ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತೀಯ ಆಸ್ಪತ್ರೆಗಳಿಗೆ ದೇಶೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಉತ್ಪಾದಿಸಲಾದ ಅಧಿಕ ಶುದ್ಧತೆಯ ಆಕ್ಸಿಜನ್ ಸಾಂದ್ರಕಗಳ ಪೂರೈಕೆ

Posted On: 09 JUN 2021 3:39PM by PIB Bengaluru

 ದೇಶೀಯವಾಗಿ ವಿನ್ಯಾಸಗೊಳಿಸಲಾದ ಅಧಿಕ ಶುದ್ಧತೆಯನ್ನು ಖಾತ್ರಿಪಡಿಸುವ ಆಕ್ಸಿಜನ್ ಸಾಂದ್ರಕಗಳ ಪೂರೈಕೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತೀಯ ನವೋದ್ಯಮವೊಂದು ಕೈಗೆಟಕುವ ದರದಲ್ಲಿ ಪೋರ್ಟಬಲ್ ಆಕ್ಸಿಜನ್ ಸಾಂದ್ರಕವನ್ನು ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಿದೆ ಮತ್ತು ಅವುಗಳನ್ನು ಇದೀಗ ದೇಶದ ನಾನಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ.

          ಕೋವಿಡ್-19 ಚಿಕಿತ್ಸೆಯಲ್ಲಿ ವಿಶೇಷವಾಗಿ ಎರಡನೇ ಅಲೆ ವೇಳೆ ರೋಗಿಗಳಲ್ಲಿ ಆಮ್ಲಜನಕ ಮಟ್ಟ ಕಾಯ್ದುಕೊಳ್ಳುವುದು ಪ್ರಮುಖ ಸವಾಲಾಗಿದೆ. ಭಾರತೀಯ ವೈದ್ಯಕೀಯ ಸಾಧನಗಳ ಉತ್ಪಾದನೆ ಮತ್ತು ದೇಶೀಯ ಆಟೋಮೋಷನ್ ಕಂಪನಿಗಳು ಈ ಸವಾಲನ್ನು ಕೈಗೆತ್ತಿಕೊಂಡು ನವೀನ ವಿನ್ಯಾಸದ ವೆಂಟಿಲೇಟರ್ ಗಳು ಮತ್ತು ಪೋರ್ಟಬಲ್ ಉಸಿರಾಟ ಸಾಧನಗಳು ಮತ್ತು ಅದರ ಸಂಬಂಧಿ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿವೆ.

          ಮೊಹಾಲಿ ಮೂಲದ ವಾಲ್ನಟ್ ಮೆಡಿಕಲ್ ಸಂಸ್ಥೆ, ಭಾರತದಲ್ಲಿನ ಪ್ರೆಶರ್ ಸ್ವಿಂಗ್  ಅಡ್ಸಾರ್ಪ್ಷನ್ (ಪಿಎಸ್ಎ) ತಂತ್ರಜ್ಞಾನ ಆಧಾರಿತ 5 ಲೀಟರ್ ಮತ್ತು 10 ಲೀಟರ್ ಪೋರ್ಟಬಲ್ ವೈದ್ಯಕೀಯ ದರ್ಜೆಯ ಆಕ್ಸಿಜನ್ ಸಾಂದ್ರಕಗಳನ್ನು ಅಭಿವೃದ್ಧಿಪಡಿಸಿದ್ದು, ಇವು 55 ರಿಂದ 75 ಕೆಪಿಎ ಒತ್ತಡದಲ್ಲಿ ಶೇ.96ರಷ್ಟು ಶುದ್ಧ ಆಮ್ಲಜನಕವನ್ನು ಒದಗಿಸುತ್ತವೆ.  ಪಿಎಸ್ ಎ ತಂತ್ರಜ್ಞಾನದಡಿ ಮಿಶ್ರ ಅನಿಲದಿಂದ ಏಕ ಅನಿಲಗಳನ್ನು ಬೇರ್ಪಡಿಸುತ್ತದೆ. ಪಿಎಸ್ಎ ನಾನ್ ಕ್ರಯೋಜನಿಕ್ ವಾಯು ಪ್ರತ್ಯೇಕತೆ (ಸುತ್ತುವರಿದ ತಾಪಮಾನ ವಿಭಜನೆ ಪ್ರಕ್ರಿಯೆಗಳ ಹತ್ತಿರ) ಪದ್ದತಿಯನ್ನು ಸಾಮಾನ್ಯವಾಗಿ ವಾಣಿಜ್ಯ ಪದ್ಧತಿಯಲ್ಲಿ ಬಳಕೆ ಮಾಡಲಾಗುವುದು. ಈ ಎರಡು ಮಾನದಂಡಗಳು ಕೋವಿಡ್ ಅಥವಾ ಇತರೆ ಉಸಿರಾಟ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಂತ ನಿರ್ಣಾಯಕವಾಗಿವೆ.  

          ಕಂಪನಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಅಡಿ ಬರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಮಂಡಳಿ(ಎನ್ಎಸ್ ಟಿಇಡಿಬಿ) ಸಿಎಡಬ್ಲ್ಯೂಎಸಿಚ್ 2020 ಅಡಿ ಅನುದಾನವನ್ನು ನೀಡಿ ಬೆಂಬಲಿಸಿದೆ ಮತ್ತು ಆ ಕಂಪನಿ ಒಂದು ವರ್ಷದೊಳಗೆ ವಿಶ್ವ ದರ್ಜೆಯ ಆಕ್ಸಿಜನ್ ಸಾಂದ್ರಕವನ್ನು ಅಭಿವೃದ್ಧಿಪಡಿಸುವ ಮೂಲಕ ಆಮದು ಅವಲಂಬನೆಯನ್ನು ತಗ್ಗಿಸಿದೆ.

          ವಾಲ್ನಟ್ ವೈದ್ಯಕೀಯ ಆಮ್ಲಜನಕ ಸಾಂದ್ರಕಗಳನ್ನು ರೋಗಿಗಳ ಸುರಕ್ಷತೆ, ವಿದ್ಯುನ್ಮಾನ ಸುರಕ್ಷತೆ, ವಿದ್ಯುತ್ ಕಾಂತೀಯ ಹೊಂದಾಣಿಕೆಗಾಗಿ (ಇಎಂಸಿ)ಗಾಗಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಮ್ಲಜನಕ ಸಾಂದ್ರಕಗಳನ್ನು ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.

          ಸಂಪೂರ್ಣ ಅಚ್ಚು ವಿನ್ಯಾಸ, ಎಲ್ಲಾ ಎಲೆಕ್ಟ್ರಾನಿಕ್ ಬಿಡಿ ಭಾಗಗಳ ಅಭಿವೃದ್ಧಿ, ಮೋಲ್ಡಿಂಗ್, ನಿಯಂತ್ರಣ ವ್ಯವಸ್ಥೆ, ಸೀವ್ ಟವರ್  ಮತ್ತು ಎಲ್ಲಾ ಸಂಬಂಧಿ ಬಿಡಿ ಭಾಗಗಳು ಮತ್ತು ಸಾಧನಗಳು ಭಾರತದಲ್ಲೇ ತಯಾರಾಗಿವೆ. ಸದ್ಯ ಆ ಸಾಂದ್ರಕಗಳನ್ನು ಭಾರತದಲ್ಲಿ ಹಲವು ಸರ್ಕಾರಿ, ರಕ್ಷಣಾ ಮತ್ತು ಮಿಲಿಟರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಅಲ್ಲದೆ ತನ್ನದೇ ವಿತರಣಾ ಜಾಲದ ಮೂಲಕ ಭಾರತದಾದ್ಯಂತ ಸಾಮಾನ್ಯ ಜನರಿಗೂ ಅವುಗಳು ಲಭ್ಯವಾಗುವಂತೆ ಮಾಡಲಾಗಿದೆ.

          ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದಿಂದಾಗಿ 5 ಲೀಟರ್ ಮತ್ತು 10 ಲೀಟರ್ ಸಾಂದ್ರಕಗಳ ಮಾದರಿಯನ್ನು ವಿನ್ಯಾಸಗೊಳಿಸಲು ನೆರವಾಯಿತು ಮತ್ತು ಜಪಾನ್, ಅಮೆರಿಕ ಮತ್ತು ಚೀನಾದ ಉತ್ಪನ್ನಗಳ ವಿರುದ್ಧ ಸ್ಪರ್ಧಿಸುವಂತಹ ಗುಣಮಟ್ಟದ ಅಚ್ಚುಗಳಲ್ಲಿ ಹೂಡಿಕೆ ಮಾಡಿದಂತಾಗಿದೆ.  ಐಐಟಿ ದೆಹಲಿ ಸಂಪೋಷಣಾ ತಂಡ, ಆ ತಂಡದೊಂದಿಗೆ ಕೆಲಸ ಮಾಡಿ ಯಶಸ್ಸಿನ ಬೆಳಕು ಕಾಣುವಂತೆ ಮಾಡಿದೆ.

ಪೋರ್ಟಬಲ್ ಆಕ್ಸಿಜನ್ ಸಾಂದ್ರಕದೊಂದಿಗೆ ವಾಲ್ನಟ್ ವೈದ್ಯಕೀಯ ತಂಡ

ವಾಲ್ನಟ್ ವೈದ್ಯಕೀಯ ಆಮ್ಲಜನಕ ಸಾಂದ್ರಕ

 

          ಹೆಚ್ಚಿನ ವಿವರಗಳಿಗೆ ವಾಲ್ನಟ್ ವೈದ್ಯಕೀಯ ಸಂಸ್ಥೆಯ ಸಹ ಸಂಸ್ಥಾಪಕ ಸಿದ್ಧಾರ್ಥ್ ಧವನ್ ಅವರನ್ನು(siddharthdhawan20[at]gmail[dot]com ,+91-9650622772) ಮೂಲಕ ಸಂಪರ್ಕಿಸಬಹುದು.

***



(Release ID: 1725759) Visitor Counter : 252