ಭೂವಿಜ್ಞಾನ ಸಚಿವಾಲಯ

ದಿಯು, ಸೂರತ್, ನಂದುರ್ಬಾರ್, ಭೂಪಾಲ್, ನೌಗಾಂಗ್, ಹಮೀರ್ ಪುರ್, ಬಾರಾಬಂಕಿ, ಬರೈಲಿ, ಸಹರಾನ್ಪುರ್, ಅಂಬಾಲ ಮತ್ತು ಅಮೃತ್ ಸರದ ಮೂಲಕ ಮುಂಗಾರಿನ ಉತ್ತರ ಮಿತಿ (ಎನ್ ಎಲ್ ಎಂ) ಹಾದು ಹೋಗುವುದು ಮುಂದುವರಿಕೆ

Posted On: 17 JUN 2021 4:28PM by PIB Bengaluru

ಭಾರತೀಯ ಹವಾಮಾನ ಇಲಾಖೆ(ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ:

(17 ಜೂನ್ 2021 ಗುರುವಾರ, ಮಧ್ಯಾಹ್ನ; ಪ್ರಕಟಣಾ ಸಮಯ: 1345 ಗಂಟೆ ಭಾರತೀಯ ಕಾಲಮಾನ)

ಅಖಿಲ ಭಾರತ ಹವಾಮಾನ ವರದಿ ಮತ್ತು ಮುನ್ಸೂಚನಾ ಬುಲೆಟಿನ್

  • ಮುಂಗಾರಿನ ಉತ್ತರ ಮಿತಿ (ಎನ್ಎಲ್ಎಂ) ದಕ್ಷಿಣಕ್ಕೆ 20.5° ರೇಖಾಂಶದಿಂದ ಮತ್ತು ಪೂರ್ವಕ್ಕೆ 60° ಮೂಲಕ ದಿಯು, ಸೂರತ್, ನಂದುರ್ಬಾರ್, ಭೂಪಾಲ್, ನೌಗಾಂಗ್, ಹಮೀರ್ ಪುರ್, ಬಾರಾಬಂಕಿ, ಬರೈಲಿ, ಸಹರಾನ್ಪುರ್, ಅಂಬಾಲ ಮತ್ತು ಅಮೃತ್ ಸರದ ಮೂಲಕ ಹಾದುಹೋಗುವುದು ಮುಂದುವರಿಯಲಿದೆ.
  • ಮುಂಗಾರು ಮಳೆ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಇತರ ಪ್ರದೇಶಗಳತ್ತ ಮುಂದುವರಿಯಲು ಪೂರಕ ವಾತಾವರಣವಿಲ್ಲ, ಹವಾಮಾನ ಸ್ಥಿತಿಗತಿಯಲ್ಲಿ ಭಾರೀ ಬದಲಾವಣೆಗಳಿವೆ. ಆದರೆ ಗುಜರಾತ್ ರಾಜ್ಯ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಮುಂದಿನ ಎರಡರಿಂದ ಮೂರು ದಿನಗಳಲ್ಲಿ ನಿಧಾನ ಗತಿಯಲ್ಲಿ ಮುಂಗಾರು ವ್ಯಾಪಿಸಲಿದೆ
  • ಪಶ್ಚಿಮ ಬಂಗಾಳದ ಗ್ಯಾಂಗ್ ಟಿಕ್ ಸುತ್ತಮುತ್ತ ಚಂಡಮಾರುತವಿದ್ದು, ಅದರ ಪ್ರಭಾವದಿಂದಾಗಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಹಾಗೂ ಉತ್ತರ ಒಡಿಶಾದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
  • ಪೂರ್ವ ಉತ್ತರ ಪ್ರದೇಶ ಮತ್ತು ಅದರ ಸುತ್ತಮುತ್ತ ಚಂಡಮಾರುತ ಚಲನೆಯಲ್ಲಿದೆ. ಅದರ ಪ್ರಭಾವದಿಂದಾಗಿ ಪೂರ್ವ ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಅತ್ಯಂತ ವ್ಯಾಪಕವಾಗಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ
  • ಕಡಲಾಚೆ ಗಾಳಿ ದಕ್ಷಿಣ ಕರ್ನಾಟಕದಿಂದ ಉತ್ತರ ಕೇರಳ ಭಾಗದತ್ತ ಜೋರಾಗಿ ಬೀಸುತ್ತಿದೆ. ಅದರ ಪರಿಣಾಮವಾಗಿ ಕೊಂಕಣ ಮತ್ತು ಗೋವಾ ಹಾಗೂ ಮಧ್ಯ ಮಹಾರಾಷ್ಟ್ರದ ಒಳನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ. ಅಂತೆಯೇ ಮುಂದಿನ ಎರಡು ದಿನಗಳ ಕಾಲ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಮಳೆಯಾಗಲಿದೆ. ಕೊಂಕಣ ಮತ್ತು ಗೋವಾ ಹಾಗೂ ಮಧ್ಯ ಮಹಾರಾಷ್ಟ್ರದ ಒಳನಾಡು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ.  
  • ಪಶ್ಚಿಮದ ವ್ಯತ್ಯಯಗಳಿಂದಾಗಿ ಗಾಳಿ ಉತ್ತರ ಜಮ್ಮು ಮತ್ತು ಕಾಶ್ಮೀರದಿಂದ ಅರಬ್ಬೀ ಸಮುದ್ರದ ಈಶಾನ್ಯದತ್ತ ಸಾಗುತ್ತಿದೆ. ಅದರ ಪರಿಣಾಮ ಉತ್ತರಾಖಂಡದ ಒಳನಾಡು ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣದಿಂದ  ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.
  • ಜೂನ್ 17 ಮತ್ತು 18ರಂದು ಉತ್ತರಾಖಂಡ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್ ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಸಾಧಾರಣದಿಂದ ಕೂಡಿದ ಭಾರೀ ಗುಡುಗು ಸಹಿತ  ಮಿಂಚು ಸೇರಿ ಅಗ್ಗಾಗ್ಗೆ ಮಳೆ ಬರುವ ಸಾಧ್ಯತೆ ಇದೆ. ಇದರಿಂದಾಗಿ ಹೊರ ಪ್ರದೇಶದಲ್ಲಿರುವ ಜನರು ಮತ್ತು ಪ್ರಾಣಿಗಳು ಸಾವಿಗೀಡಾಗುವ ಮತ್ತು ಗಾಯಗೊಳ್ಳುವ ಸಾಧ್ಯತೆ ಇದೆ.

(ಹೆಚ್ಚಿನ ವಿವರ ಮತ್ತು ಗ್ರಾಫಿಕ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ)

Kindly download MAUSAM APP for location specific forecast & warning, MEGHDOOT APP for Agromet advisory and DAMINI APP for Lightning Warning & visit state MC/RMC websites for district wise warning.

***



(Release ID: 1728015) Visitor Counter : 154