ಇಂಧನ ಸಚಿವಾಲಯ

ಪವರ್ ಸಿಸ್ಟಂ ಆಪರೇಷನ್ ಕಾರ್ಪೊರೇಷನ್ (ಪೊಸೊಕೊ) ಇಂಧನದ ಸಾರ್ವಜನಿಕ ವಲಯದ 300 ಉದ್ಯೋಗಿಗಳಿಗೆ ಲಸಿಕೆ ಹಾಕಿಸಿದೆ

Posted On: 11 MAY 2021 6:25PM by PIB Bengaluru

ಭಾರತದ ಗ್ರಿಡ್ ಆಪರೇಟರ್ ಆದ ಇಂಧನ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ವಲಯವಾದ ಪೊಸೊಕೊ ಕೋವಿಡ್ -19 ಲಸಿಕಾ ಅಭಿಯಾನವನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ಇಂಧನ ಸಚಿವಾಲಯದ ಅಡಿಯಲ್ಲಿ ವಿವಿಧ  ಸಂಸ್ಥೆಗಳಲ್ಲಿ  ಕೆಲಸ ಮಾಡುತ್ತಿರುವ 300 ಉದ್ಯೋಗಿಗಳಿಗೆ ಲಸಿಕೆ ಹಾಕಲಾಯಿತು.

18-44 ವರ್ಷದೊಳಗಿನ ವ್ಯಕ್ತಿಗಳಿಗಾಗಿ ದೆಹಲಿಯ ಅಪೊಲೊ ಆಸ್ಪತ್ರೆಯ ಸಹಯೋಗದೊಂದಿಗೆ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್  ಈ ಅಭಿಯಾನವನ್ನು ಆಯೋಜಿಸಿತ್ತು.  ಅವರಿಗೆ ಕೋವಿಶೀಲ್ಡ್ ನ ಮೊದಲ ಡೋಸ್ ನೀಡಲಾಯಿತು.

ಈ ಅಭಿಯಾನದಲ್ಲಿ, ಪೊಸೊಕೊ, ಪಿಜಿಸಿಐಎಲ್, ಇಇಎಸ್ಎಲ್, ಎನ್ಎಚ್ಪಿಸಿ, ಎನ್ಟಿಪಿಸಿ, ಸಿಇಎ, ಸಿಇಆರ್ಸಿ, ಎಂಒಪಿ, ಸೇರಿದಂತೆ ವಿದ್ಯುತ್ ವಲಯದ ಸಿಪಿಎಸ್ಇ / ಸಂಸ್ಥೆಗಳ ಉದ್ಯೋಗಿಗಳು  ಹಾಗೂ ಕುಟುಂಬ ಸದಸ್ಯರಿಗೆ  ಕೋವಿಶೀಲ್ಡ್ ನ ಮೊದಲ ಡೋಸ್ ನೀಡಲಾಯಿತು.  ನವದೆಹಲಿಯ ಕಟ್ವಾರಿಯಾ ಸರೈನಲ್ಲಿರುವ ನ್ಯಾಷನಲ್ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎನ್ಎಲ್ ಡಿ ಸಿ) ಕಚೇರಿಯು ಈ ಅಭಿಯಾನದ ಸ್ಥಳವಾಗಿತ್ತು.

ಇಂಧನ ಸಚಿವಾಲಯದ  ಮಾನ್ಯ ಕೇಂದ್ರ ರಾಜ್ಯ ಸಚಿವವಾರದ (ಸ್ವ.ನಿ.) ಶ್ರೀ ಆರ್.ಕೆ  ಸಿಂಗ್ , ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಜ್ಯ ಸಚಿವರು, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಕಾರ್ಯದರ್ಶಿ (ಇಂದನ) ಶ್ರೀ ಅಲೋಕ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಅಭಿಯಾನವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ಪೊಸೊಕೊದ ಸಿಎಂಡಿ ಶ್ರೀ ಕೆವಿಎಸ್ ಬಾಬಾ ಅವರು, “ಕೋವಿಡ್ -19 ಅನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಪೊಸೊಕೊ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಮತ್ತು ಸರ್ಕಾರದ  ಲಸಿಕಾ ಅಭಿಯಾನದಿಂದಾಗಿ ಈ ಲಸಿಕಾಶಿಬಿರವನ್ನು ಆಯೋಜಿಸಲಾಗಿತ್ತು ಇದರಿಂದಾಗಿ ನಮ್ಮ ಇಂಧನ ವಲಯದ ನೌಕರರು ಸುರಕ್ಷಿತವಾಗಿದ್ದು ರಾಷ್ಟ್ರದಾದ್ಯಂತ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಿದ್ಧರಾಗಿದ್ದಾರೆ. ಎಂದು ಹೇಳಿದರು.

ಅಭಿಯಾನದ ಸಮಯದಲ್ಲಿ, ದೈಹಿಕ ಅಂತರ, ಕೈ ನೈರ್ಮಲ್ಯ ಸೇರಿದಂತೆ ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಯಿತು. ಪ್ರತಿ ಹಂತದಲ್ಲೂ, ಅನುಸರಿಸಬೇಕಾದ ಎಲ್ಲಾ ಕಾರ್ಯವಿಧಾನಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಜನರಿಗೆ ತಿಳಿಸುವ ಅಗತ್ಯ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿತ್ತು.

ಪೊಸೊಕೊ ಇಂಧನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಉದ್ಯಮವಾಗಿದೆ. ಗ್ರಿಡ್ನ ಸಮಗ್ರ ಕಾರ್ಯಾಚರಣೆಯನ್ನು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸುರಕ್ಷಿತ ರೀತಿಯಲ್ಲಿ ಖಚಿತಪಡಿಸಿಕೊಳ್ಳುವುದು ಇದರ ಜವಾಬ್ದಾರಿಯಾಗಿದೆ. ಇದು ಐದು ಪ್ರಾದೇಶಿಕ ಲೋಡ್ ಡಿಸ್ಪ್ಯಾಚ್ ಕೇಂದ್ರಗಳು (ಆರ್ಎಲ್ಡಿಸಿಗಳು) ಮತ್ತು ರಾಷ್ಟ್ರೀಯ ಲೋಡ್ ಡಿಸ್ಪ್ಯಾಚ್ ಕೇಂದ್ರವನ್ನು (ಎನ್ಎಲ್ಡಿಸಿ) ಒಳಗೊಂಡಿದೆ.

***



(Release ID: 1718042) Visitor Counter : 141