ಭೂವಿಜ್ಞಾನ ಸಚಿವಾಲಯ

ನೈಋತ್ಯ ಮುಂಗಾರು ಮಧ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ, ಸಂಪೂರ್ಣ ಕರಾವಳಿ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೆಲವು ಕಡೆ, ಕರ್ನಾಟಕದ ಉತ್ತರ ಒಳನಾಡಿನ ಹಲವು ಕಡೆ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು, ತಮಿಳುನಾಡಿನ ಬಹುತೇಕ ಕಡೆ, ಮಧ್ಯ ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಮತ್ತು ಈಶಾನ್ಯ ಬಂಗಾಳದ ಕೊಲ್ಲಿಯ ಕೆಲವು ಭಾಗಗಳಲ್ಲಿ ಮುಂದುವರೆದಿದೆ

Posted On: 05 JUN 2021 5:59PM by PIB Bengaluru

ಭಾರತೀಯ ಹವಾಮಾನ ಇಲಾಖೆಯ, ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ರೀತ್ಯ (2021ರ ಜೂನ್ 5ರ ಶನಿವಾರ, ಬಿಡುಗಡೆ ಮಾಡಿದ ಸಮಯ: 1630 ಗಂಟೆ ಐ.ಎಸ್.ಟಿ.; 1430 ಗಂಟೆ .ಐ.ಎಸ್.ಟಿ. ಅವಲೋಕನ ಆಧಾರಿತವಾಗಿದೆ

ಅಖಿಲ ಭಾರತ ಹವಾಮಾನ ನಿರ್ಣಯ (ಸಂಜೆ)

·         2021ರ ಜೂನ್ 5ರ ಇಂದು, ನೈಋತ್ಯ ಮುಂಗಾರು ಮಧ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ, ಅಂದರೆ ಸಂಪೂರ್ಣ ಕರಾವಳಿ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೆಲವು ಕಡೆ,  ಕರ್ನಾಟಕದ ಉತ್ತರ ಒಳನಾಡಿನ ಹಲವು ಕಡೆ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು, ತಮಿಳುನಾಡಿನ ಬಹುತೇಕ ಕಡೆ, ಮಧ್ಯ ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಮತ್ತು ಈಶಾನ್ಯ ಬಂಗಾಳದ ಕೊಲ್ಲಿಯ ಕೆಲವು ಭಾಗಗಳಲ್ಲಿ ಮುಂದುವರೆದಿದೆ

·         ಮುಂಗಾರಿನ ಉತ್ತರದ ಮಿತಿ (ಎನ್.ಎಲ್.ಎಂ.) ಅಕ್ಷಾಂಶ 17.0°ಉ./ರೇಖಾಂಶ 60°ಪೂ, ಅಕ್ಷಾಂಶ 17.5°ಉ./ರೇಖಾಂಶ 70°ಪೂ, ಹರ್ನಾಯ್, ಸೋಲಾಪುರ್, ರಾಯಚೂರು, ಕರ್ನೂಲ್, ತಿರುಪತಿ, ಕುಡಲೂರು, ಅಕ್ಷಾಂಶ 11.5°ಉ./ರೇಖಾಂಶ 81.5°ಪೂ, 13°ಉ./85°ಪೂ, 16°ಉ./89° ಪೂರ್ವ ಮತ್ತು 20°ಉ./93°ಪೂ.ದ ಮೂಲಕ ಹಾದು ಹೋಗಲಿದೆ.

·         ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮುಂಗಾರು ಮಧ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ, ಅಂದರೆ ಮಹಾರಾಷ್ಟ್ರದ ಇನ್ನೂ ಕೆಲವು ಕಡೆ,  ಕರ್ನಾಟಕದ ಉಳಿದ ಕಡೆ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಹೆಚ್ಚಿನ ಭಾಗಗಳು, ತಮಿಳುನಾಡಿನ ಉಳಿದ ಕಡೆ, ಮಧ್ಯ  ಮತ್ತು ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳದ ಕೊಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರೆಯುವ ನಿರೀಕ್ಷೆ ಇದೆ.

·         ಅಕ್ಷಾಂಶದೊಂದಿಗೆ 5.8 ಕಿ.ಮೀ ಎತ್ತರದಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ ಸ್ಥೂಲವಾಗಿ. ರೇಖಾಂಶ. 72° ಪೂ.ದಿಂದ ಉತ್ತರಕ್ಕೆ ಅಕ್ಷಾಂಶ 72 ° ಪೂ.ದೊಂದಿಗೆ ಪಂಜಾಬ್ ಮತ್ತು ಅದಕ್ಕೆ ಹೊಂದಿಕೊಂಡ ಹರಿಯಾಣದಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ. ಮೇಲೆ  ಚಂಡಮಾರುತ ಸುತ್ತುತ್ತಿದ್ದು, ಪಶ್ಚಿಮದಲ್ಲಿನ ವೈಪರೀತ್ಯದಿಂದ ಕೂಡಿರಲಿದೆ.

·         ಹರಿಯಾಣ ಮತ್ತು ನೆರೆಯ ವಾಯುವ್ಯ ರಾಜಸ್ಥಾನದ ಮೇಲೆ ಚಂಡಮಾರುತದ ಸುತ್ತುವಿಕೆ ಪ್ರಭಾವ ಸರಾಸರಿ ಸಮುದ್ರ ಮಟ್ಟಕ್ಕಿಂತ 2.1 ಕಿ.ಮೀ.ವರೆಗೆ ವಿಸ್ತರಿಸಿದೆ.

·         ಪೂರ್ವ ಕೇಂದ್ರ ಅರಬ್ಬಿ ಸಮುದ್ರದ ಕರ್ನಾಟಕ, ಗೋವಾ ಕರಾವಳಿಯಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲೆ 4.5 ಕಿ.ಮೀ ವರೆಗೆ  ಚಂಡಮಾರುತ ಸುತ್ತುವಿಕೆ ಪ್ರಭಾವ ಇರುತ್ತದೆ.

·         ಪೂರ್ವ ಮಧ್ಯ ಅರಬ್ಬಿ ಸಮುದ್ರದಿಂದ ದಕ್ಷಿಣ ತಮಿಳುನಾಡಿನವರೆಗೆ ಕರ್ನಾಟಕದಾದ್ಯಂತ ಸರಾಸರಿ ಸಮುದ್ರ ಮಟ್ಟಕ್ಕಿಂತ 0.9 ಕಿ.ಮೀ.ವರೆಗೆ ಚಂಡಮಾರುತದ ಸುತ್ತುವಿಕೆ ಪ್ರಭಾವ ಇರಲಿದೆ.

·         ಕಡಲಾಚೆಯ ಪ್ರಭಾವ ದಕ್ಷಿಣ ಮಹಾರಾಷ್ಟ್ರದ ಕರಾವಳಿಯಿಂದ ದಕ್ಷಿಣ ಕೇರಳದ ಕರಾವಳಿಯವರೆಗಿನ ಸರಾಸರಿ ಸಮುದ್ರ ಮಟ್ಟದವರೆಗೆ ಇರುತ್ತದೆ.

·         ಶ್ರೀಲಂಕಾ ಮತ್ತು ಹೊಂದಿಕೊಂಡು ಕೊಮೊರಿನಾ ಪ್ರದೇಶದಲ್ಲಿ 3.1 ಕಿ.ಮೀ. ಮತ್ತು 4.5 ಕಿ.ಮೀ ನಡುವೆ ಸರಾಸರಿ ಸಮುದ್ರ ಮಟ್ಟದವರೆಗೆ ಚಂಡಮಾರುತ ಸುತ್ತುವಿಕೆ ಪ್ರಭಾವ ಇರುತ್ತದೆ.

                     (ಹೆಚ್ಚಿನ ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿ)

ಹೆಚ್ಚಿನ ವಿವರಗಳಿಗೆ ದಯವಿಟ್ಟು ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ www.imd.gov.in ಅಥವಾ ಸಂಪರ್ಕಿಸಿ: +911124631913, 24643965, 24629798 (1875ರಿಂದ ದೇಶ ಸೇವೆಯಲ್ಲಿ)

ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP  ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP  ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP  ಡೌನ್ ಲೋಡ್ ಮಾಡಿಕೊಳ್ಳಿ.  ಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

 

****



(Release ID: 1724864) Visitor Counter : 136