ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಸಲಹೆ ಬಿಡುಗಡೆ:  ”ಸಾರ್ಸ್ – ಕೋವ್ – 2 ವೈರಾಣು ಹರಡುವಿಕೆ ನಿಲ್ಲಿಸಿ, ಸಾಂಕ್ರಾಮಿಕ ನಿರ್ಮೂಲ ಮಾಡಿ – ಮುಖಗವಸು, ಸಾಮಾಜಿಕ ಅಂತರ ಕಾಯ್ದುಕೊಂಡು ಶುಚಿತ್ವಕ್ಕೆ ಒತ್ತು ನೀಡಿ ಮತ್ತು ಶುದ್ಧ ಗಾಳಿ ಮೂಲಕ ಸೋಂಕು ನಿಯಂತ್ರಿಸಿ

Posted On: 20 MAY 2021 9:00AM by PIB Bengaluru

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿ ಸುಲಭ, ಸರಳವಾಗಿ ಅನುಸರಿಸುವ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾರ್ಸ್ ಕೋವ್ – 2 ವೈರಾಣು ಹರಡುವಿಕೆ ನಿಲ್ಲಿಸಿ, ಸಾಂಕ್ರಾಮಿಕ ನಿರ್ಮೂಲ ಮಾಡಿ ಮುಖಗವಸು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಶುಚಿತ್ವಕ್ಕೆ ಒತ್ತು ನೀಡಿ ಮತ್ತು ಶುದ್ಧ ಗಾಳಿ ಮೂಲಕ ಸೋಂಕು ನಿಯಂತ್ರಿಸಿಎಂದು ಸಲಹೆ ನೀಡಿದೆ. ಭಾರತದಲ್ಲಿ ಸಾಂಕ್ರಾಮಿಕ ಉಲ್ಬಣಗೊಳ್ಳುತ್ತಿದ್ದಂತೆ ಸರಳ ಸಾಧನಗಳು ಮತ್ತು ಅಭ್ಯಾಸಗಳು ಸಾರ್ಸ್ ಕೋವ್ – 2 ವೈರಾಣು ಹರಡುವುದನ್ನು ತಗ್ಗಿಸುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕಳಪೆ ಗಾಳಿ ಇರುವ ಮನೆಗಳು, ಕಚೇರಿಗಳು ಇತ್ಯಾದಿಗಳಿಂದ ಉತ್ತಮ ಗಾಳಿ ಇರುವ ಸ್ಥಳಗಳು ಸೋಂಕು ನಿಯಂತ್ರಣಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಗಾಳಿ ಇರುವ ಸ್ಥಳಗಳು ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಅಪಾಯವನ್ನು ತಗ್ಗಿಸುತ್ತದೆ.

ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯುವ ಮೂಲಕ ಹಾಗೂ ಒಳಗಿನ ಗಾಳಿಯನ್ನು ಹೊರ ಹಾಕುವ ವ್ಯವಸ್ಥೆಗಳನ್ನು ಬಳಸುವ ಮೂಲಕ ಗಾಳಿಯಿಂದ ವಾಸನೆಯನ್ನು ದುರ್ಬಲಗೊಳಿಸಬಹುದು. ಸುಧಾರಿತ ದಿಕ್ಕಿನ ಗಾಳಿಯಿಂದ ಸಂಗ್ರಹವಾಗಿರುವ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡಬಹುದು

ಗಾಳಿಯು ಸಮುದಾಯದ ರಕ್ಷಣೆಯಾಗಿದ್ದು, ಮನೆ ಅಥವಾ ಕೆಲಸದ ಸ್ಥಳದಲ್ಲಿ ನಮ್ಮೆಲ್ಲರನ್ನೂ ರಕ್ಷಿಸುತ್ತದೆ. ಕಚೇರಿಗಳು, ಮನೆಗಳು ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕ ಸ್ಥಳಗಳಲ್ಲಿ ಹೊರಗಿನ ಗಾಳಿ ಹರಿಯುವಂತೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಹರಿಯುವ ಸುಧಾರಣಾ ಕ್ರಮಗಳಿಗೆ ಆದ್ಯತೆ ನೀಡಬೇಕು. ಗುಡಿಸಲುಗಳು, ಮನೆಗಳು, ಕಚೇರಿಗಳು ಮತ್ತು ದೊಡ್ಡ ಕೇಂದ್ರೀಕೃತ ಕಟ್ಟಡಗಳಿಗೆ ಇದನ್ನು ಶಿಫಾರಸ್ಸು ಮಾಡಲಾಗಿದೆ. ಪ್ಯಾನ್ ಗಳ ಬದಲಿಗೆ ತೆರೆದ ಕಿಟಕಿಗಳು ಮತ್ತು ಬಾಗಿಲುಗಳು ಅಷ್ಟೇ ಅಲ್ಲ ಸ್ವಲ್ಪ ತೆರೆದ ಕಿಟಕಿಗಳಿಂದಲೂ ಸಹ ಹೊರಾಂಗಣ ಗಾಳಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇದರಿಂದ ಗಾಳಿಯ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಗಾಳಿ ಒಳಗಡೆ ಬರಲು ಅವಕಾಶ ಮಾಡಿಕೊಡುವುದರಿಂದ  ಮತ್ತು ಎಕ್ಸಿಸ್ಟ್ ಪ್ಯಾನ್ ಗಳ ಬಳಕೆಯಿಂದ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಕಟ್ಟಡಗಳಲ್ಲಿನ ಕೇಂದ್ರೀಕೃತ ವಾಯು ನಿರ್ವಹಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ವಾಯು ಶೋಧನೆಗೆ ಆದ್ಯತೆ ನೀಡಬೇಕು, ವಾಯು ಶೋಧನೆಯ ದಕ್ಷತೆ ಹೆಚ್ಚಿಸಬೇಕು. ಕಚೇರಿಗಳು, ಸಭಾಂಗಣಗಳು, ಶಾಪಿಂಗ್ ಮಾಲ್ ಗಳಲ್ಲಿ ಹೊರಾಂಗಣ ವಾಯು ವಿತರಣಾ ಆಯ್ಕೆಗಳನ್ನು ಸೀಮಿತಗೊಳಿಸಿದಾಗ ವಿಶೇಷವಾಗಿ ಸಹಾಯಕವಾಗುತ್ತದೆ.

ಗ್ಯಾಬಲ್ ಪ್ಯಾನ್ ಗಳ ವ್ಯವಸ್ಥೆ ಮತ್ತು ಮೇಲ್ಛಾವಣಿಯ ವೆಂಟಿಲೇಟರ್ ಗಳ ಬಳಕೆಗೆ ಶಿಫಾರಸ್ಸು ಮಾಡಲಾಗಿದೆ. ನಿಯಮಿತವಾಗಿ ಸ್ವಚ್ಛಗೊಳಿಸುವ ಮತ್ತು ಶೋಧನಾ ಪರಿಕರಗಳನ್ನು ಬದಲಾವಣೆ ಮಾಡುವುದನ್ನು ಹೆಚ್ಚಾಗಿ ಶಿಫಾರಸ್ಸು ಮಾಡಲಾಗಿದೆ.

ಸೋಂಕಿತ ವ್ಯಕ್ತಿಯಿಂದ ಲಾಲಾರಸ ಮತ್ತು ಮೂಗಿನ ಹನಿಗಳು ಮತ್ತು ಏರೋಸಾಲ್ ರೂಪದಲ್ಲಿ ಸೋಂಕಿತ ವ್ಯಕ್ತಿ ಉಸಿರಾಡುವಾಗ, ಮಾತನಾಡುವಾಗ, ಹಾಡುವಾಗ, ನಗುವುದು, ಕೆಮ್ಮ ಮತ್ತು ಸೀನಿದ ಸಂದರ್ಭಗಳು ವೈರಾಣು ಪ್ರಸರಣದ ಪ್ರಾಥಮಿಕ ಮಾದರಿಗಳಾಗಿವೆ. ಸೋಂಕಿತ ವ್ಯಕ್ತಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ವೈರಾಣು ಹರಡಬಹುದು. ಲಕ್ಷಣಗಳಿಲ್ಲದವರೂ ಸಹ ಸೋಂಕು ಪಸರಿಸಬಹುದು. ಹೀಗಾಗಿ ಜನತೆ ಮುಖಗವಸು ಧರಿಸಬೇಕು. ಎರಡು ಮುಖಗವಸುಗಳು ಅಥವಾ ಎನ್-95 ಮಾಸ್ಕ್ ಗಳನ್ನು ಧರಿಸಬಹುದು.

ಸಾರ್ಸ್-ಕೋವ್-2 ವೈರಾಣು ಮನುಷ್ಯನಿಗೆ ತಗಲಲಿದ್ದು, ಇದು ಹಲವು ಪಟ್ಟು ಹೆಚ್ಚಾಗುತ್ತದೆ. ಮನುಷ್ಯರ ಆಸರೆಯಿಲ್ಲದೇ ಅದು ಬದಕಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವೈರಾಣು ಹರಡುವುದನ್ನು ತಡೆಯುವುದರಿಂದ ಸೋಂಕಿನ ಪ್ರಮಾಣ ಒಂದು ಹಂತಕ್ಕೆ ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ಅದು ಸಾಯಬಹುದು. ಇದನ್ನು ಪ್ರಾಧಿಕಾರಗಳು, ಸ್ಥಳೀಯ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸಮುದಾಯಗಳ ಸಹಕಾರ ಮತ್ತು ಬೆಂಬಲದಿಂದ ಸಾಧಿಸಬಹುದು. ಮುಖಗವಸು ಬಳಕೆ, ಉತ್ತಮ ಗಾಳಿ, ವ್ಯಕ್ತಿಗತ ಅಂತರ, ಶುಚಿತ್ವದಿಂದ ವೈರಾಣು ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಬಹುದಾಗಿದೆ.

Kindly click here for the Advisory in English

Kindly click here for the Advisory in Hindi

***



(Release ID: 1720192) Visitor Counter : 342


Read this release in: English , Urdu , Hindi , Telugu