ಸಂಸ್ಕೃತಿ ಸಚಿವಾಲಯ

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಾಳೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯಲಿರುವ ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮ ಜಯಂತಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಶ್ರೀ ಪ್ರಹ್ಲಾದ ಪಟೇಲ್

Posted On: 10 JUN 2021 5:44PM by PIB Bengaluru

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಸಂಸ್ಕೃತಿ ಸಚಿವಾಲಯ 2021 ಜೂನ್ 11 ರಂದು ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಜಯಂತಿಯಂದು ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಜನ್ಮಸ್ಥಳವಾದ ಶಹಜಹಾನ್ ಪುರದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಎನ್.ಸಿ.ಝಡ್.ಸಿ.ಸಿ. ಉತ್ತರ ಪ್ರದೇಶದ ಶಹಜಹಾನ್ ಪುರದ ಹುತಾತ್ಮ ಉದ್ಯಾನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್, ಹುತಾತ್ಮ ಅಶ್ಫಾಕ್ ಉಲ್ಲಾ ಖಾನ್ ಮತ್ತು ಹುತಾತ್ಮ ರೋಷನ್ ಸಿಂಗ್ ಅವರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಉತ್ತರ ಪ್ರದೇಶದ ಹಣಕಾಸು, ಸಂಸದೀಯ ವ್ಯವಹಾರಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಶಹಜಹಾನ್ ಪುರದ ಶಾಸಕರೂ ಆದ ಶ್ರೀ ಸುರೇಶ್ ಖನ್ನಾ; ಉತ್ತರ ಪ್ರದೇಶ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ನೀಲಕಂಠ ತಿವಾರಿ; ಶಹಜಹಾನ್ ಪುರದ ಸಂಸದ ಶ್ರೀ ಅರುಣ್ ಕುಮಾರ್ ಸಾಗರ್ ಮತ್ತು ಜಿಲ್ಲೆಯ ಅಧಿಕಾರಿಗಳು ಸಹ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

1897 ಜೂನ್ 11ರಂದು ಶಹಜರಾನ್ ಪುರದಲ್ಲಿ ಜನಿಸಿದ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರು, ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಹೋರಾಟ ನಡೆಸಿದ ಭಾರತದ ಹೆಸರಾಂತ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು. ಅವರು ತಮ್ಮ 19ನೇ ವಯಸ್ಸಿನಿಂದಲೇ ಬಿಸ್ಮಿಲ್ ಎಂಬ ಕಾವ್ಯನಾಮದಲ್ಲಿ ಉರ್ದು ಮತ್ತು ಹಿಂದಿಯಲ್ಲಿ ಹಲವು ಶಕ್ತಿಶಾಲಿ ದೇಶಭಕ್ತಿ ಗೀತೆಗಳನ್ನು ರಚಿಸಿದ್ದರು. ಅವರು ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಅಜಾದ್ ಅವರಂತಹ ನಾಯಕರೊಂದಿಗೆ ಹಿಂದೂಸ್ತಾನ್ ರಿಪಬ್ಲಿಕನ್ ಸಂಸ್ಥೆ ಸ್ಥಾಪಿಸಿ, ಬ್ರಿಟಿಷ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಲು ಅಶ್ಫಾಕ್ ಉಲ್ಲಾ ಖಾನ್ ಮತ್ತು ರೋಷನ್ ಸಿಂಗ್ ಅವರುಗಳೊಂದಿಗೆ 1918 ಮಣಿಪುರಿ ಷಡ್ಯಂತ್ರ ಮತ್ತು 1925 ಕಕೋರಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರು1927 ಡಿಸೆಂಬರ್ 19ರಂದು ತಮ್ಮ 30ನೇ ವಯಸ್ಸಿನಲ್ಲೇ ಕಕೋರಿ ಷಡ್ಯಂತ್ರದ ಪಾತ್ರಕ್ಕಾಗಿ ಘೋರಖ್ಪುರ ಜೈಲಿನಲ್ಲಿ ಅವರು ಹುತಾತ್ಮರಾದರು. ಜೈಲಿನಲ್ಲಿದ್ದಾಗ, ಅವರು ಮೇರಾ ರಂಗ್ ದೇ ಬಸಂತಿ ಚೋಲಮತ್ತು ಸರ್ಫರೋಶಿ ಕಿ ತಮನ್ನಾಬರೆದರು, ಅದು ಸ್ವಾತಂತ್ರ್ಯ ಯೋಧರಿಗೆ ರಾಷ್ಟ್ರಗೀತೆಯಾಗಿತ್ತು

ಕವಿ ಕ್ರಾಂತಿಕಾರಿಗೆ ನಮನ ಸಲ್ಲಿಸುವ ಸಲುವಾಗಿ, ಅವರ ಪರಂಪರೆಯನ್ನು ಬಿಂಬಿಸುವ ಕಿರು ಸಾಂಸ್ಕೃತಿಕ ಪ್ರಸ್ತುತಿ ನಡೆಯಲಿದೆ. ಪುಷ್ಪಾಂಜಲಿಯ ಸಮಯದಲ್ಲಿ ಶ್ರೀ ನವೀನ್ ಮಿಶ್ರಾ ಸಿತಾರ್ ನಲ್ಲಿ ಭಕ್ತಿ ಗೀತೆ ನುಡಿಸಲಿದ್ದಾರೆಕಿಸಗೊಯ್ ಪ್ರಮುಖ ಪ್ರತಿನಿಧಿ ಶ್ರೀ ಹಿಮಾಂಶು ಬಾಜಪೈ ಅವರು ಹುತಾತ್ಮ ಬಿಸ್ಮಿಲ್ ಅವರ ಜೀವನ ಚರಿತ್ರೆಯನ್ನು ವಿವರಿಸಲಿದ್ದು, ನಂತರ ಕಿಶೋರ್ ಚತುರ್ವೇದಿ ಮತ್ತು ಸಮೂಹದವರು ದೇಶಭಕ್ತಿ ಗೀತೆಗಳ ಪ್ರದರ್ಶನ ನೀಡಲಿದ್ದಾರೆ. ಸಂಸ್ಕೃತಿ ಸಚಿವಾಲಯವು ಬಿಸ್ಮಿಲ್ ಮತ್ತು ಇತರ ದೇಶಭಕ್ತರ ಕೊಡುಗೆಗೆ ಸಂಬಂಧಿಸಿದ ವರ್ಚುವಲ್ ಕಾರ್ಯಕ್ರಮವನ್ನು ಸಂದರ್ಭವನ್ನು ಆಯೋಜಿಸಲಿದ್ದು, ಇದನ್ನು ಸಂಸ್ಕೃತಿ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಎನ್‌.ಸಿ.ಝಡ್,ಸಿ,ಸಿ,ಯಲ್ಲಿ ಹಂಚಿಕೊಳ್ಳಲಾಗುವುದು.

***



(Release ID: 1726055) Visitor Counter : 168