ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಇಂದಿನಿಂದ 256 ಜಿಲ್ಲೆಗಳಲ್ಲಿ ಚಿನ್ನದ ಮೇಲೆ ಹಾಲ್ ಮಾರ್ಕ್ ಕಡ್ಡಾಯ


ಹಾಲ್ ಮಾರ್ಕ್ ನಲ್ಲಿ ಬಿಐಎಸ್ ಮಾರ್ಕ್ ಹಾಗೂ ಶುದ್ಧತೆಯೊಂದಿಗೆ ಆರು ಅಂಕಿಗಳ ಕೋಡ್ ಒಳಗೊಂಡಿದೆ ಮತ್ತು ಗರಿಷ್ಠ ಪಾರದರ್ಶಕತೆಗಾಗಿ ಆಭರಣ ಮಳಿಗೆಗಳವರೆಗೆ ವಿತರಣಾ ವೋಚರ್ ವಿತರಣೆ: ಡಿಜಿ, ಬಿಐಎಸ್

ಆಭರಣ ಮಳಿಗೆಗಳು ಗ್ರಾಹಕರಿಂದ ಹಾಲ್ ಮಾರ್ಕ್ ಇಲ್ಲದ ಹಳೆಯ ಚಿನ್ನದ ಖರೀದಿ ಮತ್ತೆ ಮುಂದುವರಿಸಬಹುದು ಮತ್ತು ಚಿನ್ನದ ಆಭರಣಗಳ ಉತ್ಪಾದಕರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಸಾಕಷ್ಟು ಸಮಯ ನೀಡುವ ಸಲುವಾಗಿ ಆಗಸ್ಟ್ ಅಂತ್ಯದವರೆಗೆ ಯಾವುದೇ ದಂಡ ವಿಧಿಸುವುದಿಲ್ಲ: ಡಿಜಿ, ಬಿಐಎಸ್

ದೇಶಾದ್ಯಂತ ಪ್ರಸ್ತುತ 943 ಲೋಹ ಪರೀಕ್ಷೆ ಮತ್ತು ಹಾಲ್ ಮಾರ್ಕ್ ಕೇಂದ್ರಗಳ ಕಾರ್ಯ ನಿರ್ವಹಣೆ

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಚಿನ್ನದ ಮೇಲೆ ಕಡ್ಡಾಯ ಹಾಲ್ ಮಾರ್ಕ್ ಕುರಿತು ವಿವರ ನೀಡಿದ ಭಾರತೀಯ ಮಾನಕ ಬ್ಯೂರೋದ ಮಹಾನಿರ್ದೇಶಕರು

Posted On: 16 JUN 2021 7:36PM by PIB Bengaluru

ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ ಅವರು ಇಂದು ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 2021ರ ಜೂನ್ 16 ರಿಂದ(ಇಂದಿನಿಂದ) ಜಾರಿಗೆ ಬಂದಿರುವ ಚಿನ್ನದ ಆಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯ ಕಾರ್ಯಯೋಜನೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದರು.  

ಕಡ್ಡಾಯ ಹಾಲ್ ಮಾರ್ಕಿಂಗ್ ನ ನಾನಾ ಆಯಾಮಗಳ ಕುರಿತು ವಿವರಿಸಿದ ಬಿಐಎಸ್ ನ ಮಹಾನಿರ್ದೇಶಕರು, ದೇಶದ 256 ಜಿಲ್ಲೆಗಳಲ್ಲಿ ಮೊದಲು ಪ್ರಾಯೋಗಿಕವಾಗಿ ಹಾಲ್ ಮಾರ್ಕಿಂಗ್ ಕಡ್ಡಾಯ ಆರಂಭವಾಯಿತು, ಅಲ್ಲಿ ಲೋಹದ ಪರೀಕ್ಷೆ ನಡೆಸುವುದು ಮತ್ತು ಹಾಲ್ ಮಾರ್ಕಿಂಗ್ ಕೇಂದ್ರಗಳಿದ್ದವು. ವಾರ್ಷಿಕ 40 ಲಕ್ಷ ರೂ.ವರೆಗಿನ ವಹಿವಾಟು ನಡೆಸುವ ಆಭರಣ ಮಳಿಗೆಗಳನ್ನು ಕಡ್ಡಾಯ ಹಾಲ್ ಮಾರ್ಕ್ ನಿಂದ ವಿನಾಯಿತಿ ನೀಡಲಾಗಿದೆ. ಜೊತೆಗೆ ಭಾರತ ಸರ್ಕಾರದ ವ್ಯಾಪಾರ ನೀತಿಯಂತೆ ಆಮದು ಮತ್ತು ಮರು ರಫ್ತು ಮಾಡುವ ಆಭರಣಗಳ, ಅಂತಾರಾಷ್ಟ್ರೀಯ ಪ್ರದರ್ಶನಗಳಿಗೆ ಕಳುಹಿಸುವ ಆಭರಣಗಳು, ಸರ್ಕಾರ ಅನುಮೋದಿತ ಬಿ2ಬಿ ದೇಶೀಯ ಪ್ರದರ್ಶನಗಳಿಗೆ ನೀಡುವ ಆಭರಣಗಳಿಗೂ ಸಹ ಕಡ್ಡಾಯ ಹಾಲ್ ಮಾರ್ಕಿಂಗ್ ನಿಂದ ವಿನಾಯಿತಿ ನೀಡಲಾಗುವುದು. ಕೈಗಡಿಯಾರ, ಫೌಂಟೈನ್ ಪೆನ್ ಮತ್ತು ವಿಶೇಷ ವಿಧದ ಆಭರಣ ಅಂದರೆ ಕುಂದನ್, ಪೋಲ್ಕಿ ಮತ್ತು ಜಾದೌಗಳನ್ನೂ ಸಹ ಹಾಲ್ ಮಾರ್ಕಿಂಗ್ ನಿಂದ ವಿನಾಯಿತಿ ನೀಡಲಾಗುವುದು. 

ಆಭರಣ ಮಳಿಗೆಗಳ ನೋಂದಣಿ ಒಮ್ಮೆ ಮಾತ್ರ ಮಾಡಿಕೊಳ್ಳಲಾಗುವುದು ಮತ್ತು ನೋಂದಣಿಗೆ ಆಭರಣ ಮಳಿಗೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಚಿನ್ನಾಭರಣಗಳ ಉತ್ಪಾದಕರು, ಆಮದುಗಾರರು, ಸಗಟು ಮಾರಾಟಗಾರರು, ವಿತರಕರು ಅಥವಾ ಚಿಲ್ಲರೆ ಮಾರಾಟಗಾರರು ಸೇರಿದಂತೆ ಅಮೂಲ್ಯ ಲೋಹದ ಉತ್ಪನ್ನಗಳ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲರೂ ಕಡ್ಡಾಯವಾಗಿ ಬಿಐಎಸ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಆದರೆ ಆಭರಣಕಾರರಿಗೆ ಕೆಲಸದ ಆಧಾರದ ಮೇಲೆ ಆಭರಣಗಳನ್ನು ತಯಾರಿಸಿ ಕೊಡುವವರು ಮತ್ತು ಮಾರಾಟ ಸರಣಿಯಲ್ಲಿ ನೇರವಾಗಿ ಭಾಗಿಯಾಗದವರನ್ನು ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. 

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಿಐಎಸ್ ನ ಮಹಾನಿರ್ದೇಶಕರು, ಹಾಲ್ ಮಾರ್ಕ್ ಅನ್ನು ಕಡ್ಡಾಯಗೊಳಿಸಿರುವುದು ಮೊದಲಿಗೆ ಹಾಲ್ ಮಾರ್ಕ್ ಉತ್ಪಾದಕರು, ಸಗಟು ಮಾರಾಟಗಾರರು, ವಿತರಕರು ಅಥವಾ ಚಿಲ್ಲರೆ ಮಾರಾಟಗಾರರಿಗೆ ಕಡ್ಡಾಯಗೊಳಿಸಲಾಗಿದೆ. ಹಾಲ್ ಮಾರ್ಕ್ ಇರುವ ಆಭರಣಗಳ ಎರಡು ಗ್ರಾಂಗಳ ವರೆಗೆ ಹೆಚ್ಚಿಸಿ ಹೊಸದಾಗಿ ಮಾಡಿಸುವುದು ಅಥವಾ ಹಳೆಯ ಚಿನ್ನವನ್ನು ಮುರಿಸಿ ಹೊಸದನ್ನು ಮಾಡಿಸುವುದು ಅಥವಾ ಅದರ ಪ್ರಮಾಣ ತಗ್ಗಿಸುವುದಕ್ಕೆ ಸಂಬಂಧಿಸಿದಂತೆ ಶುದ್ಧತೆಯನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆ ಆಭರಣ ಅಂಗಡಿಗಳದ್ದಾಗಿರಲಿದೆ.

ಚಿನ್ನದ ಶುದ್ಧತೆಯನ್ನು ಹೆಚ್ಚಿಸಿ ಹಾಲ್ ಮಾರ್ಕಿಂಗ್ ಮಾಡಲು ಆಭರಣ ಮಳಿಗೆಗಳಿಂದ ಹೆಚ್ಚಿನ ಬೇಡಿಕೆ ಮೊದಲಿನಿಂದಲೂ ಇತ್ತು ಎಂದು ಅವರು ಹೇಳಿದರು. ಅದನ್ನು ಪರಿಗಣಿಸಿ ಈ ಹೆಚ್ಚುವರಿ ಕ್ಯಾರೆಟ್ ಗಳ ಚಿನ್ನ ಅಂದರೆ 20, 23 ಮತ್ತು 24 ಇವುಗಳಿಗೆ ಹಾಲ್ ಮಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ಮನೆಗಳಲ್ಲಿ ಈಗಾಗಲೇ ಇರುವ  ಹಾಲ್ ಮಾರ್ಕ್ ಇಲ್ಲದ ಹಳೆಯ ಆಭರಣಗಳನ್ನು ಜ್ಯುವೆಲರಿ ಮಳಿಗೆಗಳಿಗೆ ಮಾರಾಟ ಮಾಡಬಹುದು ಎಂದು ಅವರು ಸ್ಪಷ್ಟಪಡಿಸಿದರು. ಆಭರಣಗಳ ಅಂಗಡಿ ಮಾಲಿಕರು ಗ್ರಾಹಕರಿಂದ ಹಾಲ್ ಮಾರ್ಕ್ ಇಲ್ಲದ ಹಳೆಯ ಚಿನ್ನಾಭರಣಗಳನ್ನು  ಮತ್ತೆ ಖರೀದಿಸುವುದನ್ನು ಮುಂದುವರಿಸಬಹುದು ಮತ್ತು ಚಿನ್ನಾಭರಣಗಳ ಉತ್ಪಾದಕರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಸಾಕಷ್ಟು ಸಮಯಾವಕಾಶವನ್ನು ನೀಡುವ ಉದ್ದೇಶದಿಂದ ಆಗಸ್ಟ್ ಅಂತ್ಯದವರೆಗೆ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಶ್ರೀ ತಿವಾರಿ ಹೇಳಿದರು. 

 ಲೋಪ ಪರೀಕ್ಷೆ ಮತ್ತು ಹಾಲ್ ಮಾರ್ಕ್ (ಎ ಮತ್ತು ಎಚ್) ಕೇಂದ್ರಗಳಲ್ಲಿ ಆಟೋಮೇಷನ್ ವರ್ಕ್ ಫ್ಲೋ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಬಿಐಎಸ್ ನ ಮಹಾನಿರ್ದೇಶಕರು ಜ್ಯುವೆಲರಿ ಮಳಿಗೆಗಳ ಹಾಲ್ ಮಾರ್ಕಿಂಗ್ ನ ಪ್ರತಿಯೊಂದು ರಸೀದಿಗಳು ಕಂಪ್ಯೂಟರಿ ಕರಣಗೊಳ್ಳುತ್ತವೆ ಮತ್ತು ಪ್ರತಿಯೊಂದು ಉದ್ಯೋಗದ ದಿನಾಂಕ ಮತ್ತು ಸಮಯ ಸೇರಿ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗುವುದು. ಹಾಲ್ ಮಾರ್ಕಿಂಗ್ ಹಂತದವರೆಗೆ ಉದ್ಯೋಗ ನಿಯೋಜನೆ ಸಂಖ್ಯೆಯನ್ನು ನಿಗದಿಪಡಿಸಿದ ನಂತರ ಮಾದರಿಯ ಅನಾಮಧೇಯತೆಯನ್ನು ಸಹ ಕಾಪಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಇದೀಗ ಹಾಲ್ ಮಾರ್ಕ್ ಕಡ್ಡಾಯದಿಂದಾಗಿ ಅದರಲ್ಲಿ ಬಿಐಎಸ್ ಮಾರ್ಕ್ ಮತ್ತು ಶುದ್ಧತೆಯ ಜೊತೆಗೆ ಆರು ಅಂಕಿಗಳ ಸಂಕೇತ ಒಳಗೊಂಡಿರುತ್ತದೆ ಮತ್ತು ಗರಿಷ್ಠ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಜ್ಯುವೆಲರಿ ಮಾಲಿಕರಿಗೆ ವಿತರಣಾ ವೋಚರ್ ಅನ್ನು ನೀಡಲಾಗುವುದು ಎಂದರು.

ಹೊಸ ಯೋಜನೆ ಜಾರಿಯ ವೇಳೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಎಲ್ಲಾ ಭಾಗಿದಾರ ಪ್ರತಿನಿಧಿಗಳು, ಕಂದಾಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. 

ಭಾರತೀಯ ಮಾನಕ ಬ್ಯೂರೋದ ಹಾಲ್ ಮಾರ್ಕಿಂಗ್ ಯೋಜನೆ ಅಡಿಯಲ್ಲಿ ಆಭರಣ ಮಳಿಗೆಗಳ ಮಾಲಿಕರು ಹಾಲ್ ಮಾರ್ಕ್ ಹೊಂದಿರುವ ಆಭರಣಗಳ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಹಾಲ್ ಮಾರ್ಕಿಂಗ್ ಪರೀಕ್ಷಾ ಹಾಗೂ ಕೇಂದ್ರಗಳನ್ನು ಗುರುತಿಸಬೇಕು. ಬಿಐಎಸ್(ಹಾಲ್ ಮಾರ್ಕಿಂಗ್) ನಿಬಂಧನೆಗಳು 14.06.2018ರಿಂದ ಜಾರಿಗೆ ಬಂದಿವೆ. ಹಾಲ್ ಮಾರ್ಕ್ ನಿಂದಾಗಿ ಗ್ರಾಹಕರಿಗೆ ಆಗುವ ಪ್ರಯೋಜನವೆಂದರೆ, ಆಭರಣಗಳನ್ನು ಖರೀದಿಸುವವರು ತಮ್ಮ ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಬಹುದು ಮತ್ತು ಚಿನ್ನದ ಖರೀದಿ ವೇಳೆ ಅನಗತ್ಯ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸುವುದಾಗಿದೆ.

ಚಿನ್ನದ ಆಭರಣಗಳ ವಿಶ್ವಾಸಾರ್ಹತೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ಆಭರಣ/ಕಲಾಕೃತಿಗಳಿಗೆ ಹಾಲ್ ಮಾರ್ಕಿಂಗ್ ಅತ್ಯಗತ್ಯವಾಗಿದೆ ಮತ್ತು ಗ್ರಾಹಕರು ಚಿನ್ನದ ಶುದ್ಧತೆ, ಉತ್ಕೃಷ್ಟತೆ ಮತ್ತು ಗ್ರಾಹಕರ ರಕ್ಷಣೆ ವಿಷಯದಲ್ಲಿ ಮೂರನೇ ವ್ಯಕ್ತಿಯ ಭರವಸೆಯಿಂದಾಗಿ ಸಂತೃಪ್ತರಾಗುತ್ತಾರೆ. ಈ ಕ್ರಮದಿಂದಾಗಿ ಭಾರತ ಜಗತ್ತಿನ ಮುಂಚೂಣಿ ಚಿನ್ನದ ಮಾರುಕಟ್ಟೆ ಕೇಂದ್ರವಾಗಿ ಅಭಿವೃದ್ಧಿಯಾಗಲು ನೆರವಾಗುತ್ತದೆ.

ಕಳೆದ ಐದು ವರ್ಷಗಳಲ್ಲಿ ಪ್ರತಿ ವರ್ಷ ದೇಶದಲ್ಲಿ ಎ ಮತ್ತು ಎಚ್ ಕೇಂದ್ರಗಳ ಸಂಖ್ಯೆ ಶೇ.25ರಷ್ಟು ಚ್ಚಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಕಳೆದ ಐದು ವರ್ಷಗಳಲ್ಲಿ ಎ ಮತ್ತು ಎಚ್ ಕೇಂದ್ರಗಳ ಸಂಖ್ಯೆ 454ನಿಂದ 943ಕ್ಕೆ ಹೆಚ್ಚಳವಾಗಿದೆ. ಸದ್ಯ 943 ಮುದ್ರೆ ಮತ್ತು ಹಾಲ್ ಮಾರ್ಕಿಂಗ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸರ್ಕಾರದ ಸಬ್ಸಿಡಿ ಯೋಜನೆ ಅಡಿ ನಾನಾ ಜಿಲ್ಲೆಗಳಲ್ಲಿ 84 ಎಎಚ್ ಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎ ಮತ್ತು ಎಚ್ ಕೇಂದ್ರಗಳ ರಾಜ್ಯವಾರು ಪಟ್ಟಿ ಈ ಕೆಳಗಿನಂತಿದೆ

Click here for state wise list of A&H Centres

 

 

*****

 

 

 



(Release ID: 1727845) Visitor Counter : 351