ಕಲ್ಲಿದ್ದಲು ಸಚಿವಾಲಯ

ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ಗಣಿಗಳ ಹರಾಜಿನ 2ನೇ ಕಂತಿನ ಕುರಿತಂತೆ ಇಂದು 1ನೇ ಬಾಧ್ಯಸ್ಥರೊಂದಿಗೆ ನಡೆದ ಸಮಾಲೋಚನೆ


2ನೇ ಕಂತಿನ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ದೇಶದ ಕಲ್ಲಿದ್ದಲು ಗಣಿಗಳಲ್ಲಿಯೇ ಅತ್ಯಂತ ದೊಡ್ಡ ಅವಕಾಶವಾಗಿದೆ

ಕಲ್ಲಿದ್ದಲು ಗಣಿಗಳ 2ನೇ ಕಂತಿನ ಹರಾಜಿನಲ್ಲಿ ಸರ್ಕಾರವು ಸುಮಾರು 36 ಶತಕೋಟಿ ಸಂಪನ್ಮೂಲವನ್ನು ಹೊಂದಿರುವ 67 ಗಣಿಗಳನ್ನು ಮತ್ತು ಸುಮಾರು 150 ದಶಲಕ್ಷ ಟನ್ (ಎಂಟಿ) ಪರಿಶೋಧಿತ ಗಣಿಗಳ ಪಿ.ಆರ್‌.ಸಿ.ಗಳನ್ನು ನೀಡಲಾಗುತ್ತಿದೆ

Posted On: 10 JUN 2021 6:53PM by PIB Bengaluru

ಕೈಗಾರಿಕಾ ಪಾಲುದಾರನಾಗಿ ಎಫ್..ಸಿ.ಸಿ..ನೊಂದಿಗೆ ಜಂಟಿಯಾಗಿ ಕಲ್ಲಿದ್ದಲು ಸಚಿವಾಲಯವು 2ನೇ ಕಂತಿನ ವಾಣಿಜ್ಯ ಕಲ್ಲಿದ್ದಲು ಗಣಿಯ 2ನೇ ಕಂತಿನ ಕುರಿತಂತೆ ಇಂದು 1ನೇ ಬಾಧ್ಯಸ್ಥರೊಂದಿಗೆ ಸಮಾಲೋಚನಾ ಸಭೆ ಆಯೋಜಿಸಿತ್ತುಇಂದು ನಡೆದ ಇಬ್ಬರು ಬಾಧ್ಯಸ್ಥರ ಸಮಾಲೋಚನೆಗಳ ಸರಣಿಯಲ್ಲಿ ಮೊದಲನೆಯ ವರ್ಚುವಲ್ ಸಭೆಯು ಕಲ್ಲಿದ್ದಲು ಮತ್ತು ಗಣಿಗಾರಿಕೆ ವ್ಯವಹಾರ, ಸಲಕರಣೆಗಳ ತಯಾರಕರು, ಗಣಿ ಅಭಿವೃದ್ಧಿದಾರರು ಮತ್ತು ನಿರ್ವಾಹಕರು (ಎಂಡಿಒಗಳು) ಮತ್ತು ಹಣಕಾಸು ಸಂಸ್ಥೆಗಳ ಪ್ರಮುಖರ ಭಾಗವಹಿಸುವಿಕೆಗೆ ಸಾಕ್ಷಿಯಾಗಿತ್ತು.

ಪಾಲ್ಗೊಂಡಿದ್ದವರನ್ನುದ್ದೇಶಿಸಿ ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮಾಂಕಿತ ಪ್ರಾಧಿಕಾರಿ  ಶ್ರೀ ಎಂ. ನಾಗರಾಜು: ನಾವು 36 ಶತಕೋಟಿ ಮತ್ತು ಸುಮಾರು 150 ದಶಲಕ್ಷ ಟನ್ (ಎಂ.ಟಿ.) ಪರಿಶೋಧಿತ ಗಣಿಗಳ ಪಿ.ಆರ್.ಸಿ.ಯನ್ನು ಎರಡನೇ ಕಂತಿನ ಹರಾಜಿನಲ್ಲಿ ಕಲ್ಲಿದ್ದಲು ಗಣಿಗಳ ವಾಣಿಜ್ಯ ಗಣಿಗಾರಿಕೆ ನೀಡುತ್ತಿದ್ದೇವೆ. ಇದು ದೇಶದಲ್ಲಿಯೇ ಈವರೆಗೆ ನೀಡಲಾದ ಇಷ್ಟು ದೊಡ್ಡ ಅವಕಾಶ”  ಎಂದು ತಿಳಿಸಿದರು. ಎಲ್ಲಾ ಅವಕಾಶಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಲ್ಲಿದ್ದು, ಉದ್ಯಮಗಳಿಗೆ ಅವುಗಳ ಅಗತ್ಯಗಳಿಗೆ ಅನುಗುಣವಾಗಿ ಸಂಬಂಧಿತ ಮತ್ತು ಉಪಯುಕ್ತ ಗಣಿಗಳನ್ನು ಆಯ್ಕೆ ಮಾಡಲು ಉತ್ತಮ ಅವಕಾಶ ಮತ್ತು ಆಯ್ಕೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಎಲ್ಲಾ ಬೆಂಬಲ ನೀಡುವ ಭರವಸೆಯನ್ನು ಉದ್ಯಮಕ್ಕೆ ನೀಡಿದ ನಾಗರಾಜು, “ಈಗ ನಡಯುತ್ತಿರುವ ಕಂತಿನ ಹರಾಜಿನಿಂದ, ಕಲ್ಲಿದ್ದಲು ಸಚಿವಾಲಯವು ಮುಂದುವರಿಕೆ ಹರಾಜು ಕಾರ್ಯವಿಧಾನಕ್ಕೆ ಸಾಗುತ್ತಿದೆ, ಇದರಲ್ಲಿ ಯಾವುದೇ ಹರಾಜಾಗದ ಗಣಿ ಪೋರ್ಟಲ್ನಲ್ಲಿ ಹರಾಜಿಗೆ ಲಭ್ಯವಿರುತ್ತದೆ ಮತ್ತು ಲಭ್ಯವಾದ ಹೆಚ್ಚಿನ ಗಣಿಗಳನ್ನೂ ಸೇರಿಸಲಾಗುತ್ತದೆ ಎಂದು ತಿಳಿಸಿದರು.

ಸಿಎಂಪಿಡಿಐಎಳ್ ಮತ್ತು ಡಬ್ಲ್ಯುಸಿಎಲ್ ಸಿಎಂಡಿ ಶ್ರೀ ಮನೋಜ್ ಕುಮಾರ್ ಕಂತಿನಲ್ಲಿ 67 ಕಲ್ಲಿದ್ದಲು ನಿಕ್ಷೇಪಗಳಿವೆ, ಪೈಕಿ 23 ಸಿಎಂಎಸ್ಪಿ ಮತ್ತು 44 ಎಂಎಂಡಿಆರ್ ನಿಕ್ಷೇಪಗಳಾಗಿವೆ; 37 ಸಂಪೂರ್ಣ ಪರಿಶೋಧಿತವಾಗಿದ್ದು, ಉಳಿದ 30 ಭಾಗಶಃ/ಪ್ರಾದೇಶಿಕವಾಗಿ ಪರಿಶೋಧನೆ ಮಾಡುವುದಾಗಿದೆ ಎಂದರು.

ಎಫ್..ಸಿ.ಸಿ. ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ದಿಲೀಲ್ ಚೆನೋಯ್, ವಾಣಿಜ್ಯ ಕಲ್ಲಿದ್ದಲು ಗಣಿಗಳ ಎರಡನೇ ಕಂತಿನ ಹರಾಜು ಕಲ್ಲಿದ್ದಲು ಆಮದು ಮೇಲಿನ ಹೊರೆಯನ್ನು ತಗ್ಗಿಸಲು ಮತ್ತು ಕೈಗಾರಿಕೆಗಳ ವಿವಿಧ ವಲಯಗಳಿಗೆ ಕಲ್ಲಿದ್ದಲು ಲಭ್ಯತೆ ಹೆಚ್ಚಿಸುವ ಬದ್ಧತೆಯ ಈಡೇರಿಕೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದರು. ಪರಿಸರ ಸ್ನೇಹಿ ಮತ್ತು ಸುಸ್ಥಿರ ಗಣಿಗಾರಿಕೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ, ಕಲ್ಲಿದ್ದಲು ಅನಿಲೀಕರಣ ಸೇರ್ಪಡೆಯನ್ನು ಖಾತ್ರಿಪಡಿಸುವ ಉಪಕ್ರಮಗಳು ಮತ್ತು ಸಿಬಿಎಂ ಯೋಜನೆಗಳು ಪ್ರಯತ್ನದಲ್ಲಿ ಸುಸ್ಥಿರ ಪ್ರಗತಿಯನ್ನು ಖಾತ್ರಿಪಡಿಸಲು ನೆರವಾಗುತ್ತವೆ ಎಂದೂ ತಿಳಿಸಿದರು.

ಕಳೆದ ವರ್ಷ  2020 ಜೂನ್ 18ರಂದು ಕಲ್ಲಿದ್ದಲು ಸಚಿವಾಲಯ ಎಫ್..ಸಿ.ಸಿ..ನೊಂದಿಗೆ ಉನ್ನತ ಮಟ್ಟದ ಪ್ರಾರಂಭಿಕ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿ, ವಾಣಿಜ್ಯ ಕಲ್ಲಿದ್ದಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ ಬಳಿಕ 2ನೇ ಕಂತಿನ ಹರಾಜಿನಲ್ಲಿ ಚೈತನ್ಯಶೀಲ ಕಲ್ಲಿದ್ದಲು ಮಾರುಕಟ್ಟೆ ಅಭಿವೃದ್ಧಿಗೆ ಕಾರಣವಾಗುವ, ಆರ್ಥಿಕ ವೃದ್ಧಿಗೆ ಉತ್ತೇಜನ ನೀಡುವ ಮತ್ತು ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಜಾಗತಿಕವಾಗಿ ಉತ್ತಮ ರೂಢಿಗಳನ್ನು ತರುವ ನಿರೀಕ್ಷೆ ಇದೆ.

ಎರಡನೇ ಕಂತಿನ ಹರಾಜು ಪ್ರಕ್ರಿಯೆಗೆ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀ ಪ್ರಹ್ಲಾದ ಜೋಶಿ ಮತ್ತು ನೀತಿ ಆಯೋಗದ ಸಿಇ.. ಶ್ರೀ ಅಮಿತಾಬ್ ಕಾಂತ್ ಅವರು ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಗಳ ಸಮ್ಮುಖದಲ್ಲಿ 2021 ಮಾರ್ಚ್ 25ರಂದು ಔಪಚಾರಿಕವಾಗಿ ಚಾಲನೆ ನೀಡಿದ್ದರು

2021ಏಪ್ರಿಲ್ 26ರಂದು ನಡೆದ ಹರಾಜು ಪೂರ್ವ ಸಭೆಯ ನಂತರ, ಕಲ್ಲಿದ್ದಲು ಸಚಿವಾಲಯವು ಸಂಭಾವ್ಯ ಬಿಡ್ ದಾರರಿಗೆ ವ್ಯಾಪಕವಾದ ವಿಸ್ತರಣೆಗಾಗಿ ಎಫ್‌..ಸಿ.ಸಿ. ಆಶ್ರಯದಲ್ಲಿ ಇಬ್ಬರು ಬಾಧ್ಯಸ್ಥರ ಸಮಾಲೋಚನೆಗಳ ಸರಣಿಯನ್ನು ಆಯೋಜಿಸುತ್ತಿದೆ.

2 ಹಂತದ ಹರಾಜನ್ನು ಪಾರದರ್ಶಕ ಪ್ರಕ್ರಿಯೆಯ ಮೂಲಕ ಆನ್ಲೈನ್ನಲ್ಲಿ ನಡೆಸಲಾಗುತ್ತದೆ. ಹರಾಜು ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳೆಂದರೆ - ಮಾರುಕಟ್ಟೆ ಸಂಬಂಧಿತ ಕಾರ್ಯವಿಧಾನ, ಇದರಲ್ಲಿ ಬಿಡ್ಡಿಂಗ್ ಶೇಕಡಾವಾರು ಆದಾಯ ಹಂಚಿಕೆ, ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ ಸಂಬಂಧಿತ ಪಾವತಿಗಳು, ಹಿಂದಿನ ಕಲ್ಲಿದ್ದಲು ಗಣಿಗಾರಿಕೆಯ ಅನುಭವದ ಯಾವುದೇ ನಿರ್ಬಂಧವಿಲ್ಲದೆ ಸುಗಮ ಭಾಗವಹಿಸುವಿಕೆ, ಉತ್ತಮರೀತಿಯ ಪಾವತಿ ಸ್ವರೂಪ, ಆರಂಭಿಕ ಉತ್ಪಾದನೆಗೆ ಪ್ರೋತ್ಸಾಹಕದ ಮೂಲಕ ದಕ್ಷತೆಯ ಪ್ರಚಾರ ಮತ್ತು ಶುದ್ಧ ತಂತ್ರಜ್ಞಾನ, ನಮ್ಯತೆಯ ಕಾರ್ಯಾಚರಣೆ ಷರತ್ತು ಇತ್ಯಾದಿಗಳ ಬಳಕೆ.

ಟೆಂಡರ್ ದಸ್ತಾವೇಜುಗಳ ಮಾರಾಟವು 2021 ಮಾರ್ಚ್ 25ರಿಂದ ಆರಂಭಗೊಂಡಿದ್ದು, ಬಿಡ್ ಕೊನೆಯ ದಿನಾಂಕ 2021 ಜೂನ್ 24 ಆಗಿರುತ್ತದೆ. ಗಣಿಗಳು, ಹರಾಜು ಷರತ್ತುಗಳು, ಕಾಲಮಿತಿ ಇತ್ಯಾದಿ ವಿವರಗಳನ್ನು ಕೆಳಗಿನ ಸಂಪರ್ಕದ ಮೂಲಕ ನೋಡಬಹುದು:

https://www.mstcecommerce.com/auctionhome/coalblock/index.jsp

***



(Release ID: 1726090) Visitor Counter : 180