ ಹಿಂದಿನಂತೆ ಈ ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 39.35 ಕೋಟಿ ಗೂ ಹೆಚ್ಚು (29,35,04,820) ಡೋಸ್ ಗಳನ್ನು ನೇರ ಖರೀದಿ ಮತ್ತು ಉಚಿತ ಮಾರ್ಗದ ಮೂಲಕ ಒದಗಿಸಿದೆ.
ವ್ಯರ್ಥವಾದದ್ದೂ ಸೇರಿ ಇಲ್ಲಿಯ ತನಕ 26,36,26,884 ಡೋಸ್ ಗಳೂ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆಗೆ ದೊರೆತ ಮಾಹಿತಿಯಂತೆ]
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 2.98 ಕೋಟಿ (2,98,77,936) ಗೂ ಹೆಚ್ಚು ಲಸಿಕಾ ಡೋಸ್ ಗಳು ಲಭ್ಯವಿದೆ.
ಹೆಚ್ಚುವರಿಯಾಗಿ 2.310 ಲಸಿಕಾ ಡೋಸ್ ಗಳು ಪೂರೈಕೆ ಹಂತದಲ್ಲಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇವುಗಳನ್ನು ಮುಂದಿನ ಮೂರು ದಿನಗಳಲ್ಲಿ ಪಡೆಯಲಿವೆ.
***
(Release ID: 1728977)
Visitor Counter : 149
Read this release in:
Malayalam
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu