ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಭಾರತದ ವೃದ್ಧರಿಗೆ ನೆರವು ನೀಡುವ SAGE ಉಪಕ್ರಮ (ಹಿರಿಯರ ಆರೈಕೆ ವೃದ್ಧರ ಬೆಳವಣಿಗೆ ಇಂಜಿನ್ ) ಮತ್ತು ಸೇಜ್ ಪೋರ್ಟಲ್ ಗೆ ನಾಳೆ ಚಾಲನೆ ನೀಡಲಿರುವ ಶ್ರೀ ಥಾವರ್ ಚಂದ್ ಗೆಹ್ಲೋಟ್

Posted On: 03 JUN 2021 8:40PM by PIB Bengaluru

ಭಾರತದಲ್ಲಿ ಅತ್ಯಂತ ತ್ವರಿತವಾಗಿ ಹೆಚ್ಚಾಗುತ್ತಿರುವ ವಯಸ್ಸಾದ ಜನಸಂಖ್ಯೆಯ ಅಗತ್ಯತೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನಾಳೆ ವೃದ್ಧರ ಆರೈಕೆ ಸಾಮಗ್ರಿಗಳು ಮತ್ತು ಸೇವೆಗಳು ಒಂದೆಡೆ ಲಭ್ಯವಾಗುವ  ಮತ್ತು ವಿಶ್ವಾಸಾರ್ಹ ನವೋದ್ಯಮಗಳು ಸೇವೆ ನೀಡುವ ಹಿರಿಯರ ಆರೈಕೆ ಮತ್ತು ಪ್ರಗತಿ ಇಂಜಿನ್ (ಎಸ್ಎಜಿಇ) SAGE ಯೋಜನೆಗೆ ಚಾಲನೆ ನೀಡಲಾಗುವುದು. ನಾಳೆ ಶ್ರೀ ಥಾವರ್ ಚಂದ್ ಗೆಹ್ಲೋಟ್ ಈ ಉಪಕ್ರಮಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಶ್ರೀ ರತನ್ ಲಾಲ್ ಕಟಾರಿಯಾ ಅವರ ಸಮಕ್ಷಮದಲ್ಲಿ ಚಾಲನೆ ನೀಡುವರು. ನವೋದ್ಯಮಗಳು ಈ ನಿರ್ದಿಷ್ಟ SAGE ಪೋರ್ಟಲ್ ಭಾಗವಾಗಲು ಅರ್ಜಿ ಸಲ್ಲಿಸಬಹುದು. ಅದಕ್ಕೂ ನಾಳೆ ಚಾಲನೆ ನೀಡಲಾಗುವುದು.

ನವೋದ್ಯಮಗಳನ್ನು ವಿನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇದು ಆರೋಗ್ಯ, ವಸತಿ, ಆರೈಕೆ ಕೇಂದ್ರಗಳು, ತಾಂತ್ರಿಕ ಲಭ್ಯತೆ ಹೊಂದಿರುವ ಹಣಕಾಸು, ಆಹಾರ ಮತ್ತು ಸಂಪತ್ತು ನಿರ್ವಹಣೆ ಹಾಗೂ ಕಾನೂನು ಮಾರ್ಗದರ್ಶನಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರವೇಶದ ಹೊರತಾಗಿ ಒದಗಿಸಲು ಸಾಧ್ಯವಿದೆ. ಈ  SAGE ಪೋರ್ಟಲ್ ಅನ್ನು ದಾಖಲೆಯ ಅವಧಿಯಲ್ಲಿ ಎನ್ಇಎಟಿನ ಸಿಇಒ ಚಂದ್ರಶೇಖರ ಬುದ್ಧ, ಶಿಕ್ಷಣ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯದ ಅಸಿಸ್ಟೆಂಟ್ ಇನ್ನೊವೇಶನ್  ಡೈರೆಕ್ಟರ್ ಡಾ. ಇಳಂಗೋವನ್  ಅವರ ನೆರವಿನಿಂದ ಸಿದ್ಧಪಡಿಸಲಾಗಿದೆ.

          ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ವೃದ್ಧರಿಗೆ ಈ ಗುರುತಿಸಲಾದ ನವೋದ್ಯಮಗಳ ಮೂಲಕ ತನಗೆ ಬೇಕಾದ ಉತ್ಪನ್ನಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಸಮೀಕ್ಷೆಗಳ ಪ್ರಕಾರ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ವೃದ್ಧರ ಪ್ರಮಾಣ 2001ರಲ್ಲಿ ಶೇ.7.5ರಷ್ಟು ಇದ್ದದ್ದು, 2026ರ ವೇಳೆಗೆ ಬಹುತೇಕ ಶೇ.12.5ರಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 2050ರ ವೇಳೆಗೆ ಶೇ.19.5ರಷ್ಟು ದಾಟಲಿದೆ. ಅದರಂತೆ ಭಾರತದಲ್ಲಿ ವಿಶೇಷವಾಗಿ ಕೋವಿಡ್ ನಂತರದ ಕಾಲದಲ್ಲಿ ವೃದ್ಧರ ಆರೈಕೆಗೆ ಉತ್ಕೃಷ್ಟ ಪೂರಕ ವ್ಯವಸ್ಥೆಯನ್ನು ರೂಪಿಸುವ ಜರೂರು ಅಗತ್ಯವಿದೆ.

          ವೃದ್ಧರಿಗಾಗಿ ನವೋದ್ಯಮಗಳು ಕುರಿತ ಉನ್ನತಾಧಿಕಾರ ತಜ್ಞರ ಸಮಿತಿ(ಇಇಸಿ) ವರದಿಯ ಶಿಫಾರಸ್ಸಿನಂತೆ ಸೇಜ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

****(Release ID: 1724367) Visitor Counter : 192