ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಡಿಎಸ್ ಟಿ ಇನ್ಸ್ಟಿಟ್ಯೂಟ್ ಟಿಫಾಕ್ (TIFAC ) ಸಮಗ್ರ ಕೋವಿಡ್ 19 ಕಮಾಂಡ್ ಸೆಂಟರ್ ಅನ್ನು ಸೂಚಿಸುತ್ತದೆ
Posted On:
19 MAY 2021 4:38PM by PIB Bengaluru
ಕೋವಿಡ್ 19 ಕಮಾಂಡ್ ಸೆಂಟರ್ ಮತ್ತು ಹಳ್ಳಿಗಳ ನಡುವೆ ಎರಡೂ ಕಡೆಯಿಂದ ಮಾಹಿತಿಯ ಹರಿವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದೊಂದಿಗೆ ಪ್ರತಿ ಜಿಲ್ಲೆಯಲ್ಲಿ ಕೋವಿಡ್ 19 ಕಮಾಂಡ್ ಸೆಂಟರ್ ಸ್ಥಾಪಿಸಬೇಕು. ಲಭ್ಯವಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಇತರ ವೈಜ್ಞಾನಿಕ ಉದ್ದೇಶಗಳಿಗಾಗಿ ದತ್ತಾಂಶದ ಬಳಕೆಗೆ ಇದು ಸಹಾಯ ಮಾಡುತ್ತದೆ ಎಂದು ತಂತ್ರಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ತಂತ್ರಜ್ಞಾನದ ಸಮಿತಿಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ತಂತ್ರಜ್ಞಾನ ಮಾಹಿತಿ ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ (ಟಿಫಾಕ್) ಸೂಚಿಸಿದೆ.
ಕೋವಿಡ್ 19ರ ಉಲ್ಬಣವು ಊಹಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿದೆ, ವಿಶೇಷವಾಗಿ ಎರಡನೇ ಅಲೆಯ ಸಮಯದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ವ್ಯಾಪಿಸಿದೆ. ಸಾಂಕ್ರಾಮಿಕ ರೋಗವು ಭಾರತದ ಹಳ್ಳಿಗಳಲ್ಲಿ ವಿಭಿನ್ನ ತೀವ್ರತೆಯಲ್ಲಿ ಹರಡುತ್ತಿದ್ದಂತೆ, ಸೋಂಕಿನ ಪ್ರಮಾಣ, ಚೇತರಿಕೆ ಪ್ರಮಾಣ, ಸಾವಿನ ಪ್ರಮಾಣ, ಔಷಧಿಗಳ ಪೂರೈಕೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದಂತಹ ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆಯ ಬಗ್ಗೆ ನಿಖರವಾದ ಮಾಹಿತಿಯು ಕೋವಿಡ್-19ಅನ್ನು ನಿಯುಂತ್ರಿಸಲು ಸಂಪನ್ಮೂಲಗಳ ಸಮರ್ಥ ನಿರ್ವಹಣೆಗೆ ಅನುಕೂಲವಾಗುವಂತೆ ಒಂದು ಕ್ಲಿಕ್ನಲ್ಲಿ ಆಡಳಿತಕ್ಕೆ ಲಭ್ಯವಾಗಬೇಕಿದೆ.
ಟಿಫಾಕ್ ಪ್ರಕಾರ, ಎಲ್ಲಾ ಜಿಲ್ಲೆಗಳ ಕೋವಿಡ್ 19ರ ಕಮಾಂಡ್ ಸೆಂಟರ್ ಗಳನ್ನು ರಾಜ್ಯ ಕೋವಿಡ್ 19 ಕಮಾಂಡ್ ಸೆಂಟರಿನೊಂದಿಗೆ ಸಂಪರ್ಕಿಸಬೇಕು, ಇದು ಇಡೀ ರಾಜ್ಯದ ಮಾಹಿತಿಯ ಭಂಡಾರವಾಗಿರುತ್ತದೆ. ಅಂತೆಯೇ, ಎಲ್ಲಾ ರಾಜ್ಯ ಕೋವಿಡ್ 19 ಕಮಾಂಡ್ ಸೆಂಟರ್ ಗಳನ್ನು ಕೇಂದ್ರ ಕೋವಿಡ್ 19 ಕಮಾಂಡ್ ಸೆಂಟರ್ ಗಳೊಂದಿಗೆ ಡಿಜಿಟಲ್ ಮುಖಾಂತರ ಸಂಪರ್ಕಿಸಲಾಗುವುದು ಇದರಿಂದ ಭಾರತದ ಎಲ್ಲಾ ರಾಜ್ಯಗಳು ಮತ್ತು ಹಳ್ಳಿಗಳ ಮಾಹಿತಿಯು ಕೇಂದ್ರೀಯವಾಗಿ ಲಭ್ಯವಾಗುತ್ತದೆ.
ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಬೇಕು ಮತ್ತು ಸಂಗ್ರಹಿಸಬೇಕು ಇದರಿಂದ ಸಮಯ ಸರಣಿಯ ದತ್ತಾಂಶವು ಇಡೀ ಭಾರತದ ಸೆಂಟ್ರಲ್ ಕೋವಿಡ್ 19 ಕಮಾಂಡ್ ಸೆಂಟರ್ ಮತ್ತು ಇಡೀ ರಾಜ್ಯಗಳಿಗೆ ರಾಜ್ಯ ಕೋವಿಡ್ 19 ಕಮಾಂಡ್ ಸೆಂಟರ್ ನಲ್ಲಿ ಲಭ್ಯವಿರುತ್ತದೆ.
***
(Release ID: 1720109)
Visitor Counter : 189