ಇಂಧನ ಸಚಿವಾಲಯ

`ವಿಶ್ವಕಪ್ ಹಂತ 3’ಕ್ಕಾಗಿ ಪ್ಯಾರಿಸ್‌ಗೆ ಹೊರಟ ಭಾರತೀಯ ಬಿಲ್ಲುಗಾರರು


ಭಾರತದಾದ್ಯಂತ ಬಿಲ್ಲುಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ʻಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾʼ (ಎಎಐ) ಜೊತೆ ಎನ್‌ಟಿಪಿಸಿ ಸಹಭಾಗಿತ್ವ

ಭಾರತೀಯ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಲು ವೇದಿಕೆ ಒದಗಿಸುವ ಗುರಿಯನ್ನು ಎನ್‌ಟಿಪಿಸಿ ಹೊಂದಿದೆ.

Posted On: 09 JUN 2021 3:04PM by PIB Bengaluru

ಭಾರತೀಯ ಬಿಲ್ಲುಗಾರರಾದ ದೀಪಿಕಾಕುಮಾರಿ, ಕೊಮಾಲಿಕಾ ಬಾರಿ, ಅಂಕಿತಾಭಾಕತ್ ಮತ್ತು ಮಧು ವೆದ್ವಾನ್ ಅವರನ್ನೊಳಗೊಂಡ ಒಂಬತ್ತು ಸದಸ್ಯರ ʻಮಹಿಳಾ ರಿಕರ್ವ್ ತಂಡʼವು ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ಪೂರ್ಣಿಮಾ ಮಹತೋ ಅವರೊಂದಿಗೆ 2021ರ ಜೂನ್17ರಿಂದ19ರವರೆಗೆನಡೆಯಲಿರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಅಂತಿಮ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಮತ್ತು 2021ರ ಜೂನ್ 20ರಿಂದ 28ರ ವರೆಗೆ ನಡೆಯಲಿರುವ ʻವಿಶ್ವಕಪ್ ಹಂತ 3ʼ ರಲ್ಲಿ ಭಾಗವಹಿಸಲು ಪ್ಯಾರಿಸ್ಗೆ ಹೊರಟಿದೆ.

ಭಾರತದ ಅತಿದೊಡ್ಡ ಏಕೀಕೃತ ವಿದ್ಯುತ್ ಕಂಪನಿಯಾದ ಎನ್‌ಟಿಪಿಸಿ ಲಿಮಿಟೆಡ್, ಭಾರತದಾದ್ಯಂತ ಬಿಲ್ಲುಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತೀಯ ಬಿಲ್ಲುಗಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ (ಎಎಐ) ನೊಂದಿಗೆ ಸಹಭಾಗಿತ್ವ ಹೊಂದಿದೆ. ಈ ಪಾಲುದಾರಿಕೆಯ ಮೂಲಕ, ಭಾರತೀಯ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಎನ್ಟಿಪಿಸಿ ಹೊಂದಿದೆ.

ಎನ್‌ಟಿಪಿಸಿ ನಿರ್ದೇಶಕರಾದ (ಎಚ್ಆರ್) ಶ್ರೀ ದಿಲೀಪ್ ಕುಮಾರ್ ಪಟೇಲ್ ಅವರು ಭಾರತೀಯ ಬಿಲ್ಲುಗಾರಿಕೆ ತಂಡಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ʻಎನ್‌ಟಿಪಿಸಿʼಯು ಬಿಲ್ಲುಗಾರರಿಗೆ ಉತ್ಕೃಷ್ಟತೆ ಸಾಧಿಸಲು ನೆರವು ನೀಡುವುದರ ಜೊತೆಗೆ, ಹೊಸ ಪ್ರತಿಭೆಗಳಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಪೋಷಣೆ ಮತ್ತು ಉತ್ತೇಜನ ಒದಗಿಸುವಲ್ಲಿ ಸಹಾಯ ಮಾಡುತ್ತಿದೆ, ಅದರಲ್ಲೂ ವಿಶೇಷವಾಗಿ ಈಗಿನ ಸವಾಲಿನ ಸಂದರ್ಭಗಳಲ್ಲಿ ಅವರಿಗೆ ಅಗತ್ಯ ಸಹಾಯ ಹಸ್ತವನ್ನು ಚಾಚಿದೆ.

***



(Release ID: 1725758) Visitor Counter : 167