ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 22.46 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳ ಪೂರೈಕೆ


1.84 ಕೋಟಿ ಡೋಸ್ ಲಸಿಕೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯ

Posted On: 28 MAY 2021 11:18AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಪೂರೈಸುವ ಮೂಲಕ ಬೆಂಬಲ ನೀಡುತ್ತಿದೆ. ಇದರ ಜೊತೆಗೆ ಭಾರತ ಸರ್ಕಾರ ಲಸಿಕೆಯನ್ನು ನೇರವಾಗಿ ಖರೀದಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡಿದೆಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ಶಿಷ್ಟಾಚಾರದ ಪಾಲನೆಯೊಂದಿಗೆ ಲಸಿಕೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಸ್ತಂಭವಾಗಿದೆ.

ಉದಾರೀಕೃತ ಮತ್ತು ತ್ವರಿತ ಮೂರನೇ ಹಂತದ ಕೋವಿಡ್ -19 ಲಸಿಕಾ ಅಭಿಯಾನದ ಅನುಷ್ಠಾನ 2021 ಮೇ 1ರಿಂದ ಆರಂಭಿಸಲಾಗಿದೆ.

ಕಾರ್ಯತಂತ್ರದ ಅಡಿಯಲ್ಲಿ ಪ್ರತಿ ತಿಂಗಳೂ ಕೇಂದ್ರೀಯ ಔಷಧ ಪ್ರಯೋಗಾಲಯ (ಸಿಡಿಎಲ್) ಅನುಮೋದಿಸುವ ಯಾವುದೇ ಉತ್ಪಾದಕರ ಒಟ್ಟು ಲಿಸಿಕಾ ಡೋಸ್ ಗಳ ಪೈಕಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ಖರೀದಿಸುತ್ತದೆ ಡೋಸ್ ಗಳನ್ನು ಹಿಂದಿನಂತೆಯೇ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಭಾರತ ಸರ್ಕಾರ ಈವರೆಗೆ ಉಚಿತ ಪ್ರವರ್ಗ ಮತ್ತು ರಾಜ್ಯಗಳೇ ನೇರವಾಗಿ ಖರೀದಿಸುವ ಪ್ರವರ್ಗದ ಅಡಿಯಲ್ಲಿ 22.46 ಕೋಟಿ ಲಸಿಕಾ ಡೋಸ್ ಗಳನ್ನು (22,46,08,010) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದೆ.

ಪೈಕಿ, ವ್ಯರ್ಥವಾಗಿರುವುದೂ ಸೇರಿದಂತೆ ಲಸಿಕಾ ಡೋಸ್ ಗಳ ಒಟ್ಟು ಬಳಕೆ 20,48,04,853 ಡೋಸ್ ಗಳಾಗಿದೆ (ಇಂದು ಬೆಳಗ್ಗೆ 8 ಗಂಟೆಯವರೆಗೆ ಲಭ್ಯವಿರುವ ಮಾಹಿತಿ ರೀತ್ಯ)

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಿಕೆಗೆ 1.84 ಕೋಟಿಗೂ ಅಧಿಕ ಕೋವಿಡ್ ಲಸಿಕೆಗಳು (1,84,92,677) ಇನ್ನೂ ಲಭ್ಯವಿದೆ.

ಇದಲ್ಲದೆ 3 ಲಕ್ಷ (3,20,380)ಕ್ಕೂ ಹೆಚ್ಚು ಲಸಿಕೆ ಡೋಸ್ ಸಾಗಣೆಯ ಪ್ರಕ್ರಿಯೆಯಲ್ಲಿದ್ದು, ಇದನ್ನು ಮುಂದಿನ ಮೂರು ದಿನಗಳ ಒಳಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ ಪಡೆದುಕೊಳ್ಳಲಿವೆ.

***


(Release ID: 1722400) Visitor Counter : 221