ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಟಿಡಿಬಿ ರಾಷ್ಟ್ರೀಯ ಪ್ರಶಸ್ತಿ 2021 ಪಡೆದ ಬೆಂಗಳೂರಿನ ನವೋದ್ಯಮದ ಮರುಬಳಕೆಯ  ಇಂಗಾಲ ತಂತ್ರಜ್ಞಾನ

Posted On: 24 MAY 2021 6:51PM by PIB Bengaluru

ಇಂಗಾಲಾಮ್ಲವನ್ನು ರಾಸಾಯನಿಕ ಮತ್ತು ಇಂಧನವಾಗಿ ಪರಿವರ್ತಿಸಲು ವಾಣಿಜ್ಯಾತ್ಮಕ ಪರಿಹಾರ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ನವೋದ್ಯಮ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ)ಯಿಂದ ರಾಷ್ಟ್ರೀಯ ಪ್ರಶಸ್ತಿ 2021ಕ್ಕೆ ಪಾತ್ರವಾಗಿದೆ

ಜವಾಹರಲಾಲ್ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆ.ಎನ್‌.ಸಿ..ಎಸ್.ಆರ್.)ನಲ್ಲಿ ರೂಪುತಳೆದ ಬ್ರೀಥ್ ಅಪ್ಲೈಡ್ ಸೈನ್ಸಸ್, CO2 ವನ್ನು ಮೆಥನಾಲ್ ಮತ್ತು ಇತರ ರಾಸಾಯನಿಕಗಳಾಗಿ ಪರಿವರ್ತಿಸಲು ದಕ್ಷವಾದ ವೇಗವರ್ಧಕಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾದ ಪರಿಸರಾತ್ಮಕ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಅಭಿವದ್ಧಿಪಡಿಸಲು ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ವಿದ್ಯುತ್ ಉತ್ಪಾದನಾ ಕ್ಷೇತ್ರಗಳು, ಉಕ್ಕು ಉದ್ಯಮ, ಸಿಮೆಂಟ್ ಉದ್ಯಮ, ಮತ್ತು ರಾಸಾಯನಿಕ ಕೈಗಾರಿಕೆಗಳು ಮತ್ತು  ಸಿ.ಸಿ.ಯು.ಎಸ್. (ಇಂಗಾಲದ ಸೆರೆ, ಬಳಕೆ ಮತ್ತು ಸ್ವಾಧೀನ)ನಲ್ಲಿ ತೊಡಗಿಕೊಂಡಿರುವ ರಾಸಾಯನಿಕ ಕೈಗಾರಿಕೆಗಳು ಮತ್ತು ಸಮಗ್ರ ಬಹು ಘಟಕಗಳೂ  ಸೇರಿದಂತೆ ವಿವಿಧ ಮೂಲಗಳಿಂದ ಉತ್ಪತ್ತಿಯಾಗುವ ಮಾನವಜನ್ಯ CO2 ನಿಂದ ರಾಸಾಯನಿಕಗಳು ಮತ್ತು ಇಂಧನಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ಎಂಜಿನಿಯರಿಂಗ್ ಪ್ರಕ್ರಿಯೆಯ ಸುಧಾರಣೆಗೆ ಕಾರಣವಾಗಿದೆ

ಜೆ.ಎನ್‌.ಸಿ..ಎಸ್‌.ಆರ್‌.ನಲ್ಲಿರುವ ಹೊಸ ರಸಾಯನಶಾಸ್ತ್ರ ಘಟಕದ ಪ್ರೊ. ಸೆಬಾಸ್ಟಿಯನ್ ಸಿ ಪೀಟರ್ ಮತ್ತು ಅವರ ಗುಂಪು ಸಂಶೋಧನೆಯನ್ನು ನಡೆಸಿದೆ. ಅವರು ಡಿಎಸ್ಟಿ ನ್ಯಾನೊ ಅಭಿಯಾನದ ಉದಾರ ಧನಸಹಾಯದಿಂದ ಪ್ರಾರಂಭಿಸಲಾದ ಬ್ರೀಥ್ ಅಪ್ಲೈಡ್ ಸೈನ್ಸಸ್ ಸಹ-ಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ.

ಇಂಗಾಲಾಮ್ಲವನ್ನು ತಗ್ಗಿಸಿಮೆಥನಾಲ್ ಮತ್ತು ಇತರ ಉಪಯುಕ್ತ ರಾಸಾಯನಿಕಗಳು ಹಾಗೂ ಇಂಧನಗಳಾಗಿ ಪರಿವರ್ತಿಸುವ ಪ್ರಯೋಗಾಲಯ-ಪ್ರಮಾಣಿತ ಸಂಶೋಧನೆಯ ಆಧಾರದ ಮೇಲಿನ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಜೆ.ಎನ್‌.ಸಿ.,ಎಸ್,ಆರ್, ನೊಂದಿಗೆ ನವೋದ್ಯಮ ಒಪ್ಪಂದಕ್ಕೆ ಸಹಿ ಹಾಕಿದೆ.

CO2 ತಗ್ಗಿಸಿ ಉಪಯುಕ್ತ ರಾಸಾಯನಿಕಗಳು ಮತ್ತು ಇಂಧನಗಳಾಗಿ ಪರಿವರ್ತಿಸುವ ಕ್ಷೇತ್ರದಲ್ಲಿ ಸಂಶೋಧನೆಯನ್ನು ಪ್ರಯೋಗಾಲಯದ ಪ್ರಮಾಣದಿಂದ ಆರ್ಥಿಕವಾಗಿಯೂ ಪ್ರಾಯೋಗಿಕ ಪ್ರಮಾಣಕ್ಕೆ ಸುಗಮವಾಗಿ ಸಾಗಲು ತಿಳಿವಳಿಕೆ ಒಪ್ಪಂದ ನೆರವಾಗಲಿದೆ.

ಪ್ರಾಯೋಗಿಕ ವಿಧಾನದಲ್ಲಿ, ಪ್ರಸ್ತುತ ಇಂಗಾಲಾಮ್ಲ ಪರಿವರ್ತನೆಯ ಸಾಮರ್ಥ್ಯವು ದಿನವೊಂದಕ್ಕೆ 300 ಕೆಜಿ ಆಗಿದೆ, ಇದನ್ನು ಕೈಗಾರಿಕಾ ಪ್ರಮಾಣದಲ್ಲಿ ಹಲವು ನೂರು ಟನ್ಗಳಷ್ಟು ಅಳೆಯಬಹುದು. ಕೈಗಾರಿಕಾ ಉತ್ಪಾದನೆಯ ಮಟ್ಟವನ್ನು ತಲುಪಲು ಇದು ಕೆಲ ಸಮಯ ತೆಗೆದುಕೊಳ್ಳುತ್ತದೆ. ನಮ್ಮ ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಸಂಭಾವ್ಯ ಬಳಕೆಗಾಗಿ ಕೆಲವು ಉದ್ಯಮ ಕ್ಷೇತ್ರಗಳು ಶೀಘ್ರದಲ್ಲೇ ಬ್ರೀಥ್ನೊಂದಿಗೆ ಸಮಾಲೋಚಿಸುತ್ತಿವೆ "ಎಂದು ಪ್ರೊ. ಸೆಬಾಸ್ಟಿಯನ್ ಸಿ ಪೀಟರ್ ತಿಳಿಸಿದ್ದಾರೆ.

***


(Release ID: 1721382) Visitor Counter : 266


Read this release in: English , Urdu , Hindi , Punjabi