ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಸಿ.ಎಸ್.ಐ.ಆರ್-ಸಿ.ಎಂ.ಆರ್.ಐ ತಂತ್ರಜ್ಞಾನ ಮತ್ತು ನಾವೀನ್ಯ ಸಂಶೋಧನೆಗಳ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮ -ಎಂ.ಎಸ್.ಎಂ.ಇ ಸಶಕ್ತಗೊಳಿಸಲು ಕ್ರಮ
Posted On:
11 MAY 2021 7:57PM by PIB Bengaluru
ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಮೇ 11 2021 ರಂದು ಸಿ.ಎಸ್.ಐ.ಆರ್-ಸಿ.ಎಂ.ಇ.ಆರ್.ಐ ನಿಂದ ವೆಬಿನಾರ್ ಮೂಲಕ ಆಚರಿಸಲಾಯಿತು. ತ್ರಿಶೂರ್ ನ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ – ಎಂ.ಎಸ್.ಎಂ.ಇ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವ ಮೂಲಕ ಆಮ್ಲಜನಕ ಪುಷ್ಟೀಕರಣ ತಂತ್ರಜ್ಞಾನ ಮತ್ತು ಸಿಡ್ಬಿಯಿಂದ ಇತ್ತೀಚಿನ ಸಾಲ ಸೌಲಭ್ಯ ಕುರಿತು ಬೆಳಕು ಚೆಲ್ಲಲಾಯಿತು. ಎಂ.ಎಸ್.ಎಂ.ಇಗಳಿಗೆ ಆಮ್ಲಜನಕ ಉತ್ತೇಜನಕ್ಕಾಗಿ ಗುಜರಾತ್ ನ ವಡೋದರದ ಏರ್ ಇಂಡಸ್ಟ್ರೀಸ್ ಮತ್ತು ರಾಜಸ್ಥಾನದ ಜೈಪುರದ ಮೆಸಸ್ ಆಟೋ ಮಲ್ಲೇಬಲ್ ನಿಂದ ತಂತ್ರಜ್ಞಾನ ಹಸ್ತಾಂತರ ಮಾಡಲಾಯಿತು.
ಸಿ.ಎಸ್.ಐ.ಆರ್ – ಸಿ.ಎ.ಇ.ಆರ್.ಐ ನ ನಿರ್ದೇಶಕ ಪ್ರೊಫೆಸರ್ ಹರೀಶ್ ಹಿರಾನಿ ಸಂವಾದದಲ್ಲಿ ಮುಖ್ಯ ಭಾಷಣಕಾರಾಗಿ ಮಾತನಾಡಿ, ದೇಶದಲ್ಲಿ ಇತ್ತೀಚಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಎಂ.ಎಸ್.ಎಂ.ಇ ಸಾಮರ್ಥ್ಯ ಮತ್ತು ಉತ್ಪಾದನೆ/ ಅತ್ಯಾಧುನಿಕ ತಂತ್ರಜ್ಞಾನದ ಗರಿಷ್ಠ ಅಳವಡಿಕೆ ಮತ್ತು ಪಾತ್ರ ಕುರಿತು ಬೆಳಕು ಚೆಲ್ಲಿದರು. ಎಂ..ಎಸ್.ಎಂ.ಇಗಳನ್ನು ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವುದು, ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆ ಮೂಲಕ ಅವುಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಿಕ ಉತ್ಪನ್ನವನ್ನಾಗಿ ರೂಪಿಸಲು ಹೇಗೆ ಸಹಾಯ ಮಾಡಬಹುದು ಎನ್ನುವ ಕುರಿತು ಬೆಳಕು ಚೆಲ್ಲಲಾಯಿತು.
ಎಂ.ಎಸ್.ಎಂ.ಇ ಗಳು ಆರ್ಥಿಕ ಬೆಳವಣಿಗೆಯ ಅಭಿವೃದ್ಧಿ ಎಂಜಿನ್ ನಲ್ಲಿ ಪ್ರಮುಖ ಚಾಲಕರಾಗಿದ್ದು, ಎಚ್ಚರಿಕೆಯಿಂದ ಸಂಶೋಧಿಸಿದ ತಂತ್ರಜ್ಞಾನಗಳ ಮೂಲಕ ಅವುಗಳನ್ನು ಸಬಲೀಕರಣಗೊಳಿಸುವ, ಸಕ್ರಿಯಗೊಳಿಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ಕಳೆದ ಐದು ವರ್ಷಗಳಲ್ಲಿ 125 ವಿವಿಧ ತಂತ್ರಜ್ಞಾನಗಳನ್ನು ಎಂ.ಎಸ್.ಎಂ.ಇಗಳಿಗೆ ನೀಡಿದ್ದು, ದೊಡ್ಡ ಪ್ರಮಾಣದಲ್ಲಿ ಸಬಲೀಕರಣಗೊಳಿಸಿದೆ ಮತ್ತು ರಾಷ್ಟ್ರೀಯ ಕೈಗಾರಿಕಾ ನೆಲೆ ಮತ್ತು ಮಾನವ ಸಂಪನ್ಮೂಲ ವಲಯಕ್ಕೆ ತಂತ್ರಜ್ಞಾನದ ಸಾಮರ್ಥ್ಯ ಸುಧಾರಣೆಯೊಂದಿಗೆ ಉತ್ಪಾದನೆಯ ತಾಣವಾಗಿಸಲು ವಿಶೇಷತೆಯನ್ನು ಒದಗಿಸಿದೆ. ಸಿ.ಎಸ್.ಐ.ಆರ್ -ಸಿ.ಎಂ.ಇ.ಆರ್.ಐ ನ ವೈಜ್ಞಾನಿಕ ಜ್ಞಾನ ಎಂ.ಎಸ್.ಎಂ.ಇಗಳು ಮತ್ತು ಮಾನವೀಯತೆಯನ್ನು ಸಶಕ್ತಗೊಳಿಸಲು ಈ ಸಂಸ್ಥೆ ಹಲವಾರು ಕೌಶಲ ಅಭಿವೃದ್ಧಿ ಮತ್ತು ಉತ್ಪಾದನಾ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ.
ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ಅಭಿವೃದ್ಧಿಪಡಿಸಿದ ಆಮ್ಲಜನಕ ಪುಷ್ಟೀಕರಣ ಘಟಕ ವಿಕೇಂದ್ರೀತ ಆಮ್ಲಜನಕ ಉತ್ಪಾದನೆಗೆ ಪರಿಹಾರವಾಗಿದೆ. ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ – ಒಇಯು ಒಂದು ಪ್ರಮುಖ ಪರಿಹಾರವಾಗಿದೆ. ಇದು ವಿವಿಧ ವೈದ್ಯಕೀಯ ಅಗತ್ಯಗಳಿಗಾಗಿ ರಾಷ್ಟ್ರದ ಆಮ್ಲಜನಕ ಉತ್ಪಾದನಾ ಸಾಮರ್ಥ್ಯಕ್ಕೆ ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ಈಗಾಗಲೇ ಒಂಬತ್ತು [9] ಎಂ.ಎಸ್.ಎಂ.ಇ ಪಾಲುದಾರರಿಗೆ ವಿತರಿಸಲಾಗಿದ್ದು, ದೇಶದಲ್ಲಿ ಆಮ್ಲಜನಕ ಉತ್ಪಾದನಾ ನೆಲೆಯನ್ನು ವಿಸ್ತರಿಸಲಾಗಿದೆ ಮತ್ತು ಭಾರತ ಒಇಯು ಉತ್ಪಾದನಾ ಕೇಂದ್ರವಾಗಿ ಪರಿವರ್ತನೆ ಹೊಂದುವ ಗುರಿ ಹೊಂದಲಾಗಿದೆ. ಸ್ಪಲ್ಪ ಮಾರ್ಪಾಡುಗಳೊಂದಿಗೆ ಗ್ರಾಮೀಣ ಆರೋಗ್ಯ ಸೌಲಭ್ಯಗಳಿಗಾಗಿ ಕೈಗೆಟುವ ಎಂ.ಎಲ್.ಪಿ. ಘಟಕವನ್ನು ಸಹ ಹೊಂದಬಹುದಾಗಿದೆ. ತಂತ್ರಜ್ಞಾನದ ಸಹಕಾರ ಪಡೆದ ಭಾರತದಲ್ಲಿ ಎಂ.ಎಸ್.ಎಂ.ಇ ಸಂಪರ್ಕಜಾಲ ಬಲವರ್ಧನೆಗೊಂಡಿದ್ದು, ಭವಿಷ್ಯದಲ್ಲಿ ಯಾವುದೇ ಅನಿರೀಕ್ಷಿತ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಗುಜರಾತ್ ನ ಮೆಸಸ್ ಮೆಕ್ ಏರ್ ಇಂಡಸ್ಟ್ರೀಸ್ ಸಿ.ಇ.ಒ ಶ್ರೀ ಸಂದೀಪ್ ಶಾ, ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ಅಭಿವೃದ್ಧಿಪಡಿಸಿದ ಆಮ್ಲಜನಕ ಪುಷ್ಟೀಕರಣ ಘಟಕದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇತರೆ ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ತಂತ್ರಜ್ಞಾನದಲ್ಲಿ ತಮ್ಮ ಆಸಕ್ತಿಯನ್ನು ಹಂಚಿಕೊಂಡರು. ಎಂ.ಎಸ್.ಎಂ.ಇಗಳು ಸಮಾಜದಲ್ಲಿ ಉತ್ತಮ ಪಾತ್ರ ನಿರ್ವಹಣೆಗೆ ಸಹಕಾರಿಯಾಗಿದೆ. ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ಭಾರತದಲ್ಲೇ ತಯಾರಿಸುವ ಮಹತ್ವಾಕಾಂಕ್ಷೆಯ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮೊದಲ ಆಮ್ಲಜನಕ ಪುಷ್ಟೀಕರಣ ತಂತ್ರಜ್ಞಾನ ಮುಂದಿನ 15 – 20 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ರಾಜಸ್ಥಾನದ ಮೆಸಸ್ ಆಟೋ ಮಲ್ಲೇಯಬಲ್ ನ ಶ್ರೀ ಮಹೇಂದ್ರ ಮಿಶ್ರಾ ಮಾತನಾಡಿ ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ತಂತ್ರಜ್ಞಾನ ಸಮಾಜ ಮತ್ತು ನಾಗರಿಕರಿಗೆ ತಲುಪಬೇಕು. ಪ್ರಸ್ತುತ 50 ಆಮ್ಲಜನಕ ಸಾಂದ್ರಕಗಳನ್ನು ಪ್ರತಿದಿನ 100 ರೂ ಬಾಡಿಗೆ ದರದೊಂದಿಗೆ ಪಡೆಯಲಾಗುತ್ತಿದೆ ಮತ್ತು ಇದು ಎಚ್ಚರಿಕೆಯ ಠೇವಣಿಯಾಗಿದ್ದು, ಸಾಮಾಜಿಕ ಸೇವಾ ಸೂಚಕವಾಗಿದೆ. ಆಮ್ಲಜನಕ ಸಾಂದ್ರಕದ ಬಾಡಿಗೆ ಪ್ರಸ್ತಾಪಕ್ಕೆ ಪ್ರತಿಯಾಗಿ ಪ್ರೊ. ಹರೀಶ್ ಹಿರಾನಿ ಅವರು ಆಮ್ಲಜನಕ ಸಾಂದ್ರಕಗಳು ಎನ್-95 ಮಾಸ್ಕ್ ಗಳನ್ನು ಧರಿಸಿದಂತೆ ಮೂಗಿಗೆ ಇದನ್ನು ಲಗತ್ತಿಸಿಕೊಳ್ಳುವಂತಿರಬೇಕು ಎಂದು ಸಲಹೆ ನೀಡಿದರು. ಇದರಿಂದ ಸೋಂಕು ಹರಡುವುದನ್ನು ತಡೆಯಬಹುದು/ ಸಮೀಪದಲ್ಲಿರುವವರಿಗೆ ವೈರಾಣು ಹರಿಯುವುದನ್ನು ತಗ್ಗಿಸಬಹುದು. ವಿಶೇಷವಾಗಿ ಐಸೋಲೇಷನ್ ವಾರ್ಡ್ ಗಳು/ ಕ್ವಾರಂಟೀನ್ ಪ್ರದೇಶಗಳಲ್ಲಿ ಇಂತಹ ಕ್ರಮ ಅಗತ್ಯವಾಗಿದೆ. ಇದಲ್ಲದೇ ಪ್ರೊ ಹಿರಾನಿ ಅವರು ಮೂಗಿನ ಕ್ಯಾನುಲಾವನ್ನು ಒಬ್ಬ ವ್ಯಕ್ತಿ ಬಳಸಿದ ನಂತರ ಸೂಕ್ತವಾಗಿ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.
ತ್ರೀಶೂರ್ ನ ಎಂ.ಎಸ್.ಎಂ.ಇ -ಡಿಐ ಜಂಟಿ ನಿರ್ದೇಶಕ ಶ್ರೀ ಜಿ.ಎಸ್. ಪ್ರಕಾಶ್ ಮಾತನಾಡಿ, ಪ್ರಸ್ತುತ ಬೇಡಿಕೆಗಳಿಗೆ ಅನುಗುಣವಾಗಿ ಇಂದು ಆಮ್ಲಜನಕದ ಸಾಮರ್ಥ್ಯ ಅಸಮರ್ಪಕವಾಗಿದೆ. ಆಮ್ಲಜನಕ ಉತ್ಪಾದನೆಗಿಂತ ಪ್ರಮುಖವಾದ ವಿಷಯವೆಂದರೆ ಆಮ್ಲಜನಕ ಸಾಗಣೆ ಮತ್ತು ಸಂಗ್ರಹಣೆಯಾಗಿದೆ. ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ಸಕಾಲದಲ್ಲಿ ಆಮ್ಲಜನಕ ಪುಷ್ಟೀಕರಣ ತಂತ್ರಜ್ಞಾನವನ್ನು ತರುವ ಮೂಲಕ ಅಗತ್ಯವಾಗಿರುವ ತಾಂತ್ರಿಕತೆಯನ್ನು ಒದಗಿಸುತ್ತಿದೆ. ಕೈಗಾರಿಕಾ ವಲಯ ಆಮ್ಲಜನಕವನ್ನು ವಾಪಸ್ ಮಾಡುವ ಮತ್ತು ಅಗತ್ಯವಾಗಿರುವ ಘಟಕಗಳನ್ನು ದೀರ್ಘಕಾಲದವರೆಗೆ ನಿರಾರಕಣೆ ಮಾಡುವುದು ದೊಡ್ಡ ಸವಾಲಾಗಿದೆ. ಈ ನಿರ್ಣಾಯಕ ತಂತ್ರಜ್ಞಾನದ ಉತ್ಪಾದನೆಯನ್ನು ಪ್ರಾರಂಭಿಸಲು ಎಂ.ಎಸ್.ಎಂ.ಇಗಳಿಗೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಲು ಎಂ.ಎಸ್.ಎಂ.ಇ ತಂತ್ರಜ್ಞಾನ ಕೇಂದ್ರ ಮತ್ತು ಎಂ.ಎಸ್.ಎಂ.ಇ ಪಾರ್ಕ್ ಗಳನ್ನು ಸಹ ಆರಂಭಿಸಬಹುದು ಎಂದರು.
ಕೋಯಿಕೋಡ್ ಕೈಗಾರಿಕಾ ಒಕ್ಕೂಟದ ಪ್ರತಿನಿಧಿ ಶ್ರೀ ಕಿರಣ್ ಕುಮಾರ್ ಆರ್ ಮಾತನಾಡಿ, ಕೇರಳ ಹೆಚ್ಚು ಆಮ್ಲಜನಕ ಹೊಂದಿದ್ದ ರಾಜ್ಯ, ಈಗ ಆಮ್ಲಜನಕ ಕೊರತೆ ಇರುವ ರಾಜ್ಯವಾಗಿದೆ. ಕೈಗಾರಿಕಾ ಆಮ್ಲಜನಕವನ್ನು ವಾಪಸ್ ಮಾಡಲಾಗುತ್ತಿದೆ. ಕೈಗಾರಿಕಾ ಕ್ಲಸ್ಟರ್ ಗಳು ಒಗ್ಗೂಡಿ ತುರ್ತು ಸಂದರ್ಭದಲ್ಲಿ ಕ್ಯಾಪ್ಟೀವ್ ಆಮ್ಲಜನಕ ಉತ್ಪಾದನಾ ಘಟಕಗಳ ಕೈಗಾರಿಕೆ ಮುನ್ನಡೆಸುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರೊಫೆಸರ್ ಹರೀಶ್ ಹಿರಾನಿ ಅವರಿಗೆ ಕ್ಯಾಪ್ಟೀವ್ ಆಮ್ಲಜನಕ ಉತ್ಪಾದನಾ ಘಟಕಗಳನ್ನು ರಚಿಸಲು ತಾಂತ್ರಿಕ ಅವಶ್ಯಕತೆಗಳ ವಿಷಯದಲ್ಲಿ ನೆರವು ನೀಡುವಂತೆ ಕೋರಲಾಯಿತು. ಪ್ರೋಫೆಸರ್ ಹಿರಾನಿ ಅವರು ಸಿ.ಎಸ್.ಐ.ಆರ್ – ಸಿ.ಎಂ.ಇ.ಆರ್.ಐ ತಂತ್ರಜ್ಞಾನದ ಸೇವೆಗೆ ಜಂಟಿ ನೆರವು ನೀಡಲಾಗುವುದು. ತಂತ್ರಜ್ಞಾನದ ಆಧಾರದ ಮೇಲೆ ಕೈಗಾರಿಕೆಗಳು ಭೌತಿಕವಾಗಿ ಸೌಲಭ್ಯಗಳನ್ನು ಹೊಂದಿಸುವ ಅಗತ್ಯವಿದೆ ಎಂದು ಹೇಳಿದರು.
ಕೊಚ್ಚಿಯ ಸಿಡ್ಬಿ ವ್ಯವಸ್ಥಾಪಕ ಶ್ರೀ ಜೋಸೆಪ್ ಜೆ ತರುಣ್ ಮಾತನಾಡಿ, ಎಂ.ಎಸ್.ಎಂ.ಇಯಿಂದ ಪಾಲ್ಗೊಂಡಿರುವವರಿಗೆ ಎಸ್.ಎಚ್.ಡಬ್ಲ್ಯೂ.ಎ.ಎಸ್ ಮತ್ತು ಎ.ಆರ್.ಒ.ಗಿ ಹಣಕಾಸು ನೆರವು ಕುರಿತು ಮಾಹಿತಿ ನೀಡಿದರು. ಆಮ್ಲಜನಕ ಸಂಬಂಧಿತ ಉತ್ಪನ್ನಗಳು ಮತ್ತು ಕೋವಿಡ್ ಸಂಬಂಧಿತ ಉತ್ಪನ್ನಗಳಾದ ಪಿಪಿಇ ಕಿಟ್ ಗಳು, ಆಕ್ಸಿಮೀಟರ್, ವೆಂಟೆಲೇಟರ್ ಗಳು, ಅನುಮತಿ ಇರುವ ಔಷಧಗಳು ಮತ್ತಿತರ ಉತ್ಪನ್ನಗಳ ಉತ್ಪಾದನೆಗೆ ಗರಿಷ್ಠ 2 ಕೋಟಿ ರೂ ಬಂಡವಾಳ ನೆರವು ಈ ಯೋಜನೆಯಿಂದ ದೊರೆಯಲಿದೆ ಎಂದು ಮಾಹಿತಿ ನೀಡಿದರು.
***
(Release ID: 1718039)
Visitor Counter : 271