ಕೃಷಿ ಸಚಿವಾಲಯ

ಭಾರತ ಮತ್ತು ಇಸ್ರೇಲ್ ಕೃಷಿಯಲ್ಲಿ ಸಹಕಾರಕ್ಕಾಗಿ ಮೂರು ವರ್ಷಗಳ ಕ್ರಿಯಾ ಯೋಜನೆಗೆ ಸಹಿ ಹಾಕಿದವು


ಭಾರತ-ಇಸ್ರೇಲ್ ಶ್ರೇಷ್ಠ ಗ್ರಾಮಗಳು ಕೃಷಿ ಕ್ಷೇತ್ರದಲ್ಲಿ ಆದರ್ಶ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಿವೆ

ಭಾರತ - ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳು 2021-2023ರ ಕ್ರಿಯಾ ಯೋಜನೆಯಿಂದ  ಬಲಗೊಳ್ಳಲಿವೆ: ಶ್ರೀ ನರೇಂದ್ರ ಸಿಂಗ್ ತೋಮರ್

Posted On: 24 MAY 2021 3:59PM by PIB Bengaluru

ಇಸ್ರೇಲ್ ಮತ್ತು ಭಾರತದ ನಡುವೆ ಕೃಷಿಯಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಸಹಭಾಗಿತ್ವವನ್ನು ಮುಂದುವರಿಸಿಕೊಂಡು, ಉಭಯ ಸರ್ಕಾರಗಳು ಕೃಷಿಯಲ್ಲಿ ತಮ್ಮ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ ಮತ್ತು ಕೃಷಿ ಸಹಕಾರದಲ್ಲಿ ಅಭಿವೃದ್ಧಿಗಾಗಿ ಮೂರು ವರ್ಷಗಳ ಕ್ರಿಯಾ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದುಇದು ನಿರಂತರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಸಹಭಾಗಿತ್ವವನ್ನು ದ್ವಿಪಕ್ಷೀಯ ಸಂಬಂಧದಲ್ಲಿ ಕೃಷಿ ಮತ್ತು ನೀರಿನ ಕ್ಷೇತ್ರಗಳ ಕೇಂದ್ರೀಕರಣವನ್ನು ದೃಢಪಡಿಸುತ್ತದೆ ಮತ್ತು ಗುರುತಿಸುತ್ತದೆ

ಭಾರತ ಮತ್ತು ಇಸ್ರೇಲ್ ಇಂಡೋ-ಇಸ್ರೇಲ್ ಅಗ್ರಿಕಲ್ಚರಲ್ ಪ್ರಾಜೆಕ್ಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ಮತ್ತು ಇಂಡೋ-ಇಸ್ರೇಲ್ ವಿಲೇಜ್ ಆಫ್ ಎಕ್ಸಲೆನ್ಸ್ಅನ್ನು ಜಾರಿಗೆ ತರುತ್ತಿವೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ  ಮಿಡ್ (ಎಮ್ ಡಿ ಹೆಚ್) ಮತ್ತು ಇಸ್ರೇಲ್ ಅಂತರರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ ಮಾಶವ್ ಇಸ್ರೇಲ್ನ ಅತಿದೊಡ್ಡ ಜಿ 2 ಜಿಸಹಕಾರ ಸಂಸ್ಥೆಯನ್ನು ಮುನ್ನಡೆಸುತ್ತಿದೆ12 ರಾಜ್ಯಗಳಲ್ಲಿ ಭಾರತದಾದ್ಯಂತ 29 ಉತ್ಕೃಷ್ಟತೆಯ ಕೇಂದ್ರಗಳನ್ನು  (ಸಿಒಇ) ಹೊಂದಿದೆ,. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಇಸ್ರೇಲಿ ಕೃಷಿ-ತಂತ್ರಜ್ಞಾನವನ್ನು ಬಳಸಿ ಸುಧಾರಿತ- ಕೃಷಿಯನ್ನು ಜಾರಿಗೆ ತಂದಿದೆಉತ್ಕೃಷ್ಟತೆಯ ಕೇಂದ್ರಗಳು ಕೇಂದ್ರಗಳು ಜ್ಞಾನವನ್ನು ಉತ್ಪಾದಿಸುತ್ತವೆ, ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುತ್ತವೆ ಮತ್ತು ರೈತರಿಗೆ ತರಬೇತಿ ನೀಡುತ್ತವೆ. ಪ್ರತಿ ವರ್ಷ, ಸಿಒಇಗಳು 25 ದಶಲಕ್ಷಕ್ಕೂ ಹೆಚ್ಚು ಗುಣಮಟ್ಟದ ತರಕಾರಿ ಮೊಳಕೆಗಳು, 387 ಸಾವಿರಕ್ಕೂ ಹೆಚ್ಚು ಗುಣಮಟ್ಟದ ಹಣ್ಣಿನ ಸಸ್ಯಗಳನ್ನು ಉತ್ಪಾದಿಸುತ್ತವೆ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ 1.2 ಲಕ್ಷಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡುತ್ತವೆ.

ಕೃಷಿ ಕ್ಷೇತ್ರವು ಯಾವಾಗಲೂ ಭಾರತಕ್ಕೆ ಆದ್ಯತೆಯಾಗಿಯೇ ಇರುತ್ತದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದರು. ಭಾರತ ಸರ್ಕಾರದ ಕೃಷಿ ನೀತಿಗಳಿಂದಾಗಿ, ರೈತರ ಮತ್ತು ಕೃಷಿ ಕ್ಷೇತ್ರದ ಜೀವನದಲ್ಲಿ ಒಂದು ನಿರ್ದಿಷ್ಟ ಬದಲಾವಣೆಯಾಗಿದೆ. ರೈತರ ಆದಾಯವನ್ನು ಹೆಚ್ಚಿಸುವುದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಕೃಷಿ ಕ್ಷೇತ್ರದಲ್ಲಿ ಭಾರತ ಮತ್ತು ಇಸ್ರೇಲ್ 1993 ರಿಂದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ ಎಂದು ಸಚಿವರು ಹೇಳಿದರು. ಇದು 5 ನೇ ಐಐಎಪಿ. ಇಲ್ಲಿಯವರೆಗೆ, ನಾವು 4 ಕ್ರಿಯಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಹೊಸ ಕ್ರಿಯಾ ಯೋಜನೆಯು ಕೃಷಿ ಸಮುದಾಯದ ಅನುಕೂಲಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಇಸ್ರೇಲಿ ಮೂಲದ ಕ್ರಿಯಾ ಯೋಜನೆಗಳ ಅಡಿಯಲ್ಲಿ ಸ್ಥಾಪಿಸಲಾದ ಸಿಒಇಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತ ಮತ್ತು ಇಸ್ರೇಲ್ ನಡುವಿನ ತಂತ್ರಜ್ಞಾನದ ವಿನಿಮಯವು ತೋಟಗಾರಿಕೆಯ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಹೆಚ್ಚು ಸುಧಾರಿಸುತ್ತದೆ, ಇದರಿಂದಾಗಿ ರೈತರ ಆದಾಯ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ ವಾಲ್ ಮಾತನಾಡಿ, “ಇಂಡೋ-ಇಸ್ರೇಲ್ ಕೃಷಿ ಕ್ರಿಯಾ ಯೋಜನೆ (ಐಐಎಪಿ) ಅಡಿಯಲ್ಲಿ ಸ್ಥಾಪಿಸಲಾದ ಉತ್ಕೃಷ್ಟತೆಯ ಕೇಂದ್ರಗಳು ತೋಟಗಾರಿಕೆ ಕ್ಷೇತ್ರದಲ್ಲಿ ಪರಿವರ್ತನೆಯ ಕೇಂದ್ರಬಿಂದುವಾಗಿವೆ. ಹೊಸ ಕಾರ್ಯ ಕಾರ್ಯಕ್ರಮದ ಸಮಯದಲ್ಲಿ ನಮ್ಮ ಗಮನವು ಸಿಒಇಗಳನ್ನು ಸುತ್ತುವರೆದಿರುವ ಗ್ರಾಮಗಳನ್ನು ಬೃಹತ್  ಜನ ಸಂಪರ್ಕ ಸಭೆ (ಔಟ್ ರೀಚ್) ಕಾರ್ಯಕ್ರಮಗಳ ಮೂಲಕ ಶ್ರೇಷ್ಠ ಗ್ರಾಮಗಳಾಗಿ ಪರಿವರ್ತಿಸುವುದು ”.

ರಾಯಭಾರಿಯಾದ  ಡಾ. ರಾನ್ ಮಲ್ಕಾ ಅವರು, “ಮೂರು ವರ್ಷಗಳ ಕ್ರಿಯಾ ಯೋಜನೆಯು (2021-2023) ನಮ್ಮ ಬೆಳೆಯುತ್ತಿರುವ ಸಹಭಾಗಿತ್ವದ ಬಲವನ್ನು ಪ್ರತಿಬಿಂಬಿಸುತ್ತದೆ ಮತ್ತು ಸ್ಥಳೀಯ ರೈತರಿಗೆ ಉತ್ಕೃಷ್ಟತೆಯ ಕೇಂದ್ರಗಳು ಮತ್ತು ಶ್ರೇಷ್ಠ ಗ್ರಾಮಗಳ ಮೂಲಕ ಪ್ರಯೋಜನವನ್ನು ನೀಡುತ್ತದೆಎಂದು ಹೇಳಿದರು.

ಕ್ರಿಯಾ ಯೋಜನೆಯು  ಅಸ್ತಿತ್ವದಲ್ಲಿರುವ ಉತ್ಕೃಷ್ಟತೆಯ ಕೇಂದ್ರಗಳನ್ನು ಬೆಳೆಸುವುದು, ಹೊಸ ಕೇಂದ್ರಗಳನ್ನು ಸ್ಥಾಪಿಸುವುದು, ಸಿಒಇ ಮೌಲ್ಯ ಸರಪಳಿಯನ್ನು ಹೆಚ್ಚಿಸುವುದು, ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ವಾವಲಂಬಿಯನ್ನಾಗಿ ಮಾಡುವುದು  ಮತ್ತು ಖಾಸಗಿ ವಲಯದ ಕಂಪನಿಗಳು ಮತ್ತು ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಇಂಡೋ-ಇಸ್ರೇಲ್ ವಿಲೇಜಸ್ ಆಫ್ ಎಕ್ಸಲೆನ್ಸ್ಗೆ ಸಂಬಂಧಿಸಿದಂತೆ, ಇದು ಎಂಟು ರಾಜ್ಯಗಳಲ್ಲಿ ಕೃಷಿಯಲ್ಲಿ ಆದರ್ಶ  ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ, ಜೊತೆಗೆ  75 ಹಳ್ಳಿಗಳೊಳಗಿನ  13  ಉತ್ಕೃಷ್ಟತೆಯ ಕೇಂದ್ರಗಳಾಗಿವೆ ಕಾರ್ಯಕ್ರಮವು ನಿವ್ವಳ ಆದಾಯದ ಹೆಚ್ಚಳವನ್ನು ಉತ್ತೇಜಿಸುತ್ತದೆ ಮತ್ತು ವೈಯಕ್ತಿಕ ರೈತನ  ಜೀವನೋಪಾಯವನ್ನು ಉತ್ತಮಗೊಳಿಸುತ್ತದೆ, ಸಾಂಪ್ರದಾಯಿಕ ಕೃಷಿಭೂಮಿಯನ್ನು ಐಐಎಪಿ ಮಾನದಂಡಗಳ ಆಧಾರದ ಮೇಲೆ ಆಧುನಿಕ  ಕೃಷಿ (ಫಾರಂ) ಭೂಮಿಯಾಗಿ ಪರಿವರ್ತಿಸುತ್ತದೆಇಸ್ರೇಲಿನ ನವೀನ ತಂತ್ರಜ್ಞಾನಗಳು ಮತ್ತು ವಿಧಾನಗಳೊಂದಿಗೆಆರ್ಥಿಕ ಸುಸ್ಥಿರತೆಯೊಂದಿಗೆ ದೊಡ್ಡ ಪ್ರಮಾಣದ ಮತ್ತು ಸಂಪೂರ್ಣ ಮೌಲ್ಯ ಸರಪಳಿ ವಿಧಾನವನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ. ಐಐವಿಒಇ ಕಾರ್ಯಕ್ರಮವು ಇವುಗಳ ಮೇಲೆ ಕೇಂದ್ರೀಕರಿಸುತ್ತದೆ: (1) ಆಧುನಿಕ ಕೃಷಿ ಮೂಲಸೌಕರ್ಯ, (2) ಸಾಮರ್ಥ್ಯ ವೃದ್ಧಿ, (3) ಮಾರುಕಟ್ಟೆ ಸಂಪರ್ಕ.

ಕ್ರಿಯಾ ಯೋಜನೆಗೆ  ಸಹಿ ಹಾಕುವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಶ್ರೀ ಪರ್ಶೋತ್ತಂ ರೂಪಾಲಾ ಮತ್ತು ಶ್ರೀ ಕೈಲಾಶ್ ಚೌಧರಿ ಅವರೊಂದಿಗೆ ಇಸ್ರೇಲಿ ವಿದೇಶಾಂಗ ಸಚಿವಾಲಯ, ಭಾರತದ ವಿದೇಶಾಂಗ ಸಚಿವಾಲಯ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

ಭಾರತದ ಅಡಿಯಲ್ಲಿರುವ   ಉತ್ಕೃಷ್ಟತೆಯ ಕೇಂದ್ರಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ -

https://static.pib.gov.in/WriteReadData/specificdocs/documents/2021/may/doc202152421.pdf

***(Release ID: 1721487) Visitor Counter : 256