ಭೂವಿಜ್ಞಾನ ಸಚಿವಾಲಯ
ಲಕ್ಷದ್ವೀಪ, ಕೇರಳ, ಮಾಹೆಯ ಒಳನಾಡು ಪ್ರದೇಶಗಳ ಹಲವೆಡೆ ಅಧಿಕ ಮಳೆಯಿಂದ ಭಾರಿ ಮಳೆ ಸಾಧ್ಯತೆ; ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ, ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಮಳೆ ನಿರೀಕ್ಷೆ; ಮೇ 14ರಂದು ಪಶ್ಚಿಮ ಬಂಗಾಳ ಉಪ ಹಿಮಾಲಯ ಮತ್ತು ಸಿಕ್ಕಿಂನ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ
ಮೇ 15ರಂದು ಜಾರ್ಖಂಡ್, ಪಶ್ಚಿಮಬಂಗಾಳದ ಉಪ ಹಿಮಾಲಯಮತ್ತು ಸಿಕ್ಕಿಂ, ಗುಜರಾತ್ ರಾಜ್ಯ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ತೆಲಂಗಾಣ, ರಾಯಲಸೀಮಾ, ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಗುಡುಗಿನಿಂದ ಕೂಡಿದ ಮಿಂಚು ಮತ್ತು ಗಾಳಿ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ವೇಗ) ಬೀಸುವ ಸಾಧ್ಯತೆ
ಕೊಂಕಣ, ಗೋವಾ, ಸೌರಾಷ್ಟ್ರ, ಕಚ್, ಕೇರಳ, ಮಾಹೆಯ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರಿ ಮಳೆ; ಮಧ್ಯ ಮಹಾರಾಷ್ಟ್ರ(ಘಟ್ಟ ಪ್ರದೇಶ) ಕರ್ನಾಟಕದ ಕರಾವಳಿಯ ಒಳನಾಡು ಪ್ರದೇಶಗಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ; ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶಗಳಲ್ಲಿ ಮೇ 18ರಂದು ಭಾರೀ ಮಳೆ
Posted On:
14 MAY 2021 11:15AM by PIB Bengaluru
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ರಾಷ್ಟ್ರೀಯ ಹವಾಗುಣ ಮುನ್ಸೂಚನಾ ಕೇಂದ್ರದ ವರದಿಯಂತೆ:
ಮುಂದಿನ 5 ದಿನಗಳಿಗೆ ಹವಾಮಾನ ಮುನ್ನೆಚ್ಚರಿಕೆ
14ನೇ ಮೇ (ಒಂದನೇ ದಿನ) :
· ಪಶ್ಚಿಮ ಬಂಗಾಳದ ಗ್ಯಾಂಗ್ ಟಿಕ್ ನ ಒಳನಾಡು ಪ್ರದೇಶದಲ್ಲಿ ಮಿಂಚು ಮತ್ತು ಬಿರುಗಾಳಿಯಿಂದ ಕೂಡಿದ ಗುಡುಗು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ) ಬೀಸುವ ಸಾಧ್ಯತೆ ಇದೆ: ಪಂಜಾಬ್ ಮತ್ತು ಹರಿಯಾಣ, ಚಂಡಿಗಢ ಮತ್ತು ದೆಹಲಿ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ತೆಲಂಗಾಣ, ಕರ್ನಾಟಕದ ಕರಾವಳಿ, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಮಿಂಚುಸಹಿತ ಗಾಳಿ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ; ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಹಿಮಾಚಲಪ್ರದೇಶ, ಉತ್ತರಾಖಂಡ, ರಾಜಸ್ಥಾನ, ವಿದರ್ಭ, ಛತ್ತೀಸ್ ಗಢ, ಅರುಣಾಚಲಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರ, ಆಂಧ್ರದ ಕರಾವಳಿ ಮತ್ತು ಯಾನಂ ರಾಯಲಸೀಮಾ ಮತ್ತು ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಮಿಂಚು ಇರಲಿದೆ.
· ಲಕ್ಷದ್ವೀಪ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶದ ಕೆಲವೆಡೆ ಅಧಿಕದಿಂದ ಭಾರೀ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ; ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಹಾಗೂ ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಮಳೆಯಾಗಲಿದೆ; ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂನ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
· ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಮತ್ತು ನೈಋತ್ಯ ಭಾಗದ ಹಲವೆಡೆ ಮತ್ತು ಹಿಂದೂಮಹಾಸಾಗರದ ಸಮಭಾಜಕ ಪ್ರದೇಶ, ಮಾಲ್ಡವೀಸ್, ಕೊಮೊರಿನ್ ಮತ್ತು ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ಉದ್ದಕ್ಕೂ ಪ್ರದೇಶಗಳಿಗೆ ಹೊಂದಿಕೊಂಡ ಜಾಗದಲ್ಲಿ ತಣ್ಣನೆಯ ಗಾಳಿ (ಗಾಳಿಯ ವೇಗ ಪ್ರತಿ ಗಂಟೆಗೆ 40 ರಿಂದ 50ರ ವರೆಗೆ ಹಾಗೂ 60 ಕಿ.ಮೀ.ವರೆಗೆ ಬೀಸುವ) ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಮತ್ತು ಲಕ್ಷದ್ವೀಪ – ಮಾಲ್ಡವೀಸ್ ಗೆ ಹೊಂದಿಕೊಂಡಿರುವ ಪ್ರದೇಶಗಳು ಹಾಗೂ ಹಿಂದೂಮಹಾಸಾಗರದ ಸಮಭಾಜಕ ಪ್ರದೇಶಗಳಲ್ಲಿ ಸಮುದ್ರದ ಸ್ಥಿತಿಗತಿ ತುಂಬಾ ಒರಟಾಗಿರಲಿದೆ. ಮೀನುಗಾರರಿಗೆ ಈ ಪ್ರದೇಶಗಳಲ್ಲಿ ಸಮುದ್ರಕ್ಕಿಳಿಯದಂತೆ ಸಲಹೆ ನೀಡಲಾಗಿದೆ.
15ನೇ ಮೇ(ಎರಡನೇ ದಿನ):
· ಜಾರ್ಖಂಡ್, ಪಶ್ಚಿಮ ಬಂಗಾಳದ ಉಪ ಹಿಮಾಲಯ, ಸಿಕ್ಕಿಂ, ಗುಜರಾತ್ ರಾಜ್ಯ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ತೆಲಂಗಾಣ, ರಾಯಲಸೀಮಾ, ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಮಿಂಚು ಹಾಗೂ ಗುಡುಗು ಸಹಿತ ಬಿರುಗಾಳಿ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗ) ಬೀಸುವ ಸಾಧ್ಯತೆ ಇದೆ; ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ವಿದರ್ಭ, ಛತ್ತೀಸ್ ಗಢ ಪಶ್ಚಿಮಬಂಗಾಳದ ಗ್ಯಾಂಗ್ ಟೆಕ್, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರ, ಕೊಂಕಣ ಮತ್ತು ಗೋವಾದ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಗಾಳಿ ಬೀಸಲಿದೆ.
· ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಕೆಲ ಪ್ರದೇಶಗಳಲ್ಲಿ ಭಾರೀ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, ಪುದುಚೆರಿ, ಕರೈಕಲ್ ಮತ್ತು ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಮಧ್ಯ ಮಹಾರಾಷ್ಟ್ರ(ಘಟ್ಟ ಪ್ರದೇಶ) ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮಾ ಮತ್ತು ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
· ಅರಬ್ಬೀ ಸಮುದ್ರದ ನೈಋತ್ಯ ಮತ್ತು ಲಕ್ಷದ್ವೀಪ-ಮಾಲ್ಡವೀಸ್ ಗೆ ಹೊಂದಿಕೊಂಡಿರುವ ಪ್ರದೇಶ ಹಾಗೂ ಹಿಂದೂ ಮಹಾಸಾಗರದ ಸಮಭಾಜಕಕ್ಕೆ ಹೊಂದಿಕೊಂಡ ಪ್ರದೇಶ ಮತ್ತು ಕೇರಳ ಹಾಗೂ ಕರ್ನಾಟಕದ ಕರಾವಳಿ ಉದ್ದಕ್ಕೂ ತುಫಾನು ಪ್ರತಿ ಗಂಟೆಗೆ 50 ರಿಂದ 60 ಕಿ.ಮೀ.ನಿಂದ ಹಿಡಿದು, 70 ಕಿ.ಮೀ. ವೇಗದಲ್ಲಿ ಬೀಸಲಿದೆ. ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಉದ್ದಕ್ಕೂ ಈ ಬಿರುಗಾಳಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ.ನಿಂದ ಹಿಡಿದು 60 ಕಿ.ಮೀ. ವರೆಗೆ ಬೀಸುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಪ್ರದೇಶ ಮತ್ತು ನೈಋತ್ಯ ಪ್ರದೇಶದಲ್ಲಿ ಹಾಗೂ ಹಿಂದೂ ಮಹಾಸಾಗರದ ಸಮಭಾಜಕಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ತಂಪಿನ ವಾತಾವರಣ ಇರಲಿದ್ದು, ಬಿರುಗಾಳಿ(ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ.ನಿಂದ 60 ಕಿ.ಮೀ. ವರೆಗೆ) ಬೀಸುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿ ಒರಟಾಗಿರಲಿದೆ. ಈ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಲೆಗಳೂ ಸಹ ಏಳುವ ಎಚ್ಚರಿಕೆ ನೀಡಲಾಗಿದೆ. ಮೇ 15 ಮತ್ತು 16 ರಂದು ಅಲೆಗಳ ಎತ್ತರ ಖಗೋಳ ಎತ್ತರಕ್ಕಿಂತ ಸುಮಾರು ಒಂದು ಮೀಟರ್ ಏರಿಕೆಯಾಗಿ ಲಕ್ಷದ್ವೀಪ ಒಳನಾಡಿನ ತಗ್ಗು ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆ ಇದೆ.
ಮೇ 16( ಮೂರನೇ ದಿನ) :
· ಗುಜರಾತ್ ರಾಜ್ಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ರಾಯಲಸೀಮಾ, ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಮಿಂಚು ಗುಡುಗು ಸಹಿತ ಬಿರುಗಾಳಿ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗ) ಬೀಸುವ ಸಾಧ್ಯತೆ ಇದೆ; ವಿದರ್ಭ ಮತ್ತು ಛತ್ತೀಸ್ ಗಢದ ಒಳನಾಡು ಪ್ರದೇಶಗಳಲ್ಲಿ ಮಿಂಚಿನೊಂದಿಗೆ ಗಾಳಿ ಬೀಸಲಿದೆ.
· ಕೊಂಕಣ ಮತ್ತು ಗೋವಾ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ; ಮಧ್ಯ ಮಹಾರಾಷ್ಟ್ರ(ಘಟ್ಟ ವಲಯ), ಕರ್ನಾಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಮತ್ತು ಮಾಹೆ, ಲಕ್ಷದ್ವೀಪದ ಒಳನಾಡು ಪ್ರದೇಶದಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ ಮತ್ತು ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ ಮತ್ತು ರಾಯಲಸೀಮೆಯ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
· ಅರಬ್ಬೀ ಸಮುದ್ರದ ಪೂರ್ವ – ಕೇಂದ್ರದ ಪ್ರದೇಶ ಮತ್ತು ಅರಬ್ಬೀ ಸಮುದ್ರದ ಆಗ್ನೇಯ ಪ್ರದೇಶ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಗಾಳಿ ಪ್ರತಿ ಗಂಟೆಗೆ 60 ರಿಂದ 70 ಕಿ.ಮೀ. ಹಿಡಿದು 80 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 60 ರಿಂದ 70ರಿಂದ ಹಿಡಿದು, 80 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಅದೇ ರೀತಿ ದಕ್ಷಿಣ ಮಹಾರಾಷ್ಟ್ರ-ಗೋವಾ ಕರಾವಳಿಯಲ್ಲಿ ಮೇ 16ರಂದು ತುಫಾನ್ ಪ್ರತಿ ಗಂಟೆಗೆ 50-60 ರಿಂದ ಹಿಡಿದು 70 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
· ಅರಬ್ಬೀ ಸಮುದ್ರದ ಆಗ್ನೇಯ ಮತ್ತು ನೈಋತ್ಯಕ್ಕೆ ಹೊಂದಿಕೊಂಡಿರುವ ಹಲವು ಪ್ರದೇಶಗಳಲ್ಲಿ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ಮಂಜಿನಿಂದ ಕೂಡಿದ ಗಾಳಿ(ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಿಂದ 60 ಕಿ.ಮೀ. ವೇಗದಲ್ಲಿ) ಬೀಸುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಸಮುದ್ರದ ಸ್ಥಿತಿಗತಿ ಗಂಭೀರವಾಗಿರಲಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಲೆಗಳೂ ಸಹ ಮೇಲೇಳುವ ಸಾಧ್ಯತೆ ಇದೆ. ಮೇ 15 ಮತ್ತು 16 ರಂದು ಅಲೆಗಳ ಎತ್ತರ ಖಗೋಳ ಎತ್ತರಕ್ಕಿಂತ ಸುಮಾರು ಒಂದು ಮೀಟರ್ ಏರಿಕೆಯಾಗಿ ಲಕ್ಷದ್ವೀಪ ಒಳನಾಡಿನ ತಗ್ಗು ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆ ಇದೆ.
ಮೇ 17(ನಾಲ್ಕನೇ ದಿನ):
· ಗುಜರಾತ್ ಪ್ರದೇಶ, ತೆಲಂಗಾಣ, ರಾಯಲಸೀಮಾ, ಕರಾವಳಿ ಮತ್ತು ಕರ್ನಾಟಕದ ಉತ್ತರ ಒಳನಾಡು, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಮಿಂಚು ಗುಡುಗು ಸಹಿತ ಬಿರುಗಾಳಿ(ಪ್ರತಿ ಗಂಟೆಗೆ 40 ರಿಂದ 40 ಕಿ.ಮೀ. ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಗಾಳಿ ಬೀಸಬಹುದು.
· ಕೊಂಕಣ ಮತ್ತು ಗೋವಾದ ಹಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ: ಮಧ್ಯ ಮಹಾರಾಷ್ಟ್ರ(ಘಟ್ಟ ಪ್ರದೇಶ), ಕರ್ನಾಟಕದ ಕರಾವಳಿ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಮಳೆ ಸಾಧ್ಯತೆ: ಅಂತೆಯೇ ಸೌರಾಷ್ಟ್ರ ಮತ್ತು ಕಚ್, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳುನಾಡು, ಪುದುಚೆರಿ ಹಾಗೂ ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.
· ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣ ಗುಜರಾತ್ ದಾಮನ್ ಮತ್ತು ದಿಯು ಕರಾವಳಿ ಉದ್ದಕ್ಕೂ ತಂಪನೆಯ ಗಾಳಿ ಪ್ರತಿ ಗಂಟೆಗೆ ಸುಮಾರು 40 – 50 ರಿಂದ ಹಿಡಿದು, 60 ಕಿ.ಮೀ. ವೇಗದಲ್ಲಿ ಬೀಸಲಿದೆ. ಅರಬ್ಬೀ ಸಮುದ್ರದ ಈಶಾನ್ಯ ಮತ್ತು ಗುಜರಾತ್ ಕರಾವಳಿ ಉದ್ದಕ್ಕೂ ಸಮುದ್ರದ ಸ್ಥಿತಿಗತಿ ತುಂಬಾ ಒರಟಾಗಿರುವ ಸಾಧ್ಯತೆ ಇದೆ.
ಮೇ 18(5ನೇ ದಿನ):
ಗುಜರಾತ್ ಪ್ರದೇಶ, ತೆಲಂಗಾಣ, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ಕೇರಳ ಮತ್ತು ಮಾಹೆ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶಗಳಲ್ಲಿ ಮಿಂಚು ಗುಡುಗು ಸಹಿತ ಬಿರುಗಾಳಿ(ಪ್ರತಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ) ಬೀಸುವ ಸಾಧ್ಯತೆ ಇದೆ; ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಂಧ್ರ ಪ್ರದೇಶದ ಕರಾವಳಿ ಮತ್ತು ಯಾನಂ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶಗಳಲ್ಲಿ ಮಿಂಚುಸಹಿತ ಗಾಳಿ ಬೀಸುವ ಸಾಧ್ಯತೆ ಇದೆ.
· ಕೊಂಕಣ ಮತ್ತು ಗೋವಾ, ಸೌರಾಷ್ಟ್ರ ಮತ್ತು ಕಚ್ ಹಾಗೂ ಕೇರಳ ಮತ್ತು ಮಾಹೆಯ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ: ಮಧ್ಯ ಮಹಾರಾಷ್ಟ್ರದ(ಘಟ್ಟ ಪ್ರದೇಶ) ಮತ್ತು ಕರ್ನಾಟಕದ ಕರಾವಳಿಯ ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳುನಾಡು, ಪುದುಚೆರಿ ಹಾಗೂ ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.
· ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮತ್ತು ಉತ್ತರ ಗುಜರಾತ್ ಹಾಗೂ ದಾಮನ್ ದಿಯು ಕರಾವಳಿ ಉದ್ದಕ್ಕೂ ತಂಪನೆಯ ಗಾಳಿ ಪ್ರತಿ ಗಂಟೆಗೆ 40-50 ಕಿ.ಮೀ. ನಿಂದ 60 ಕಿ.ಮೀ. ವರೆಗೆ ಬೀಸುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಈಶಾನ್ಯ ಭಾಗ ಮತ್ತು ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಸಮುದ್ರದ ಸ್ಥಿತಿಗತಿ ತುಂಬಾ ಒರಟಾಗಿರಲಿದೆ.
Kindly download MAUSAM APP for location specific forecast & warning, MEGHDOOT APP for Agromet advisory and DAMINI APP for Lightning Warning & visit state MC/RMC websites for district wise warning.
(Please CLICK HERE for details in graphics)
***
(Release ID: 1718901)
Visitor Counter : 230