ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19 ಲಿಸಿಕಾ ಕಾರ್ಯಕ್ರಮದ ಬಗ್ಗೆ ಹೊಸ ಮಾಹಿತಿ


ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 25.87 ಕೋಟಿಗಿಂತ ಹೆಚ್ಚು ಲಸಿಕೆ ಡೋಸ್ ಗಳನ್ನು ಒದಗಿಸಲಾಗಿದೆ

ಲಸಿಕೆ ನೀಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.12 ಕೋಟಿಗಿಂತ ಹೆಚ್ಚಿನ ಡೋಸುಗಳು ಲಭ್ಯವಿವೆ

Posted On: 12 JUN 2021 11:28AM by PIB Bengaluru

ರಾಷ್ಟ್ರವ್ಯಾಪಿ  ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆ.  ಇದರ ಜೊತೆಗೆ, ಸರ್ಕಾರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಲಸಿಕೆಗಳನ್ನು ನೇರವಾಗಿ ಖರೀದಿಸಲು ಸಹಕರಿಸುತ್ತಿದೆ. ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ, ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ. 

ಕೋವಿಡ್ -19  ಲಸಿಕಾಕರಣದ ಉದಾರೀಕೃತ ಮತ್ತು ವೇಗವರ್ಧಿತ ಹಂತ -3 ಲಸಿಕಾ ಕಾರ್ಯತಂತ್ರವನ್ನು ಮೇ 1, 2021ರಿಂದ ಪ್ರಾರಂಭಿಸಲಾಗಿದೆ,

ಈ ಕಾರ್ಯತಂತ್ರದಲ್ಲಿ, ಪ್ರತಿ ತಿಂಗಳು ಒಟ್ಟು  ಕೇಂದ್ರೀಯ ಔಷಧ ಪ್ರಯೋಗಾಲಯ (ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ -ಸಿಡಿಎಲ್) ಅನುಮತಿಸಿದ ಯಾವುದೇ ಉತ್ಪಾದಕರ ಲಸಿಕೆ ಡೋಸುಗಳನ್ನು ಭಾರತ ಸರ್ಕಾರದ ವತಿಯಿಂದ ಸಂಗ್ರಹಿಸಲಾಗುತ್ತದೆ. ಈ ಡೋಸುಗಳನ್ನು ಈ ಹಿಂದೆ ಮಾಡಿದಂತೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತ ವಿಭಾಗದ ಮೂಲಕ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 25.87 ಕೋಟಿಗಿಂತ ಹೆಚ್ಚು (25,87,41,810) ಲಸಿಕೆ ಡೋಸ್ ಗಳನ್ನು ಒದಗಿಸಿದೆ.

ಇದರಲ್ಲಿ, ಪೋಲಾಗುವ ಪ್ರಮಾಣ ಸೇರಿದಂತೆ ಒಟ್ಟು ಬಳಕೆ 24,76,58,855   ಡೋಸ್ ಗಳು ಆಗಿವೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ).

ನೀಡಲು ಇನ್ನೂ 1.12 ಕೋಟಿಗೂ (1,12,41,187) ಹೆಚ್ಚು ಕೋವಿಡ್ ಲಸಿಕೆ ಡೋಸುಗಳು  ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ.   

ಇದಲ್ಲದೆ, 10ಲಕ್ಷಕ್ಕೂ ಹೆಚ್ಚು (10,81,300) ಲಸಿಕೆ ಡೋಸ್ ಗಳು  ತಯಾರಿಕೆಯ ಹಂತದಲ್ಲಿವೆ  ಮತ್ತು ಮುಂದಿನ 3 ದಿನಗಳಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿವೆ.

***



(Release ID: 1726494) Visitor Counter : 160