ಇಂಧನ ಸಚಿವಾಲಯ

ಭಾರತದಲ್ಲಿ ಇಂಧನ ದಕ್ಷತೆಯ ಕ್ರಮಗಳ ಅನುಷ್ಠಾನದಿಂದ ದೇಶದಲ್ಲಿ ಗಣನೀಯ ಪ್ರಮಾಣದ ಇಂಗಾಲಾಮ್ಲ ಹೊರಸೂಸುವಿಕೆಯನ್ನು ತಡೆಯಬಹುದು


13 ತೀವ್ರ ಇಂಧನ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದನ್ನು ಗುರಿಯಾಗಿಸಿಕೊಂಡು ಸಾಧನೆ ಮತ್ತು ವ್ಯಾಪಾರ [ಪಿಇಟಿ] ಯೋಜನೆಯ ನಿರ್ವಹಣೆಯಿಂದ 17 ಮೆಟ್ರಿಕ್ ಟನ್ ಎಂಟಿಒಇ ಉಳಿಕೆ:  ವರ್ಷಕ್ಕೆ 87 ದಶಲಕ್ಷ ಟನ್ ಸಿಒ2 ತಗ್ಗಿಸಲು ಕ್ರಮ

ಸ್ಟ್ಯಾಂಡರ್ಡ್ ಅಂಡ್ ಲೆಬೆಲಿಂಗ್ [ಎಸ್ ಅಂಡ್ ಎಲ್] ಕಾರ್ಯಕ್ರಮದಿಂದ 2020 – 21 ರಲ್ಲಿ 56 ಶತಕೋಟಿ ಯೂನಿಟ್ ಗಳ ವಿದ್ಯುತ್ ಉಳಿತಾಯ: ಇದರ ಮೌಲ್ಯ 30,000 ಕೋಟಿ ರೂ.

Posted On: 08 JUN 2021 9:08PM by PIB Bengaluru

ಕೈಗಾರಿಕೆಗಳು, ಸಂಸ್ಥೆಗಳಿಂದ ಮತ್ತು ಉಪಕರಣಗಳು/ ಉಪಕರಣಗಳನ್ನು ಬಳಸುವಾಗ ಪರಿಸರದಲ್ಲಿನ ಸಿಒ2 [ಕಾರ್ಬನ್ ಡೈಆಕ್ಸೈಡ್] ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂಧನ ಸಚಿವಾಲಯ ಇಂಧನ ಶಕ್ತಿಯನ್ನು ಉಳಿಸುವ ಕ್ರಮಗಳನ್ನು ಜಾರಿಗೊಳಿಸುತ್ತಿದೆ.   ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವ್ಯಾಪಾರ ವಲಯದಲ್ಲಿ ಗುರಿ ಸಾಧನೆಗೆ ಸಾಧನೆ ಮತ್ತು ವ್ಯಾಪಾರ [ಪಿಇಟಿ] ಯೋಜನೆ ಅತ್ಯಂತ ಪ್ರಮುಖವಾದ್ದದ್ದು. ವೆಚ್ಚ ಪರಿಣಾಮಕಾರಿ ಕ್ರಮಗಳ ಮೂಲಕ ತಂತ್ರಜ್ಞಾನ ಮೇಲ್ದರ್ಜೆಗೇರಿಸಿ ಅಥವಾ ಮನೆಯೊಳಗೆ ಇಂಧನ ಬಳಕೆ ಕಡಿಮೆ ಮಾಡಿ ಇಂಧನ ಉಳಿತಾಯ ಮಾಡಬಹುದು. ಗುರುತಿಸಲ್ಪಟ್ಟ ದೊಡ್ಡಮಟ್ಟದ ಘಟಕಗಳಲ್ಲಿ ಯೋಜನೆಯಡಿ ಕಡ್ಡಾಯವಾಗಿ ಗುರಿ ನೀಡಲಾಗುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಉಳಿತಾಯ ಮಾಡಿದರೆ ಇಂಧನ ಉಳಿತಾಯ ಪ್ರಮಾಣಪತ್ರವನ್ನು ನೀಡಲಾಗುತ್ತಿದ್ದು, ಇವು ವ್ಯಾಪಾರದ ಸಾಧನಗಳಾಗಲಿವೆ. ವಿವಿಧ ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ಅವುಗಳ ಇಂಧನ ಬಳಕೆಯ ಮಟ್ಟ ಮತ್ತು ಇಂಧನ ಉಳಿತಾಯದ ಸಾಮರ್ಥ್ಯದ ಆಧಾರದ ಮೇಲೆ ಪ್ರತ್ಯೇಕ ಇಂಧನ ದಕ್ಷತೆಯ ಗುರಿ ನಿಗದಿಪಡಿಸಲಾಗಿದೆ

2020 ವರ್ಷದಲ್ಲಿ ಯೋಜನೆಯನ್ನು ಪ್ರಮುಖ 13 ತೀವ್ರ ಇಂಧನ ಪ್ರೋತ್ಸಾಹಕ ವಲಯಗಳಿಗೆ ವಿಸ್ತರಿಸಲಾಗಿದ್ದು, ಸೀಮೆಂಟ್, ಉಕ್ಕು ಮತ್ತು ಕಬ್ಬಿಣ, ರಸಗೊಬ್ಬರ, ಉಷ್ಣವಿದ್ಯುತ್ ಘಟಕಗಳು, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ರೈಲ್ವೆ ಮತ್ತು ಇತರೆ ವಲಯಗಳು ಇದರಲ್ಲಿ ಸೇರಿವೆ. ಕ್ರಮದಿಂದ 17 ಎಂಟಿಒಇ [ದಶಲಕ್ಷ ಟನ್ ಗಳು ಅಂದರೆ ತೈಲಕ್ಕೆ ಸಮಾನವಾಗಿ] ಇಂಧನ ಉಳಿತಾಯವಾಗಿದೆ ಮತ್ತು ಇದರ ಫಲಿತಾಂಶದಿಂದ ವರ್ಷಕ್ಕೆ 87 ದಶಲಕ್ಷ ಟನ್ ಸಿಒ2 ಉಳಿತಾಯವಾಗಿದೆ. ಇದು ಬಾಂಗ್ಲಾದೇಶದಂತಹ ರಾಷ್ಟ್ರದ ಒಟ್ಟು ಕಾರ್ಬನ್ ಡೈಆಕ್ಸಿಡ್ - ಇಂಗಾಲಾಮ್ಲ ಹೊರಸೂಸುವಿಕೆಗೆ ಸನಿಹದಲ್ಲಿದೆಮನೆಗಳ ಹಂತದಲ್ಲಿ ಅಥವಾ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿರುವ ವಸ್ತುಗಳು ಇಂಧನ ಬಳಕೆಯಲ್ಲಿ ಪ್ರಮುಖವಾಗಿವೆ. ಹೆಚ್ಚು ಇಂಧನ ಬಳಸುವ ಗ್ರಾಹಕ ವಸ್ತುಗಳ ವಲಯದಲ್ಲಿ ತ್ವರಿತ ಬೆಳವಣಿಗೆಯಾಗುತ್ತಿದ್ದು, ಇದರಿಂದ ಎಲೆಕ್ಟ್ರಿಕ್ ವಲಯದಲ್ಲಿ ಇಂಧನಕ್ಕೆ ಪ್ರತಿವರ್ಷ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಹೆಚ್ಚು ಇಂಧನ ದಕ್ಷತೆಯ ಸಾಧನಗಳಿಗೆ ಆದ್ಯತೆ ನೀಡಿದರೆ ವೃದ್ದಿಸುತ್ತಿರುವ ಬೇಡಿಕೆಯನ್ನು ಉತ್ತಮಗೊಳಿಸಬಹುದು. ಪರಿಣಾಮಕಾರಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ರೂಪಾಂತರವನ್ನು ಸಕ್ರಿಯಗೊಳಿಸಲು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ [ಬಿಇಇಸಂಸ್ಥೆ ಸ್ಟ್ಯಾಂಡರ್ಡ್ ಅಂಡ್ ಲೇಬಲಿಂಗ್ [ಎಸ್ ಅಂಡ್ ಎಲ್] ಕಾರ್ಯಕ್ರಮವನ್ನು  ಪರಿಚಯಿಸಿತು. ಎಸ್ ಅಂಡ್ ಅಲ್ ಕಾರ್ಯಕ್ರಮದ ಉದ್ದೇಶವೆಂದರೆ ಇಂಧನ ಉಳಿತಾಯ ಸಾಮರ್ಥ್ಯದ ಬಗ್ಗೆ ತಿಳಿವಳಿಕೆಯುಳ್ಳ ಆಯ್ಕೆ ಮತ್ತು ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಿಂದ ಹಣ ಉಳಿತಾಯ ಮಾಡುವುದಾಗಿದೆ. ಹೆಚ್ಚು ಇಂಧನ ಬಳಸುವ ಉಪಕರಣಗಳು ಮತ್ತು ಉಪಕರಣಗಳಲ್ಲಿ ಇಂಧನ ಕಾರ್ಯಕ್ಷಮತೆಯ ಲೇಬಲ್ ಗಳ ಪ್ರದರ್ಶನ ಮಾಡಬೇಕು ಎಂಬ ಅಂಶವನ್ನು ಸಹ ಯೋಜನೆ ಒಳಗೊಂಡಿದೆ. ಕನಿಷ್ಠ ಇಂಧನ ಕಾರ್ಯಕ್ಷಮತೆಯ ಮಾನದಂಡಗಳ ಷರತ್ತಿಗೆ ಇದು ಒಳಪಟ್ಟಿದೆ.   2021 ಮಾರ್ಚ್ ವರೆಗೆ ಯೋಜನೆಯಡಿ 28 ಉಪಕರಣಗಳನ್ನು ಸೇರ್ಪಡೆಗೊಳಿಸಲಾಗಿದೆ ಮತ್ತು1500 ಕ್ಕೂ ಮಾದರಿಯ ಉತ್ಪನ್ನಗಳಲ್ಲಿ ಇಂಧನ ದಕ್ಷತೆಯ ಮಾಹಿತಿಯುಳ್ಳ ಸ್ಟಾರ್ ಲೇಬಲ್ ಹಾಕಲಾಗಿದ್ದು, ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ಇದು ಗ್ರಾಹಕರಿಗೆ ಜನಪ್ರಿಯ ಚಿಹ್ನೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಇಂಧನ ದಕ್ಷತೆಯ ಉತ್ಪನ್ನಗಳ ಪರಿಣಾಮ 2020-21 ಸಾಲಿನಲ್ಲಿ ನಾಗರಿಕರಿಂದ 56 ಶತಕೋಟಿ ಯೂನಿಟ್ ಇಂಧನ ಉಳಿತಾಯವಾಗಿದ್ದು, ಇದರ ಒಟ್ಟು ಮೌಲ್ಯ 30,000 ಕೋಟಿ ರೂಪಾಯಿ ಆಗಿದೆ. ಜತೆಗೆ ಇಂತಹ ಕ್ರಮಗಳಿಂದ ಪರಿಣಾಮಕಾರಿಯಾಗಿ ಸಿಒ2 ತಗ್ಗಿಸಲು ಸಹಕಾರಿಯಾಗಲಿದ್ದು, ಪ್ರತಿವರ್ಷ 46 ದಶಲಕ್ಷ ಟನ್ ಕಡಿತಗೊಳಿಸಬಹುದಾಗಿದೆ. ಇಂತಹ ಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಜಾಗತಿಕವಾಗಿ ಇಂಧನ ಉಳಿತಾಯ ಮಾಡುವುದನ್ನು ಉತ್ತೇಜಿಸಲು ಸರಳ ವಿಧಾನವೂ ಸಹ ಆಗಿದೆ. ಹಲವು ರಾಷ್ಟ್ರಗಳು ಲೇಬಲಿಂಗ್ ಕಾರ್ಯಕ್ರಮವನ್ನು ಅನುಸರಣೆ ಮಾಡುತ್ತಿದ್ದು, ಮೂಲಕ ಇಂಧನ ಉಳಿತಾಯದ ಲಾಭ ಪಡೆಯುವುದು ಮತ್ತು ಇಂಗಾಲಾಮ್ಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಕಾರ್ಯಕ್ರಮ ಕುರಿತು ಮಾತನಾಡಿರುವ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ [ಬಿಇಇ] ಅಧಿಕಾರಿಗಳು, ಇಂಧನ ಸಚಿವಾಲಯದ ಅಡಿ ಮಿಷನ್ ಡೈರೆಕ್ಟೊರೆಟ್ಆಗಿ ಕಾರ್ಯನಿರ್ವಹಿಸಲು ಸಂತಸವಾಗುತ್ತಿದ್ದು, ಭಾರತ ಸರ್ಕಾರ ಇಂತಹ ಪರಿಣಾಮಕಾರಿ ಕಾರ್ಯಕ್ರಮ ಜಾರಿಗೆ ತಂದಿದೆ. ಇದರಿಂದ ಪರಿಸರ ಮತ್ತು ಸಮಾಜಕ್ಕೆ ಭಾರೀ ಲಾಭವಾಗುತ್ತಿದೆ ಎಂದು ಹೇಳಿದ್ದಾರೆ. ಹಣ ಉಳಿತಾಯ ಮತ್ತು ಎಲ್ಲಾ ಇಂಧನ ದಕ್ಷತೆಯ ಕ್ರಮಗಳನ್ನು ಗ್ರಾಹಕರು ಅಳವಡಿಸಿಕೊಂಡಲ್ಲಿ ಮತ್ತು  ನಿಯಂತ್ರಣ ಕ್ರಮಗಳು ಮತ್ತು ಮಾರುಕಟ್ಟೆ ಆಧರಿತ ನೀತಿಗಳ ಮಿಶ್ರಣದಿಂದಾಗಿ ಹಲವಾರು ವಲಯಗಳಲ್ಲಿ ಭರವಸೆಯ ಫಲಿತಾಂಶ ದೊರೆಯಲು ಸಾಧ್ಯವಾಗಲಿದೆ. ಪರಿಸರ ಸಮಗ್ರತೆ ಕಾಪಾಡಿಕೊಳ್ಳಲು ಮತ್ತು ನಮ್ಮ ಹವಾಮಾನ ಬದ್ಧತೆಗಳನ್ನು ಪೂರೈಸುವಲ್ಲಿ  ಹೊರಸೂಸುವಿಕೆಯನ್ನು ತಗ್ಗಿಸಲು ಸರ್ಕಾರದ ಮಹತ್ವದ ಪ್ರಯತ್ನವನ್ನು ಇದು ಮತ್ತಷ್ಟು ಅನುಮೋದಿಸುತ್ತದೆ.

cement plant

ಕಾರ್ಬನ್ ಡೈ ಆಕ್ಸೈಡ್ [ಸಿಒ2] ನಮ್ಮ ಭೂಮಿಯ ಮೇಲಿನ ಪ್ರಸಿದ್ಧ ಹಸಿರು ಅನಿಲವಾಗಿದೆ. ವಾತಾವರಣದಲ್ಲಿನ ಅದರ ಸಾಂದ್ರತೆಯ ತ್ವರಿತ ಹೆಚ್ಚಳ ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ ಮತ್ತು ಅನೇಕ ಪರಿಸರ ಹಾಗೂ ಆರೋಗ್ಯ ಸಮಸ್ಯೆಗಳಿಗೂ ಇದು ನಾಂದಿಯಾಡಲಿದೆಭೂಮಿಯ ಮೇಲ್ಮೈಗೆ ಸೌರ ವಿಕಿರಣ ಅಪ್ಪಳಿಸಿದಾಗ ಇಂಗಾಲಾಮ್ಲ ಬಿಡುಗಡೆಯಾಗಿ ಹಸಿರುಮನೆ ಪರಿಣಾಮಗಳು ಉಂಟಾಗುತ್ತವೆ. ವಾತಾವರಣದಿಂದ ಶಾಖದ ಒಂದು ಭಾಗ ತಪ್ಪಿಸಿಕೊಳ್ಳುತ್ತದೆ ಮತ್ತು ಸಮತೋಲಿತ ಶಾಖ ಸಿಲುಕಿಕೊಳ್ಳಲಿದ್ದು, ಆಗ  ಭೂಮಿಯ ತಾಪಮಾನ ವೃದ್ಧಿಯಾಗುತ್ತದೆ ಇದು ಜಾಗತಿಕ ತಾಪಮಾನ ಎಂದು ನಾವು ಕರೆಯಲ್ಪಡುವ  ವಿದ್ಯಮಾನವಾಗಿದೆ. ಪ್ರಾಥಮಿಕವಾಗಿ ಇಂಗಾಲಾಮ್ಲ ಹವಾಮಾನ ಬದಲಾವಣೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ಇದು ಎಲ್ಲಾ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಮೇಲೆ ಏರಿಳಿತದ ಪರಿಣಾಮಗಳನ್ನು ಉಂಟು ಮಾಡುತ್ತದೆ ಮತ್ತು ಜಗತ್ತಿನ ಎಲ್ಲಾ ಜನತೆ ಮತ್ತು ಕೈಗಾರಿಕೆಗಳು ಇದರ ಭಾಗವಾಗಿವೆ

ಬಿಇಇ ಕುರಿತು

ಇಂಧನ ಸಂರಕ್ಷಣಾ ಕಾಯ್ದೆ 2001 ನಿಬಂಧನೆಗಳ ಅನ್ವಯ 2002 ಮಾರ್ಚ್ 1 ರಂದು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿಯನ್ನು ಭಾರತ ಸರ್ಕಾರ ರಚಿಸಿತು. ಇಂಧನ ಸಂರಕ್ಷಣಾ ಕಾಯ್ದೆ 2001 ಒಟ್ಟಾರೆ ಚೌಕಟ್ಟಿನೊಳಗೆ ಭಾರತೀಯ ಆರ್ಥಿಕತೆಯ ಹೊರೆ ಕಡಿಮೆ ಮಾಡುವ ಪ್ರಾಥಮಿಕ ಉದ್ದೇಶದೊಂದಿಗೆ ಸ್ವಯಂ ನಿಯಂತ್ರಣ ಮತ್ತು ಮಾರುಕಟ್ಟೆ ತತ್ವಗಳ ಮೇಲೆ ಒತ್ತು ನೀಡುವ ಮೂಲಕ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ನೆರವು ನೀಡುವುದು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿಯ ಉದ್ದೇಶವಾಗಿದೆಎಲ್ಲಾ ಪಾಲುದಾರರ ಸಹಯೋಗದೊಂದಿಗೆ, ಎಲ್ಲಾ ವಲಯಗಳಲ್ಲಿ ತ್ವರಿತ ಮತ್ತು ಸುಸ್ಥಿರ ಇಂಧನ ದಕ್ಷತೆಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಗುರಿಯನ್ನು ಸಾಧಿಸಬಹುದಾಗಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ - ಬಿಇಇ ಇಂಧನ ಸಂರಕ್ಷಣೆ ಮತ್ತು ದಕ್ಷತೆಯ ಪ್ರಯತ್ನಗಳು ಹಲವು ವಲಯಗಳನ್ನು ಒಳಗೊಂಡಿದ್ದು, ಇದರಲ್ಲಿ ಉಪಕರಣಗಳು, ಕಟ್ಟಡಗಳು, ಸಾರಿಗೆ, ಕೃಷಿಯಲ್ಲಿ ಬೇಡಿಕೆ ಆಧರಿತ ನಿರ್ವಹಣಾ ಕಾರ್ಯಕ್ರಮಗಳು, ಕೈಗಾರಿಕೆ ಮತ್ತು ಇತರೆ ಸ್ಥಾಪನೆಯಂತಹ ಕ್ಷೇತ್ರಗಳನ್ನು ಇದು ಒಳಗೊಂಡಿದೆ.

***(Release ID: 1725602) Visitor Counter : 327


Read this release in: English , Urdu , Hindi , Telugu