ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರನ್ನು ನವದೆಹಲಿಯಲ್ಲಿಂದು ಭೇಟಿ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ

Posted On: 16 JUN 2021 6:45PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ  ಖಾತೆ ಸಚಿವ ಶ್ರೀ ಡಿ.ವಿ.ಸದಾನಂದಗೌಡ ಅವರನ್ನು ನವದೆಹಲಿಯಲ್ಲಿಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.  

 



ಮಧ್ಯಪ್ರದೇಶದ ರಾಜ್ಯದಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಅಗತ್ಯ ಪ್ರಮಾಣದ ರಾಸಾಯನಿಕ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಶ್ರೀ ಸದಾನಂದಗೌಡ ಹೇಳಿದರು.  ಜೂನ್ 14 ರವರೆಗೆ ಮಧ್ಯಪ್ರದೇಶದಲ್ಲಿ 5.49 ಲಕ್ಷ ಎಂ.ಟಿ. ಯೂರಿಯಾ ಮತ್ತು 2.86 ಲಕ್ಷ ಡಿಎಪಿ ದಾಸ್ತಾನು ಇತ್ತು. ಸಚಿವಾಲಯ ಸಾಧ್ಯವಾದ ರೀತಿಯಲ್ಲಿ ಎಲ್ಲ ಬಗೆಯ ಸಹಾಯ ಮಾಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.  

ಸಭೆಯ ವೇಳೆ ಸಚಿವರು, ಪ್ರಸಕ್ತ ಮುಂಗಾರು ಋತುವಿಗೆ ಒಂದು ಬಾರಿಯ ಕ್ರಮವಾಗಿ ಡಿಎಪಿ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ 700 ರೂಪಾಯಿಗಳಷ್ಟು ಗಣನೀಯವಾಗಿ ಹೆಚ್ಚಳ ಮಾಡುವ ಐತಿಹಾಸಿಕ ರೈತ ಪರ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೈಗೊಂಡರು ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದರಿಂದಾಗಿ ಡಿಎಪಿಗೆ ಮೊದಲು ಪ್ರತಿ ಚೀಲಕ್ಕೆ 500 ರೂ. ಸಬ್ಸಿಡಿ ನೀಡಲಾಗುತ್ತಿತ್ತು, ಈಗ ಹೆಚ್ಚಳ ಮಾಡಿರುವ ಮೊತ್ತವೂ ಸೇರಿ ಪ್ರತಿ ಚೀಲಕ್ಕೆ ಒಟ್ಟು 1200 ರೂ. ಸಬ್ಸಿಡಿ ನೀಡಲಾಗುವುದು. ಇದು ಪೋಷಕಾಂಶ ಆಧಾರಿತ ಸಬ್ಸಿಡಿ ಆಗಿರುವುದರಿಂದ ಇತರೆ ಪಿ ಮತ್ತು ಕೆ ರಸಗೊಬ್ಬರಗಳ ಫಾಸ್ಫೆಟಿಕ್ ಪೋಷಕಾಂಶಗಳ ಮೇಲಿನ ಹೆಚ್ಚಿನ ಸಬ್ಸಿಡಿ ಏರಿಕೆಯಿಂದಾಗಿ ಅವು ಹೆಚ್ಚಿನ ಸಬ್ಸಿಡಿಯನ್ನು ಪಡೆಯುತ್ತವೆ ಮತ್ತು ಇದರಿಂದ ಅವುಗಳ ಬೆಲೆಯನ್ನು ಕಳೆದ ವರ್ಷದ ಮಟ್ಟಕ್ಕೆ ಸರಿದೂಗಿಸಲು ಸಹಾಯಕವಾಗುತ್ತದೆ.  

ಅಲ್ಲದೆ, 2020ರ ಡಿಸೆಂಬರ್ ನಿಂದ ಡಿಎಪಿ ಮತ್ತು ಅದರ ಕಚ್ಚಾ ಸಾಮಗ್ರಿಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಏರಿಕೆಯಾಗುತ್ತಿದೆ ಶ್ರೀ ಸದಾನಂದ ಗೌಡ ಅವರು ಹೇಳಿದರು. ಆದ್ದರಿಂದ ಡಿಎಪಿ ಬದಲಿಗೆ ಎನ್ ಪಿ ಕೆ ರಸಗೊಬ್ಬರಗಳು ಮತ್ತು ಸಿಂಗಲ್ ಸೂಪರ್ ಫಾಸ್ಪೇಟ್ ಮುಂತಾದುವನ್ನು ಪರ್ಯಾಯವಾಗಿ ಬಳಸಲು ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದು ಹೇಳಿದರು.

***


(Release ID: 1727718) Visitor Counter : 117


Read this release in: English , Urdu , Hindi , Tamil